ಟ್ರಂಪ್-ಅಬೆ ಶೇಕ್ಹ್ಯಾಂಡ್!: ವೀಡಿಯೋ ಸಿಕ್ಕಾಪಟ್ಟೆ ವೈರಲ್
Team Udayavani, Feb 15, 2017, 6:54 AM IST
ಅತಿ ಹೆಚ್ಚು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಕ್ಕೆ ಗುರಿಯಾಗುತ್ತಿರುವ ರಾಷ್ಟ್ರ ನಾಯಕ ಎಂದರೆ ಬಹುಶಃ ಅದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಇರಬೇಕು. ಇತ್ತೀಚೆಗಷ್ಟೇ ಜಪಾನ್ ಪ್ರಧಾನಿ ಶಿನ್ಝೋ ಅಬೆ ಅಮೆರಿಕದಲ್ಲಿ ಟ್ರಂಪ್ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಟ್ರಂಪ್-ಅಬೆಯವರ ಹಸ್ತ ಲಾಘವದ ವೀಡಿಯೋ ಬಳಸಿ ಜಗತ್ತಿನಾದ್ಯಂತ ಜಾಲತಾಣಿಗರು ಅಪಹಾಸ್ಯ ಮಾಡಿದ್ದಾರೆ.
ಅಷ್ಟಕ್ಕೂ ಈ ವೀಡಿಯೋ ದಲ್ಲಿ ಏನಿದೆ ಎಂದು ಕೇಳುತ್ತೀರಾ? ಮಾಧ್ಯಮಗಳಿಗೋಸ್ಕರ ಅವರಿಬ್ಬರು 19 ಸೆಕೆಂಡ್ ಕೈಕುಲುಕಿದ್ದಾರೆ. ಈ ವೇಳೆ ಟ್ರಂಪ್ ಅಬೆ ಹಸ್ತವನ್ನು ಗಟ್ಟಿಯಾಗಿ ಹಿಡಿದುಕೊಂಡಿರುತ್ತಾರೆ.
ಅನವಶ್ಯಕವಾಗಿ ಎರಡೆರಡು ಬಾರಿ ಇನ್ನೊಂದು ಕೈಬಳಸಿ ಅವರ ಕೈ ತಟ್ಟುತ್ತಾರೆ. ಅಬೆ ತಮ್ಮ ಕೈ ವಾಪಸ್ಸು ತೆಗೆದು ಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಟ್ರಂಪ್ ತಮ್ಮ ಹಿಡಿತ ವನ್ನು ಇನ್ನೂ ಬಿಗಿ ಮಾಡುತ್ತಾರೆ. ಅವರ ಕೈಯನ್ನು ತಮ್ಮ ಬಳಿಗೆ ಎಳೆದುಕೊಳ್ಳುತ್ತಾರೆ. ಹಸ್ತಲಾಘವ ಮುಗಿದ ಬಳಿಕ ಅಬೆ ಸದ್ಯ ಬದುಕಿದೆ ಎಂಬಂತೆ ಮುಖಭಾವ ಪ್ರದರ್ಶಿಸುತ್ತಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ