ಜಾಲತಾಣದಲ್ಲಿ ಸಿಕ್ಕಳು ಮೇಘನ್ ಅವಳಿ ಸೋದರಿ!
Team Udayavani, Feb 3, 2020, 10:06 AM IST
ಮೇಘನ್ ಮರ್ಕೆಲ್ ಅವರನ್ನು ಹೋಲುವ ಮಿಸೌರಿ ಮಹಿಳೆ ಅಕೀಶಾ ತನ್ನ ಮಗಳೊಂದಿಗೆ.
ಇತ್ತೀಚೆಗಷ್ಟೇ ರೂಪದರ್ಶಿ ಸೈಮನ್ ಪೆಂಗೆಲ್ಲಿ ಅವರು ಪ್ರಿನ್ಸ್ ಹ್ಯಾರಿಯನ್ನು ಹೋಲುತ್ತಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ದೊಡ್ಡ ಚರ್ಚೆಯಾಗಿತ್ತು. ಈಗ ಸರದಿ ಅವರ ಪತ್ನಿ ಮೇಘನ್ ಮರ್ಕೆಲ್ರದ್ದು. ಮಿಸೌರಿ ಮೂಲದ ಮಹಿಳೆ ಅಕೀಶಾ ತಮ್ಮ ಮಗಳ ಜತೆ ತೆಗೆದುಕೊಂಡಿರುವ ಫೋಟೊವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಅದಾದ ನಾಲ್ಕೇ ದಿನಗಳಲ್ಲಿ ಅವರ ಫೋಟೊಗಳು ವೈರಲ್ ಆಗಿವೆ. ಕಾರಣ ಅವರು ನೋಡಲು ಥೇಟ್ ಮೇಘನ್ ಮರ್ಕೆಲ್ ರೀತಿಯೇ ಇರುವುದು. ಹಲವು ಮಂದಿ, ‘ನಾನು ಇದು ಮೇಘನ್ ಫೋಟೊ ಎಂದು ಭಾವಿಸಿದೆ’ ಎಂದು ಕಮೆಂಟ್ ಮಾಡಿದ್ದರೆ, ಇನ್ನೂ ಹಲವರು ‘ನೀವು ಮೇಘನ್ರ ಅವಳಿ ಸಹೋದರಿಯಾ’ ಎಂದು ಕೇಳಿದ್ದಾರೆ.