ಸಂತ್ರಸ್ತರಿಗಾಗಿ 1.43 ಲಕ್ಷ ರೂ. ಸಂಗ್ರಹಿಸಿದ ಹಲ್ಲಿ
ಹೌದಾ ಮಾರಾಯ್ರೆ!
Team Udayavani, Feb 26, 2020, 6:31 AM IST
ಸಾಕು ಪ್ರಾಣಿಗಳು ಮಾಲೀಕರ ಪ್ರಾಣ ಉಳಿಸಿರುವ ಎಷ್ಟೋ ನಿದರ್ಶನಗಳಿವೆ. ಅದೇ ರೀತಿ, ಆಸ್ಟ್ರೇಲಿಯಾದಲ್ಲಿ ಸಾಕು ಪ್ರಾಣಿಯೊಂದು ಅಲ್ಲಿ ಸಂಭವಿಸಿದ ಕಾಳ್ಗಿಚ್ಚಿನಿಂದ ಬದುಕು ಕಳೆದುಕೊಂಡವರಿಗೆ ಸಹಾಯ ಮಾಡಲು ಶ್ರಮಿಸುತ್ತಿದೆ.
ಆಸ್ಟ್ರೇಲಿಯಾದ ದೈತ್ಯ ಗಾತ್ರದ ಹಲ್ಲಿಯೊಂದು ಮಾಡುತ್ತಿರುವ ಪೇಂಟಿಂಗ್ ಹರಾಜು ಹಾಕಿ, ಅದರಿಂದ ಬಂದ ಹಣವನ್ನು ಅದರ ಮಾಲೀಕರು ಕಾಳ್ಗಿಚ್ಚಿನ ಸಂತ್ರಸ್ತರಿಗೆ ನೀಡುತ್ತಿದ್ದಾರೆ.
ಮೊದಲಿಗೆ ಹಲ್ಲಿಯನ್ನು ಹಲವಾರು ಬಣ್ಣಗಳ ಮೇಲೆ ನಡೆಸಿ, ಬಳಿಕ ಅದನ್ನು ಕ್ಯಾನ್ವಾಸ್ ಮೇಲೆ ನಡೆಸುತ್ತಾರೆ. ಅದರ ಬಾಲಕ್ಕೆ ಮೆತ್ತಿಕೊಂಡಿರುವ ಬಣ್ಣ ಕ್ಯಾನ್ವಾಸ್ ಮೇಲೆ ಹರಿದಾಡಿ ಚಿತ್ತಾರವನ್ನು ಮೂಡಿಸುತ್ತದೆ. ಈ ಕಲಾಕೃತಿಗಳಿಂದ ಈವರೆಗೂ 1.43 ಲಕ್ಷ ರೂ. ಸಂಗ್ರಹವಾಗಿವೆ ಎಂದು ಸಾರಾ ಕರ್ರಿ ಹೇಳಿದ್ದಾರೆ.