ಏನ್ರೀ.. ಇಲ್ಲೆಲ್ಲಾ ಯಾರಾದ್ರೂ ಫೋನ್ ಚೆಕ್ ಮಾಡ್ತಾರಾ.. ಥೂ..!


Team Udayavani, Feb 25, 2019, 8:11 AM IST

mobile-using-symbolic-700.jpg

ಮೊಬೈಲ್ ಫೋನುಗಳು ಅದರಲ್ಲೂ ಸ್ಮಾರ್ಟ್ ಪೋನುಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿವೆ. ಮನೆಯಲ್ಲೂ ಫೋನು, ಕಛೇರಿಯಲ್ಲೂ ಫೋನು, ಸಮಾರಂಭಗಳಲ್ಲೂ ಫೋನು, ಹೀಗೆ ಎಲ್ಲಿ ಹೋದ್ರೂ ನಮ್ಮೆಲ್ಲರ ಕೈಯಲ್ಲಿ ಈ ಮೊಬೈಲ್ ತಪ್ಪುವುದಿಲ್ಲ. ಆದ್ರೆ, ಹೆಚ್ಚಿನವರು ಕೆಲವೊಂದು ಕಡೆಗಳಲ್ಲಿ ತಮ್ಮ ಮೊಬೈಲ್ ಫೋನುಗಳಿಗೆ ಎಂಟ್ರಿ ಕೊಡುವುದಿಲ್ಲ. ಆದ್ರೆ​​​,​​​​ ಇಲ್ಲೊಂದು ಸಮೀಕ್ಞೆಯಲ್ಲಿ ಬಹಿರಂಗವಾಗಿರುವ ಮಾಹಿತಿಯ ಪ್ರಕಾರ ಕೆಲವರು ಎಲ್ಲೆಂದರಲ್ಲಿ ತಮ್ಮ ಮೊಬೈಲ್ ಫೋನನ್ನು ಚೆಕ್ ಮಾಡ್ತಿರುತ್ತಾರಂತೆ. ಈ ಸಮೀಕ್ಷೆಯಲ್ಲಿ ಹೊರಬಿದ್ದಿರುವ ಫಲಿತಾಂಶಗಳನ್ನು ಕೆಳಿದ್ರೆ ನಿಮ್ಮ ತಲೆ ತಿರುಗಬಹುದು.

ಸೆಕ್ಸ್ ಸಂದರ್ಭದಲ್ಲೂ ಮೊಬೈಲ್ ಚೆಕ್ ಮಾಡುವ ಭೂಪರಿದ್ದಾರೆ!
ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವಾಗ ಸುಮಾರು 17 ಪ್ರತಿಶತದಷ್ಟು ಯುವಜನತೆ ತಮ್ಮಲ್ಲಿರುವ ಸ್ಮಾರ್ಟ್ ಫೋನನ್ನು ಚೆಕ್ ಮಾಡುತ್ತಿರುತ್ತಾರಂತೆ. ಆ ಸಮಯದಲ್ಲಿ ಮೊಬೈಲ್ ನಲ್ಲಿ ನೋಡುವಂತದ್ದೇನಿರ್ತದೋಪ್ಪ?

ಇಲ್ಲೂ ಮೊಬೈಲ್ ಬಿಡಲ್ವಲ್ರೀ ಈ ಜನಗಳು!
ಇನ್ನು 18 ರಿಂದ 34 ವರ್ಷ ಪ್ರಾಯದವರಲ್ಲಿ 85 ಪ್ರತಿಶತದಷ್ಟು ಜನರು ತಾವು ಶೌಚಾಲಯದಲ್ಲಿ ಇರುವಾಗಲೂ ಮೊಬೈಲ್ ಫೋನನ್ನು ಬಳಸುತ್ತಾರಂತೆ. ಇನ್ನು 43 ಪ್ರತಿಶತ ಜನರು ಸ್ನಾನ ಮಾಡುವ ಸಂದರ್ಭದಲ್ಲೂ ಮೊಬೈಲ್ ಚೆಕ್ ಮಾಡ್ತಾರಂತೆ ಮಾರ್ರೆ.. ಅಷ್ಟು ಎಮರ್ಜೆನ್ಸಿ ಏನಿರುತ್ತೋಪ್ಪ!. ಮತ್ತು ಈ ರೀತಿಯ ವರ್ತನೆ 35 ರಿಂದ 51 ವರ್ಷದೊಳಗಿನ ಪ್ರಾಯವರ್ಗದವರಲ್ಲಿ ಜಾಸ್ತಿಯೆಂಬ ಅಂಶವೂ ‘ಶ್ಯೂರ್ ಕಾಲ್’ ಎಂಬ ಸಂಸ್ಥೆ ನಡೆಸಿರುವ ಈ ಸಮೀಕ್ಷೆಯಿಂದ ಬಯಲಾಗಿದೆ.

ಸಮೀಕ್ಷೆಗೊಳಪಟ್ಟ 1,137 ಜನರಲ್ಲಿ ಕಾಲು ಬಾಗದಷ್ಟು ಮೊಬೈಲ್ ಬಳಕೆದಾರರು ತಮ್ಮ ಬಳಿಯಲ್ಲಿ ಮೊಬೈಲ್ ಇಲ್ಲದಿದ್ದರೆ ಅದೇನೋ ಆತಂಕ ಮನಸ್ಥಿತಿ ಕಾಡುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮತ್ತು ನೆಟ್ವರ್ಕ್ ಲಭ್ಯವಿಲ್ಲದ ಸಂದರ್ಭದಲ್ಲಿ ಈ ಆತಂಕ ಮನಸ್ಥಿತಿಯ ಪ್ರಮಾಣ 30 ಪ್ರತಿಶತಕ್ಕೆ ಏರುತ್ತದಂತೆ. ಇನ್ನು ಇವರಲ್ಲಿ ಮುಕ್ಕಾಲು ಪಾಲು ಜನರು ತಾವು ಮಲಗುವ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲೇ ಮೊಬೈಲ್ ಇರಿಸಿಕೊಳ್ತಾರಂತೆ. ಮತ್ತು ಈ ರೀತಿಯಾಗಿ ಮೊಬೈಲ್ ಅನ್ನು ಸದಾಕಾಲ ತಮ್ಮ ಬಳಿಯಲ್ಲೇ ಇರಿಸಿಕೊಳ್ಳುವ ಜನರು ತಮ್ಮ ಜೀವನದಲ್ಲಿ ಸಂತೃಪ್ತಿಯಿಂದಿಲ್ಲ ಎಂಬ ವಿಚಾರವನ್ನೂ ಸಹ ಒಪ್ಪಿಕೊಂಡಿದ್ದಾರೆ.

ಇನ್ನೂ ಆತಂಕಕಾರಿ ವಿಚಾರವೆಂದರೆ ತಮ್ಮ ಈ ಮೊಬೈಲ್ ಗೀಳಿನಿಂದಾಗಿ ಅವರ ಕೌಟುಂಬಿಕ ಸಂಬಂಧಗಳಲ್ಲಿ ವ್ಯತ್ಯಾಸ ಆಗಿರುವ ವಿಚಾರವನ್ನು 19 ಪ್ರತಿಶತದಷ್ಟು ಜನ ಒಪ್ಪಿಕೊಂಡಿದ್ದಾರೆ ಹಾಗೂ 9 ಪ್ರತಿಶದಷ್ಟು ಜನರಿಗೆ ಕಛೇರಿಯಲ್ಲಿ ಸಹೋದ್ಯೋಗಿಗಳೊಂದಿಗಿನ ಸಂಬಂಧಗಳಲ್ಲಿ ಸಮಸ್ಯೆ ಉಂಟಾಗಿದೆಯಂತೆ. ನಿದ್ದೆ ಮಾಡುವ ಮೊದಲು ಮೊಬೈಲ್ ನೋಡುವುದರಿಂದ ಸುಖನಿದ್ರೆಗೆ ತೊಂದರೆಯಾಗಿದೆ ಎಂಬ ವಿಚಾರವನ್ನು 35 ಪ್ರತಿಶದಷ್ಟು ಜನ ಒಪ್ಪಿಕೊಂಡಿದ್ದಾರೆ ಹಾಗೂ ಈ ರೀತಿ ಮೊಬೈಲ್ ಬಳಸುವವರು ರಾತ್ರಿ ಕನಿಷ್ಟಪಕ್ಷ ಎರಡರಿಂದ ಮೂರು ಬಾರಿಯಾದರೂ ಎಚ್ಚರಗೊಳ್ಳುತ್ತಾರಂತೆ.

ಒಟ್ಟಿನಲ್ಲಿ ಅತೀಯಾದ ಮೊಬೈಲ್ ಅವಲಂಬನೆ ಯುವ ಜನರ ಜೀವನ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಿರುವ ವಿಚಾರವಂತೂ ಈ ಸಮೀಕ್ಷೆಯಿಂದ ಬಯಲಾಗಿರುವುದಂತೂ ಸತ್ಯ.

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ


MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.