ಹೊಸ ವಾಚ್ನಲ್ಲಿ ಹಳೆಯ ವಿಸ್ಕಿ !
Team Udayavani, Mar 25, 2017, 5:16 AM IST
ದುಬಾರಿ ವಾಚ್ ಮತ್ತು ದುಬಾರಿ ಹಳೇ ವಿಸ್ಕಿಯ ಶೋಕಿ ಇರುವ ಜನರಿಗೇನೂ ಕಡಿಮೆಯಿಲ್ಲ. ಬ್ರ್ಯಾಂಡೆಡ್ ವಾಚ್ ಗಳನ್ನು ಕೊಳ್ಳುವಂತೆ ಲಕ್ಷಗಟ್ಟಲೆ ಹಣ ಕೊಟ್ಟು ವಿಸ್ಕಿ ಕೊಳ್ಳುವವರೂ ಇದ್ದಾರೆ. ಹಳೆಯ ವಿಸ್ಕಿ ಮತ್ತು ದುಬಾರಿ ಸ್ವಿಸ್ ವಾಚ್ ಒಂದಾದರೆ ಹೇಗಿರುತ್ತದೆ? ಲೂಯಿಸ್ ಮೋಯಿನೆಟ್ ಸಂಸ್ಥೆ ಹೊರತಂದಿರುವ ಹೊಸ ವಾಚ್ನ ವಿಶೇಷ ಇದುವೇ.
ಈ ವಾಚಿನಲ್ಲಿ 1862ರಲ್ಲಿ ತಯಾರಾದ ಜಗತ್ತಿನ ಹಳೆಯ “ಓಲ್ಡ್ ವೆಟ್ಟೆಡ್ ಗೆಲ್ಲಿವೆಟ್’ನ 1 ಹನಿ ವಿಸ್ಕಿ ಸೇರಿಸಲಾಗಿದೆ. ಇದರ ಬೆಲೆ 45 ಸಾವಿರ ಡಾಲರ್(30 ಲಕ್ಷ ರೂ.)ಗಳು. ಹೀಗಿದ್ದರೂ, ಈ ಕಂಪನಿಯ ವಾಚುಗಳ ಪೈಕಿ ಇದು ಮಧ್ಯಮ ಬೆಲೆಯ ವಾಚ್ ಅಂತೆ!