• ಒತ್ತಡ

  ಉಪ ಚುನಾವಣೆ ಗೆದ್ದ ಅತೃಪ್ತ ಶಾಸಕರಿಂದ ಬಿಎಸ್‌ವೈ ಮೇಲೆ ಒತ್ತಡ ಸುಮ್ಮನಿದ್ದರೆ ಅವರು ಸಂಪುಟ ವಿಸ್ತರಣೆ ಆಗುವುದು ಇನ್ನಷ್ಟು ತಡ !

 • ನಿರ್ಧಾರ

  ಪ್ರತಿ ಬಾರಿಯೂ ಹೀಗೇರಿ ಹೊಸ ವರ್ಷದ ನಿರ್ಧಾರ ಆಗುವುದೇ ಇಲ್ಲ ಜಾರಿ ರಾತ್ರಿ ಪಾರ್ಟಿಯಲ್ಲಿ ಎಣ್ಣೆ ಹಾಕುವಾಗ ಮಾಡಿದ್ದು ಹೋಗುತ್ತದೆ ಬೇಗ ಜಾರಿ!

 • ಸ್ಪೆಶಲ್‌ ಟಿ

  ಪ್ರತಿ ದಿನವೂ ಸೇವಿಸುತ್ತೇನೆ ಏಲಕ್ಕಿ ಶುಂಠಿ ಬೆರೆಸಿದ ಘಮಘಮಿಸುವ ಮಸಾಲೆ ಟಿ ಇಂದು ಸವಿಯುತ್ತಿರುವೆ ಇನ್ನೊಂದು ಸ್ಪೆಶಲ್‌ ಟಿ ಹೊಸ ಇಸವಿ ಟ್ವೆಂಟಿ ಟ್ವೆಂ-ಟಿ!

 • ವಿದಾಯ

  ಶುಭವಿದಾಯ ಹೇಳುತ್ತಿದೆ ಎರಡು ಸಾವಿರದ ಹತ್ತೂಂಬತ್ತು ಬಂದಿದೆ ಅದು ಹೋಗುವ ಹೊತ್ತು ಆದರೂ ಹೋಗಬಾರದಿತ್ತು ಪೂಜ್ಯ ಪೇಜಾವರ ಶ್ರೀಗಳನ್ನು ತನ್ನ ಬುಟ್ಟಿಯಲ್ಲಿ ಹೊತ್ತು!

 • ನರ-ಮರ

  ಕೊರೆಯುವ ಚಳಿಗೆ ನಡುಗುತ್ತಾನೆ ನರ ಮೈಯಲ್ಲ ಮರಗಟ್ಟಿ ಚಳಿಗೆ ಸೊಪ್ಪು ಹಾಕದೆ ಬೆತ್ತಲೆ ನಿಂತಿದೆ ಮರ ನರನಿಗಿಂತ ಮರ ಗಟ್ಟಿ!

 • ಸಿಎಂ ಹೇಳಿದ್ದು

  ಸಂಪುಟ ವಿಸ್ತರಣೆಯ ಸಂಕಟದಿಂದ ತಾತ್ಕಾಲಿಕ ಶಮನ ನೀಡಿದ ಓ ಧನುರ್ಮಾಸವೇ ನಿನಗೆ ನೂರು ನಮನ!

 • ಗ್ರಹಣ

  ಸೂರ್ಯ ಭೂಮಿ ನಡುವೆ ಚಂದ್ರ ಅಡ್ಡ ಬಂದರೆ ಸೂರ್ಯ ಗ್ರಹಣ ಬಿಎಸ್‌ ವೈ ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳ ನಡುವೆ ಹೈಕಮಾಂಡ್‌ ಅಡ್ಡ ಬಂದರೆ ತಡವಾಗುತ್ತದೆ ಪದಗ್ರಹಣ!

 • ಕಂಕಣ ಬಲ

  ಇನ್ನೂ ಲಗ್ನವಾಗಿಲ್ಲ ಎಂದು ನೊಂದು ನಿರಾಶರಾಗದಿರಿ ಬಂದೇ ಬರುತ್ತದೆ ಆ ಕಾಲ ನೂರೈವತ್ತು ವರ್ಷಗಳಿಂದ ಕಾಯುತ್ತಿದ್ದ ಸೂರ್ಯನಿಗೆ ಇಂದು ಬಂದಿದೆ ಕಂಕಣ ಬಲ!

 • ನಗರದ ಮನೆ

  ಲಕ್ಷಗಟ್ಟಲೆ ಖರ್ಚುಮಾಡಿ ನಗರದ ಕೇಂದ್ರದಲ್ಲಿ ಕಟ್ಟಿಸಿದರು ಹೊಸ ಮನೆಯನ್ನು ಬಾಲ್ಕನಿಯಲ್ಲಿ ಕಾಣುತ್ತಿದೆ ಒಣಗಲು ಹಾಕಿದ ಟವಲು, ಚಡ್ಡಿ, ಬನಿಯನ್ನು!

 • ಮರಳು ನೀತಿ

  ಕಾಂಗ್ರೆಸ್‌ ಆಡಳಿತದಲ್ಲಿ ಮಲೇಷ್ಯಾದಿಂದ ಆಮದಾಗಿದ್ದ ಮರಳು ಹೊಸ ಸರ್ಕಾರಕ್ಕೆ ಬೇಡವಂತೆ ಬಂದಲ್ಲಿಗೇ ಮರಳು!

 • ವ್ಯತ್ಯಾಸ

  ಅಲ್ಲಾಡಿಸಿ ಕುಡಿಯುವುದು ಬಾದಾಮಿ ಹಾಲು ಕುಡಿದ ಮೇಲೆ ಅಲ್ಲಾಡಿಸುವುದು ಆಲ್ಕೊಹಾಲು!

 • ಗೆದ್ದವರಿಗೆ

  ಗೋವಾಕ್ಕಾದರೂ ಹೋಗಿರಿ ಮುಂಬೈಗಾದರೂ ಹೋಗಿರಿ ಅತೃಪ್ತರಾಗಿರಿ ಅನರ್ಹರಾಗಿರಿ ಉಪ ಚುನಾವಣೆಯಲ್ಲಿ ಗೆದ್ದರೆ ಸಾಕು ಸಿಕ್ಕೇ ಸಿಗುತ್ತದೆ ಮಂತ್ರಿಗಿರಿ!

 • ಚಳಿಗಾಲ

  ಚಳಿಗಾಲದಲ್ಲಿ ನಮಗೆ ಬೇಕಾಗುತ್ತದೆ ಕಂಬಳಿ, ಸ್ವೆಟರು, ಶಾಲು ಧರಿಸಿದ ಎಲೆ ಉಡುಗೆ ಕಿತ್ತೆಸೆದು ಮರಗಳು ಹಾಕಿವೆ ಚಳಿಗೆ ಸವಾಲು!

 • ಬೇಡಿಕೆ-ಹೇಳಿಕೆ

  ಉಪ ಚುನಾವಣೆಯಲ್ಲಿ ಗೆದ್ದವರ ಬೇಡಿಕೆ ಮಂತ್ರಿಗಿರಿ ಡಿಸಿಎಂ ಸೋತವರ ಹೇಳಿಕೆ ನಮ್ಮ ಸೋಲಿಗೆ ಕಾರಣ ಮತಯಂತ್ರ ಎವಿಎಂ!

 • ಆಮೇಲೆ

  ಮಂತ್ರಿಗಿರಿ ಪಡೆವವರೆಗೆ ಇವರು ಮೂಲವಾಸಿಗಳು ಅವರು ವಲಸಿಗರು ಆಮೇಲೆ ಎಲ್ಲರೂ ಒಂದೇ ಮಹಾ ಆಲಸಿಗರು ಯಾರ ಕೈಗೂ ಸಿಗರು!

 • ಫ‌ಲಿತಾಂಶ

  ಕೊನೆ ಘಳಿಗೆಯಲ್ಲಿ ಕೈ ಪಕ್ಷದ ನಾಯಕರಿಗೆ ಮಾಡಿದರೂ ಕಣ್ಣು ಸನ್ನೆ ಉಪಚುನಾವಣೆಯಲ್ಲಿ ತೆನೆ ಹೊತ್ತ ಮಹಿಳೆ ಸುತ್ತಿದಳು ದೊಡ್ಡ ಸೊನ್ನೆ

 • ಜಂಭ

  ಆನೆಯ ಮೇಲೆ ಅಂಬಾರಿ ಅಲ್ಲಿ ಕುಳಿತವ ಸೋಂಭೇರಿ ಟಾಟಾ ಮಾಡಿದರೆ ನಗುವುದೇ ಇಲ್ಲ ಅವನಿಗೆ ತುಂಬಾ ಜಂಭಾರಿ!

 • ಎಲ್ಲವೂ ಇದೆ

  ನ್ಯಾಯವಿಲ್ಲ, ಸಮಾನತೆಯಿಲ್ಲ ಶಾಂತಿ ಇಲ್ಲ, ಸ್ವಾತಂತ್ರ್ಯವಿಲ್ಲ ಎಂದೆಲ್ಲ ಹೇಳದಿರಿ ದುಡುಕಿ ಎಲ್ಲವೂ ಉಂಟು ದಯಮಾಡಿ ಗೂಗಲ್‌ನಲ್ಲಿ ಹುಡುಕಿ!

 • ಫ‌ಲಿತಾಂಶ

  ಹದಿನೈದರಲ್ಲಿ ಹನ್ನೆರಡು ಗೆದ್ದು ಬಿಎಸ್‌ವೈ ಸರ್ಕಾರ ಗಟ್ಟಿ ಹಳೆ ಮೈಸೂರಲ್ಲೂ ಅರಳಿತು ಕಮಲ ದಳಪತಿಗಳ ಹೊರಗಟ್ಟಿ!

 • ಗಂಡನ ಗೋಳು

  ಕಷ್ಟಗಳು ಬರುವಾಗ ಒಟ್ಟೊಟ್ಟಿಗೆ ಬರುತ್ತವೆ ಅನ್ನುವ ಮಾತು ಸುಳ್ಳಲ್ಲ ಹೆಂಡತಿ ತವರಿಗೆ ಹೋಗಿರುವಾಗಲೆ ಬಂದಿದೆ ಈ ಚಳಿಗಾಲ!

ಹೊಸ ಸೇರ್ಪಡೆ