ವಿದ್ಯಾರ್ಥಿಯ ಮಗು ಎತ್ತಿಕೊಂಡು ಪಾಠ ಮಾಡಿದ ಪ್ರೊಫೆಸರ್‌

Team Udayavani, Mar 7, 2019, 4:20 AM IST

ಅಮೆರಿಕದ ಅಟ್ಲಾಂಟಾದ ಮೋರ್‌ಹೌಸ್‌ ಕಾಲೇಜಿನ ಗಣಿತ ಪ್ರೊಫೆಸರ್‌ ನಾಥನ್‌ ಅಲೆಕ್ಸಾಂಡರ್‌ ತಮ್ಮ ಸಹೃದಯದಿಂದ ಜಾಲತಾಣಿಗರ ಮನಸ್ಸನ್ನು ಸೂರೆಗೈದಿದ್ದಾರೆ. ತರಗತಿಯಲ್ಲಿ ಹೇಯರ್‌ ಎಂಬ 26 ವರ್ಷ ವಯಸ್ಸಿನ ವಿದ್ಯಾರ್ಥಿ ಫೋನು ಬಳಸುವ ವೇಳೆ ಪ್ರೊಫೆಸರ್‌ ಅಲೆಕ್ಸಾಂಡರ್‌ ಕೈಗೆ ಸಿಕ್ಕಿಬಿದ್ದರು.

ಹೇಯರ್‌ ತನ್ನ ಪತ್ನಿಗೆ ತನ್ನ ಹಸುಗೂಸಿನ ಯೋಗಕ್ಷೇಮ ವಿಚಾರಿಸಿ ಸಂದೇಶ ಕಳುಹಿಸುತ್ತಿದ್ದುದಾಗಿ ಅಲೆಕ್ಸಾಂಡರ್‌ಗೆ ತಿಳಿದು ಬಂದಿತು. ಮನೆಯಲ್ಲಿ ಅಷ್ಟು ಕಷ್ಟವಿದ್ದರೆ ಮಗುವನ್ನು ತರಗತಿಗೆ ಕರೆತನ್ನಿ ಎಂದು ಅವರುಹೇಳಿದ್ದರು. ಒಂದು ದಿನ ಹೇಯರ್‌ ಮಗುವನ್ನು ತರಗತಿಗೆ ಕರೆತಂದರು. ಮಗು ಕೈಯಲ್ಲಿ ಇದ್ದರೆ ಹೇಯರ್‌ಗೆ ನೋಟ್ಸ್‌ತೆಗೆದುಕೊಳ್ಳುವುದು ಕಷ್ಟವಾಗುತ್ತದೆ ಎಂದು ಅಲೆಕ್ಸಾಂಡರ್‌ ಮಗುವನ್ನು ಎತ್ತಿಕೊಂಡು ಪಾಠ ಮಾಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ