• ಎಲ್ಲವೂ ಇದೆ

  ನ್ಯಾಯವಿಲ್ಲ, ಸಮಾನತೆಯಿಲ್ಲ ಶಾಂತಿ ಇಲ್ಲ, ಸ್ವಾತಂತ್ರ್ಯವಿಲ್ಲ ಎಂದೆಲ್ಲ ಹೇಳದಿರಿ ದುಡುಕಿ ಎಲ್ಲವೂ ಉಂಟು ದಯಮಾಡಿ ಗೂಗಲ್‌ನಲ್ಲಿ ಹುಡುಕಿ!

 • ಫ‌ಲಿತಾಂಶ

  ಹದಿನೈದರಲ್ಲಿ ಹನ್ನೆರಡು ಗೆದ್ದು ಬಿಎಸ್‌ವೈ ಸರ್ಕಾರ ಗಟ್ಟಿ ಹಳೆ ಮೈಸೂರಲ್ಲೂ ಅರಳಿತು ಕಮಲ ದಳಪತಿಗಳ ಹೊರಗಟ್ಟಿ!

 • ಗಂಡನ ಗೋಳು

  ಕಷ್ಟಗಳು ಬರುವಾಗ ಒಟ್ಟೊಟ್ಟಿಗೆ ಬರುತ್ತವೆ ಅನ್ನುವ ಮಾತು ಸುಳ್ಳಲ್ಲ ಹೆಂಡತಿ ತವರಿಗೆ ಹೋಗಿರುವಾಗಲೆ ಬಂದಿದೆ ಈ ಚಳಿಗಾಲ!

 • ಹಣೆಪಟ್ಟಿ

  ಅನರ್ಹ ಶಾಸಕರು ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾದರೂ ಜನರು ಹೇಳುವರು ಅವರು ಸನ್ಮಾನ್ಯ ಅನರ್ಹ ಸಚಿವರು!

 • ವ್ಯತ್ಯಾಸ

  ಭಾರೀ ಮಳೆಯಿಂದ ನದಿ ಕಾಲುವೆಗಳು ತುಂಬಿದಾಗ ಪ್ರವಾಹ ಯೌವನದ ಹೊಳೆ ಉಕ್ಕಿ ಹರಿದಾಗ ವಿವಾಹ!

 • ಓಟ

  ಗಡಿಯಾರ ನಡೆಯುತ್ತಿದೆ ವಾಚು ನೋಡಿ ಅದೂ ನಡೆಯುತ್ತಿದೆ ನಾವು ಮಾತ್ರ ಓಡುತ್ತಿದ್ದೇವೆ !

 • ಶ್ರೀಮಂತರು

  ಇವರೊಬ್ಬರೇ ಶ್ರೀಮಂತರು ನಮ್ಮ ಊರಲ್ಲಿ ತಿರುಗಾಡುತ್ತಾರೆ ಲೇಟೆಸ್ಟ್‌ ಫೆರಾರಿ ಕಾರಲ್ಲಿ ಈಗಲೂ ಪ್ರತಿದಿನ ತಿನ್ನುತ್ತಾರೆ ಈರುಳ್ಳಿ

 • ವಾದ

  ಆ ವಾದ ಈ ವಾದ ಎಡವಾದ ಬಲವಾದ ಯಾವುದು ಉತ್ತಮವಾದ? ಗೊಂದಲದಿಂದ ಸುಮ್ಮನಿದ್ದವ ಕೊನೆಗೆ ಏನೂ ಮಾಡದೆ ಶವವಾದ!

 • ಸಂದೇಹ

  ಅತೃಪ್ತ ಶಾಸಕರು ಅನರ್ಹರಾಗಿ ಕಮಲದ ಕೊಳಕ್ಕೆ ಬಂದು ಶುದ್ಧರಾಗುವರೆ ಎಲೆಕ್ಷನ್‌ ಎಂಬ ಸೋಪು ಹಾಕಿ ಮಿಂದು?

 • ಸಿದ್ದು ಹೇಳಿಕೆ

  ಬೈ ಎಲೆಕ್ಷನ್‌ ನಂತರ ನಾನೇ ಮುಖ್ಯಮಂತ್ರಿ ಅಂದಿದ್ದಾರೆ ಸಿದ್ದು ಬೈ ದ ಬೈ ಅದು ಗಂಭೀರ ಹೇಳಿಕೆಯಲ್ಲ ಹಾಗೇ ಕನವರಿಸಿದ್ದು ! *ಎಚ್‌. ಡುಂಡಿರಾಜ್‌

 • ಮಹಾಗಾಡಿ

  ಮಹಾ ವಿಕಾಸ್‌ ಅಘಾಡಿ ಮೂರು ಚಕ್ರಗಳ ಗಾಡಿ ಬಹಳ ಬೇಗನೆ ಗಾಡಿ ಅಲುಗಾಡಿ ಉದ್ಧವ ಬಿದ್ದರೆ ನಗಾಡಿ!

 • ಕಾರಣ

  ದೆಹಲಿಯಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಉಂಟು ಉಸಿರು ಕಟ್ಟುವ ವಾತಾವರಣ ಬೇರೆ ಪಕ್ಷಗಳಿಂದ ಬಿಜೆಪಿಗೆ ಹಾರಿ ಬರುತ್ತಿರುವ ಜನ ಕೊಡುತ್ತಿದ್ದಾರೆ ಇದೇ ಕಾರಣ!

 • ಸಮಸ್ಯೆ

  ಅವರು ಒತ್ತಾಯಿಸಿದರು ಮನಸ್ಸಿದ್ದರೆ ಮಾರ್ಗ ನೀವು ಬರಲೇಬೇಕು ನಾನೆಂದೆ ಮಾರ್ಗವಿದೆ ಮನಸ್ಸಿದೆ ಆದರೂ ಬರಲಾರೆ ಕಾರಣ ವಿಪರೀತ ಟ್ರಾಫಿಕ್ಕು !

 • ಆಘಾತ

  ಶಿವಸೇನೆಯ ನೇತಾ ಉದ್ಧವ ನಾಳೆ ನಾನು ಸಿಎಂ ಎಂದು ಕನಸು ಕಾಣುತ್ತ ಮಲಗಿದ್ದವ ಎದ್ದಾಗ ಅನರೀಕ್ಷಿತ ಆಘಾತ ಸರ್ಕಾರ ರಚಿಸಿದ್ದರು ದೇವೇಂದ್ರ ಮತ್ತು ಅಜಿತ!

 • ಅಂದು-ಇಂದು

  ಹಿಂದೆಲ್ಲ ಹೋರಾಟವೆಂದರೆ ಬಾಣ, ಚಕ್ರ, ಈಟಿ, ಗದೆ ದೇಹಕ್ಕೆ ನೋವಾಗುವ ಏಟು ಈಗ ಮಾತಿನಲ್ಲೇ ಜಗಳ ಕೆಟ್ಟ ಕೆಟ್ಟ ಬೈಗುಳ ಮನಸ್ಸನ್ನು ಚುಚ್ಚುವ ಟ್ವೀಟು!

 • ಲಂಚ

  ಲಂಚ ಕೊಡುವುದು ತೆಗೆದುಕೊಳ್ಳುವುದು ತಪ್ಪು ಅನ್ನುತ್ತದೆ ಕಾಯಿದೆ ಬೇಗ ಕೆಲಸ ಆಗಲು ಲಂಚ ಕೊಡುತ್ತೇವೆ ತಾಳ್ಮೆಯಿಂದ ಕಾಯದೆ !

 • ನಂತರ

  ಸ್ವಾರ್ಥಕ್ಕಾಗಿ ಪಕ್ಷಾಂತರ ನೀಡುವ ಕಾರಣ ಮಾತ್ರ ಅಭಿವೃದ್ಧಿ, ಕ್ಷೇತ್ರದ ಉದ್ಧಾರ ಗೆದ್ದು ಹೋದ ನಂತರ ಹುಡುಕಬೇಕು ಮತದಾರ ಮಾನ್ಯ ಶಾಸಕರು ಇದ್ದಾರಾ ?

 • ನುಡಿದಂತೆ ನಡೆ

  ನುಡಿದಂತೆ ನಡೆದಿದ್ದೇವೆ ಹಿಂದಿನ ಸರ್ಕಾರದ ಘೋಷಣೆ ಈಗಿನ ಮುಖ್ಯಮಂತ್ರಿಗಳು ಹೇಳುವುದೂ ಅದನ್ನೆ ನುಡಿದಂತೆ ನಡೆಯುತ್ತೇನೆ ಅನರ್ಹರನ್ನು ಗೆಲ್ಲಿಸಿ ಮಂತ್ರಿ ಮಾಡುತ್ತೇನೆ! *ಎಚ್‌. ಡುಂಡಿರಾಜ್‌

 • ಚುನಾವಣೆ

  ಡಿಸೆಂಬರ್‌ ಐದರಂದು ಉಪಚುನಾವಣೆ ಅನರ್ಹರನ್ನು ಗೆಲ್ಲಿಸಿ ಅರ್ಹರನ್ನಾಗಿಸುವ ಉಪಾಯ ಚುನಾವಣೆ

 • ಭಾಜಪದ ಧೋರಣೆ

  ಅನರ್ಹರಿಗೆ ಭಾಜಪದ ಬಾವುಟ ಕೊಟ್ಟಿದ್ದರಿಂದ ಪಕ್ಷಕ್ಕೆ ತೊಂದರೆ ಇಲ್ಲ ಕೆಸರಿಲ್ಲೇ ಇದ್ದರೂ ಸದಾ ಪರಿಶುದ್ಧ ಬೆಳ್ಳಗಿರುತ್ತದೆ ಕಮಲ!

ಹೊಸ ಸೇರ್ಪಡೆ