ಪೊಲೀಸರಿಗೆ ತಲೆಬಿಸಿ ತಂದಿಟ್ಟ ಅಡಾಲ್ಫ್ ಹಿಟ್ಲರ್‌ ಸಂಚಾರ

ಹೌದಾ ಮಾರಾಯ್ರೆ!

Team Udayavani, Jan 16, 2020, 8:20 AM IST

ಜರ್ಮನಿಯ ಅಗಸ್ಟಸ್‌ ಬರ್ಗ್‌ನಲ್ಲಿ ಹಳೆಯ ಬೈಕ್‌ಗಳ ಜಾಥಾ ನಡೆಯಿತು. ಅಷ್ಟಕ್ಕೇ ಆದರೆ ಏನು ಬಂತು ಮಜಾ? ಅದರಲ್ಲಿ ಅಡಾಲ್ಫ್ ಹಿಟ್ಲರ್‌ ಕೂಡ ಭಾಗವಹಿಸಿದ್ದ. ಹಿಟ್ಲರ್‌ ಗೊತ್ತಲ್ಲ? ಆತನ ಬಗ್ಗೆ ಹೆಚ್ಚು ವಿವರಣೆ ಬೇಡ.

ಸತ್ತು ಹೋಗಿರುವ ಹಿಟ್ಲರ್‌ ಮತ್ತೆ ಬರುವುದೇನು? ಬೈಕ್‌ ರ್ಯಾಲಿಯಲ್ಲಿ ಕುಳಿತು ಹೋಗುವುದೆಂದರೇನು? ಇದೊಂದು ಬೇಸ್ತು ಬೀಳಿಸಿದ ಪ್ರಸಂಗವಾಗಿದೆ. ಕುಚೇಷ್ಠೆಗಾಗಿ ಬೈಕ್‌ ಒಂದರಲ್ಲಿ ಹಿಟ್ಲರ್‌ನಂತೆ ವೇಷಧರಿಸಿದ್ದ ವ್ಯಕ್ತಿ ಕಾರ್ಯಕ್ರಮದಲ್ಲಿ ಸೇರಿದ್ದವರ ಕೆಂಗಣ್ಣಿಗೆ ಕಾರಣನಾಗಿದ್ದಾನೆ.

1940ರ ಕಾಲದ ಸೈನಿಕನಂತೆ ವೇಷಧರಿಸಿ, ಎರಡನೇ ವಿಶ್ವಮಹಾಯುದ್ಧದ ವೇಳೆ ಬಳಕೆಯಲ್ಲಿದ್ದ ಶೈಲಿಯ ಹೆಲ್ಮೆಟ್‌ ಧರಿಸಿದ್ದ ವ್ಯಕ್ತಿಯ ಜತೆಗೆ ಹಿಟ್ಲರ್‌ ವೇಷಧಾರಿ ಕುಳಿತಿದ್ದ. ಇದು ಸ್ಥಳೀಯರಿಗಿಂತ ಪೊಲೀಸ್‌ ಇಲಾಖೆಗೆ ತಲೆಬಿಸಿ ತಂದಿಟ್ಟಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲೂ ಶುರು ಮಾಡಿದ್ದಾರೆ.

ಯಾರೋ ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅದರಲ್ಲಿ ಹಿಟ್ಲರ್‌ ವೇಷ ನೋಡಿ, ತಮಾಷೆ ಮಾಡಿದ್ದಾರೆ ಮತ್ತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ಮುಗ್ಧರನ್ನು ಹತ್ಯೆ ಮಾಡಿದಾತ ವೇಷ ಹಾಕಿದ್ದು ಸರಿಯಲ್ಲ ಎಂದೂ ಹಲವರು ಟೀಕಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ