ಆದಿತ್ಯನಾಥರ ‘ಕಾಲೂ’ ಅಂತರ್ಜಾಲದಲ್ಲಿ ವೈರಲ್‌

Team Udayavani, Nov 26, 2019, 8:30 AM IST

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಸಾಕು ಪ್ರಾಣಿಗಳ ಸಾಲಿಗೆ ಈಗ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರವರ ‘ಕಾಲೂ’ ಹೆಸರಿನ ಸಾಕು ನಾಯಿ ಕೂಡ ಸೇರ್ಪಡೆಯಾಗಿದೆ. ಆದಿತ್ಯನಾಥ್‌ರವರು ಈ ನಾಯಿಗೆ ಪನೀರ್‌ ತಿನ್ನಿಸುತ್ತಿರುವ ಫೋಟೋವೊಂದು ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಆದಿತ್ಯನಾಥ್‌ ಅವರು ಮಠಾಧೀಶರಾಗಿರುವ ಗೋರಖ್‌ಪುರದ ಗೋರಕ್ಷ್ ದೇಗುಲದ ಭಕ್ತರೊಬ್ಬರು 2016ರ ಡಿಸೆಂಬರ್‌ನಲ್ಲಿ ಆದಿತ್ಯನಾಥ್‌ರವರಿಗೆ ಈ ನಾಯಿಯನ್ನು ಕೊಡುಗೆಯಾಗಿ ನೀಡಿದ್ದರು. ಸಿಎಂ ಆಗುವ ಮೊದಲು ಖುದ್ದು ನಾಥ್‌ರವರೇ ಈ ನಾಯಿಯ ಆರೈಕೆ ಮಾಡುತ್ತಿದ್ದರು.

ಈಗ, ಹಿಮಾಲಯ ಗಿರಿ ಎಂಬ ಮಠದ ಸಿಬಂದಿಗೆ ಅದರ ಹೊಣೆ ನೀಡಲಾಗಿದ್ದು, ಆರೈಕೆಗೆ ಬೇಕಾದ ಎಲ್ಲ ಅನುಕೂಲಗಳನ್ನೂ ಕಲ್ಪಿಸಲಾಗಿದೆಯಂತೆ. ಆದಿತ್ಯನಾಥ್‌ರ ಶ್ವಾನ ಪ್ರೀತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ