28 ವರ್ಷ ಹಿಂದಿನ ಫೋಟೋ ಮರುಸೃಷ್ಟಿಸಿದ
ಹೌದಾ ಮಾರಾಯ್ರೆ!
Team Udayavani, Jan 28, 2020, 7:40 AM IST
28 ವರ್ಷಗಳ ಹಿಂದೆ ತನ್ನ ಹೆತ್ತವರು ತೆಗೆಸಿಕೊಂಡಿದ್ದ ಫೋಟೋವನ್ನು ಮರುಸೃಷ್ಟಿ ಮಾಡಿ, 21 ವರ್ಷ ವಯಸ್ಸಿನ ಯುವಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ರಾಮೊನ್ ಮತ್ತು ನೇಲಾ ಅವರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ನೇಲಾ ಅನಾರೋಗ್ಯದ ಕಾರಣ ಫಿಲಿಪ್ಪೀನ್ಸ್ನ ತಮ್ಮ ಮನೆಗೆ ಮರಳಿದ್ದರು.
ಆಗ ರಾಮೋನ್ ಭಾರಿ ಪ್ರಯಾಸದಿಂದ ನೇಲಾ ಮನೆ ವಿಳಾಸ ಹುಡುಕಿ, ಫಿಲಿಪ್ಪೀನ್ಸ್ಗೆ ತೆರಳಿ ಪ್ರೇಯಸಿಯನ್ನು ಭೇಟಿಯಾಗಿದ್ದರು. ಆ ವೇಳೆ ಕಡಲ ತೀರದಲ್ಲಿ ತೆಗೆಸಿಕೊಂಡಿದ್ದ ಫೋಟೋ ಇದಾಗಿತ್ತು. ಈಗ ಅವರ ಮಗ ರೇಯ್ಮೊನ್ ರಾಯ್ ಅದೇ ಪ್ರದೇಶಕ್ಕೆ ಕರೆದೊಯ್ದು, ಅಪ್ಪ – ಅಮ್ಮನ ಫೋಟೋವನ್ನು ಮರುಸೃಷ್ಟಿಸಿದ್ದಾನೆ.