ಇಂಥ ಸಾಹಸ ಮಾಡಲ್ಲ ಎಂದ ಟಿಕ್ ಟಾಕ್ ಸ್ಟಾರ್
Team Udayavani, Feb 28, 2020, 9:55 AM IST
ಟಿಕ್ ಟಾಕ್ ವೀಡಿಯೋ ಮಾಡುವ ಹುಮ್ಮಸ್ಸಿನಲ್ಲಿ ಎಷ್ಟೋ ಜನ ಆಪಾಯವನ್ನು ಆಹ್ವಾನಿಸುವುದು, ಇನ್ನೂ ಹಲವರು ಸಾವನ್ನಪ್ಪುವುದನ್ನು ನಾವು ನೋಡಿರುತ್ತೇವೆ. ಆದರೆ ಜನಕ್ಕೆ ಬುದ್ಧಿ ಮಾತ್ರ ಬರುವುದಿಲ್ಲ. ವಿದೇಶದ ಟಿಕ್ ಟಾಕ್ ಸ್ಟಾರ್ ಜಾಸನ್ ಕ್ಲಾರ್ಕ್ ಹೆಪ್ಪುಗಟ್ಟಿದ್ದ ನೀರಿನಲ್ಲಿ ಈಜಿ ಸಾವಿನ ದವಡೆಗೆ ಹೋಗಿ ಹೊರಬಂದು, ನಾನು ಇನ್ನೆಂದಿಗೂ ಇಂಥ ಸಾಹಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಮೇಲ್ಪದರ ಮಂಜುಗಟ್ಟಿದ್ದ ಸರೋವರದಲ್ಲಿ ಒಂದು ಹೊಂಡ ಅದರ ಒಳಗೆ ಹೋಗಿ ಸುಮಾರು ದೂರ ಈಜುತ್ತಾರೆ. ಆದರೆ ಹೊರಬಾರಲಾರದೇ ಮೊದಲೇ ತೋಡಿದ್ದ ಹೊಂಡದ ಬಳಿ ಪ್ರಯಾಸದಿಂದ ಬಂದು ಏದುಸಿರು ಬಿಡುತ್ತಾರೆ. ಇನ್ನೊಂದು ಸೆಕೆಂಡು ಆಗಿದ್ದರೂ ನನ್ನ ಪ್ರಾಣ ಹೋಗಿರುತ್ತಿತ್ತು ಎಂದಿದ್ದಾರೆ.