ವಿಳಂಬಕ್ಕೆ ಪಾಪ್‌ ಗಾಯಕಿ ಮಡೋನಾ ವಿರುದ್ಧ ಕೇಸು

ಹೌದಾ ಮಾರಾಯ್ರೆ !

Team Udayavani, Nov 13, 2019, 7:56 AM IST

ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಶುರುವಾಗದಿದ್ದರೆ ಏನಾದರೂ ಸಮಸ್ಯೆ ಇದೆಯೇ? ಭಾರತದಲ್ಲಿ ಅಂಥ ಸಮಸ್ಯೆಯೇ ಇಲ್ಲ. ಯಾವುದೇ ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ವಿಳಂಬವಾಗಿಯೇ ಶುರುವಾಗುವುದು ಸಾಮಾನ್ಯವೇ. ಅಮೆರಿಕ ಮತ್ತು ಇತರ ದೇಶಗಳಲ್ಲಿ ಹಾಗಿಲ್ಲವೇ ಇಲ್ಲ. ಸಮಯ ಎಂದರೆ, ಕಟ್ಟುನಿಟ್ಟು.
ಪಾಪ್‌ ಸಂಗೀತ ಕ್ಷೇತ್ರದ ಸಾಮ್ರಾಜ್ಞಿ ಮಡೋನಾ ನಿಗದಿತ ಸಮಯಕ್ಕೆ ಗಾಯನ ಆರಂಭ ಮಾಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿ ಮೊಕದ್ದಮೆ ಹೂಡಿದ್ದಾನೆ.

ಮಿಯಾಮಿ ಬೀಚ್‌ನಲ್ಲಿ ಕೆಲ ದಿನಗಳ ಹಿಂದೆ ರಾತ್ರಿ 8.30ಕ್ಕೆ ಶುರುವಾಗಬೇಕಾಗಿದ್ದ ಗಾಯನ ಕಾರ್ಯಕ್ರಮ ರಾತ್ರಿ 10.30ಕ್ಕೆ ಆರಂಭವಾಯಿತು. ನಾಟೆ ಹೊಲಾಂಡರ್‌ ಎಂಬಾತ ಟಿಕೆಟ್‌ ಮತ್ತು ಪ್ರಯಾಣದ ಎಂದು 73, 475.59 ರೂ. (1,024.95 ಅಮೆರಿಕನ್‌ ಡಾಲರ್‌) ವೆಚ್ಚ ಮಾಡಿದ್ದನಂತೆ. ವಿಳಂಬವಾಗಿದ್ದ ಕಾರಣ ಬೇಸರವಾಗಿದೆ. ಹೀಗಾಗಿ ಪಾಪ್‌ ಸಾಮ್ರಾಜ್ಞಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾನೆ. ಮಾರನೇ ದಿನ ಆತನಿಗೆ ಕೆಲಸಕ್ಕೆ ಹೋಗಲು ವಿಳಂಬವಾದದ್ದು ಆತನ ಕೋಪಕ್ಕೆ ಕಾರಣ. ಇದರ ಜತೆಗೆ ಕಾರ್ಯಕ್ರಮ ಸಂಘಟಕರ ವಿರುದ್ಧವೂ ಆತ ಕೇಸು ಹಾಕಿದ್ದಾನೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ