ಆ್ಯಪಲ್‌ ಫೋನನ್ನು ಹಣ್ಣು ಎಂದು ಭಾವಿಸಿದ ಪಾಕ್‌ ನಿರೂಪಕಿ!

Team Udayavani, Jul 7, 2019, 12:36 PM IST

ಫೇಸ್‌ಬುಕ್‌, ಟ್ವಿಟರ್‌ ಯುಗದಲ್ಲಿ ಜನರು ಮಾಡುವ ಚಿಕ್ಕ ಚಿಕ್ಕ ಎಡವಟ್ಟುಗಳೂ ಜಗಜ್ಜಾಹೀರಾಗುತ್ತವೆ. ಇತ್ತೀಚೆಗೆ ಪಾಕಿಸ್ಥಾನದ ಟೀವಿ ನಿರೂಪಕಿಯೊಬ್ಬರು ಆ್ಯಪಲ್‌ ಸಂಸ್ಥೆಯನ್ನು ಸೇಬು ಹಣ್ಣು ಎಂದು ಭಾವಿಸಿ ನೀಡಿದ ಹೇಳಿಕೆಯೊಂದು ಜಾಲತಾಣಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಟೀವಿಯಲ್ಲಿ ಪ್ಯಾನಲ್‌ ಚರ್ಚೆ ನಡೆಯುತ್ತಿದ್ದ ವೇಳೆ, ವಿಷಯ ತಜ್ಞರೊಬ್ಬರು “ಆ್ಯಪಲ್‌ನ ಲಾಭ ಪಾಕಿಸ್ಥಾನದ ಒಟ್ಟು ಬಜೆಟ್‌ಗಿಂತಲೂ ಅಧಿಕವಾಗಿದೆ’ ಎಂದರು. ಅದಕ್ಕೆ ಪ್ರತಿಯಾಗಿ ನಿರೂಪಕಿ, “ಹೌದು, ನಾನೂ ಕೇಳಿದ್ದೇನೆ. ಒಂದು ಆ್ಯಪಲ್‌ಗೇ ಭಾರೀ ಬೆಲೆ ತೆರಬೇಕಂತೆ’ ಎಂದರು. ಆಗ ತಜ್ಞರು, “ನಾನು ಮಾತನಾಡುತ್ತಿರುವುದು ಆ್ಯಪಲ್‌ ಫೋನ್‌ ಬಗ್ಗೆಯೇ ಹೊರತು, ಆ್ಯಪಲ್‌ ಹಣ್ಣಿನ ಬಗ್ಗೆಯಲ್ಲ’ ಎಂದು ಹೇಳಿ ತಮ್ಮ ಮಾತುಗಳನ್ನು ಮುಂದುವರಿಸುತ್ತಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ