ಮಗು ಎತ್ತಿಕೊಂಡು ತಾಯಿಗೆ ಪ್ರಮಾಣ ವಚನ ಬೋಧಿಸಿದ ಜಡ್ಜ್

ಹೌದಾ ಮಾರಾಯ್ರೆ!

Team Udayavani, Nov 15, 2019, 12:44 AM IST

ಪದವಿ ವ್ಯಾಸಂಗ ಮಾಡುವಾಗ ಮಗುವಿಗೆ ಜನ್ಮವಿತ್ತ ಮಹಿಳೆ ಈಗ ಮಗುವಿನೆದುರೇ ವೃತ್ತಿಗೆ ಪ್ರವೇಶ ಪಡೆದಿದ್ದಾರೆ. ಈ ಘಟನೆ ನಡೆದಿದ್ದು ಅಮೆರಿಕದ ಟೆನ್ನಿಸ್ಸೀಯಲ್ಲಿ. ಜ್ಯೂಲಿಯಾನಾ ಲಾಮರ್‌ ಕಾನೂನು ವ್ಯಾಸಂಗ ಮಾಡುವ ವೇಳೆ ಗರ್ಭಿಣಿಯಾಗಿ, ಮಗುವಿಗೆ ಜನ್ಮ ನೀಡಿದ್ದರು.

ವ್ಯಾಸಂಗ ಮತ್ತು ಪದವಿಯನ್ನು ಒಟ್ಟಿಗೇ ನಿಭಾಯಿಸಿದ್ದರು. ಅವರು ಪ್ರಮಾಣ ವಚನ ಸ್ವೀಕರಿಸಲು ವೇದಿಕೆಗೆ ಬಂದ ವೇಳೆ ಮಗುವು ಜನರ ಮಧ್ಯೆ ಇರುವುದನ್ನು ನೋಡಿದ ಜಡ್ಜ್ ಡಿಂಕಿನ್ಸ್‌, ಮಗುವನ್ನು ಒಂದು ಕೈಯಲ್ಲಿ ಎತ್ತಿಕೊಂಡು, ಅದನ್ನು ಆಡಿಸುತ್ತಾ ಲಾಮರ್‌ಗೆ ಪ್ರಮಾಣ ವಚನ ಬೋಧಿಸಿದರು. ಜಡ್ಜ್ ಅವರ ಔದಾರ್ಯ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ