ಹಾರಿಕೊಂಡೇ ಕಾಲೇಜು, ಕಚೇರಿಗೆ ಹೋಗ್ಬಹುದು!
Team Udayavani, Feb 14, 2020, 7:34 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು ಸಹಿತ ಹಲವು ನಗರಗಳಲ್ಲಿ ಸಂಚಾರ ದಟ್ಟಣೆ ಹೇಗಿರುತ್ತದೆ ಎಂದು ಕೇಳುವುದೇ ಬೇಡ. ಅದನ್ನು ನಿವಾರಿಸಲು ಪರಿಹಾರವೇನು? ಹಾರಿಕೊಂಡೇ ಕಾಲೇಜು-ಕಚೇರಿಗಳಿಗೆ ಹೋದರೆ ಹೇಗಿರುತ್ತದೆ? ಅದೂ ಪ್ರತಿ ಗಂಟೆಗೆ 50 ಕಿಮೀ ವೇಗದಲ್ಲಿ…ಸ್ಯಾಮ್ ರೋಗರ್ಸ್ ಎಂಬವರು ಈ ಬಗ್ಗೆ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿ ಯಶಸ್ವಿಯೂ ಆಗಿದ್ದಾರೆ.
ಅದಕ್ಕಾಗಿ ಅವರು ಗ್ಯಾಸ್ ಟರ್ಬೈನ್ಯುಕ್ತ ಸೂಟ್ ಒಂದನ್ನು ಧರಿಸಿಕೊಂಡು ಈ ನದಿಯ ಒಂದು ತಟದಿಂದ ಮತ್ತೂಂದು ತಟಕ್ಕೆ ಹಾರಿ ಯಶಸ್ವಿಯಾಗಿದ್ದಾರೆ, ಅದೂ 80 ಕಿ.ಮೀ. ವೇಗದಲ್ಲಿ. ಅವರು ಸಿದ್ಧಪಡಿಸಿರುವ ಜೆಟ್ ಸೂಟ್ನಲ್ಲಿ ಐದು ಟರ್ಬೋ ಎಂಜಿನ್ಗಳಿವೆ. ಎರಡು ಕೈಗಳಿಗೆ ತಲಾ 2, ಬೆನ್ನಿಗೆ ಒಂದು ಬ್ಯಾಗ್ನಂತೆ ಇರುವುದನ್ನು ಕಟ್ಟಿಕೊಳ್ಳಬೇಕು.
ಯುನೈ ಟೆಡ್ ಕಿಂಗ್ಡಮ್ನ ಲಾಫ್ಬೊರೋ (Lough borough) ವಿವಿಯಲ್ಲಿ ವಿನ್ಯಾಸ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ ಸ್ಯಾಮ್ ರೋಗರ್ಸ್. ಕಲ್ಪನೆಯಲ್ಲದೆ, ವಾಸ್ತವಾಗಿ ಕೂಡ ಕ್ಷಿಪ್ರವಾಗಿ ಜನರಿಗೆ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ತೆರಳಲು ಹೆಚ್ಚು ಅನುಕೂಲ ಮಾಡುವುದೇ ಅವರ ಉದ್ದೇಶವಾಗಿದೆ. ಅವರು ನಿರ್ಮಿಸಿ, ಮರು ವಿನ್ಯಾಸಗೊಳಿಸಿದ ಜೆಟ್ ಸೂಟ್ಗೆ ಗಿನ್ನೆಸ್ ದಾಖಲೆಗಳ ಮಂಡಳಿಯಿಂದ ಪ್ರಮಾಣೀಕೃತಗೊಂಡಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್