ಈ ಆಟೋದಲ್ಲಿ ಎಲ್ಲವೂ ಇದೆ!
ಹೌದಾ ಮಾರಾಯ್ರೇ!
Team Udayavani, Nov 22, 2019, 8:06 AM IST
ಕೆಲ ಆಟೋರಿಕ್ಷಾ ಚಾಲಕರು ಅಥವಾ ಮಾಲಕರು ತಮ್ಮ ರಿಕ್ಷಾ ಸೇವೆಯಲ್ಲಿ ವೈವಿಧ್ಯತೆಗಳನ್ನು ಪರಿಚಯಿಸುತ್ತಲೇ ಇರುತ್ತಾರೆ. ಅಂಥವರ ಸಾಲಿಗೆ ಕೋಲ್ಕತಾದ ಆಟೋ ಚಾಲಕ ಸತ್ಯವಾನ್ ಸೇರುತ್ತಾರೆ. ಈ ಆಟೋ ಹೆಸರು ‘101% 1ಆರ್ಕೆ ಆಟೋ’. ಹೆಸರಿಗೆ ತಕ್ಕಂತೆ ಇವರು ಆಟೋದಲ್ಲಿ ಒಂದು ಕೋಣೆಯಲ್ಲಿರಬೇಕಾದ ಸಂಪೂರ್ಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇದರಲ್ಲಿ ವಾಶ್ಬೇಸಿನ್, ಕುಡಿಯುವ ನೀರು, ಕಂಪ್ಯೂಟರ್ ಡೆಸ್ಕ್ ಟಾಪ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಸಾಕಷ್ಟು ಗಿಡಗಳೂ ಇವೆ. ಇದೆಲ್ಲದರ ಜೊತೆ ಹಿರಿಯ ನಾಗರಿಕರಿಗೆ ಉಚಿತ ಸೇವೆ ಕೂಡ ನೀಡುತ್ತಾರೆ. ಇವರ ಕುರಿತು ನಟಿ ಟ್ವಿಂಕಲ್ ಖನ್ನಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ.