ನಾಯಿಯೆಂದು ಭಾವಿಸಿ, ಕರಡಿ ಸಾಕಿಕೊಂಡಿದ್ದಳು!

Team Udayavani, Jun 14, 2019, 10:18 AM IST

ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂಬ ಗಾದೆ ಕನ್ನಡದಲ್ಲಿದೆ. ಇಂಥ ಪರಿಸ್ಥಿತಿ ಮಲೇಷ್ಯಾದ ಗಾಯಕಿಗೆ ಬಂದೊದಗಿದೆ. ಗಾಯಕಿ ಝಾರಿತ್‌ ಸೋಫಿಯಾ ಯಾಸಿನ್‌ ತಮ್ಮ ಮನೆಯಲ್ಲಿ ಕಾಡು ಕರಡಿಯೊಂದನ್ನು ಇರಿಸಿಕೊಂಡಿದ್ದ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಝಾರಿತ್‌, ತಮಗೆ ಆ ಪ್ರಾಣಿ ಕಾಡಿನಲ್ಲಿ ದೊರೆತಾಗ ಅದನ್ನು ನಾಯಿ ಎಂದು ತಿಳಿದಿದ್ದೆ. ನಾಯಿ ಬಹಳ ಬಡಕಲಾಗಿದೆ, ಅದನ್ನು ಪೋಷಿಸಬೇಕು ಎಂದು ಮನೆಗೆ ತಂದೆ. ಮನೆಗೆ ಬಂದ ಬಳಿಕವೇ ಅದು ಕಾಡು ಕರಡಿ ಎಂದು ತಿಳಿದಿದ್ದು. ಅದು ನಿಸ್ತೇಜವಾಗಿದ್ದರಿಂದ ಅದನ್ನು ಕೆಲ ದಿನಗಳ ಕಾಲ ಮನೆಯಲ್ಲಿರಿಸಿಕೊಂಡು ಆರೈಕೆ ಮಾಡಿ ಪ್ರಾಣಿ ಸಂಗ್ರಹಾಲಯಕ್ಕೆ ಮರಳಿಸುತ್ತಿದ್ದೆ. ಅಷ್ಟರಲ್ಲಿ ನನ್ನನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ. ಅವರು ಮನೆಯಲ್ಲಿ ಕರಡಿ ಮರಿಯನ್ನು ಏಕಾಂಗಿಯಾಗಿ ಬಿಟ್ಟು ಹೋದ ವೇಳೆ ಕರಡಿ ಕಿಟಕಿಯಿಂದ ಹೊರ ಬಾಗಿ ಸಹಾಯಕ್ಕಾಗಿ ಕೂಗುವ ದೃಶ್ಯವನ್ನು ಗಾಯಕಿಯ ನೆರೆ ಮನೆಯವರು ವಿಡಿಯೋ ಚಿತ್ರೀಕರಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ