ನಿಮ್ಮ ಶರೀರದಲ್ಲಿನ ನೋವು ನಿಮಗೆ ಹೇಗೆ ಅರ್ಥವಾಗುತ್ತದೋ, ಅದೇ ರೀತಿ ಒಂದು ಮರ, ಒಂದು ಪ್ರಾಣಿ ಅಥವಾ ಜೀವವಿರುವ ಯಾವುದರ ನೋವು ನಿಮಗೆ ಅರ್ಥವಾದರೂ, ನೀವು ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೀರಿ ಎಂದರ್ಥ.

- ಸದ್ಗುರು

2015ರ ದೆಹಲಿ ಚುನಾವಣೆ ವೇಳೆ ಕೇಜ್ರಿವಾಲ್‌ರನ್ನು "ನಕ್ಸಲ್‌' ಎಂದು ಕರೆಯಲಾಗಿತ್ತು. ಆಗ ಆಪ್‌ಗೆ 67 ಸೀಟು ಬಂತು. ಈಗ ಕೇಜ್ರಿವಾಲ್‌ರನ್ನು "ಭಯೋತ್ಪಾದಕ' ಎಂದು ಕರೆಯಲಾಗಿದೆ. ಈ ಬಾರಿ ಎಷ್ಟು ಸೀಟು ಬರಬಹುದು?

- ಅಶುತೋಷ್

ಮಾಸ್ಕ್ ಧರಿಸಿದಾಕ್ಷಣ ನಮಗೆ ಕಾಯಿಲೆ ಇದೆ ಎಂದರ್ಥವಲ್ಲ. ನಿಮಗೆ ಕಾಯಿಲೆ ಇರಬಹುದು ಎಂಬ ಭಯದಿಂದ ನಾವು ಮಾಸ್ಕ್ ಧರಿಸಿರುತ್ತೇವೆ.

- ಟ್ಯಾಡ್‌ಪೋಲ್‌ ಕ್ಯೂ

ಕೊರೊನಾವೈರಸ್‌ಗೆ ಕಡಿವಾಣ ಹಾಕುವಲ್ಲಿನ ವೈಫ‌ಲ್ಯವನ್ನು ಮುಚ್ಚಿಡಲು ಹತ್ತೇ ದಿನದಲ್ಲಿ ಚೀನಾ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡಿದೆ. ಭದ್ರತೆ ಮತ್ತು ಅಭಿವೃದ್ಧಿಯ ಬದಲಾಗಿ ನಿರಂಕುಶ ಪ್ರಭುತ್ವವನ್ನೇ ಆಯ್ಕೆ ಮಾಡಿಕೊಂಡ ದೇಶದ ದುಸ್ಥಿತಿಯಿದು.

- ಗಬ್ಬರ್‌

ನೀವು ಮಂಡಿಸುವ ವಿಷಯ ಎಷ್ಟೇ ಸುಂದರವಾಗಿರಲಿ. ನೀವು ಎಷ್ಟು ಬುದ್ಧಿವಂತರಾಗಿಯಾದರೂ ಇರಿ. ಆದರೆ ನೀವು ಹೇಳುವ ವಿಷಯ ಪ್ರಾಯೋಗಿಕವಾಗಿ ಸಾಬೀತಾಗದೇ ಇದ್ದರೆ ಅದು ಸುಳ್ಳು ಎಂದೇ ಪರಿಗಣಿಸಲ್ಪಡುವುದು.

- ರಿಚರ್ಡ್‌ ಪಿ.

ನಾನು ನಿಧಾನಕ್ಕೆ ಚಲಿಸುತ್ತಿರಬಹುದು; ಆದರೆ, ಹಿಂದಕ್ಕೆ ಚಲಿಸುತ್ತಿಲ್ಲ ಎನ್ನುವುದು ನೆನಪಿರಲಿ.

- ಜೋಯ್‌

ಪಾಪ, ಅದೇಕೋ ನ್ಯೂಜಿಲೆಂಡ್‌ನ‌ ಸ್ಥಿತಿಯನ್ನು ನೋಡಲಾಗುತ್ತಿಲ್ಲ. ವಿಶ್ವಕಪ್‌ ಫೈನಲ್‌ನ ಆಘಾತದಿಂದ ಅವರಿನ್ನೂ ಹೊರಬಂದಿಲ್ಲ ಎನಿಸುತ್ತದೆ!

- ಜಾನ್‌ ಕ್ಯಾರೆಲ್‌

ಹಿಂದಿನ ಪಂದ್ಯದಲ್ಲಿ ಮೊಹಮ್ಮದ್‌ ಶಮಿ 9 ರನ್‌ ಗಳನ್ನು ಕೊಡದೇ ಡಿಫೆಂಡ್‌ ಮಾಡಿದ್ದರು, ಈ ಬಾರಿ ಶಾರ್ದುಲ್‌ 7 ರನ್‌ ಡಿಫೆಂಡ್‌ ಮಾಡಿದ್ದಾರೆ! ಬೌಲರ್‌ ಗಳಿಂದ ಎಂಥ ಕಮ್‌ ಬ್ಯಾಕ್‌!

- ಇಶಾಂತ್‌ ಶರ್ಮಾ

ಇಂದಿನ ಯುಗದಲ್ಲಿ ಹಿಂಸೆಯ ಮೂಲಕ ಯಾವುದನ್ನೂ ಗೆಲ್ಲಲು ಸಾಧ್ಯವಿಲ್ಲ. ಗೆಲ್ಲಬಹುದು ಎಂದರೆ ಅಹಿಂಸೆ, ತಾಳ್ಮೆ, ತಂತ್ರಗಾರಿಕೆಯಿಂದ ಮಾತ್ರ ಸಾಧ್ಯ. ಸ್ವಲ್ಪ ತಡವಾಗಬಹುದು, ಗೆಲುವಂತೂ ಖಂಡಿತಾ ಸಿಗುತ್ತದೆ.

- ಅರುಣ್‌ ಜಾವಗಲ್‌

ಗೋಡ್ಸೆ ಮನಸ್ಥಿತಿಯೇ ಅನುರಾಗ್‌ ಠಾಕೂರ್‌, ಸಿ.ಟಿ. ರವಿ ಅವರಂತಹ ಇಂದಿನ ಬಿಜೆಪಿ ನಾಯಕರ ಹೇಳಿಕೆಯಲ್ಲಿ ಕಾಣಿಸುತ್ತಿದೆ. ತಮ್ಮ ನಿಲುವುಗಳನ್ನು ವಿರೋಧಿಸುವ ಎಲ್ಲರನ್ನೂ ದೇಶದ್ರೋಹಿಗಳು, ಹಿಂದೂ ವಿರೋಧಿಗಳು ಎನ್ನುವಂತೆ ಬಿಂಬಿಸುತ್ತಿದ್ದಾರೆ. ಈ ರೀತಿಯ ಸರ್ವಾಧಿಕಾರಿ ಮನೋಭಾವನೆ ಇಡೀ ದೇಶವನ್ನು ಆವರಿಸಿದೆ.

- ದಿನೇಶ್‌ ಗುಂಡೂರಾವ್‌

ಮಹಾತ್ಮ ಗಾಂಧಿಯವರನ್ನು ಗೋಡ್ಸೆ ಕೊಂದು ದೇಶಕ್ಕೆ ದ್ರೋಹವೆಸಗಿದ. ಗೋಡ್ಸೆಗಿಂತಲೂ ಅಮಾನುಷವಾಗಿ ದಶಕಗಳ ಕಾಲ ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಕೊಂದ ಕಾಂಗ್ರೆಸ್ಸಿಗರಿಗೆ ಮಹಾತ್ಮರ ಬಗ್ಗೆ ಮಾತನಾಡುವ ಯೋಗ್ಯತೆ ಮತ್ತು ಅರ್ಹತೆ ಇದೆಯೇ? ಗಾಂಧಿ ಟೋಪಿ ಧರಿಸಿದ ಮಾತ್ರಕ್ಕೆ ತಾವು ಮಾತನಾಡುವುದೇ ಸತ್ಯ ಎಂದು ದಿನೇಶ್‌ ಗುಂಡೂ ರಾವ್‌ ಅವರು ಪರಿಗಣಿಸಬಾರದು.

- ಸಿ.ಟಿ. ರವಿ

ಒಮ್ಮೆ ನೀವು ನಿಮ್ಮ ಮನಸ್ಸಿನ ಮೇಲೆ ಹತೋಟಿ ಸಾಧಿಸಿದರೆ. ಬಯಸಿದ್ದನ್ನೆಲ್ಲಾ ನೀವು ಪಡೆದಂತೆ.

- ವಿಎಸ್‌ಪಿಎಲ್‌

ಮೊಹಮ್ಮದ್‌ ಶಮಿಗೆ ರೋಹಿತ್‌ ಶರ್ಮಾ ನಷ್ಟೇ ಗೆಲುವಿನ ಶ್ರೇಯಸ್ಸು ಸಲ್ಲಬೇಕು. ವಂಡರ್‌ ಫ‌ುಲ್‌ ಶಮಿ ಭಾಯ್‌!

- ಕ್ರಿಕೀಡಾ

ಉಡುಪಿ ಜಿಲ್ಲೆ ಕಾಪುವಿನ ದಲಿತ ಸಮಾಜದ ಮುಖಂಡ ಶಂಕರ್‌ ಅವರ ಸಾವಿನ ನಂತರ ಅಂತ್ಯಕ್ರಿಯೆಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನೀಡದಿರುವ ಅಮಾನವೀಯ ವರ್ತನೆ ಖಂಡನೀಯ. 'ಹಿಂದುಗಳೆಲ್ಲ ಒಂದು'ಎಂದು ಘೋಷಣೆ ಕೂಗುತ್ತಿರುವ ಸಂಘ ಪರಿವಾರದ ಬಂದುತ್ವದ ವ್ಯಾಪ್ತಿಯಲ್ಲಿ ದಲಿತರು ಇಲ್ಲವೇ? ಎಲ್ಲರಿಗೂ ಸಲ್ಲುವ ಸರ್ಕಾರ ರಾಜ್ಯದಲ್ಲಿದೆಯೇ?

- ಸಿದ್ದರಾಮಯ್ಯ

ಬಿಜೆಪಿಯ ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಅನುರಾಗ್‌ ಠಾಕೂರ್‌ ಮತ್ತು ಪರ್ವೇಶ್‌ ಸಾಹಿಬ್‌ ಹೆಸರು ತೆಗೆಯುವಂತೆ ಚುನಾವಣಾ ಆಯೋಗ ಸೂಚಿಸಿದೆ. ಹಾಗೆಂದರೆ, ಸ್ಟಾರ್‌ ಪ್ರಚಾರಕ ಎಂಬ ಶಿರೋನಾಮೆ ಇಲ್ಲದೆಯೂ ದೆಹಲಿ ವಿಧಾನಸಭೆ ಚುನಾವಣೆಗೆ ಪ್ರಚಾರ ಮಾಡಬಹುದೇ? ಏಕೆಂದರೆ ಅವರ ಖರ್ಚು ವೆಚ್ಚಗಳು ಚುನಾವಣಾ ಲೆಕ್ಕಕ್ಕೆ ಬರುವುದಿಲ್ಲವೇನೋ?

- ಸೋಮೇಶ್‌ ಝಾ

ಅರ್ನಬ್‌ ಗೋಸ್ವಾಮಿಯನ್ನು ವಿಮಾನದಲ್ಲಿ ನಿಂದಿಸಿದ ಕುನಾಲ್‌ ಕಾಮ್ರಾಗೆ ಶಿಕ್ಷೆಯಾಗಬೇಕು. ಇದೇ ಕೆಲಸವನ್ನು ಬೇರೆಯವರು ತಮಗೆ ಮಾಡಿದ್ದರೆ ಈ ಲಿಬರಲ್‌ ಗಳು ಗಳಗಳನೆ ಕಣ್ಣೀರು ಸುರಿಸುತ್ತಿದ್ದರು.

- ಅವನೀಶ್‌ ಮುಖರ್ಜಿ

ಮನುಷ್ಯ ತನಗೆ ತಾನು ಮರ್ಯಾದೆ ಕೊಟ್ಟುಕೊಳ್ಳುವುದನ್ನು ಕಲಿಯಬೇಕು. ಸ್ವನಿಂದನೆಯಂಥ ಕೆಟ್ಟ ಗುಣ ಮತ್ತೂಂದಿಲ್ಲ.

- ಟ್ರೂಕೋಟ್ಸ್‌

ಒಂದೇ ಸುಳ್ಳನ್ನು ನೂರು ಸಲ ಹೇಳಿದ ತಕ್ಷಣ ಅದು ಹೇಗೆ ಸತ್ಯ ಆಗಲ್ವೋ, ಹಾಗೆಯೇ ಒಂದಷ್ಟು ಸುಳ್ಳು ಆಪಾದನೆಗಳನ್ನು ನಮ್ಮ ಮೇಲೆ ಹೊರಿಸಿದ ತಕ್ಷಣ ಅದು ಕೂಡ ನಿಜವಾಗಲ್ಲ.

- ಚೇತನ್‌ ದಾಸರಹಳಿ

ಯಡಿಯೂರಪ್ಪನವರು ಉತ್ಸಾಹ ತೋರಿಸಿದ್ದು ಸ್ವಂತ ಅಧಿಕಾರ ಪಡೆಯುವ ಉದ್ದೇಶಕ್ಕೇ ಹೊರತು, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದಲ್ಲ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ವಿಫ‌ಲರಾಗಿದ್ದಾರೆ. ಕ್ಯಾಬಿನೆಟ್‌ ವಿಸ್ತರಣೆಯಾಗಿಲ್ಲ. ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

- ಸಿದ್ದರಾಮಯ್ಯ

ಒಂದು ಅಂದಾಜಿನ ಪ್ರಕಾರ ನಮ್ಮ ದೇಶಕ್ಕೆ ಶರಣಾರ್ಥಿಗಳಾಗಿ ಬಂದಿರುವವರಲ್ಲಿ 68 ಪರ್ಸೆಂಟ್‌ ದಲಿತರು. ಅದ್ಹೇಗೆ ಸಿಎ ಎ ದಲಿತ ವಿರೋಧಿಯಾಗುತ್ತೆ?!

- ಬಿ.ಎಲ್‌. ಸಂತೋ ಷ್‌

ಬಿಜೆಪಿ ನಾಯಕ ವಿಜಯ್‌ವರ್ಗೀಯ ಪ್ರಕಾರ, ಅವಲಕ್ಕಿ ತಿನ್ನುವವರು ಬಾಂಗ್ಲಾದೇಶೀಯರು ಅಂತಾದರೆ, ನಾವು ಎನ್‌ಆರ್‌ಸಿಗಾಗಿ ದಾಖಲೆಗಳನ್ನು ತೋರಿಸಬೇಕಿಲ್ಲ. ಕೇವಲ ನಮ್ಮ ಆಹಾರ ತೋರಿಸಿದರೆ ಸಾಕು.

- ಪನ್‌ಸ್ಟರ್‌

ಅತಿವೃಷ್ಟಿ ಮತ್ತು ಅನಾವೃಷ್ಟಿ ಪೀಡಿತ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವ ದುಸ್ಸಾಹಸವನ್ನು ತಕ್ಷಣ ನಿಲ್ಲಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ರೈತರ ಜೊತೆ ನಮ್ಮ ಪಕ್ಷ ಕೂಡಾ ಬೀದಿಗಿಳಿಯಬೇಕಾಗುತ್ತದೆ.

- ಸಿದ್ದರಾಮಯಯ್ಯ

ಕಳೆದುಕೊಂಡ ಜಾಗದಲ್ಲಿ ವಸ್ತುಗಳನ್ನಷ್ಟೇ ಹುಡುಕಬೇಕು, ಸಂತೋಷವನ್ನಲ್ಲ.

- ಪೌಲೋ ಕೋಲ್ಹೋ

ನನ್ನ ಊಬರ್‌ ಈಟ್ಸ್‌ನಲ್ಲಿದ್ದ ಕ್ರೆಡಿಟ್‌ ಈಗ ಕಾಣಿಸ್ತಾ ಇಲ್ಲ. ಹೇ ಝೊಮ್ಯಾಟೋ, ನೀನು ಊಬರ್‌ ಈಟ್ಸ್‌ ಅನ್ನು ತಿನ್ನುವಾಗ, ಅದರಲ್ಲಿದ್ದ ನನ್ನ ಕ್ರೆಡಿಟ್‌ ಅನ್ನೂ ಗುಳುಂ ಮಾಡುವಷ್ಟು ಹಸಿವಾಗಿತ್ತಾ ನಿನಗೆ?

- ರೋಸಿ

ಸಿಎಎ ವಿರುದ್ಧದ ಪ್ರತಿಭಟನೆ ಮಾಡುತ್ತಿರುವ ಒಬ್ಬೇ ಒಬ್ಬ ವ್ಯಕ್ತಿಯೂ ಕಾಶ್ಮೀರಿ ಪಂಡಿತರ ಪರ ಮಾತನಾಡಿದ್ದು ನೋಡಿಲ್ಲ.

- ಡಾಕ್ಟರ್‌ ಬಾಬುಲ್‌

ಆಸ್ಟ್ರೇಲಿಯಾ ವಿರುದ್ಧದ ಜಯ ಜಗತ್ತಿಗೆ ಭಾರತದ ಪಾರಮ್ಯವನ್ನು ಪ್ರಬಲವಾಗಿ ಸಾರಿದೆ. ಆಸಿಗಳ ಅಹಂಗೆ ದೊಡ್ಡ ಪೆಟ್ಟು ಬಿದ್ದಿದೆ.

- ಕ್ರಿಕಿಸ್ತಾನ್‌

ಎನ್‌ಆರ್‌ಸಿ, ಸಿಎಎ ವಿರುದ್ಧದ ಪ್ರತಿಭಟನೆಗಳಲ್ಲಿ ಸಂವಿಧಾನದ ಮೂಲ ಆಶಯವನ್ನು ಓದುವವರು, ಎನ್‌ಆರ್‌ಸಿ ಎನ್ನುವುದು "ಭಾರತೀಯರಾದ ನಾವು ಯಾರು' ಎಂಬುದನ್ನು ವ್ಯಾಖ್ಯಾನಿಸುವುದೇ ಆಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲಿ. 70 ವರ್ಷಗಳು ಕಳೆದರೂ, ಇನ್ನೂ ನಮಗೆ "ನಾವು' ಯಾರು ಎಂಬುದು ಗೊತ್ತಾಗಿಲ್ಲ

- ರಣವೀರ್‌ ಶೋರೆ

ಸಮಸ್ಯೆಗಳ ಒಡಲಲ್ಲಿಯೇ ಪರಿಹಾರ ಮಾರ್ಗವಿರುತ್ತದೆ. ಕುಗ್ಗಿ ಕಣ್ಣು ಮುಚ್ಚದಿರಿ, ಕಣ್ತೆರೆದು ಮಾರ್ಗ ಹುಡುಕಿ.

- ಜೆನ್‌ ಗುರೂ

ಶಬಾನಾ ಆಜ್ಮಿಗೆ ಅಪಘಾತವಾಯಿತೆಂದು ಅನೇಕರು ಟ್ವಿಟರ್‌ ನಲ್ಲಿ ಸಂಭ್ರಮಿಸುತ್ತಿದ್ದಾರೆ. ಏನಾಗುತ್ತಿದೆ ನಮಗೆಲ್ಲ? ಏಕೆ ಇಷ್ಟೊಂದು ಹೃದಯ ಹೀನರಾದೆವು?

- ಶಿಲ್ಪಾ ಮೊಹಂತಿ

ಘನತೆಯು ಕೂಡ ಗಳಿಕೆಯೇ. ಅದನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ.

- ಪಿಯೂಷ್‌ ರಾಯ್‌

ಧೋನಿಯನ್ನು ತಂಡದಿಂದ ಹೊರಹಾಕಲಾಗಿದೆ ಎಂಬರ್ಥದಲ್ಲಿ ಅದೇಕೆ ಜನ ಮಾತನಾಡುತ್ತಿದ್ದಾರೋ ತಿಳಿಯದು, ಗ್ರೇಡಿಂಗ್‌ ವ್ಯವಸ್ಥೆಯ ಬಗ್ಗೆ ಮೊದಲು ತಿಳಿದುಕೊಳ್ಳಿ

- ಟ್ರೂಸನ್‌

ಕಷ್ಟಗಳು ಎದುರಾದಾಗ ಮಾತ್ರ ನಮಗೆ ನಮ್ಮ ನಿಜವಾದ ಹಿತಚಿಂತಕರಾರು ಎನ್ನುವುದು ಅರ್ಥವಾಗುತ್ತದೆ.

- ವಿಸ್ಡಂಕೋಟ್‌

ದಯವಿಟ್ಟು, ನಿರ್ಭಯಾಳ ತಾಯಿಯನ್ನು ಯಾವ ರಾಜಕೀಯ ಪಕ್ಷವೂ ತನ್ನತ್ತ ಎಳೆಯುವುದು ಬೇಡ. ಆಕೆಯ ಹೋರಾಟವು ಈ ಎಲ್ಲ ರಾಜಕೀಯವನ್ನು ಮೀರಿದ್ದು.

- ತವ್ಲೀನ್ ಸಿಂಗ್‌ ಅರೂರ್‌

ಬ್ಯಾಟಿಂಗ್‌ ಲೈನ್‌ ಅಪ್‌ ಹಠಾತ್‌ ಏರಿಳಿತವಾದರೆ ಏನಾಗುತ್ತದೆ ಎನ್ನುವುದಕ್ಕೆ ಮೊದಲ ಒನ್‌ ಡೇ ಸಾಕ್ಷಿ. ವಿರಾಟ್‌ ಕೊಹ್ಲಿ ನಂಬರ್‌ 4ಗೆ ಬರುವಂಥ ನಿರ್ಧಾರಗಳನ್ನು ಕೈಗೊಳ್ಳದಿರಲಿ.

- ಕ್ರಿಕ್‌ ಮೇನಿಕ್‌

ಸಿಎಎ ಬೇಡ ಎನ್ನುವವರು ಪಾಕಿಸ್ತಾನದಿಂದ ಅತ್ಯಾಚಾರಕ್ಕೊಳಗಾಗಿ ಓಡಿ ಬಂದ ಹಿಂದೂ, ಸಿಖ್‌, ಬೌದ್ಧ ನಿರಾಶ್ರಿತರ ಬಗ್ಗೆ ಒಂದಿಷ್ಟೂ ಕನಿ ಕರ ತೋರದಿರುವುದು ದುರಂತ.

- ಅವನೀಶ್‌ ಬೂಂಬಕ್‌

ಮೈಕ್ರೋಸಾಫ್ಟ್ ಬಳಕೆ ಬಗೆಗಿನ ನಿಯಮಾವಳಿಗಳನ್ನು ಓದದೆ ಐ ಆ್ಯಕ್ಸೆಪ್ಟ್ ಬಟನ್‌ ಅನ್ನು ನಾವು ಹೇಗೆ ಪ್ರಸ್‌ ಮಾಡುತ್ತೇವೆಯೋ, ಹಾಗಿದೆ, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸತ್ಯ ನಾಡೆಲ್ಲಾ ಹೇಳಿಕೆ.

- ಕಾಜೋಲ್‌ ಶ್ರೀನಿವಾಸನ್‌

ಅಭಿವ್ಯಕ್ತಿ ಸ್ವಾತಂತ್ರವೆಂದರೆ ಇನ್ನೊಬ್ಬರನ್ನು ಕೀಳಾಗಿ ಕಾಣುವುದು, ಕೆಟ್ಟದಾಗಿ ಕರೆಯುವುದು, ಸೊಂಟದ ಕೆಳಗಿನ ಭಾಷೆಯನ್ನು ಬಳಸುವುದು ಎಂದು ಬಹುತೇಕರು ಭಾವಿಸಿದಂತಿದೆ.

- ಜ್ಯೋತ್ಸ್ನಾ ಶ್ರೀ

ದೇವೀಂದರ್‌ ಸಿಂಗ್‌ ಒಬ್ಬರೇ ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರಲಿಕ್ಕಿಲ್ಲ. ಜಮ್ಮು-ಕಾಶ್ಮೀರ ಪೊಲೀಸ್‌ನಲ್ಲಿ ಇಂಥ ಇನ್ನೆ ಷ್ಟು ಜನರಿದ್ದಾರೋ?

- ಅನಿರ್ಬಾನ್‌ ಚಟರ್ಜಿ

ಅಂಗಳದಲ್ಲಿ ಗರಿಕೆ ಹುಲ್ಲು ಬೆಳೆದಷ್ಟು ವೇಗವಾಗಿ ತುಳಸಿ ಗಿಡ ಬೆಳೆಯೋದಿಲ್ಲ. ಹಾಗೆಯೇ, ಮೋಸ ಮಾಡುವವರು ಬೆಳೆಯುವಷ್ಟು ವೇಗವಾಗಿ, ಶ್ರಮಿಕರು ಅಭಿವೃದ್ಧಿ ಹೊಂದುವುದು ಕಷ್ಟ.

- ಚೇತನ್‌ ದಾಸರಹಳ್ಳಿ

ರಾಜಕಾರಣಿಯಾಗುವುದಕ್ಕೂ, ರಾಜಕಾರಣದ ಮ್ಯಾನೇಜ್‌ ಮೆಂಟ್‌ನಲ್ಲಿ ಪಳಗುವುದಕ್ಕೂ ವ್ಯತ್ಯಾಸವಿದೆ ಎನ್ನುವುದನ್ನು ಪ್ರಶಾಂತ್‌ ಕಿಶೋರ್‌ ಅರ್ಥಮಾಡಿಕೊಳ್ಳಬೇಕಿದೆ.

- ಸುನೇತ್ರಾ ಜಿ

ಶಿಸ್ತು, ಸಂಯಮ, ಆಶಾವಾದದ ಬುನಾದಿಯ ಮೇಲೆಯೇ ಯಶಸ್ಸಿನ ಕಟ್ಟಡ ನಿರ್ಮಾಣವಾಗಬಲ್ಲದು.

- ಲೈಫ್ ಕೋಟ್‌

ಡಿಎಸ್‌ಪಿ ದೇವೀಂದರ್‌ ಸಿಂಗ್‌ ಉನ್ನತ ಹುದ್ದೆಯಲ್ಲಿರುವವರು. ರಾಷ್ಟ್ರಪತಿ ಪದಕವನ್ನೂ ಪಡೆದವರು. ಆದರೂ, ಅವರು ದೇಶ ವಿರೋಧಿ ಚಟುವಟಿಕೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದೊಂದು ಗಂಭೀರ ವಿಷಯವಲ್ಲವೇ?

- ಏಕಲವ್ಯ

ಅಂತೂ ಒಂದು ವಿಷಯ ನನಗೆ ಸ್ಪಷ್ಟವಾಯಿತು. ಪ್ರಜಾಪ್ರಭುತ್ವ ಎಂದರೆ ಮತ ಹಾಕುವುದು ಮಾತ್ರ. 2 ಚುನಾವಣೆಗಳ ಮಧ್ಯ ಜನಕ್ಕೆ ಏನು ಬೇಕು, ಜನರ ಸಮಸ್ಯೆಯೇನು ಎಂಬುದರ ಕುರಿತು ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ.

- ರಮೇಶ್‌ ಶ್ರೀವತ್‌

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಗೆಝೆಟ್‌ ನೋಟಿμಕೇಶನ್‌ ಹೊರಡಿಸಲಾಗಿದೆ. ಅದರ ವಿರುದ್ಧ ಪ್ರತಿಭಟನೆ ಮಾಡಬಾರದು ಎಂದೇನೂ ಇಲ್ಲವಲ್ಲ? ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಪ್ರತಿಭಟನೆಗಳು ನಡೆದಿದ್ದವು.

- ಧೂಪಶ್ವಿ‌ನಿ

ಸದಾ ನಿಮ್ಮ ಬೆಳವಣಿಗೆಗೆ ಆದ್ಯತೆ ಕೊಡಿ. ನಿಮ್ಮ ಕೆಲಸಗಳಿಗೆ ಇನ್ನೊಬ್ಬರ ಮೇಲೆ ಅವಲಂಬಿತರಾಗಲೇಬೇಡಿ.

- ಟ್ರೂಕೋಟ್‌

ಇಂದು ಜಗತ್ತನ್ನು ಆಳುತ್ತಿರುವುದೇ ಸಂವಹನ. ಭಾಷೆಯ ಶಕ್ತಿಯ ನಿಜ ಅನಾವರಣದ ಕಾಲವಿದು.

- ಜಾಕ್‌ ಮಾ

ಜೆಎನ್‌ಯು ಹಿಂಸಾಚಾರದಲ್ಲಿ ಎಡಪಕ್ಷಗಳ ಕೈವಾಡ ಬಹಿರಂಗವಾಗಿದೆ. ಅವರು ಕ್ಯಾಂಪಸ್‌ ಅನ್ನು ರಾಜಕೀಯ ರಣಾಂಗಣವಾಗಿ ಬದಲಾಯಿಸಿದ್ದಾರೆ.

- ಸ್ಮತಿ ಇರಾನಿ

ಪ್ರಜಾಪ್ರಭುತ್ವ ವ್ಯವಸ್ಥೆ ಬ್ಯಾಲೆಟ್‌ ಮೇಲೆ ನಂಬಿಕೆಯಿಟ್ಟಿದೆಯೋ, ಬುಲೆಟ್‌ ಮೇಲೆಯೋ? ನಕ್ಸಲರು ಬ್ಯಾಲೆಟ್‌ ಮೇಲೆ ನಂಬಿಕೆಯಿಟ್ಟ ಜನ ಅಲ್ಲ, ಬುಲೆಟ್‌ ಮೇಲೆ ನಂಬಿಕೆ ಇಟ್ಟವರು. ರಾಜಕೀಯ ಪರಿವರ್ತನೆ ಬ್ಯಾಲೆಟ್‌ ಮೂಲಕ ಆಗಬೇಕು ಎನ್ನುವಂತಹ ಚಿಂತನೆಯಲ್ಲೇ ಅವರಿಗೆ ನಂಬಿಕೆ ಇಲ್ಲ

- ಸಿ.ಟಿ. ರವಿ

ಅದೇಕೆ ಸಮಾನತೆಯ ಮಾತನಾಡುವ ಜಾಮಿಯಾ ವಿಶ್ವವಿದ್ಯಾಲಯ ಎಸ್‌ ಸಿ/ಎಸ್‌ಟಿಗಳಿಗೆ ಮೀಸಲಾತಿ ನಿರಾಕರಿಸುತ್ತದೆ?

- ಅರೂಪ್‌ ಜೇನಾ

ಯುದ್ಧ ಎನ್ನುವುದು ತಮಾಷೆಯಲ್ಲ. ಯುದ್ಧದಿಂದ ನಾಯಕರಿಗೆ ಯಾವ ನಷ್ಟವೂ ಆಗುವುದಿಲ್ಲ. ಪ್ರತಿ ಬಾರಿ ನೋವುಣ್ಣುವುದು ಅಮಾಯಕರು ಮಾತ್ರ.

- ಜಿಕ್ಸುಮಿಸಾ ಸಿಬೋ

ಭಾರತದ ವಿದ್ಯಾರ್ಥಿ ಒಕ್ಕೂಟಗಳು ವಿದ್ಯಾರ್ಥಿಗಳಿಗಿಂತ ರಾಜಕಾರಣಿಗಳ ಹಿತಾಸಕ್ತಿ ಕಾಯುವುದರಲ್ಲೇ ಸಕ್ರಿಯವಾಗಿವೆ.

- ಸುಜಾತಾ ಚಟರ್ಜಿ

ಹಿಂಜರಿಯದೇ ಮುನ್ನುಗ್ಗುವುದೇ ಯಶಸ್ಸಿನ ಗುಟ್ಟು. ಧೈರ್ಯವೇ ಯಶಸ್ಸಿನ ಬೆನ್ನೆಲುಬು.

- ರಾಬಿನ್‌ ಶರ್ಮಾ

ಆಕರ್ಷಕ ಕಣYಳಿಗೆ ಕಾಡಿಗೆಯ ಕಪ್ಪಿಟ್ಟರೂ ಕಾಡುವುದು ದೃಷ್ಟಿ ಎಂಬ ದೋಷ.

- ಚೇತನ್‌ ದಾಸರಹಳಿ

ವಿದ್ಯಾರ್ಥಿ ಒಕ್ಕೂಟಗಳೇ ವಿಶ್ವವಿದ್ಯಾಲಯಗಳಿಗೆ ಮಾರಕವಾಗಿ ಬದಲಾಗಿವೆ. ಎಲ್ಲಾ ಒಕ್ಕೂಟಗಳನ್ನೂ ನಿಷೇಧಿಸಬೇಕು.

- ನಿಶಾಂತ್‌ ಓ

ಜ್ಞಾನಿಗಳಾಗುವುದೇ ಪರಮ ಧ್ಯೇಯವಾಗಬಾರದು. ಆ ಜ್ಞಾನವನ್ನು ಅನುಷ್ಠಾನಕ್ಕೆ ತರುವುದು ನಮ್ಮ ಗುರಿಯಾಗಬೇಕು.

- ಪೌಲೋ ಕೋಲ್ಹೋ

ಮಾನವರಾಗಿ ಹುಟ್ಟಿರುವ ನಾವೆಲ್ಲರೂ ಒಂದು ದಿನ ಸಾಯಲೇಬೇಕು. ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನಾವೆಲ್ಲರೂ ಒಂದೇ. ನಮಗೆಲ್ಲರಿಗೂ ಸಂತೋಷದ ಬದುಕು ಬೇಕು, ಸಮಸ್ಯೆಗಳಿಂದ ದೂರವಿರಬೇಕು. ಆದರೆ, ದುರದೃಷ್ಟಕರ ವಿಚಾರವೆಂದರೆ, ಈಗ ನಾವು ಈ ಪ್ರೀತಿ ಮತ್ತು ವಾತ್ಸಲ್ಯದ ಮಹತ್ವವನ್ನೇ ಮರೆತಿದ್ದೇವೆ.

- ದಲೈ ಲಾಮಾ

ಜಗತ್ತಿನ ಎಲ್ಲರೂ ಅಮೆರಿಕ-ಇರಾನ್‌ ಯುದ್ಧದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, 50 ಕೋಟಿಯಷ್ಟು ಪ್ರಾಣಿಗಳು ಸುಟ್ಟು ಕರಕಲಾಗಿರುವ ಆಸ್ಟ್ರೇಲಿಯಾದ ಕಾಡ್ಗಿಚ್ಚಿನ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮನುಷ್ಯತ್ವವೇ ಸತ್ತಿದೆ. ಮಾನವರಿಗೆ ನಾಚಿಕೆಯಾಗಬೇಕು.

- ತಲ್ಹಾ ಝರಾರ್‌

ಇದೀಗ ಬಂದ ಸುದ್ದಿ. ಯಾರ ಟ್ವಿಟರ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆ... ಮೂರೂ ದೃಢೀಕರಣ ಆಗಿರುತ್ತದೋ, ಅವರು ಎನ್‌ಆರ್‌ಸಿಗೆ ದಾಖಲೆ ನೀಡಬೇಕಾಗಿಲ್ಲವಂತೆ!

- ಅನುಭವ್‌ ಸಿನ್ಹಾ

ದೇಶದ ರಾಜಕೀಯದಲ್ಲಿ ವಾಸ್ತವದಲ್ಲಿ ಆಗುತ್ತಿರುವುದು ಏನು ಎಂಬುದು ನನಗೆ ಮಾತ್ರ ಗೊತ್ತು ಎಂಬ ಭಾವನೆ ನಿಮಗೆ ಆಗಾಗ ಬರುತ್ತಿರುತ್ತದೆಯೇ? ನನಗಂತೂ ಬರುತ್ತಿರುತ್ತದೆ.

- ಯೆಸ್‌ ಮೈ ಜೀಅ

ಮನುಷ್ಯನ ದೇಹದಿಂದ ಹೊರಹೊಮ್ಮುವ ಶಾಖವನ್ನು ವಿದ್ಯುತ್‌ ಆಗಿ ಪರಿವರ್ತಿಸಲು ಸಾಧ್ಯ ಎನ್ನುತ್ತಿದ್ದಾರೆ ಮುಂಬೈನ ಐಐಟಿಯ ತಂತ್ರಜ್ಞರು. ಹಾಗಿದ್ದರೆ, ಮದುವೆಯಾದ ಹೊಸದರಲ್ಲಿ ಹೊಸಬಿಸಿಯ ತಾಪಕ್ಕೆ ನಲುಗುವ ನವದಂಪತಿಗಳ ಪಾಡೇನೋ?.

- ಸುಮನಾ ಜೋಷಾಯ್

370ನೇ ವಿಧಿ ರದ್ದು ಮಾಡಿದಾಗ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಬೊಬ್ಬೆ ಹೊಡೆದ ಅಮೆರಿಕ ಕಾಂಗ್ರೆಸ್‌ನ ಸದಸ್ಯೆ ಪ್ರಮೀಳಾ ಜಯಪಾಲ್‌, ಈಗ ಇರಾಕ್‌ ಮೇಲೆ ಅಮೆರಿಕ ದಾಳಿ ನಡೆಸಿದಾಗ ಸುಮ್ಮನಿದ್ದಿದ್ಯಾಕೆ ಎಂಬುದೇ ತಿಳಿಯುತ್ತಿಲ್ಲ.

- ಮಾಲತಿ ಪೂಜಾರ್‌

ಕೆಲವರಿಗೆ ಏನಾಗಿದೆ ಎಂದೇ ಅರ್ಥವಾಗುತ್ತಿಲ್ಲ. ಮೊಹಮ್ಮದ್‌ ಹಸನ್‌ ಎಂಬಾತ ಬಹಿರಂಗವಾಗಿಯೇ ನನ್‌ಕಾನಾ ಸಾಹಿಬ್‌ ಅನ್ನು ಧ್ವಂಸಗೊಳಿಸುವ, ಅಲ್ಲಿ ಮಸೀದಿ ನಿರ್ಮಿಸುವ ಬೆದರಿಕೆ ಹಾಕುತ್ತಿದ್ದಾನೆ. ಇದು ಬಹಳ ಬೇಸರದ ಸಂಗತಿ. ನಾವು ಮೊದಲು ಮನುಷ್ಯರಾಗಬೇಕಿದೆ.

- ಹರ್ಭಜನ್‌ ಸಿಂಗ್‌, ಕ್ರಿಕೆಟಿಗ

ನಂಕಾನಾ ಸಾಹಿಬ್‌ ಗುರುದ್ವಾರದ ಮೇಲೆ ಪಾಕಿಸ್ತಾನಿಯರಿಂದ ಕಲ್ಲು ತೂರಾಟ. ಇದೇ ನೋಡಿ ಪಾಕ್‌ನ ನಿಜ ಮುಖ.

- ನಾರ್‌ ಕೋಲ್ವಿ

ಸಿಎಎ ವಿರುದ್ಧದ ಪ್ರತಿಭಟನೆ ಕ್ರಾಂತಿಯಲ್ಲ, ಅದು ವಿಪಕ್ಷಗಳು ಜನರಲ್ಲಿ ಅಪಪ್ರಚಾರದ ಮೂಲಕ ಸೃಷ್ಟಿಸಿರುವ ಭ್ರಾಂತಿ.

- ಅನಿರ್ಬಾನ್‌ ಚೌಧರಿ

2011ರಲ್ಲಿ ಟ್ರಂಪ್‌: ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಬರಾಕ್‌ ಒಬಾಮ ಈಗ ಇರಾನ್‌ ವಿರುದ್ಧ ಯುದ್ಧ ಸಾರಲೂಬಹುದು. 2020ರಲ್ಲಿ: ಸ್ವತಃ ಟ್ರಂಪ್‌ ಅವರೇ ಇರಾನ್‌ ಮೇಲೆ ಯುದ್ಧ ಸಾರಿದ್ದಾರೆ!

- ರೋಜ್‌

ಗೋರಖಪುರದ ಘಟನೆಗೆ ಕಣ್ಣೀರು ಸುರಿಸಿದ ಕಾಂಗ್ರೆಸ್‌ ನಾಯಕರಿಗೆ, ಕೋಟಾ ವಿಷಯದಲ್ಲಿ ಕಣ್ಣೀರು ಬತ್ತಿ ಹೋಯಿತೇ?

- ಸುಮೇಂದು ಶಾ

ಸಿಎಎ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿ ಹಿಂಸಾಚಾರಕ್ಕೆ ಕಾರಣವಾಗುತ್ತಿರುವ ಪ್ರತಿಪಕ್ಷಗಳನ್ನು ಭಾರತೀಯರು ಖಂಡಿತ ಕ್ಷಮಿಸುವುದಿಲ್ಲ.

- ಅಂಜಲಿ ಎನ್‌, ಆರ್‌

ನಗು ನಗುತ್ತಾ ಇರಿ. ನೀವು ನಿನ್ನೆಗಿಂತ ಇಂದು ಹೆಚ್ಚು ಬಲಿಷ್ಠರಾಗಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಾಗಲಿ.

- ಇನ್‌ಸ್ಪೈರ್‌

ನಿತ್ಯವೂ ಹೊಸತನ್ನು ಕಲಿಯಿರಿ. ಇದ್ದಲ್ಲೇ ಇದ್ದು ಬಿಡಬೇಡಿ. ಮನುಷ್ಯ ಹರಿವ ನದಿಯಾಗಬೇಕು, ನಿಂತ ನೀರಾಗಬಾರದು.

- ರಾಬಿನ್‌ ಶರ್ಮಾ

ಕನಸು ನನಸಾಗಲು ಶ್ರಮ, ಸಮಯ ಪಾಲನೆ, ಸಂಯಮವೆಂಬ ಬುನಾದಿ ಮುಖ್ಯ.

- ಪೌಲೋ ಕೋಲ್ಹೋ

ಇದೊಂದು ಗಂಭೀರ ಪ್ರಶ್ನೆ. ಅಜಿತ್‌ ಪವಾರ್‌ ಬಿಜೆಪಿಗೆ ಬೆಂಬಲ ನೀಡುತ್ತಿದ್ದರೆ ಭ್ರಷ್ಟಾಚಾರಿ ಮತ್ತು ನೀವು ಈಗ ಎನ್‌ಡಿಎ ನೈತಿಕತೆ ಪ್ರಶ್ನೆ ಮಾಡುತ್ತಿದ್ದೀರಿ. ಈಗ ಶಿವಸೇನೆ ಅವರಿಗೆ ಬೆಂಬಲ ನೀಡಿ ಡಿಸಿಎಂ ಸ್ಥಾನ ನೀಡಿದೆ. ಸಂಜಯ ರಾವುತ್‌ ಅವರನ್ನು 2ನೇ ಹರಿಶ್ಚಂದ್ರನಂತೆ ಬಿಂಬಿಸುತ್ತಿದ್ದಾರೆ.

- ದ ಮೆಜಾರಿಟಿ

ನೀವು ನಿಮ್ಮ ದೇಶದ ಬಗ್ಗೆ ಯೋಚಿಸುವಾಗ, ನಾನು ಈ ಜಗತ್ತಿನ ಬಗ್ಗೆ ಯೋಚಿಸುತ್ತೇನೆ. ನೀವು ನಿಮ್ಮ ಧರ್ಮದ ಬಗ್ಗೆ ಯೋಚಿಸುವಾಗ, ನಾನು ವಿಕಾಸದ ಬಗ್ಗೆ ಯೋಚಿಸುವೆ. ನೀವು ನಿಮ್ಮ ಅಸ್ಮಿತೆಯ ಬಗ್ಗೆ ಯೋಚಿಸುವಾಗ, ನಾನು ಮಾನವನ ಇತಿಹಾಸದ ಬಗ್ಗೆ ಯೋಚಿಸುತ್ತೇನೆ.

- ತಸ್ಲೀಮಾ ನಸ್ರೀನ್

ಹೊಸ ವರ್ಷದಿಂದ ಮೊಬೈಲ್‌ ಚಟ ಬಿಡುತ್ತೇನೆ ಎಂದು ನಿರ್ಧರಿಸುವುದೇ ಅತಿ ದೊಡ್ಡ ರೆಸಲ್ಯೂಷನ್‌ ಆಗಲಿದೆ.

- ಟ್ರಾಲ್‌ ಲಾಲಾ

ಪಾಕ್‌ನ ಮನಸ್ಥಿತಿಯನ್ನು ಚೆನ್ನಾಗಿ ಅನಾವರಣಗೊಳಿಸಿದ್ದಾರೆ ಶೋಯೆಬ್‌ ಅಖ್ತರ್‌. ಇನ್ನು ಅವರಿಗೆ ಅಲ್ಲಿ ಉಳಿಗಾಲವಿಲ್ಲ ಎನಿಸುತ್ತದೆ.

- ತರುಣ್‌ ಕುನಾಲ್‌

ಮುಂದಿನ ವರ್ಷದಿಂದ ಇಸವಿಯನ್ನು ಬರೆಯುವಾಗ 2020 ಎಂದು ಸಂಪೂರ್ಣವಾಗಿ ಬರೆಯಿರಿ. ಉದಾಹರಣೆಗೆ 31/01/2020ಯನ್ನು 31/01/20 ಎಂದು ಬರೆಯಬೇಡಿ. 20 ಎಂಬುದನ್ನು ಜನರು 31/01/2000 ಅಥವಾ 31/01/2019 ಅಥವಾ ಇನ್ನೂ ಹಲವು ರೀತಿಯಲ್ಲಿ ತಿದ್ದಿ, ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

- ಗೀತಾ

ದೆಹಲಿಯ ಪ್ರತಿ ಕತ್ತಲ ಜಾಗವೂ ಬೆಳಕಿನಿಂದ ಕಂಗೊಳಿಸಬೇಕು. ದೆಹಲಿಯ ಪ್ರತಿ ಮೂಲೆಗೂ ಬೀದಿ ದೀಪಗಳನ್ನು ಅಳವಡಿಸಲಾಗುವುದು. ದೆಹಲಿಯ ಪ್ರತಿ ಮಹಿಳೆಗೂ ತಾನು ಸರಕ್ಷಿತವಾಗಿದ್ದೇನೆಂಬುದು ಅನುಭವಕ್ಕೆ ಬರಬೇಕು.

- ಅರವಿಂದ್‌ ಕೇಜ್ರಿವಾಲ್‌

ಸರ್ಕಾರದ ಕ್ರಮಗಳ ವಿರುದ್ಧ ಪ್ರತಿಭಟಿಸುವ ಜನರನ್ನು ಹತ್ತಿಕ್ಕುವ ಕೆಲಸವನ್ನು ಈ ಹಿಂದೆ ಕಾಂಗ್ರೆಸ್‌ ಅಣ್ಣಾ ಹಜಾರೆ ಮತ್ತು ಅರವಿಂದ್‌ ಕೇಜ್ರಿವಾಲ್‌ ವಿಚಾರದಲ್ಲಿ ಮಾಡಿತ್ತು. ಬಳಿಕ ಕಾಂಗ್ರೆಸ್‌ನ ಪರಿಸ್ಥಿತಿ ಏನಾಯಿತೆಂದು ಕಾಂಗ್ರೆಸನ್ನೇ ಕೇಳಿ.

- ಚೇತನ್‌ ಭಗತ್

ಎನ್‌ಆರ್‌ಸಿ ನಮ್ಮದೇ ಯೋಜನೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಮತ್ತೆ ಯಾಕೆ ಅಪಸ್ವರ?

- ರೂಪಾ ಮೂರ್ತಿ

ಅತ್ಯಂತ ಉನ್ನತ ದೇವರು ಯಾರೆಂದರೆ, ನಮ್ಮ ಜೀವನವನ್ನು ಸಂತೋಷಮಯವನ್ನಾಗಿ ಮಾಡುವವರು. ಅವರು ಎಲ್ಲಾ ಹೊಗಳಿಕೆ ಮತ್ತು ಪ್ರಾರ್ಥನೆಗೆ ಅರ್ಹರು.

- ಸಂತ ರಾಮ್‌ ಜಿ

ಇತ್ತೀಚಿನ ದಿನಗಳಲ್ಲಿ ಚುನಾವಣೆಯಲ್ಲಿ ಸೋತ ಪಕ್ಷಗಳು ಏಕೆ ಬಾಯಿಪಾಠ ಮಾಡಿಕೊಂಡಂತೆ "ನಾವು ಜನಾದೇಶವನ್ನು ಗೌರವಿಸುತ್ತೇವೆ' ಎಂದು ಹೇಳುತ್ತಾರೆ ಎಂದು ತಿಳಿಯುತ್ತಿಲ್ಲ. ಅವರಿಗೆ ಅದು ಬಿಟ್ಟು ಬೇರೆ ಆಯ್ಕೆಗಳು ಇರುವುದಿಲ್ಲ ಅಲ್ವಾ?

- ರಮೇಶ್‌ ಶ್ರೀವತ್‌

ಪ್ರಸಕ್ತ ವರ್ಷ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್‌ ಆದ ಆಹಾರಗಳ ಪಟ್ಟಿಯಲ್ಲಿ ಮಸಾಲೆದೋಸೆ ಕೂಡ ಸೇರಿದೆ. ನನ್ನ ಪ್ರಶ್ನೆಯೇನೆಂದರೆ, ಮಸಾಲೆ ದೋಸೆಯು ಮನೆಗೆ ಬಂದು ತಲುಪುವಾಗ ಒದ್ದೆಯಾದ ಪೇಪರ್‌ ನ್ಯಾಪಿRನ್‌ನಂತೆ ಆಗಿರುತ್ತದೆ. ಅದನ್ನೇಕೆ ಆರ್ಡರ್‌ ಮಾಡುತ್ತೀರಿ?

- ಗಬ್ಬರ್‌

ಜಾರ್ಖಂಡ್‌ ಫ‌ಲಿತಾಂಶದಿಂದ ಬಿಜೆಪಿ ಪಾಠ ಕಲಿಯಲಿ, ಪ್ರತಿಬಾರಿಯೂ ಮೋದಿ -ಅಮಿತ್‌ ಶಾ ಹೆಸರು ಹೇಳಿ ಕೊಂಡು ಚುನಾವಣೆ ಗೆಲ್ಲಲಾಗುವುದಿಲ್ಲ.

- ಗಣೇಶ್‌ ಚೌಗ್ಲೆ

ಆತ್ಮಶೋಧನೆಗಿಂತ ಮಹತ್ತರ ಕಾರ್ಯ ಮತ್ತೂಂದಿಲ್ಲ. ನೀವು ಬದಲಾದರೆ ಮಾತ್ರ ಜಗತ್ತನ್ನು ಬದಲಿಸಬಲ್ಲಿರಿ.

- ಥ್ಯಾಂಕ್‌ ಡೌಟ್‌

ಹರ್ಯಾಣದಲ್ಲಿ ಹೊಡೆಸಿಕೊಂಡರು, ಮಹಾರಾಷ್ಟ್ರದಲ್ಲಿ ತಿರಸ್ಕೃತಗೊಂಡರು, ಜಾರ್ಖಂಡ್‌ ನಲ್ಲಿ ಸೋತರು. ಇದು ಬಿಜೆಪಿಯ 2019ರ ಸಾಧನೆ. ಬಿಜೆಪಿಯೇತರ ಪಕ್ಷಗಳು ಕಾಂಗ್ರೆಸ್‌ ಜೊತೆಗೂಡಿ ಸಂವಿಧಾನದ ಉಳಿವಿಗೆ ಹೋರಾಡಲು ಇದು ಸಕಾಲ.

- ಪಿ. ಚಿದಂಬರ

ರಿಷಭ್‌ ಪಂತ್‌ನನ್ನು ಮೊದಲು ತಂಡ ದಿಂದ ಹೊರಕ್ಕೆ ಹಾಕಿ. ಅದೇಕೆ ಕೊಹ್ಲಿ, ಶಾಸ್ತ್ರೀ ಈ ಕಳಪೆ ಆಟಗಾರನಿಗೆ ಇಷ್ಟೊಂದು ಅವಕಾಶ ಕೊಡುತ್ತಿದ್ದಾರೋ ತಿಳಿಯದು. ರಾಬಿನ್‌ ಉತ್ತಪ್ಪ, ರಾಯ್ಡುರಂಥ ಆಟಗಾರರಿಗೆ ಇಂಥ ಅವಕಾಶಗಳೇ ಸಿಗಲಿಲ್ಲ.

- ಶಿವಕುಮಾರ್‌ ಎಸ್‌

ರಿಷಬ್‌ ಪಂತ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಮೇಲೆ, ಟ್ಯಾಕ್ಸಿ ಡ್ರೈವರ್‌ ಆಗಬೇಕು. ಯಾಕೆಂದರೆ, ಬಹಳ ಚೆನ್ನಾಗಿ "ಡ್ರಾಪ್‌' ಮಾಡುತ್ತಾನೆ!

- ಸಾಗರ್‌ ಕ್ಯಾಸಂ

ದೆಹಲಿಯ ಅನಧಿಕೃತ ಕಾಲೊನಿಗಳನ್ನು ಸಕ್ರಮಗೊಳಿಸುವ ಮೂಲಕ ಪ್ರಧಾನಿ ಮೋದಿ ಅವರು 40 ಲಕ್ಷಕ್ಕೂ ಹೆಚ್ಚು ಮಂದಿಗೆ ಹೊಸ ಬದುಕನ್ನು ಕಟ್ಟಿಕೊಟ್ಟಿದ್ದಾರೆ.

- ಸಿ.ಆರ್‌. ಪಾಟೀಲ್‌

ಜಾರ್ಖಂಡ್‌ನ‌ಲ್ಲಿ ಬಿಜೆಪಿ ಸರ್ಕಾರವು ಜನರ ಕ್ಷೇಯೋಭಿವೃದ್ಧಿಗಾಗಿ ಅಷ್ಟೊಂದು ಯೋಜನೆಗಳನ್ನು ಜಾರಿ ಮಾಡಿಯೂ ಬಿಜೆಪಿ ಸೋಲುತ್ತದೆ ಎಂದಾದರೆ ಜನರಲ್ಲೇ ಏನೋ ಸಮಸ್ಯೆಯಿದೆ ಎಂದು ಅರ್ಥ.

- ನ್ಯೂಕ್ಲಿಯರ್‌ ಕೌಶಲ್‌

ಈ ಬಾರಿ ಇವಿಎಂ ಮೇಲೆ ಪ್ರತಿಪಕ್ಷಗಳು ಗೂಬೆ ಕೂರಿಸುವುದಿಲ್ಲ. ಬಿಜೆಪಿ ಗೆಲ್ಲುವುದಿಲ್ಲ ಎಂದಾದರೆ ಇವಿಎಂ ಸರಿಯಾಗಿಯೇ ಕೆಲಸ ಮಾಡುತ್ತಿರುತ್ತದೆ. ಇನ್ನೂ ಜಾರ್ಖಂಡ್‌ ಫ‌ಲಿತಾಂಶ ಬಂದಿಲ್ಲ. ಫ‌ಲಿತಾಂಶದ ದಿನ ಈ ಅಭಿಪ್ರಾಯ ಬದಲಾಗಲೂಬಹುದು.

- ದೇಸಿ ಮೋಜಿಟೋ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರನ್ನು ನಾನು ದ್ವೇಷಿಸುವುದಲ್ಲ. ಹೋರಾಟಗಾರರು ಹೆಚ್ಚು ಹೆಚ್ಚು ಉಗ್ರ ಹೋರಾಟ ಮಾಡಿದಂತೆಲ್ಲಾ ಬಿಜೆಪಿಯ ಹಿಂದೂ ಮತದಾರ ನೆಲೆ ಗಟ್ಟಿಯಾಗುತ್ತದೆ.

- ಸುಬ್ರಮಣಿಯನ್‌ ಸ್ವಾಮಿ

ಕಷ್ಟಗಳ ಒಡಲಲ್ಲಿ ಬದುಕಿನ ಕಹಿ ಸತ್ಯಗಳು ಅಡಗಿರುತ್ತವೆ. ಅವುಗಳಿಗೆ ವಿಮುಖರಾಗದಿರಿ, ಮುಖಾಮುಖೀಯಾಗಿ.

- ಯೂನಿಕ್ವೆಸ್ಟ್‌

ಜನರಿಗೆ ಈಗ ಸತ್ಯ ಬೇಕಾಗಿಲ್ಲ, ಸುಳ್ಳಿನ ಕಥೆಗಳೇ ಅವರಿಗೆ ರುಚಿಸುವುದು. ಹೀಗಾಗಿ, ನಿಮ್ಮ ತರ್ಕಗಳಿಗೆ ಅವರ ಮಿದುಳಲ್ಲಿ ಜಾಗವಿಲ್ಲ!

- ಸುಮೇಂದು ಭಟ್ಟಾಚಾರ್ಯ

ಬಾಣ ಮುಂದೆ ಹೋಗಬೇಕೆಂದರೆ ಮೊದಲು ಅದನ್ನು ಹಿಂದಕ್ಕೆ ಎಳೆಯಬೇಕು. ಜೀವನದಲ್ಲಿ ಕಷ್ಟಗಳು ನಿಮ್ಮನ್ನು ಹಿಂದಕ್ಕೆ ಎಳೆಯುತ್ತಿವೆ ಎಂದರೆ, ನೀವು ಬಾಣದಂತೆ ಚಿಮ್ಮಿ ಗುರಿ ಸೇರಲಿದ್ದೀರಿ ಎಂದು ಅರ್ಥ.

- ಪ್ರಿನ್ಸ್‌ ಕೇರ್‌

ಅಂತರ್ಜಾಲವೆನ್ನುವುದು ಎಷ್ಟು ದಾರಿ ದೀಪವಾಗಬಲ್ಲದೋ, ಅಷ್ಟೇ ದಾರಿ ತಪ್ಪಿಸುವ ಮಾರ್ಗವೂ ಆಗಿದೆ.

- ಜುಬೇರ್‌ ಅಹಮದ್‌

ಇಡೀ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಮತ್ತು ಶಿಕ್ಷಣ ಸಂಸ್ಥೆಗಳಿಂದ ರಾಜಕೀಯ ಪಕ್ಷಗಳ ಉಚ್ಚಾಟನೆಯೇ ದೇಶದ ಪ್ರಮುಖ ಗುರಿಯಾಗಬೇಕು.

- ಸ್ವಪ್ನಿಲ್‌ ಬೂಂಬಕ್‌

ಸಂಬಂಧಗಳಲ್ಲಿ ಪರಿಪೂರ್ಣ ನೆಮ್ಮದಿಯನ್ನು ಕಾಣಬೇಕು ಎಂದರೆ, ಅದರಲ್ಲಿರುವ ಸಣ್ಣಪುಟ್ಟ ಲೋಪಗಳನ್ನು ನಿರ್ಲಕ್ಷಿಸಬೇಕು.

- ದ ಬ್ಯಾಡ್‌ ಡಾಕ್ಟರ್‌

ವಿದ್ಯಾರ್ಥಿ ಸಂಘಟನೆಗಳೆಲ್ಲ ಸಂಪೂರ್ಣವಾಗಿ ರಾಜಕೀಕರಣಗೊಂಡಿವೆ. ಇವು ರಾಜಕೀಯ ಪಕ್ಷಗಳ ಕಿರು ಘಟಕಗಳಷ್ಟೇ!

- ವಿಲೋಮ್‌ ಚೌಗ್ಲೆ

ಇದುವರೆಗೂ ಒಬ್ಬೇ ಒಬ್ಬ ಸೆಕ್ಯುಲರ್‌ನ ಕಣ್ಣಿಂದಲೂ ಹಿಂದೂ ಸಂತ್ರಸ್ತರ ಪರ ಒಂದೇ ಹನಿಯೂ ಬಿದ್ದಿಲ್ಲ ಎನ್ನುವುದನ್ನು ಮರೆಯದಿರಿ.

- ಟ್ರೂನೋಷನ್‌

ಇದು ಕೇವಲ ದೆಹಲಿ ಹೊತ್ತಿ ಉರಿಯುತ್ತಿರುವ ವಿಚಾರವಲ್ಲ. ಭಾರತದ ಆತ್ಮವೇ ಹೊತ್ತಿ ಉರಿಯುತ್ತಿದೆ. ಆಜಾದಿ ಬೇಕೆನ್ನುವವರಿಗೆ ಬೆಂಬಲ ನೀಡುವವರಿಗೆ ಧಿಕ್ಕಾರವಿರಲಿ.

- ಗೀತಿಕಾ ಸ್ವಾಮಿ

ಹೊಸ ಸೇರ್ಪಡೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.