‘ಸಾಲ್ಟ್ ಚಾಲೆಂಜ್’ ಮಾರಣಾಂತಿಕ ಗೀಳು ಎಂದ ವೈದ್ಯರು
ಹೌದಾ ಮಾರಾಯ್ರೆ !
Team Udayavani, Mar 5, 2020, 11:35 AM IST
ಸಾಮಾಜಿಕ ಜಾಲತಾಣಗಳು ಮತ್ತು ಟಿಕ್ಟಾಕ್ ತಾಣಗಳಲ್ಲಿ ವೈರಸ್ನಂತೆ ಹಬ್ಬುವ ಚಾಲೆಂಜ್ಗಳು ಕೆಲವೊಮ್ಮೆ ವೈರಸ್ನಂತೆಯೇ ಮಾರಣಾಂತಿಕ. ಬ್ಲೂವೇಲ್, ಪಬ್ಜಿ, ಸ್ಕಲ್ ಬ್ರೇಕರ್ನಂಥ ಚಾಲೆಂಜ್ಗಳ ಬಳಿಕ ಸಾಲ್ಟ್ ಚಾಲೆಂಜ್ ಎಂಬ ಮತ್ತೊಂದು ಚಾಲೆಂಜ್ ಯುವಕರ ತಲೆಕೆಡಿಸಿದೆ.
ಹಲವಾರು ಯುವಕರು ಗಂಟಲವರೆಗೂ ಉಪ್ಪು ಸುರಿದುಕೊಂಡು ಪ್ರಯಾಸ ಪಟ್ಟು ಅದನ್ನು ನುಂಗುತ್ತಾರೆ. ಇನ್ನೂ ಹಲವರು ಉಪ್ಪು ನುಂಗಲಾರದೇ ವಾಂತಿ ಮಾಡಿಕೊಳ್ಳುತ್ತಾರೆ. ಇದು ಹಲವರಿಗೆ ತಮಾಷೆಯಂತೆ ಕಂಡರೆ ವೈದ್ಯರು ಇದು ಯುವಕರ ಪ್ರಾಣಕ್ಕೆ ಸಂಚಕಾರ ತರುವಂಥ ಚಟುವಟಿಕೆ ಎಂದು ಎಚ್ಚರಿಸಿದ್ದಾರೆ.
ಈ ರೀತಿ ಒಮ್ಮೆಲೇ ಉಪ್ಪು ಸೇವಿಸುವುದರಿಂದ ಪಾರ್ಶ್ವವಾಯು ಸಂಭವಿಸಬಹುದು ಅಧವಾ ಲವಣ ಪ್ರಮಾಣದಲ್ಲಿ ಏರುಪೇರು ಆಗಿ ಸಾವು ಸಂಭವಿಸಬಹುದು ಎಂದು ಹೇಳಿದ್ದಾರೆ.