• ಫ‌ಲಿತಾಂಶ

  ಚುನಾವಣೆಯಲ್ಲಿ ದೇವರು ರಕ್ಷಿಸಿದ್ದಾನೆ ಶಿಷ್ಟರನ್ನು ಶಿಕ್ಷಿಸಿದ್ದಾನೆ ಸೋಲಿಸಿ ದುಷ್ಟರನ್ನು , ಭ್ರಷ್ಟರನ್ನು ವ್ಯರ್ಥವಾಯಿತು ಪೂಜೆ ಹೋಮ, ಟೆಂಪಲ್‌ ರನ್ನು! ಎಚ್‌. ಡುಂಡಿರಾಜ್‌

 • ಅಂತರ್ಯುದ್ಧ

  ರಾಜ್ಯದಲ್ಲಿ ಮೈತ್ರಿ ಸೋಲಿಗೆ ಕಾರಣಗಳು ಹಲವಾರು ಪ್ರಮುಖವಾದದ್ದು ನಾಯಕರ ನಡುವಿನ ಒಳವಾರು ಎದುರು ಹೂಗುಚ್ಛ ಹಿಂದೆ ತಲವಾರು! ಎಚ್‌. ಡುಂಡಿರಾಜ್‌

 • ಭಲೇ ಜೋಡಿ

  ಮೋದಿ ಮತ್ತು ಅಮಿತ್‌ ಶಾ ಜೋಡಿ ಬಹಳ ವಿಶೇಷ ಮತ್ತೂಮ್ಮೆ ಇಬ್ಬರೂ ಕೂಡಿ ಮಾಡಿದರು ಕಾಂಗ್ರೆಸ್ಸನ್ನು ನಾಮಾವಶೇಷ ! ಎಚ್‌. ಡುಂಡಿರಾಜ್‌

 • ಮೋದಿ (ಡಿ)

  ಚೌಕಿದಾರ ಕಳ್ಳ ಎಂಬ ಪೊಳ್ಳು ಆರೋಪ ಜನರು ಒಪ್ಪಲಿಲ್ಲ ಮತ್ತೊಮ್ಮೆ ಮೋದಿ ಮಾಡಿದರು ಮೋಡಿ ನರೇಂದ್ರಜಾಲ! ಎಚ್‌. ಡುಂಡಿರಾಜ್‌

 • ಫ‌ಲಿತಾಂಶ

  ಬಿಸಿಲ ತಾಪಕ್ಕೆ ಕಾದು ಕೆಂಡವಾಗಿರುವ ಧರೆ ತಣಿಯುತ್ತದೆ ಮಳೆ ಬಿದ್ದರೆ, ಫ‌ಲಿತಾಂಶಕ್ಕೆ ಕಾದು ಕಾದು ಬೇಸತ್ತವರು ಕುಣಿದಾಡುತ್ತಾರೆ ಗೆದ್ದರೆ ! ಎಚ್‌. ಡುಂಡಿರಾಜ್‌

 • ಸೋತರೆ

  ಹೆಂಡ, ಹಣ, ಜಾತಿ, ಧರ್ಮ ಒಡೆದು ಆಳುವ ತಂತ್ರ ಜೊತೆಗೆ ಮಠ ಮಂದಿರಗಳು ಹೋಮ, ಮಾಟ ಮಂತ್ರ ಇಷ್ಟಾಗಿಯೂ ಸೋತರೆ ಉಂಟು ದೂರಲು ಮತಯಂತ್ರ! ಎಚ್‌. ಡುಂಡಿರಾಜ್‌

 • ಪೋಲಿ

  ಎಲ್ಲಿದ್ದಾರೆ ಪೋಲಿಸರು? ಯಾವ ಶಿಕ್ಷೆಯೂ ಇಲ್ಲವೆ ಈ ಪೋಲಿಗೆ? ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳ ನಾಯಕರ ನಿದ್ದೆಗೆಡಿಸಿರುವ ಎಕ್ಸಿಟ್‌ ಪೋಲಿಗೆ! ಎಚ್‌. ಡುಂಡಿರಾಜ್‌

 • ಮಾಸ್ಟರ್‌ ಹಿರಣ್ಣಯ್ಯ

  ಹಿರಣ್ಣಯ್ಯ ಅಂದರೆ ಮಾತು ಮಾತು ಮಾತು ಸಮಾಜಕ್ಕೆ ನೀಡಿದರು ಮುತ್ತಿನಂಥ ಮಾತು ಭ್ರಷ್ಟರಿಗೆ , ವಂಚಕರಿಗೆ ಮಾತಲ್ಲ ಮಾ..ಥೂ! ಎಚ್‌. ಡುಂಡಿರಾಜ್‌

 • ಅನುಮಾನ

  ಎಲ್ಲೆಡೆ ಉರಿ ಬಿಸಿಲು ಕುಡಿವ ನೀರಿಗೂ ಬರ ಎಲ್ಲಿ ಕೋಗಿಲೆಯ ಗಾನ? ಅಧಿಕಾರ ಸಿಕ್ಕೊಡನೆ ವಸಂತನೂ ಮರೆತನೆ ಜನರಿಗೆ ಕೊಟ್ಟ ವಾಗ್ಧಾನ? ಎಚ್‌.ಡುಂಡಿರಾಜ್‌

 • ಅನುಮಾನ

  ಎಲ್ಲೆಡೆ ಉರಿ ಬಿಸಿಲು ಕುಡಿವ ನೀರಿಗೂ ಬರ ಎಲ್ಲಿ ಕೋಗಿಲೆಯ ಗಾನ? ಅಧಿಕಾರ ಸಿಕ್ಕೊಡನೆ ವಸಂತನೂ ಮರೆತನೆ ಜನರಿಗೆ ಕೊಟ್ಟ ವಾಗ್ಧಾನ? ಎಚ್‌. ಡುಂಡಿರಾಜ್‌

 • ಸಿಎಂ ಚರ್ಚೆ

  ಕಾಂಗ್ರೆಸ್‌ ಪಕ್ಷದಲ್ಲಿ ಸಿಎಂ ಯಾರಾಗಬೇಕೆಂಬ ಕುರಿತು ನಡೆದಿದೆ ವಾದ ವಿವಾದ, ಅರ್ಹತೆ ಅನೇಕರಿಗಿದೆ ಆದರೆ ಬೇಕಾದ್ದು ಅರ್ಹತೆಯಲ್ಲ ಹೈಕಮಾಂಡ್‌ ಆಶೀರ್ವಾದ! ಎಚ್‌. ಡುಂಡಿರಾಜ್‌

 • ಲಾಭ-ನಷ್ಟ

  ಸಿದ್ದು ವಿರುದ್ಧ ಗೌಡರು ಸುದೀರ್ಘ‌ ದೂರುಪತ್ರ ಬರೆದಿದ್ದಾರಂತೆ ಸೋನಿಯಾರಿಗೆ ಮಿತ್ರ ಪಕ್ಷಗಳ ನಡುವೆ ನಡೆದರೆ ಪತ್ರ ಸಮರ ಲಾಭ ಯಾರಿಗೆ? ನಷ್ಟ ಯಾರಿಗೆ? ಎಚ್‌.ಡುಂಡಿರಾಜ್‌

 • ಗೆಲುವು

  ನಾವೇ ಗೆಲ್ಲುತ್ತೇವೆ ನೋಡಿ ಅನ್ನುತ್ತಿದ್ದಾರೆ ಕೆಲವರು ಹೇಳುತ್ತಿದ್ದಾರೆ ಗೆಲುವಿನ ಅಂತರ ಹೇಳಲಿ ಬಿಡಿ ಇಂಥ ಅವಕಾಶ ಸಿಗುವುದಿಲ್ಲ ಫ‌ಲಿತಾಂಶ ಬಂದ ನಂತರ ! ಎಚ್‌. ಡುಂಡಿರಾಜ್‌

 • ಮೈತ್ರಿಧರ್ಮ

  ಸಿಎಂ ರೆಸಾರ್ಟಿಗೆ ಹೋದರೆ ಮಹಾಪರಾಧವಲ್ಲ ಬಿಡಿ ಮಾಡಬೇಕು ಆರೋಗ್ಯದ ರಕ್ಷಣೆ, ಕಾಂಗ್ರೆಸ್‌ ನಾಯಕರೂ ರೆಸಾರ್ಟಿಗೆ ಹೋಗಲಿ ಆಗಲಿ ಮೈತ್ರಿಧರ್ಮ ಪಾಲನೆ! ಎಚ್‌. ಡುಂಡಿರಾಜ್‌

 • ಫ‌ಲಿತಾಂಶ

  ಮೇ ಇಪ್ಪತ್ಮೂರಕ್ಕೆ ಗೊತ್ತಾಗುತ್ತದೆ ನಾಯಕರ ಹಣೆಬರಹ ಗೆದ್ದರೆ ಇರಬಹುದು ರಾಜರ ತರಹ ಸೋತರೆ ಅಯ್ಯೊ ವಿರಹ! ಎಚ್‌. ಡುಂಡಿರಾಜ್‌

 • ನಲ್ಲೆಯ ಪ್ರಶ್ನೆ

  ಓ ನನ್ನ ನಲ್ಲೆ! ಪ್ರೇಮ ನಾವೆಯ ಜಲ್ಲೆ ಬಾಳ ಗಡಿಯಾರದ ಸೆಲ್ಲೆ ಎಂದೆಲ್ಲ ಬಣ್ಣಿಸಿದ ಹುಡುಗ ಎಲ್ಲಿ ಮರೆಯಾದ ಈಗ? ಅಂದು ಹೇಳಿದ್ದೆಲ್ಲ ಸುಳ್ಳೆ? ಎಚ್‌. ಡುಂಡಿರಾಜ್‌

 • ಸಿಎಂ ಚಿಂತೆ

  ಸಿದ್ದು ಸಿಎಂ ಆಗಲಿ ಅನ್ನುತ್ತಿದ್ದಾರೆ ಕೆಲವರು ಪಾಲಿಸುತ್ತಿಲ್ಲ ಮೈತ್ರಿ ಧರ್ಮ ಈ ಸಿದ್ದು ರೋಗಕ್ಕೆ ಯಾವ ಮದ್ದು? ಎಲ್ಲಿ ಮಾಡಿಸುವುದು ಪಂಚಕರ್ಮ? ಎಚ್‌. ಡುಂಡಿರಾಜ್‌

 • ನೂಕುನುಗ್ಗಲು

  ಭಾರತ ಬಡ ದೇಶ ಕಾಣುತ್ತಿದೆ ಎಲ್ಲೆಡೆ ಕಿತ್ತು ತಿನ್ನುವ ಬಡತನ, ಅನ್ನುವವರಿಗೆ ತೋರಿಸಿ ಚಿನ್ನದಂಗಡಿ ದೃಶ್ಯ ಅಕ್ಷಯ ತೃತೀಯದ ದಿನ ! ಎಚ್‌. ಡುಂಡಿರಾಜ್‌

 • ಅಕ್ಷಯ ತೃತೀಯ

  ಇಂದು ಅಕ್ಷಯ ತೃತೀಯ ಬಂಗಾರದ ಖರೀದಿಗೆ ಅತ್ಯಂತ ಪ್ರಶಸ್ತ ಗಳಿಗೆ, ಕೊಂಡರೆ ಖಂಡಿತ ಲಾಭವಾಗುವುದು ಚಿನ್ನದ ವ್ಯಾಪಾರಿಗಳಿಗೆ! ಎಚ್‌. ಡುಂಡಿರಾಜ್‌

 • ಬದಲಾವಣೆ

  ಚೈತನ್ಯದ ಚಿಲುಮೆ ಮಾತಿನ ಮಲ್ಲಿ ಬಳುಕುವ ಪುಷ್ಪಲತೆ, ಮದುವೆಯ ಬಳಿಕ ಮೌನದ ಪುತ್ತಳಿ ಏನೋ ವ್ಯಾಕುಲತೆ! ಎಚ್‌. ಡುಂಡಿರಾಜ್‌

ಹೊಸ ಸೇರ್ಪಡೆ