ಈ ಪೆನ್ ನಿಮ್ಮ ಬಳಿ ಇದ್ರೆ ದೇವರೇ ಪರೀಕ್ಷೆ ಬರೀತಾನೆ!
Team Udayavani, Mar 13, 2017, 12:41 PM IST
ಪರೀಕ್ಷೆ ಬಂತು, ಅದರೊಟ್ಟಿಗೆ ಕೆಲವರಿಗೆ ಹೆದರಿಕೆಯಿಂದ ಜ್ವರವೂ ಬರುತ್ತೆ ಅಲ್ವಾ? ಎಕ್ಸಾಮ್ ಅಂದ್ರೆ ಹೀಗೆಲ್ಲ ಗಡಗಡ ಕಂಪಿಸಿ, ಮಾರುದ್ದ ಓಡುವ ವಿದ್ಯಾರ್ಥಿಗಳಿಗೆ ಗುಜರಾತ್ನ ದೇಗುಲವೊಂದು ಮ್ಯಾಜಿಕ್ ಪೆನ್ ನೀಡುತ್ತೆ! ಅದರಲ್ಲಿ ಪರೀಕ್ಷೆ ಬರೆದ್ರೆ ಒತ್ತಡವೂ ಕರಗಿ, ಪಾಸ್ ಆಗೋದು ಪಕ್ಕಾ!
ಪಂಚಮಹಲ್ ಜಿಲ್ಲೆಯ ಕಷ್ಟಭಂಜನ್ ದೇಗುಲದಲ್ಲಿ ಇಂಥ ಪೆನ್ನುಗಳನ್ನು ಸರ್ವರೋಗ ನಿರೋಧಕ ರೀತಿ
ಮಾರಲಾಗುತ್ತಿದೆ. ಈ ಪೆನ್ ಸೆಟ್ನ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 1,900 ರೂ.! ಬಿಲ್ ಕೇಳಿದ್ರೆ ಕೊಡೋಲ್ಲ ಎನ್ನುವ ಹೇಳಿಕೆ ಪೂಜಾರಿಗಳದ್ದು. ಅಲ್ಲದೆ, ಯಾರಾದ್ರೂ ಹಣ ವಾಪಸು ಕೇಳಿದ್ರೆ ಪರೀಕ್ಷೆಯಲ್ಲಿ ಫೇಲ್ ಆಗೋದು ನಿಶ್ಚಿತ ಅಂತಲೂ ಗಾಳಿಸುದ್ದಿ ಹಬ್ಬಿಸಲಾಗಿದೆ. ಅಂದಹಾಗೆ,
ಈ ಪೆನ್ ಪಡೆಯಲು ಮೊಬೈಲ್ ಸಂಖ್ಯೆ, ಹಾಲ್ ಟಿಕೆಟ್, ಫೋಟೋ, ಗುರುತಿನ ಪತ್ರ ನೀಡೋದು ಕಡ್ಡಾಯವಂತೆ. ಇಷ್ಟೆಲ್ಲ ಕೊಟ್ಟರೆ ದೇವರೇ ಬಂದು ಎಕ್ಸಾಂ ಬರೀತಾನಂತೆ!