ಶ್ವಾನ ಪಡೆಗೆ ಬೀದಿ ನಾಯಿ ಸೇರ್ಪಡೆ
Team Udayavani, Mar 9, 2019, 11:48 AM IST
ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದ ಬೀದಿ ನಾಯಿ ಮರಿಯೊಂದು ಈಗ ಪಶ್ಚಿಮ ಬಂಗಾಳದ ಪ್ರತಿಷ್ಠಿತ ಶ್ವಾನ ಪಡೆಗೆ ಸೇರ್ಪಡೆಯಾಗಿದೆ. ಇದು ಪಶ್ಚಿಮ ಬಂಗಾಳ ಶ್ವಾನ ಪಡೆಗೆ ಸೇರ್ಪಡೆಯಾದ ಮೊದಲ ಬೀದಿನಾಯಿ ತಳಿ ಎನಿಸಿಕೊಂಡಿದೆ.
ದಾರಿ ಹೋಕ ಮಕ್ಕಳು ನಾಯಿಗೆ ಕಲ್ಲೆಸೆಯುತ್ತಿದ್ದ ವೇಳೆ ಪೊಲೀಸರು ಇದನ್ನು ರಕ್ಷಿಸಿದ್ದರು. ಪೊಲೀಸ್ ಅಧಿಕಾರಿಗಳು ಈ ನಾಯಿಗೆ “ಆಶಾ’ ಎಂದು ಹೆಸರಿಟ್ಟಿದ್ದಾರೆ. ಆಶಾಳಿಗೆ ಒಂದೂವರೆ ವರ್ಷಗಳ ಕಾಲ ತರಬೇತಿ ನೀಡಲಾದ ಬಳಿಕ, ಆಕೆಯನ್ನು ಪಡೆಗೆ ಸೇರಿಸಿಕೊಂಡಿದ್ದು, ಇದಕ್ಕೂ ಮೊದಲು ನಾವು ಬೀದಿ ನಾಯಿಯನ್ನು ಶ್ವಾನ ಪಡೆಗೆ ಸೇರಿಸಿಕೊಳ್ಳುವ ಯೋಚನೆಯನ್ನೂ ಮಾಡಿರಲಿಲ್ಲ.
ತರಬೇತಿ ವೇಳೆ ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್ ನಾಯಿಗಳ ಜೊತೆ ತರಬೇತಿ ನೀಡಲಾಯಿತು. ಬಾಂಬ್ ಶೋಧ ಸೇರಿದಂತೆ ಇತರ ಕಾರ್ಯಗಳಲ್ಲಿ ಆ ನಾಯಿಗಳಿಗಿಂತ ಬೀದಿನಾಯಿ ಕಡಿಮೆ ಇಲ್ಲ ಎಂದು ಆಶಾ ಸಾಬೀತು ಪಡಿಸಿದಳು ಎಂದು ಪೊಲೀಸರು ಹೇಳಿದ್ದಾರೆ. ಸದ್ಯದಲ್ಲೇ ಆಕೆ ಕೆಲಸಕ್ಕೆ ಹಾಜರಾಗುತ್ತಾಳೆ. ಮತ್ತಷ್ಟು ಬೀದಿ ನಾಯಿಗಳಿಗೆ ತರಬೇತಿ ನೀಡಲು ಆಶಾ ಪ್ರೇರೇಪಿಸಿದ್ದಾಳೆ ಎಂದು ಹೇಳಿದ್ದಾರೆ.