ಮಹಿಳೆಯ ಕೂದಲು ಸವರಿದ ಕರಡಿ

ಹೌದಾ ಮಾರಾಯ್ರೆ!

Team Udayavani, Nov 28, 2019, 8:10 AM IST

ವನ್ಯಧಾಮ ನೋಡಲು ಹೋದಾಗ ದೈತ್ಯ ಕರಡಿ ನಿಮ್ಮ ಭುಜದ ಮೇಲೆ ಕಾಲಿರಿಸಿ ನಿಂತುಕೊಂಡರೆ, ಆ ಸಂದರ್ಭ ಎಷ್ಟು ಭಯಾನಕವಾಗಿರಬಹುದಲ್ಲವೇ? ಆದರೆ ಮೆಕ್ಸಿಕೋದ ವನ್ಯಜೀವಿ ಉದ್ಯಾನದಲ್ಲಿ ಕರಡಿಯೊಂದು ಮಹಿಳೆಯ ಕೂದಲನ್ನು ಸರಿ ಮಾಡಿ ಹೋಗಿರುವ ದೃಶ್ಯವೊಂದು ಚಿತ್ರೀಕರಣವಾಗಿದೆ.

ಪ್ರವಾಸಿಗರ ಗುಂಪೊಂದು ಉದ್ಯಾನದಲ್ಲಿ ಓಡಾಡುತ್ತಿರುವಾಗ ಆಹಾರ ಹುಡುಕಿಕೊಂಡು ಕರಡಿಗಳ ಗುಂಪು ಬರುತ್ತದೆ. ಅವುಗಳ ಪೈಕಿ ಒಂದು ಕರಡಿ, ಮಹಿಳೆಯ ಬೆನ್ನ ಮೇಲೆ ಎಗರುತ್ತದೆ. ಗಾಬರಿಪಡಬೇಡಿ ಒಂದು ಕ್ಷಣ ಹಾಗೇ ಇರಿ ಎಂದು ಮತ್ತೂಬ್ಬ ಮಹಿಳೆ ಆ ಮಹಿಳೆಗೆ ಹೇಳುತ್ತಾರೆ. ಕರಡಿ ತಾನು ಬಂದಿದ್ದೇ ಮಹಿಳೆಯ ಕೂದಲು ಸರಿಮಾಡಲು ಎಂಬಂತೆ ಅವರ ಕೂದಲನ್ನು ಸವರಿ ಅಲ್ಲಿಂದ ಹೊರಡುತ್ತದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ