ಇಟಲಿ ಕಲಾ ಪ್ರದರ್ಶನಕ್ಕೆ ಭಾರತದ 80ರ ಮಹಿಳೆ
Team Udayavani, Oct 9, 2019, 6:30 PM IST
ಮಧ್ಯಪ್ರದೇಶದ 80 ವರ್ಷ ವಯಸ್ಸಿನ ಬುಡಕಟ್ಟು ಜನಾಂಗದ ಪ್ರತಿಭೆಯೊಂದರ ಸಾಧನೆ ಸದ್ದಿಲ್ಲದೇ ಇಟಲಿಗೆ ತಲುಪಿದೆ. 50 ವರ್ಷಗಳಿಂದ ಲೋಹ್ರಾ ಗ್ರಾಮದ ಜೋಧಾಯ ಬಾಯ್ ಬೈಗಾ ತಮ್ಮ ಪಾಡಿಗೆ ತಾವು ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದಾರೆ.
ಅವರ ಗಂಡ 40 ವರ್ಷಗಳ ಹಿಂದೆ ನಿಧನರಾದಾಗ ಬದುಕಲು ಏನಾದರೊಂದು ಮಾರ್ಗ ಹಿಡಿಯಬೇಕೆಂದು ಈ ಮಾರ್ಗ ಕಂಡುಕೊಂಡಿದ್ದರು. ಈಗ ಇದು ಅವರನ್ನು ಅಂತಾರಾಷ್ಟ್ರೀಯ ವೇದಿಕೆಗೆ ಕರೆದೊಯ್ದಿದೆ. ಇಟಲಿಯ ಮಿಲಾನ್ನಲ್ಲಿ ನಡೆಯುವ ಚಿತ್ರಕಲಾ ಪ್ರದರ್ಶನದಲ್ಲಿ
ಜೋಧಾಯ ಅವರ ವರ್ಣಚಿತ್ರಗಳು ಪ್ರದರ್ಶನಗೊಳ್ಳಲಿವೆ. ಆದಿವಾಸಿ ಸಮುದಾಯದ ಮಹಿಳೆ ಅಂತಾರಾಷ್ಟ್ರೀಯ ವೇದಿಕೆ ಏರುತ್ತಿರುವುದು ಇಡೀ ಸಮುದಾಯಕ್ಕೇ ಹೆಮ್ಮೆಯ ವಿಷಯ ಎಂದು ಅವರ ಗುರು ಆಶಿಶ್ ಸ್ವಾಮಿ ಹೇಳಿದ್ದಾರೆ.