ಮಿಡತೆ ಬಿರಿಯಾನಿ ಎಂದ ಸಚಿವಗೆ ನೆಟ್ಟಿಗರ ಕ್ಲಾಸ್‌

Team Udayavani, Nov 14, 2019, 1:57 AM IST

ಸಾರ್ವಜನಿಕರಿಗೆ ಸಮಸ್ಯೆಯಾದರೆ ಆಡಳಿತದಲ್ಲಿ ಇರುವವರು ಏನಪ್ಪಾ ಮಾಡಬೇಕು? ಅದಕ್ಕೆ ಪರಿಹಾರ ಕಂಡುಕೊಂಡು, ಮುಂದಿನ ದಿನಗಳಲ್ಲಿ ಅಂಥದ್ದು ಮರುಕಳಿಸದೇ ಇರುವ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಪಾಕಿಸ್ಥಾನದ ಕರಾಚಿಯಲ್ಲಿ ಈಗ ಮಿಡತೆಗಳದ್ದೇ ಹಾವಳಿ. ಎಲ್ಲಿ ನೋಡಿದರಲ್ಲಿ ಅವುಗಳು ಹಾರಿಬರುತ್ತವೆ.

ಜನರಿಗೆ ಏನು ಮಾಡಬೇಕು ಎಂದು ತಿಳಿಯದೆ, ತಮ್ಮ ತಮ್ಮ ಪ್ರದೇಶಗಳಲ್ಲಿನ ಸಮಸ್ಯೆಯ ಫೋಟೋ, ವಿಡಿಯೋವನ್ನು ಟ್ವಿಟರ್‌ಗೆ ಅಪ್‌ಲೋಡ್‌ ಮಾಡುತ್ತಿದ್ದಾರೆ. ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದ ಕೃಷಿ ಸಚಿವ ಇಸ್ಮಾಯಿಲ್‌ ರಾಹೂ ‘ಮಿಡತೆಗಳ ಸಮಸ್ಯೆಯೇ? ಹಾಗಿದ್ದರೆ ಚಿಂತೆ ಬೇಡ. ಅವುಗಳನ್ನು ಬಿರಿಯಾನಿ, ಕಡಾಯಿ ಮಾಡಿ ತಿನ್ನಿ’ ಎಂದು ಹೇಳಿರುವ ವೀಡಿಯೋ ಸಕತ್‌ ಆಗಿ ವೈರಲ್‌ ಆಗಿದೆ.

ಟ್ವಿಟರ್‌ನಲ್ಲಿ ಹಲವಾರು ಮಂದಿ ರಾಹೂ ಹೇಳಿಕೆಗೆ ಕಠಿನವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಬಾಯಿಗೆ ಬಂದಂತೆ ಮಾತನಾಡುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಸಮಸ್ಯೆ ಪಾಕಿಸ್ಥಾನ ಸರಕಾರಕ್ಕೂ ಭಾರೀ ಸವಾಲಾಗಿ ಪರಿಣಮಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ವಿಮಾನದ ಮೇಲೆ ಅನುರಕ್ತಳಾಗಿರುವ ಜರ್ಮನಿ ಮಹಿಳೆ ವಿಮಾನವನ್ನೇ ತನ್ನ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಹೌದು, ನೀವು ಕೇಳುತ್ತಿರುವುದು...

  • ಉತ್ತರ ಭಾರತದ ಮದುವೆಗಳಲ್ಲಿ ವರ ಕುದುರೆ ಮೇಲೆ ಕುಳಿತು ವಧುವಿನ ಮನೆಗೆ ಮೆರವಣಿಗೆ ಹೋಗುವುದು ಸಂಪ್ರದಾಯ. ಆದರೆ ಖಾಂಡ್ವಾದಲ್ಲಿ ಪಟಿದಾರ್‌ ಸಮುದಾಯಕ್ಕೆ ಸೇರಿರುವ...

ಹೊಸ ಸೇರ್ಪಡೆ