ಝೊಮ್ಯಾಟೊ ಬಳಸಿ ಮನೆಗೆ ಡ್ರಾಪ್‌ ಮಾಡಿಸಿಕೊಂಡ

Team Udayavani, Aug 17, 2019, 11:00 AM IST

Representative Image

ಇತ್ತೀಚಿನ ದಿನಗಳಲ್ಲಿ ಝೊಮ್ಯಾಟೊ ವಿವಾದಗಳಿಂದಲೇ ಸುದ್ದಿಯಾಗುತ್ತಿತ್ತು. ಝೊಮ್ಯಾಟೊವನ್ನು ಮತ್ತೂಂದು ಬಗೆಯಲ್ಲಿ ಹೇಗೆ ಬಳಸಬಹುದು ಎಂದು ಯುವಕನೊಬ್ಬ ತೋರಿಸಿಕೊಟ್ಟಿದ್ದರಿಂದ ಮತ್ತೆ ಸುದ್ದಿಯಾಗಿದೆ. ಓಬೇಶ್‌ ಕೋಮಿರಿಶೆಟ್ಟಿ ಎಂಬ ಹೈದರಾಬಾದ್‌ ಯುವಕ ಝೊಮ್ಯಾಟೊ ಬಳಸಿ ಆಹಾರ ಆರ್ಡರ್‌ ಮಾಡಿದ್ದಲ್ಲದೇ, ಮನೆಗೆ ಉಚಿತವಾಗಿ ಡ್ರಾಪ್‌ ಮಾಡಿಸಿಕೊಂಡಿದ್ದನ್ನು ಫೇಸ್‌ ಬುಕ್‌ನಲ್ಲಿ ಹೀಗೆ ಬರೆದಿದ್ದಾರೆ. “ಸಮಯ ರಾತ್ರಿ 11:50 ಆಗಿತ್ತು ಇನಾರ್ಬಿಟ್‌ ಮಾಲ್‌ ರಸ್ತೆಯಲ್ಲಿದ್ದೆ. ಮನೆಗೆ ಹೋಗಲು ಆಟೋ ಹುಟುಕಾಡಿದೆ. ಆದರೆ ಸಿಗಲಿಲ್ಲ. ಉಬರ್‌ನಲ್ಲಿ 300 ರೂ. ತೋರುತ್ತಿತ್ತು. ಅಷ್ಟು ಖರ್ಚು ಮಾಡಲು ಮನಸ್ಸಾಗಲಿಲ್ಲ. ಹೊಟ್ಟೆ ಬೇರೆ ಸ್ವಲ್ಪ ಹಸಿಯುತ್ತಿತ್ತು. ಝೋಮ್ಯಾಟೊ ಆ್ಯಪ್‌ನಿಂದ ಹತ್ತಿರದ ಹೋಟೆಲ್‌ ನಲ್ಲಿ ಊಟ ಆರ್ಡರ್‌ ಮಾಡಿದೆ. ಅಲ್ಲಿಗೆ ಹೋದೆ. ಡೆಲಿವರಿ ಬಾಯ್‌ ಊಟ ತೆಗೆದುಕೊಂಡು ಹೊರಟಾಗ, ನಾನು ಅವರಿಗೆ ಇದು ನನ್ನದೇ ಆರ್ಡರ್‌. ಊಟದ ಜೊತೆ ನನ್ನನ್ನೂ ಡ್ರಾಪ್‌ ಮಾಡಿ ಎಂದು ಕೇಳಿದೆ. ಅವರು ಊಟದ ಜೊತೆ ನನ್ನನ್ನೂ ಮನೆ ತಲುಪಿಸಿದರು’ ಎಂದು ಬರೆದಿದ್ದಾರೆ. ಇದನ್ನು ಝೊಮ್ಯಾಟೊ ಕೂಡಾ ಮೆಚ್ಚಿಕೊಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ