ಪೊಲೀಸ್‌ ಕುದುರೆಗೂ ಅಂಟಿದ ಚಹಾ ಚಟ!

Team Udayavani, Dec 2, 2019, 7:51 AM IST

ಲಂಡನ್‌ ಪೊಲೀಸ್‌ ಇಲಾಖೆಯ ಅಶ್ವದಳದಲ್ಲಿರುವ (ಮೆರ್ಸಿಸೈಡ್‌ ಪೊಲೀಸ್‌) ಜಾಕ್‌ ಎಂಬ ಕುದುರೆಯ ದ್ದೊಂದು ವಿಚಿತ್ರ ಸಮಸ್ಯೆಯಿದೆ. ಅದೇನೆಂದರೆ, ಪ್ರತಿದಿನ ಒಂದು ಕಪ್‌ ಬೆಚ್ಚನೆಯ ಚಹಾ ನೀಡದೇ ಇದ್ದರೆ ಇದು ಕೆಲಸಕ್ಕೆ ಬರುವುದೇ ಇಲ್ಲ ಅಂತ ಹಠ ಹಿಡಿಯುತ್ತೆ! ಚಹಾ ನೀಡಿದರೆ, ಬೇಗನೇ ಚಹಾ ಕುಡಿದು ದಿನವಿಡೀ ದುಡಿಯುತ್ತೆ! ಇದಕ್ಕೆ ಈ ಚಟ ಹಿಡಿದಿದ್ದು ಹೇಗೆಂಬುದರ ಬಗ್ಗೆ ಒಂದು ಕಥೆಯಿದೆ. 15 ವರ್ಷಗಳ ಹಿಂದೆ ಅದನ್ನು ತರ ಬೇತಿಗೆ ಅಣಿಗೊಳಿಸಿ ದ್ದಾಗ ಆಗಿನ್ನೂ ಚಿಕ್ಕದಿದ್ದ ಜಾಕ್‌, ಆಗ ತನ್ನ ತರಬೇತುದಾರನ ಜತೆಗೆ ಹುಡುಗಾಟ ಆಡುತ್ತಿತ್ತು. ಪ್ರತಿದಿನ ಬೆಳಗ್ಗೆ ಆತ ಬೆಚ್ಚ ನೆಯ ಚಹಾ ಕುಡಿಯು ವಾಗ ಆತನ ಚಹಾ ಲೋಟಕ್ಕೆ ಬಾಯಿ ಹಾಕಿ ಮೆಲ್ಲಗೆ ಚಹಾ ಹೀರಿಬಿಡುತ್ತಿತ್ತು. ಇದನ್ನು ಗಮನಿಸಿದ ಆತ, ಪ್ರತಿ ದಿನ ಇಷ್ಟಿಷ್ಟು ಚಹಾ ನೀಡುತ್ತಿದ್ದ. ಅದೇ ಈಗ ಮಹಾ ಚಟವನ್ನಾಗಿ ಜಾಕ್‌ ಮೈಗೂಡಿಸಿಕೊಂಡಿದ್ದಾನೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ