ವಿಷಪೂರಿತ ಹಾವು ಇದ್ದ ಹೆಲ್ಮೆಟ್‌ ಧರಿಸಿ 11 ಕಿ.ಮೀ. ಪ್ರಯಾಣ

Team Udayavani, Feb 13, 2020, 6:52 AM IST

ಕೆಲವೊಮ್ಮೆ ನಮಗೆ ಅರಿವಿಲ್ಲದಂತೆಯೇ ಭಯ ಹುಟ್ಟಿಸುವ ಅಂಶಗಳ ಜತೆಗೆ ನಾವು ಜೀವನ ಸಾಗಿಸುತ್ತೇವೆ. ಅದಕ್ಕೊಂದು ಉದಾಹರಣೆ ಕೇರಳದಲ್ಲಿ ನಡೆದು ಹೋಗಿದೆ. ಎರ್ನಾಕುಳಂ ಜಿಲ್ಲೆಯ ಕಡ್ನಾಡ್‌ ಜಿಲ್ಲೆಯಲ್ಲಿ ಶಾಲೆಯಲ್ಲಿ ಅಧ್ಯಾಪಕರಾಗಿರುವ ಕೆ.ಎ. ರಂಜಿತ್‌ ಅವರು ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ ಹೆಲ್ಮೆಟ್‌ನಲ್ಲಿ ಹಾವು ಇದ್ದದ್ದು ಅವರಿಗೆ ಗೊತ್ತೇ ಆಗಿರಲಿಲ್ಲ. ಅವರು ಹೆಲ್ಮೆಟ್‌ ಧರಿಸಿಕೊಂಡು 11 ಕಿ.ಮೀ. ದೂರದ ವರೆಗೆ ಪ್ರಯಾಣ ಮಾಡಿದ್ದಾರೆ.

ಮನೆಯಿಂದ ಶಾಲೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆ ಶಾಲೆಯಲ್ಲಿ ಪಾಠ ಮಾಡಿದ ಬಳಿಕ ರಂಜಿತ್‌ ಅವರು ಮತ್ತೊಂದು ಶಾಲೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಲು ಶುರು ಮಾಡಿದ್ದರು. ಆರು ಕಿ.ಮೀ. ದೂರ ಸಂಚರಿಸುತ್ತಿರುವಾಗ ಶಿರಸ್ತ್ರಾಣದ ಒಳಗೇನೋ ಇದೆ ಎಂಬ ಭಾವನೆ ಅವರಿಗೆ ಅನಿಸಲಾರಂಭಿಸಿತು.

ಕೂಡಲೇ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ, ಹೆಲ್ಮೆಟ್‌ ತೆಗೆದಾಗ ಅದರಲ್ಲಿ ಅಸುನೀಗಿದ್ದ ಹಾವು ಕಣ್ಣಿಗೆ ಬಿತ್ತು. ಕೂಡಲೇ ಅವರ ಜತೆಗೆ ಇದ್ದ ಸಹೋದ್ಯೋಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ರಂಜಿತ್‌ಗೆ ಹಾವು ಕಚ್ಚಿಲ್ಲ ಎಂದು ದೃಢವಾಯಿತು. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ರಂಜಿತ್‌ ಹೆಲ್ಮೆಟ್‌ ಅನ್ನು ಸುಟ್ಟು ಹಾಕಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ