ಸೌದಿ ದೊರೆಯಿಂದ 80 ಹದ್ದುಗಳಿಗೂ ವಿಮಾನಯಾನ
Team Udayavani, Feb 1, 2017, 4:39 AM IST
ಸೌದಿ ದೊರೆಗಳು ಮನಸ್ಸು ಮಾಡಿದರೆ ಎಂಥ ಪವಾಡವಾದರೂ ನಡದೀತೇನೊ. ಇತ್ತೀಚೆಗೆ ಸೌದಿ ದೊರೆ ಅಬ್ದುಲಾಜಿಜ್ 80 ಬೇಟೆ ಹಕ್ಕಿ(ಗಿಡುಗ ಜಾತಿಗೆ ಸೇರಿದ ಪಕ್ಷಿ)ಗಳು ಕತಾರ್ ಏರ್ವೆàಸ್ನ ಎಕಾನಮಿ ಕ್ಲಾಸ್ನಲ್ಲಿ ಕೂತು ಪ್ರಯಾಣ ಮಾಡುವಂತೆ ಮಾಡಿದ್ದಾರೆ. ಅವರು ಹಕ್ಕಿಗಳಿಗಾಗಿಯೇ ಟಿಕೆಟ್ ಕೊಂಡಿದ್ದರು. ಹಕ್ಕಿಗಳಿಗೆ ಕಾಯ್ದಿರಿಸಿದ್ದ ಸೀಟುಗಳಲ್ಲಿ ಅವುಗಳನ್ನು ಗಟ್ಟಿಯಾಗಿ ಬಿಗಿದು ಕಟ್ಟಲಾಗಿತ್ತು.
ಇಷ್ಟೊಂದು ಪಕ್ಷಿಗಳಿಗೆ ಟಿಕೆಟ್ ಬುಕ್ ಮಾಡಲು ಕಾರಣ, ಇದೇ ವಿಮಾನದಲ್ಲಿ ರಾಜಕುಮಾರ ಕೂಡ ಪ್ರಯಾಣಿಸುತ್ತಿದ್ದು, ಕ್ಯಾಬಿನ್ನಲ್ಲಿ ತಮ್ಮ ಎಲ್ಲಾ ಲಗೇಜುಗಳಿಗೆ ಸ್ಥಳಾವಕಾಶ ಪಡೆಯಲು ಅವರು ಪಕ್ಷಿಗಳಿಗೆ ಟಿಕೆಟ್ ಕೊಂಡಿದ್ದರು. ಆದರೆ ಉಳಿದ ಪ್ರಯಾಣಿಕರೂ ಈ ಪಕ್ಷಿಗಳ ಪಕ್ಕ ಕೂತು ಪ್ರಯಾಣಿಸಬೇಕಾಗಿ ಬಂದದ್ದು ದುಃಖದ ಸಂಗತಿ. ಪ್ರಯಾಣಿಕರ ಕಡೆ ವಿಮಾನ ಸಿಬ್ಬಂದಿಗಳು ಅಸಹಾಯಕ ನೋಟ ಬೀರುತ್ತಾ ನಿಂತಿದ್ದರು. ಅಷ್ಟಕ್ಕೂ ಅಷ್ಟೊಂದು ಲಗೇಜನ್ನು ಅವರು ಯಾಕೆ ಹೊತ್ತೂಯ್ಯುತ್ತಿದ್ದರು ಎಂದು ತಿಳಿದುಬಂದಿಲ್ಲ.