ಸಮಾಧಿಯೊಳಗಿನಿಂದ ಮಾತನಾಡಿದ ಮೃತ ವ್ಯಕ್ತಿ
Team Udayavani, Oct 18, 2019, 12:38 PM IST
ಮೃತದೇಹವನ್ನು ಮಣ್ಣು ಮಾಡಿ ಎಲ್ಲರೂ ಶೋಕದಲ್ಲಿ ಮುಳುಗಿದ್ದ ವೇಳೆ ಸಮಾಧಿಯಿಂದ ಮೃತ ವ್ಯಕ್ತಿ ಮಾತನಾಡುವುದು ಕೇಳಿದರೆ ನೆರೆದಿರುವ ಸಂಬಂಧಿ, ಸ್ನೇಹಿತರಿಗೆ ಹೇಗಾಗಬೇಡ? ಇಂಥ ಘಟನೆ ಐರ್ಲೆಂಡ್ ನಲ್ಲಿ ನಡೆದಿದೆ. ಶಾಯ್ ಬ್ರಾಡ್ಲಿ ಎಂಬುವವರು 3 ವರ್ಷಗಳ ಕಾಲ ಕ್ಯಾನ್ಸರ್ ಜೊತೆ ಸೆಣೆಸಿ ಅ.8ರಂದು ನಿಧನರಾದರು. ಅವರ ಕೊನೇ ಆಸೆಯನ್ನು ತಮ್ಮ ಮಗನಿಗೆ ಹೇಳಿದ್ದರು.
“ತಮ್ಮ ದೇಹ ಮಣ್ಣಾಗುವ ಹೊತ್ತಿಗೆ, ತಾವು ನೊಂದಿರುವ ಎಲ್ಲರ ಜೊತೆ ಮಾತನಾಡಬೇಕು. ಅವರು ದುಃಖದಲ್ಲೂ ನಗಬೇಕು’ ಎಂದಿದ್ದರು. ಇದಕ್ಕಾಗಿ ಅವರು ಮೊದಲೇ ತಮ್ಮ ಧ್ವನಿ ಮುದ್ರಿಸಿ ಮಗನಿಗೆ ನೀಡಿದ್ದರು. ಅವರನ್ನು ಮಣ್ಣು ಮಾಡಿ ಎಲ್ಲರೂ ಪ್ರಾರ್ಥನೆಯಲ್ಲಿ ನಿರತರಾಗಿದ್ದ ವೇಳೆ ಸಮಾಧಿಯಿಂದ “ಹಲೋ, ಹಲೋ, ಹಲೋ… ನನ್ನನ್ನು ಹೊರ ತೆಗೆಯಿರಿ.. ನಾನು ಪೆಟ್ಟಿಗೆಯಲ್ಲಿ ಇದ್ದೇನೆ..’ ಎಂದು ಶಾಯ್ ಮಾತಾಡುವುದು ಕೇಳುತ್ತದೆ. ಅದನ್ನು ಕೇಳಿ ಎಲ್ಲರೂ ಚಕಿತರಾಗುತ್ತಾರೆ. ಇದು ಶಾಯ್ರ ಪೂರ್ವಯೋಜನೆ ಎಂದು ತಿಳಿದು ಎಲ್ಲರೂ ನೋವಿನಲ್ಲೂ ಮನಸಾರೆ ನಕ್ಕಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ