ಪ್ರಯಾಣಿಕರ ಚೀಲದಲ್ಲಿ ಅಡಗಿತ್ತು ಹಾವಿನ ಮರಿ

Team Udayavani, Jun 16, 2019, 9:20 AM IST

ಹಾವಿನ ಮರಿಯೊಂದು ಫ್ಲೋರಿಡಾದಿಂದ ಹವಾಯಿಗೆ ಉಚಿತವಾಗಿ ಪ್ರಯಾಣ ಬೆಳೆಸಲು ಹೊಂಚು ಹಾಕಿತ್ತು. ಅದಕ್ಕಾಗಿ ಅದು ಪ್ರಯಾಣಿಕರೊಬ್ಬರ ಬ್ಯಾಗನ್ನು ಸೇರಿಕೊಂಡಿತ್ತು. ಪ್ರಯಾಣಿಕರು ಆ ಬ್ಯಾಗಿನಲ್ಲಿ ಹಾವು ಸೇರಿಕೊಂಡಿರುವುದನ್ನು ನೋಡಿಯೇ ಇರಲಿಲ್ಲ. ಬ್ಯಾಗನ್ನು ಬಾಡಿಗೆ ನೀಡಿದವರಿಗೆ ಬ್ಯಾಗಿನ ಒಳಗೆ ಏನೋ ಮಿಸುಕಾಡಿದಂತಾಯಿತು. ಸಂದೇಹ ಬಂದು ಒಳಗೆ ನೋಡಿದಾಗ, ಹಾವಿನ ಮರಿ ಬೆಚ್ಚಗೆ ಕುಳಿತಿತ್ತು. ಹವಾಯಿಗೆ ಹಾವಿನ ಮರಿ ಒಯ್ಯುವುದರಿಂದ ಉಂಟಾಗುವ ಆಪತ್ತು ಅವರಿಗೆ ತಿಳಿದಿತ್ತು. ಹವಾಯಿಯಲ್ಲಿ ಹಾವುಗಳಿಗೆ ಬೇಕಾದ ನೈಸರ್ಗಿಕ ವಾತಾವರಣವಾಗಲೀ, ಬೇಟೆಯಾಡುವಂಥ ಜೀವಿಗಳಾಗಲೀ ಇಲ್ಲ. ಹೀಗಾಗಿ ಹವಾಯಿಗೆ ಹಾವು ಒಯ್ಯುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಅಂತೂ ಬ್ಯಾಗ್‌ನ ಮಾಲೀಕರ ದೆಸೆಯಿಂದ ಪ್ರಯಾಣಿಕ ಸಂಕಷ್ಟಕ್ಕೆ ಸಿಲುಕುವುದು ತಪ್ಪಿತು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ