ಬೆಕ್ಕು ಬದುಕಿಸದ ವೈದ್ಯನಿಗೆ 2.5 ಕೋಟಿ ರೂ. ದಂಡ!
Team Udayavani, Feb 6, 2017, 6:34 AM IST
ಸಾಕು ಪ್ರಾಣಿ ಪ್ರೇಮಿಗಳಿಗೆ ಅವುಗಳನ್ನು ಬಿಟ್ಟು ಬೇರೊಂದು ಪ್ರಪಂಚವೇ ಪ್ರಪಂಚವೇ ಇರುವುದಿಲ್ಲ. ಅ ಪ್ರಾಣಿ ಕೈತಪ್ಪಿ ಹೋದರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ. ಪಾಕ್ ಮೂಲದ ಮಹಿಳೆ ತನ್ನ 2 ವರ್ಷದ ಮುದ್ದು ಬೆಕ್ಕನ್ನು ಅನಾರೋಗ್ಯ ಕಾರಣಗಳಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಚಿಕಿತ್ಸೆಯನ್ನೂ ನೀಡಿದ್ದಾರೆ. ಆದರೆ ದುರದೃಷ್ಟವಶಾತ್
ಬೆಕ್ಕು ಆಸ್ಪತ್ರೆಯಲ್ಲೇ ಅಸುನೀಗಿದೆ. ಬೆಕ್ಕಿನ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿ ಮಾಲಕಿ ಹೋರೈನ್ ವೈದ್ಯರ ವಿರುದ್ಧ ಕಾನೂನು ಸಮರ ನಡೆಸಿದ್ದಾರೆ. 2.5 ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಬೆಕ್ಕಿನ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ಕೋರ್ಟ್ಗೆ ಸಲ್ಲಿಸಲಾಗಿದೆ. ಬೆಕ್ಕು ನಿರ್ಜಲಿಕರಣ ಮತ್ತು ಹಸಿವಿನಿಂದ ಸಾವನ್ನಪ್ಪಿದೆ ಎಂದು ವರದಿ ತಿಳಿಸಿದೆ. ಇದನ್ನು ಆಧರಿಸಿ ಪಾಕ್ ಸ್ಥಳೀಯ ನ್ಯಾಯಾಲಯ ಪಶುವೈದ್ಯ ಮತ್ತು ಓರ್ವ ಸಿಬ್ಬಂದಿಗೆ 2.5 ಕೋಟಿ ರೂ. ದಂಡ ಮತ್ತು
ಜೈಲು ಶಿಕ್ಷೆ ವಿಧಿಸಿದೆ.