ಸಿಎಬಿಯನ್ನು ಅರಗಿಸಿಕೊಳ್ಳಲಾಗದವರು ಸುಳ್ಳೇ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ.

- ಕ್ಯಾರಿ

ಧಾರ್ಮಿಕ ತೀವ್ರಗಾಮಿಗಳು ಹೋಟೆಲ್‌ನ ವೈಟರ್‌ ಬಳಿ ಆತನ ಧರ್ಮ ಯಾವುದು ಎಂದು ಕೇಳುತ್ತಾರೆ. ಆದರೆ, ಅದೇ ಹೋಟೆಲ್‌ಗೆ ಬೆಂಕಿ ಬಿದ್ದಾಗ ಆರಿಸಲು ಬರುವ ಅಗ್ನಿಶಾಮಕ ಸಿಬ್ಬಂದಿ ಬಳಿ ಆ ಪ್ರಶ್ನೆ ಕೇಳುವುದಿಲ್ಲ.

- ಕಾಜೋಲ್‌ ಶ್ರೀನಿವಾಸನ್‌

ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ, ಯಾವಾಗ ಅದು ಹಿಂಸೆಗೆ ತಿರುಗುತ್ತದೆಯೋ, ಆಗ ಆ ಪ್ರತಿಭಟನೆಯ ಮೂಲ ಉದ್ದೇಶವೇ ನಾಶವಾದಂತೆ.

- ನಿಧಿ ರಜಾªನ್‌

ಇಂದಿನ ಜಾಗತೀಕರಣದ ಯುಗದಲ್ಲಿ ಸೌಲಭ್ಯಗಳು, ಅವಕಾಶಗಳು ಹೆಚ್ಚಿವೆ. ಹಾಗೆಯೇ, ಸಮಸ್ಯೆಗಳು, ನಿರುದ್ಯೋಗ, ಹಿಂಸಾ ಪ್ರವೃತ್ತಿ ಕೂಡ ಬೆಳೆಯುತ್ತಿದೆ.

- ಮೋಹನ್‌ ಆಚಾರ್‌.

ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ರಾಜ್ಯ ಸರ್ಕಾರವೇ ಕುರಿ ಮಾಂಸದ ಸಂಚಾರಿ ಮಳಿಗೆ ಆರಂಭಿಸುತ್ತಿದೆಯಂತೆ. ಅಂತೂ ಸರ್ಕಾರ ವಿದ್ಯಾವಂತ ನಿರುದ್ಯೋಗಿಗಳನ್ನು ಕುರಿ ಕಾಯಲು ಹಚ್ಚಲಿಲ್ಲವಲ್ಲ. ಅದೇ ಸಂತೋಷ.

- ಮಮತಾ ನಾಯ್ಕರ್‌

ಕೆಲವರು ಮೊದಲು ಆಕರ್ಷಣೀಯ ಎಂದೆನಿಸಿದರೂ, ಅವರ ಯೋಚನಾಲಹರಿ ಗೊತ್ತಾದ ಬಳಿಕ ಆ ಆಕರ್ಷಣೆ ಕಡಿಮೆಯಾಗುತ್ತದೆ.

- ವಿ ಮಿಸ್ಟೀರಿಯಸ್‌

ಪೌರತ್ವ ತಿದ್ದುಪಡಿ ಮಸೂದೆಯಿಂದ ದೇಶದ ಮುಸಲ್ಮಾನರಿಗೆ ಏನೂ ತೊಂದರೆಯಿಲ್ಲ. ಆದರೂ ಅದೇಕೆ ಕಾಂಗ್ರೆಸ್‌ ಸುಮ್ಮನೇ ಜನರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ?

- ಅನಿರ್ಬಾನ್‌ ಚಾಟರ್ಜಿ

ಸೃಜನಶೀಲತೆಗೆ ಏಕಾಂತವೇ ಇಂಧನ. ಗದ್ದಲದಲ್ಲಿ ಗದ್ಯವೂ ಹುಟ್ಟದು-ಪದ್ಯವೂ ಹುಟ್ಟದು.

- ಟ್ರೂಕೋಟ್‌

ವಿಶ್ವಾದ್ಯಂತ ರಾಷ್ಟ್ರೀಯತೆ ಸೆಕ್ಯುಲರ್‌ ಎಂಬ ಮುಖವಾಡ ಹೊತ್ತಿರುವವರನ್ನು ಸೋಲಿಸುತ್ತಿದೆ. ಭಾರತದಲ್ಲಿ ನರೇಂದ್ರ ಮೋದಿ ರಾಹುಲ್‌ರನ್ನು ಸೋಲಿಸಿದರು ಡೊನಾಲ್ಡ್‌ ಟ್ರಂಪ್‌ ಹಿಲರಿ ವಿರುದ್ಧ ಗೆದ್ದರು ಈಗ ಬೋರಿಸ್‌ ಜಾನ್ಸಸ್‌ ಜಿಹಾದಿಗಳ ವಿರುದ್ಧ ಗೆದ್ದರು.

- ವಿನಿತಾ ಹಿಂದುಸ್ತಾನಿ

ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರಾದ ಮಾನ್ಯ ಸಿದ್ದರಾಮಯ್ಯನವರು ಶೀಘ್ರ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬರಲಿ ಎಂದು ಭಗವಂತನಲ್ಲಿಪ್ರಾರ್ಥಿಸುತ್ತೇನೆ. ಸಿದ್ದರಾಮಣ್ಣನವರು ಆರೋಗ್ಯವಂತರಾಗಿ ಮತ್ತೆ ಜನರ ಸೇವೆಯಲ್ಲಿ ಮುಂಚಿನಂತೆ ತೊಡಗಿಸಿಕೊಳ್ಳುತ್ತಾರೆ ಎಂದು ಆಶಿಸುತ್ತೇನೆ.

- ಸಿ.ಟಿ. ರವಿ

ಭರವಸೆ ಕಳೆದುಕೊಂಡು ನಿರಾಶಾವಾದಿಯಾಗುವುದಕ್ಕಿಂತ, ಆಶಾವಾದಿಯಾಗಿದ್ದೂ ನಿರಾಸೆ ಅನುಭವಿಸುವುದು ಉತ್ತಮ!

- ರಾಬಿನ್‌ ಶರ್ಮಾ

ಇದೊಂದು ಐತಿಹಾಸಿಕ ವಿಧೇಯಕ. ಇದರಿಂದ ಅಸ್ಸಾಂ ರಾಜ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಅಸ್ಸಾಂ ಒಪ್ಪಂದದ 6ನೇ ಪರಿಚ್ಛೇದದ ಅನುಷ್ಠಾನವು ರಾಜಕೀಯ ಸ್ಥಿರತೆಯ ಹೊಸ ಆಶಾಕಿರಣ ಮೂಡಿಸಲಿದೆ.

- ಹಿಮಾಂತ ಬಿಸ್ವಾ ಸರ್ಮಾ

ಭಾರತದ ಬಗ್ಗೆ ಉಪದೇಶ ಮಾಡುವ ಪಾಕಿಸ್ತಾನ ಪ್ರಧಾನಿಗಳೇ ಮೊದಲು ನಿಮ್ಮ ಪಾಕಿಸ್ತಾನವನ್ನು ಇಸ್ಲಾಮಿಕ್‌ ರಿಪಬ್ಲಿಕ್‌ ಎನ್ನುವುದರ ಬದಲು ಜಾತ್ಯತೀತ ಎಂದು ಬದಲಾಯಿಸಲು ಪ್ರಯತ್ನಿಸಿ.

- ಹಿಮಾಂತ ಬಿಸ್ವ ಶರ್ಮ

ಎರಡು ರಾಷ್ಟ್ರ ಸಿದ್ಧಾಂತಕ್ಕೆ ಸಾವರ್ಕರ್‌ ಕಾರಣ ಎಂದು ಕಾಂಗ್ರೆಸ್‌ ಆರೋಪ ಮಾಡುತಿದೆ. ಆದರೆ ಆ ಪಕ್ಷದ ನಾಯಕರಾಗಿದ್ದ ನೆಹರೂ ಅವರು ಅದನ್ನು ಸುಳ್ಳುಗೊಳಿಸುವಂತೆ ಮಾತನಾಡಿದ್ದರು. ನಿಮಗೆ ನಾಚಿಕೆಯಾಗಬೇಕು.

- ಗೀತಿಕಾ ಸ್ವಾಮಿ

ಸಚಿವ ಅಮಿತ್‌ ಶಾ ಅವರು ಪೌರತ್ವ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದ ಬಳಿಕ ಯಾರೊಬ್ಬರಿಗೂ ಮುಂದಿನ ಚರ್ಚೆ ಮಾಡಲು ವಿಷಯವೇ ಇರಲಿಲ್ಲ.

- ರಾಮ್‌ಮಾಧವ್‌

‌ಕರ್ನಾಟಕದಲ್ಲಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿದ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಮೇಲೆ ದೇಶ ಎಷ್ಟು ನಂಬಿಕೆ ಇಟ್ಟಿದೆ ಎಂಬುದೂ ದೃಢವಾಯಿತು.

- ನರೇಂದ್ರ ಮೋದಿ, ಪ್ರಧಾನಿ

ಒಂದು ಕಾಲದಲ್ಲಿ ಈರುಳ್ಳಿ ದರ ಏರಿಕೆ ಯಾಗಿದ್ದಕ್ಕೆ ಬೊಬ್ಬಿಡುತ್ತಿದ್ದ ಕೆಲವರು, ಈಗ ಭಾರತೀಯ ಆಹಾರ ಪದ್ಧತಿಯಲ್ಲಿ ಈರುಳ್ಳಿ ಏಕೆ ಅತ್ಯಗತ್ಯವೇನೂ ಅಲ್ಲ ಎಂಬ ಬಗ್ಗೆ ಚರ್ಚಿಸುತ್ತಿದ್ದಾರೆ.

- ಜೋಯ್‌

ನಮ್ಮಲ್ಲಿ ರಾಜಕಾರಣಿಗಳಿಗೆ ಭದ್ರತೆ ನೀಡಲು ಪೊಲೀಸರಿದ್ದಾರೆ. ಆದರೆ, ಹೆಣ್ಣು ಮಕ್ಕಳಿಗೆ ಭದ್ರತೆ ನೀಡಲು ಯಾಕಿಲ್ಲ?

- ಸುಮನ್‌ ದುಹಾನ್‌

ಒಂದು ದೇಸೀ ಕುಟುಂಬದ ಅತಿ ಕಿರಿಯ ಪುರುಷ ಸದಸ್ಯನನ್ನು "ಬಾಬು' ಎಂದು ಕರೆಯಲಾಗುತ್ತದೆ. ಅತಿ ಹಿರಿಯ ಸದಸ್ಯನನ್ನು "ಬಾಬುಜೀ' ಎಂದು ಕರೆಯಲಾಗುತ್ತದೆ. ಅಂದರೆ, ಪುರುಷರು "ಜೀ' ಸ್ಥಾನಮಾನ ಗಳಿಸಲು ಎಷ್ಟು ವರ್ಷ ಕಾಯಬೇಕು ಅಲ್ಲವೇ?

- ಸಾಗರ್‌

-

ಉನ್ನಾವೋದ ಅಮಾಯಕ ಮಗಳ ಹೃದಯ ವಿದ್ರಾವಕ ಸಾವಿನಿಂದಾಗಿ, ಮಾನವೀಯತೆ ಯನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುತ್ತಿರುವ ಈ ಘಟನೆಯಿಂದಾಗಿ ನಾನು ಆಕ್ರೋಶಿತನಾಗಿದ್ದೇನೆ, ಆಘಾತಗೊಂಡಿದ್ದೇನೆ. ದೇಶದ ಇನ್ನೊಬ್ಬ ಮಗಳು ನ್ಯಾಯ ಮತ್ತು ಸುರ ಕ್ಷೆಯ ನಿರೀಕ್ಷೆಯಲ್ಲೇ ಪ್ರಾಣ ಬಿಟ್ಟಿದ್ದಾಳೆ.

- ರಾಹುಲ್‌ ಗಾಂಧಿ

ಅತ್ಯಾಚಾರಿಗಳಿಗೆ ಜಾಮೀನು ಕೊಡುವ ಪದ್ಧತಿಯನ್ನೇ ರದ್ದುಗೊಳಿಸಬೇಕು. ಆ ಕ್ರೂರಿಗಳು ಜೈಲಿನಲ್ಲಿಯೇ ಇದ್ದರೆ, ಉನ್ನಾವೋದ ಯುವತಿ ಬದುಕಿರುತ್ತಿದ್ದಳೇನೋ?

- ವೈಜಯಂತ್‌ ಪಾಂಡೆ

ಗಂಡಸರು ಮುಗ್ಧರು, ಅವರನ್ನು ಅತ್ಯಾಚಾರಿಗಳನ್ನಾಗಿ ಮಾಡುವುದು ಹೆಣ್ಣುಮಕ್ಕಳ ಬಟ್ಟೆ, ಅವರ ಜೀವನ ಶೈಲಿ, ನೀಲಿ ಚಿತ್ರಗಳು ಮತ್ತು ಕಠಿಣ ಕಾನೂನು ಇಲ್ಲದಿರುವುದು ಎಂಬ ನಂಬಿಕೆಗಳು ಮೊದಲು ತೊಲಗಬೇಕು.

- ಕೃಷಿಕ ಎ.ವಿ

ಹೈದ್ರಾಬಾದ್‌ ಪೊಲೀಸರಿಗೆ ಹ್ಯಾಟ್ಸಾಫ್. ಎನ್‌ ಕೌಂಟರ್‌ ಮಾಡದೇ ಹೋಗಿದ್ದರೆ, ಈ ದುಷ್ಟರೆಲ್ಲ ಜೈಲಿನಲ್ಲಿ ವರ್ಷಗಟ್ಟಲೇ ಆರಾಮಾಗಿ ಇರುತ್ತಿದ್ದರು

- ಸುಮತಿ ಕುಲಕರ್ಣಿ

ಬದುಕಿನಲ್ಲಿ ಒಂದು ವೇಗವಿರಬೇಕು. ಪ್ರಶಾಂತವಾಗಿ ಕಾಣುವ ನದಿಯೊಂದರ ಆಂತರ್ಯದಲ್ಲಿ ಇರುತ್ತದಲ್ಲ ಅಂಥ ಆ ವೇಗ.

- ಪೌಲೋ ಕೋಲ್ಹೋ

ಹೈದರಾಬಾದ್‌ ಪೊಲೀಸರಿಗೆ ಅಭಿನಂದನೆ ತಿಳಿಸಬಯಸುತ್ತೇನೆ. ಜತೆಗೆ, ಪೊಲೀಸರು ಇಂಥ ದಿಟ್ಟ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಿದ ನಾಯಕತ್ವಕ್ಕೂ ಧನ್ಯವಾದ ಹೇಳುತ್ತೇನೆ.

- ರಾಜ್ಯವರ್ಧನ್‌ ರಾಥೋಡ್‌

ನಿರ್ಮಲಾ ರೀತಿ ಹೇಳುವುದಾದರೆ, ಸಲ್ಮಾನ್‌ ಖಾನ್‌ ಕೆಟ್ಟ ರಸ್ತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಅವರು ಫ‌ೂಟ್‌ಪಾಥ್‌ ಮೇಲೆ ವಾಹನ ಚಲಾಯಿಸುತ್ತಾರೆ.

- ತಬಿಶ್‌ ಖಮರ್‌

ಬಾಬರಿ ಮಸೀದಿ ಧ್ವಂಸ ಪ್ರಕರಣ, ಸಿಖ್‌ ವಿರೋಧಿ ಗಲಭೆಗಳಲ್ಲಿ ನರಸಿಂಹ ರಾವ್‌ ಅವರನ್ನೇ ಹೊಣೆಗಾರನ್ನಾಗಿಸಿತ್ತು. ತನ್ನ ಪಕ್ಷದ ನಾಯಕನಿಗೆ ಅದು ತೋರಿಸುವ ಗೌರವವೇ ಇದು?

- ಸುಮಿತ್‌ ಕುಮಾರ್‌ ಸಕ್ಸೇನಾ

ವಿರಾಟ್‌ ಕೊಹ್ಲಿ, ಆಧುನಿಕ ಕ್ರಿಕೆಟ್‌ನ ಬ್ರಾಡ್‌ ಮನ್‌ ಎನ್ನುವುದರಲ್ಲಿ ಸಂಶಯವೇ ಬೇಡ.

- ಕ್ರಿಕೇಜ್‌ರ್‌

ಜಗತ್ತಿನ ಅತ್ಯಂತ ಪ್ರಭಾವಿ ಕಂಪನಿ ಚೆನ್ನೈನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯನ್ನು ಸಿಇಒ ಹುದ್ದೆಗೆ ಏರಿಸಿದೆ. ಇದು ನಿಜಕ್ಕೂ ಮೆಚ್ಚುವಂಥದ್ದು.

- ನಾರಾಯಣನ್‌

ಹೆಣ್ಣುಮಗುವೊಂದು ಭ್ರೂಣದೊಳಗೂ, ಹೊರಗೂ ಸುರಕ್ಷಿತವಾಗಿರದಂಥ ನೆಲದಲ್ಲಿ ನಾವು ಬದುಕುತ್ತಿದ್ದೇವೆ.

- ಅದ್ವಿಕಾ ಮೈತ್ರಿ ಕದ್ರಿ

ನಾನು ಲಕ್ಷ್ಮೀ ಹೆಬ್ಟಾಳಕರ್‌ಗೆ ಬಿಜೆಪಿ ಸೇರಲು ಯಾವತ್ತೂ ಆಹ್ವಾನಿಸಿಲ್ಲ. ಅವರು ಬಿಜೆಪಿಗೆ ಬಂದಿದ್ದರೆ ನಾನು ಬಿಜೆಪಿಗೆ ಸೇರ್ಪಡೆ ಯಾಗುತ್ತಿರಲಿಲ್ಲ. ರಾಜಕೀಯದಲ್ಲಿ ಸುಳ್ಳು ಹೇಳಲು ಇತಿಮಿತಿ ಬೇಕು. ಚುನಾವಣೆ ಮುಗಿದ ನಂತರ ಸತ್ಯಾಸತ್ಯತೆ ಬಗ್ಗೆ ನಾಡಿನ ಜನತೆಗೆ ತಿಳಿಸುವೆ

- ರಮೇಶ ಜಾರಕಿಹೊಳಿ, ಬಿಜೆಪಿ ಅಭ್ಯರ್ಥಿ

ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಚುನಾವಣೆ ಬಂದಾಗ ಮಾತ್ರ ಕಣ್ಣೀರು ಬರುತ್ತದೆ. ಜನರು ನೆರೆ, ಪ್ರವಾಹದಂಥ ಸಂಕಷ್ಟದಲ್ಲಿದ್ದಾಗ ಕಣ್ಣೀರು ಬರುವುದಿಲ್ಲ.

- ಬಿ.ಶ್ರೀರಾಮುಲು, ಆರೋಗ್ಯ ಸಚಿವ

ಜಾತ್ಯತೀತತೆಯನ್ನು ತಿರಸ್ಕರಿಸುವ ಯಾವುದೇ ಪಕ್ಷವನ್ನೂ ಭಾರತ ತಿರಸ್ಕರಿಸುತ್ತದೆ. ಮಹಾರಾಷ್ಟ್ರದ ಮಿತ್ರಪಕ್ಷಗಳು ಸಂವಿಧಾನದ ಆಶಯವಾದ ಜಾತ್ಯತೀತ ಮೌಲ್ಯಕ್ಕೆ ಬದ್ಧವಾಗಿರುವುದಾಗಿ ಘೋಷಿಸಿರುವುದನ್ನು ಕೇಳಿ ಹೃದಯ ತುಂಬಿಬಂತು.

- ಸುಧೀಂದ್ರ ಕುಲಕರ್ಣಿ

ಅಂದ ಹಾಗೆ, ಒಂದು ಪ್ರಶ್ನೆ ಕೇಳಲಾ? ಮಹಾರಾಷ್ಟ್ರದ ಈ ಎಲ್ಲಾ ರಾಜಕಾರಣಿಗಳಲ್ಲಿ ಒಬ್ಬರೇ ಒಬ್ಬರಿಗಾದರೂ ನಾಚಿಕೆ ಆಗುತ್ತಿಲ್ಲವೇ?

- ರೀಚಾ ಅನಿರುದ್ಧ

ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದ್ದು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ. ಕಾಂಗ್ರೆಸ್‌ ಇನ್ನೂ ಮೂರೂವರೆ ವರ್ಷಗಳ ಕಾಲ ವಿರೋಧ ಪಕ್ಷದಲ್ಲೇ ಇರಬೇಕಾಗುತ್ತದೆ.

- ಬಿ.ಶ್ರೀರಾಮುಲು, ಸಚಿವ

ಮಹಾರಾಷ್ಟ್ರ ಬಿಕ್ಕಟ್ಟಿನ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಹಲವು ರೀತಿಯ ಕತೆಗಳು ಬರುತ್ತಿವೆ. ಬೇರೆಯವರು ಹೇಳಿದ್ದನ್ನು ನಾನು ಕೇಳಿಸಿಕೊಂಡೆ. ಇದು ನಿಜಕ್ಕೂ ರಾಜಕೀಯ ವಿಚಾರವನ್ನು ಮುಚ್ಚಿಡುವ ವ್ಯವಸ್ಥೆಯೇ ಗೊತ್ತಾಗುತ್ತಿಲ್ಲ.

- ಮಹಾದೇವನ್‌ ನಾರಾಯಣನ್‌

ಮನುಷ್ಯ ತನ್ನ ಆಂತರ್ಯದಲ್ಲಿ ಆಳಕ್ಕಿಳಿದಾಗ ಮಾತ್ರ ಪ್ರಬುದ್ಧ ವ್ಯಕ್ತಿಯಾಗಬಲ್ಲ.

- ಟ್ರೂಕೋಟ್ಸ್‌

ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ನನಗೆ ಮೂರು ಪಕ್ಷದವರು ಬೆಂಬಲ ಕೇಳಿದ್ದಾರೆ. ಸಿಎಂ ಬಿಎಸ್‌ವೈ, ಮಾಜಿ ಸಿಎಂ ಸಿದ್ದರಾಮಯ್ಯನವರು ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಅದೆ ರೀತಿ ಮೂರು ಪಕ್ಷದ ಅಭ್ಯರ್ಥಿಗಳು ಬೆಂಬಲ ಕೇಳಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದೇನೆ ಅಷ್ಟೆ. ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ.

- ಜಿ.ಟಿ.ದೇವೇಗೌಡ, ಜೆಡಿಎಸ್‌ ಶಾಸಕ

ಭಾರತದ ಪ್ರಜಾಪ್ರಭುತ್ವವನ್ನು ಐಪಿಎಲ್‌(ಇಂಡಿಯನ್‌ ಪೊಲಿಟಿಕಲ್‌ ಲೀಗ್‌) ಎಂದು ಮರುನಾಮಕರಣ ಮಾಡುವುದು ಒಳಿತು. ಆಗ ರಾಜಕೀಯ ಪಕ್ಷಗಳು ಬಹಿರಂಗವಾಗಿಯೇ ಶಾಸಕರು/ಸಂಸದರನ್ನು ಹರಾಜು ಹಾಕಿ ಖರೀದಿಸಬಹುದು

- ಮೊಹಮ್ಮದ್‌ ಆಸಿಫ್ ಖಾನ್‌

ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮುಖಂಡರಿಗೆ ಮುಖಭಂಗ ಮಾಡುತ್ತೇವೆ. ಕಾಂಗ್ರೆಸ್‌ ಪಕ್ಷದ ಎಲ್ಲ ನಾಯಕರು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಬಿಜೆಪಿಯವರಿಗೆ ದೂರಲು ವಿಚಾರಗಳಿಲ್ಲ. ಈ ಕಾರಣದಿಂದ ಸಿದ್ದರಾಮಯ್ಯ ಒಂಟಿ ಅಂತ ಹೇಳುತ್ತಿದ್ದಾರೆ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಉಪ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸುವ ಮೂಲಕ ಪಕ್ಷ ದ್ರೋಹಿ ಅನರ್ಹ ಶಾಸಕರನ್ನು ಶಾಶ್ವತವಾಗಿ ಮನೆಗೆ ಕಳುಹಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು.

- ಶಿವಶಂಕರರೆಡ್ಡಿ, ಮಾಜಿ ಸಚಿವ

ಚುನಾವಣಾ ಆಯೋಗವೇ ಸ್ವತಃ ರೆಸಾರ್ಟ್‌ಗಳನ್ನು ಸ್ಥಾಪಿಸಲು ಇದು ಸುಸಮಯ. ಏಕೆಂದರೆ, ಇತ್ತೀಚೆಗೆ "ರೆಸಾರ್ಟ್‌' ಎನ್ನುವುದು ರಾಜಕೀಯದ ಭಾಗವೇ ಆಗಿದೆ.

- ನವೀದ್‌ ಟ್ರಂಬೂ ಐಆರ್‌ಎಸ್‌

ಕಾಂಗ್ರೆಸ್‌ನಲ್ಲಿ ನಿರ್ಣಾಯಕ ನಾಯಕತ್ವದ ಅಭಾವ ಎಷ್ಟಿದೆ ಎನ್ನುವುದಕ್ಕೆ ಮಹಾರಾಷ್ಟದಲ್ಲಿ ಅದು ಕಳೆದುಕೊಂಡ ಅವಕಾಶವೇ ಸಾಕ್ಷಿ.

- ಅನುಜೇ ಘೋಸಾಲ್ಕರ್‌

ಕಾಂಗ್ರೆಸ್‌ನಲ್ಲಿ ಮೂಲ-ವಲಸಿಗರ ತಿಕ್ಕಾಟ ನಡೆದಿದೆ. ಮುಳುಗುತ್ತಿರುವ ಹಡಗನ್ನು ದಡ ಸೇರಿಸಬೇಕು ಎನ್ನುವವರು ಕಡಿಮೆ ಇದ್ದಾರೆ. ಎಷ್ಟು ಸಾಧ್ಯವೋ ಅಷ್ಟು ರಂಧ್ರ ಮಾಡಿ ಮುಳುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಸರಿಯಾಗಿ ಆಡಳಿತ ಮಾಡಿದ್ದರೆ ನಾನು ಮಾಜಿ ಆಗುತ್ತಿರಲಿಲ್ಲ. ನನ್ನನ್ನು ಸೋಲಿಸಲು ಕುಮಾರಸ್ವಾಮಿ ಯಾರು?

- ಬಿ.ಸಿ. ಪಾಟೀಲ, ಬಿಜೆಪಿ ಅಭ್ಯರ್ಥಿ

ಭಾರತದಲ್ಲಿ ಜಾತ್ಯತೀತತೆ ಹೇಗಿದೆ ಗೊತ್ತೇ? ಹಿಂದೂ ಧರ್ಮವನ್ನು ವಿರೋಧಿಸುವುದು, ಹಿಂದೂ ಸಂಘಟನೆಗಳನ್ನು ಉಗ್ರ ಗುಂಪುಗಳೆಂದು ಆರೋಪಿಸುವುದು, ಹಿಂದೂ ಸಂತ್ರಸ್ತರ ಪರವಾಗಿ ಅನುಕಂಪ ತೋರದಿರುವುದು, ವಿದೇಶಿ ಆಕ್ರಮಣಕಾರರನ್ನು ಹೊಗಳುವುದು, ಹಿಂದೂ ಹಬ್ಬಗಳನ್ನು ತೆಗಳುವುದು, ಹಿಂದೂ ದೇವರುಗಳನ್ನು ಅಣಕಿಸುವುದು. ಇಷ್ಟು ಮಾಡಿದರೆ ನೀವು ಬುದ್ಧಿಜೀವಿಯಾಗುತ್ತೀರಿ. ನಿಜಕ್ಕೂ ಇವರೆಲ್ಲ ಬುದ್ಧಿಯಿಲ್ಲದ ಮೂರ್ಖ ಹಿಂದೂ ದ್ವೇಷಿಗಳಷ್ಟೇ.

- ರೀನಿ ಲಿನ್‌

ಬಿಜೆಪಿ ಪಕ್ಷದಲ್ಲಿ 40 ಜನ ಸ್ಟಾರ್‌ ಕ್ಯಾಂಪೇನರ್‌ಗಳಿದ್ದಾರೆ. ಬೇರೆ ಪಕ್ಷವೊಂದರಲ್ಲಿ ಒಂದೇ ಕುಟುಂಬದವರೇ ಸ್ಟಾರ್‌ ಕ್ಯಾಂಪೇನರ್‌ ಆಗಿದ್ದಾರೆ.

- ಸಿ.ಟಿ.ರವಿ, ಸಚಿವ

ನಿತ್ಯಾನಂದ ನಿಜವಾದ ದೇವರು. ಎಲ್ಲರೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಬಗ್ಗೆ ಮಾತನಾಡುವ ವೇಳೆ ಆತ ದೇಶ ಬಿಟ್ಟು ಸದ್ದಿಲ್ಲದೇ ಪರಾರಿಯಾದ.

- ಕೃಷಿಕ್‌ ಎ.ವಿ

ಭಯೋತ್ಪಾದನೆ ಆರೋಪದಲ್ಲಿರುವ ಪ್ರಗ್ಯಾ ಠಾಕೂರ್‌ ಅವರನ್ನು ಬಿಜೆಪಿಯು ಯಾವ ಯೋಗ್ಯತೆಯನ್ನು ನೋಡಿ ರಕ್ಷಣಾ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ಮಾಡಿದೆ? ಮಹಾತ್ಮಾ ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎನ್ನುವ ಈ ಸಂಸದೆಗೆ ಕೊಡಲಾಗುತ್ತಿರುವ ಮನ್ನಣೆಯು ಬಿಜೆಪಿಯ ಬಣ್ಣವನ್ನು ಬಯಲು ಮಾಡುತ್ತಿದೆ

- ಕರ್ನಾಟಕ ಕಾಂಗ್ರೆಸ್‌

ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರು ಗೆದ್ದು 24 ಗಂಟೆಯಲ್ಲಿ ಸಚಿವರಾಗುತ್ತಾರೆ. ಸರ್ಕಾರ ಸುಭದ್ರವಾಗಿ ಉಳಿಯಬೇಕಾದರೆ ಆನಂದ್‌ ಸಿಂಗ್‌ರನ್ನು ಗೆಲ್ಲಿಸಬೇಕಾಗಿದೆ. ಉಪಚುನಾವಣೆಯಲ್ಲಿ ಹದಿನೈದು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ.

- ಶ್ರೀರಾಮುಲು, ಆರೋಗ್ಯ ಸಚಿವ

ಅಸ್ಸಾಂನಲ್ಲಿ ಎನ್‌ಆರ್‌ಸಿ ಪ್ರಕ್ರಿಯೆಗೆ 1300 ಕೋಟಿ ರೂ. ವೆಚ್ಚವಾಗಿದೆ ಎಂದರೆ, ದೇಶಾದ್ಯಂತ ಅದನ್ನು ಕೈಗೊಳ್ಳಲು ತಗಲುವ ವೆಚ್ಚವೆಷ್ಟು ಎಂದು ಯಾರಾದರೂ ಸಂಸದರು ಸಂಸತ್‌ನಲ್ಲಿ ಪ್ರಶ್ನಿಸಿದರೆ ಚೆನ್ನಾಗಿತ್ತು.

- ಬುಕರಾತ್‌ ವಕೀಲ್‌

ಅನರ್ಹ ಶಾಸಕರಿಗೆ ಬಿಜೆಪಿಯವರು ಮಂತ್ರಿಗಿರಿ, ವಿಶೇಷ ಅನುದಾನ ನೀಡುವುದಾಗಿ ಬಹಿರಂಗ ಆಮಿಷ ಒಡ್ಡುತ್ತಿರುವ ಬಗ್ಗೆ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗ ತನಿಖೆ ನಡೆಸಬೇಕು.

- ಎಚ್‌.ಡಿ.ರೇವಣ್ಣ, ಮಾಜಿ ಸಚಿವ

ಜೆಎನ್‌ಯುನಲ್ಲಿ ವಿದ್ಯಾರ್ಥಿಗಳು ಯಾವಾಗ ಓದುತ್ತಾರೆ, ಯಾವಾಗ ಸಂಶೋಧನೆ ಕೈಗೊಳ್ಳುತ್ತಾರೆ? ಬರೀ ರಾಜಕೀಯ ಮಾಡುವುದರಲ್ಲೇ ಅವರ ಸಮಯ ಹಾಳಾಗುತ್ತಿಲ್ಲವೇ?

- ರಾಗೇಶ್‌ ಬಯ ಕ್ಕೊಡನ್‌

ಸಣ್ಣವನಿದ್ದಾಗ ನನಗೆ ಶಾಲೆಯ ಭಯವಿರಲಿಲ್ಲ. ಚಳಿಗಾಲದಲ್ಲಿ ಆ ಚುಮು ಚುಮು ಚಳಿಯಲ್ಲಿ ಎದ್ದು, ಶಾಲೆಯ ವ್ಯಾನ್‌ಗೆ ಕಾಯುತ್ತಿದ್ದ ಕ್ಷಣ ಮಾತ್ರ ನೆನಪಾಗುವಾಗ ಈಗಲೂ ಭಯವಾಗುತ್ತದೆ.

- ಗಬ್ಬರ್‌

ಮಹಾರಾಷ್ಟ್ರದಲ್ಲಿ ಸೃಷ್ಟಿಯಾದ ಬಿಕ್ಕಟ್ಟಿಗೆ ಪ್ರಶಾಂತ್‌ ಕಿಶೋರ್‌ ಕಾರಣ. ಠಾಕ್ರೆ ಕುಟುಂಬಕ್ಕೆ ಪ್ರಶಾಂತ್‌ ಕಿಶೋರ್‌ ಸಲಹೆಗಾ ರರು.ಅವರ ಸಲಹೆಗಳು ಶಿವಸೇನೆಯನ್ನು ಮುಳುಗಿಸಲಿವೆ.

- ಉಪಾ ಸನಾ ಸಿಂಗ್‌

90ರ ದಶಕದಲ್ಲಿ ಮಗುವೊಂದು ಮಾಡಿದ ತಪ್ಪು ಇದು. ಕೊಳಲು ಬೇಕು ಎಂದು ಹಠ ಹಿಡಿದು ಅದನ್ನು ಪಡೆಯಿತು. ಮಗುವಿಗೆ ಅದನ್ನು ನುಡಿಸಲು ಆಗಲಿಲ್ಲ, ಅದು ವೇಸ್ಟ್‌ ಎಂದು ಮಾರಿದವನಿಗೂ ಗೊತ್ತಿತ್ತು. ಉಪಯೋಗವಾಗದೇ ಅದು ಮೂಲೆಯಲ್ಲಿ ಬಿದ್ದಿತ್ತು. ಒಂದು ದಿನ ಮಗುವಿನ ಮೇಲೆ ಸಿಟ್ಟಿನ ಭರದಲ್ಲಿ ಅದೇ ಕೊಳಲು ಎತ್ತಿ, ಹೆತ್ತವರು ಮಗುವಿಗೆ ಬಾರಿಸಿದರು!

- ಗಬ್ಬರ್‌

ನನಗೆ ಆಘಾತವಾಗಿದೆ. ತನ್ವೀರ್‌ ಅಣ್ಣನ ಮೇಲೆ ನಡೆದಿರುವ ಈ ದಾಳಿ ಖಂಡನೀಯ. ಅವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸೋಣ. ಅವರೊಬ್ಬ ಸೆಕ್ಯುಲರ್‌ ವ್ಯಕ್ತಿಯಾಗಿದ್ದು, ನಮಗೆಲ್ಲರಿಗೂ ಪ್ರೀತಿ ಪಾತ್ರರು

- ಪ್ರತಾಪ್‌ ಸಿಂಹ

ಶಾಸಕ ತನ್ವೀರ್‌ ಸೇಠ್ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆರಾಜ್ಯದಲ್ಲಿ ಕುಸಿದುಬಿದ್ದಿರುವ ಶಾಂತಿ ಮತ್ತು ಸುವ್ಯವಸ್ಥೆಗೆ ಸಾಕ್ಷಿ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ, ಶಿಕ್ಷಿಸುವ ಜೊತೆಗೆ ಸಾರ್ವಜನಿಕ ಜೀವನದಲ್ಲಿರುವ ಗಣ್ಯರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸುತ್ತೇನೆ.

- ಸಿದ್ದರಾಮಯ್ಯ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತು ಚರ್ಚಿಸಲು ಕಾಂಗ್ರೆಸ್‌ ತೆಗೆದುಕೊಳ್ಳುತಿರುವ ಸಮಯವನ್ನು, ಅದೇ ರಾಜ್ಯದ ಚುನಾವಣಾ ಪ್ರಚಾರಕ್ಕೆ ವಿನಿಯೋಗಿಸಿದ್ದರೆ, 30 ಹೆಚ್ಚುವರಿ ಸೀಟುಗಳು ಕಾಂಗ್ರೆಸ್‌ಗೆ ಸಿಗುತ್ತಿದ್ದವು.

- ರೋಹಿಣಿ ಸಿಂಗ್‌

ಬಾಲ್ಯದಲ್ಲಿ, ಭಾನುವಾರ ಸಂಜೆಯ ಸಿನಿಮಾ ವೀಕ್ಷಣೆ ವೇಳೆ ಸೋಮವಾರದ ಭಯ ಆವರಿಸಿಕೊಳ್ಳುತ್ತಿತ್ತು. ಜತೆಗೆ, ಹೋಂವರ್ಕ್‌ ಮುಗಿದಿಲ್ಲವಲ್ಲ ಎಂಬ ಚಿಂತೆ ಶುರುವಾಗುತ್ತಿತ್ತು.

- ಗಬ್ಬರ್

ತುಂಬಾ ನೋವಿನ ಸಂಗತಿ ಏನೆಂದರೆ, ನೀವು ಯಾರಲ್ಲಿ ನಿಮ್ಮ ನೋವನ್ನು ಹೇಳಿ ಕೊಂಡಿರುತ್ತೀರೋ, ಅವರೇ ನಿಮ್ಮನ್ನು ನೋಯಿಸುವುದು.

- ಯಾ ಡಿಗ್‌

ಮೇಲ್ಮನವಿ ಸಲ್ಲಿಸಿ ಯಾಕೆ ಸಮಯ ವ್ಯರ್ಥ ಮಾಡುತ್ತೀರಿ? 5 ಎಕರೆ ಭೂಮಿ ಸ್ವೀಕರಿಸಿ. ಅಲ್ಲಿ ಮಸೀದಿ ನಿರ್ಮಿಸುವ ಬದಲು ಆಸ್ಪತ್ರೆಯನ್ನೋ, ಶಾಲೆಯನ್ನೋ ನಿರ್ಮಿಸಿ. "ನಮ್ಮ ದೇಶಕ್ಕೆ ಅಗತ್ಯವಿರುವುದು ಏನು' ಎಂಬ ಸಂದೇಶವನ್ನಾದರೂ ಇದು ಇತರರಿಗೆ ನೀಡಲಿ. ಭಾರತಕ್ಕೆ ದೇವಾಲಯಗಳು, ಮಸೀದಿಗಳು ಬೇಕಿಲ್ಲ. ದೇಶದ ಅಭಿವೃದ್ಧಿಗೆ ಶಿಕ್ಷಣದ ಅಗತ್ಯವಿದೆ.

- ಅಬ್ದುಲ್‌ ಸೈಯದ್‌

ಭಾರತ ಎಂದಿಗೂ ತಾನಾಗಿ ತಾನು ಯಾವ ದೇಶದ ಮೇಲೂ ಯುದ್ಧ ಮಾಡಿಲ್ಲ. ಏಕೆಂದರೆ ನಾವು ಞದೇಶದೊಳಗೆ ಯುದ್ಧ ಮಾಡುವುದರಲ್ಲೇ ಬ್ಯುಸಿ ಇದ್ದೇವೆ.

- ಆದಿತ್ಯ ಶ್ರೀಧರ್‌

ಎಂಟಿಬಿ ನಾಗರಾಜ್‌, ಜಯ್‌ ಶಾ ಅವರ ಆರ್ಥಿಕತೆ ವೃದ್ಧಿಸುತ್ತಲೇ ಇದೆ. ಇದು ದೇಶದಲ್ಲಿ ಎಲ್ಲವೂ ಸರಿಯಿದೆ. ಆರ್ಥಿಕ ಕುಸಿತ ಆಗಿಲ್ಲ ಅಂತ ತೋರುತ್ತದೆ.

- ಕೃಷಿಕ ಎ.ವಿ

ಒಂದು ವಿಮಾನ 3 ಗಂಟೆ ವಿಳಂಬವಾದರೆ, ಆ ವೈಮಾನಿಕ ಕಂಪನಿಯು ನಿಮಗೆ ಪ್ರತಿ ಅರ್ಧ ಗಂಟೆಗಳಿಗೊಮ್ಮೆ 6 ಕಂತುಗಳಲ್ಲಿ ನಿಮಗೆ ವಿಮಾನ ವಿಳಂಬದ ವಿಷಯವನ್ನು ತಿಳಿಸುತ್ತದೆ.

- ಅರುಣ್‌ ಬೋಥಾ

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಯಾವರೀತಿ ಪೈಪೋಟಿ ಏರ್ಪಟ್ಟಿದೆಯೆಂದರೆ, ದ್ವಿಶತಕ-ತ್ರಿಶ ತಕ ಬಾರಿಸಿದರೂ ಸ್ಥಾನ ಖಾತ್ರಿಯಾಗುವುದಿಲ್ಲ!

- ಟ್ವೀಟ್ಸಂಲೈಫ್

ಮನಸ್ಸಿಗೆ ಕೆಲಸಕ್ಕಿಂತ ಆಲಸ್ಯದೆಡೆಗೇ ಹೆಚ್ಚು ಪ್ರೀತಿ. ಆದರೆ ಆಲಸ್ಯದಿಂದ ಬದುಕು ಬದಲಾಗದು ಎನ್ನು ವುದು ನೆನಪಿರಲಿ.

- ಟ್ರೂಕೋಟ್‌

ಗಂಭೀರ್‌ರನ್ನು ಟೀಕಿಸುವುದನ್ನು ದಯವಿಟ್ಟು ನಲ್ಲಿಸಿ. ದೆಹಲಿಯ ಓರ್ವ ಜವಾಬ್ದಾರಿಯುತ ಸಂಸದನಾಗಿ ವಾಯು ಮಾಲಿನ್ಯ ತಡೆಗಟ್ಟಲು ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ, ಕೇಜ್ರಿವಾಲ್‌ ರನ್ನು ಟೀಕಿಸುವುದರ ಮೂಲಕ.

- ಪನಸ್ಟರ್‌

ರಫೇಲ್‌ ವಿಚಾರದಲ್ಲಿ ದೇಶದ ಹಾದಿ ತಪ್ಪಿಸಿದ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ನಾಯಕರು ಕ್ಷಮೆಯಾಚಿಸಬೇಕು.

- ದುಷ್ಯಂತ್‌ ಗುಣೌವ್‌

ದೇಹವಷ್ಟೇ ಅಲ್ಲ, ನಿತ್ಯ ಮನಸ್ಸನ್ನೂ ಸ್ವತ್ಛವಾಗಿಟ್ಟುಕೊಂಡವನು ಮಾತ್ರ ಖುಷಿಯಾಗಿ ಇರಬಲ್ಲ.

- ಪೌಲೋ ಕೋಲ್ಹೋ

ವಿಮಾನದ ಸದ್ದು ನಿಮ್ಮ ಕಿವಿಗೆ ಬೀಳುತ್ತಲೇ ನೀವು ತಲೆ ಎತ್ತಿ ಆಕಾಶದ ತುಂಬಾ ಅದಕ್ಕಾಗಿ ಹುಡುಕಾಡುತ್ತೀರಿ ಎಂದರೆ, ನಿಮ್ಮೊಳಗಿನ ಮಗು ಇನ್ನೂ ಜೀವಂತವಾಗಿದೆ ಎಂದು ಅರ್ಥ.

- ಪನ್‌ಸ್ಟರ್‌

ತೀರ್ಪು ಬಂದಾಯಿತು. ಬಿಜೆಪಿ ಅನರ್ಹಗೊಂಡ ಶಾಸಕರಿಗೆ ಸ್ಪರ್ಧೆ ಮಾಡಲು ಟಿಕೆಟ್‌ ಕೊಡಲಿದೆಯೋ ಇಲ್ಲವೋ ಕುತೂಹಲ. ಈಗ ನಿಜವಾದ ಸಮಸ್ಯೆ ಮತ್ತು ದ್ವಂದ್ವತೆ ಶುರುವಾಗಲಿದೆ

- ಶಾರು

ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಸತ್ವ ಇದೆಯಾ? ಆ ಕಾಯ್ದೆಯ ಅಗತ್ಯ ಇದೆಯಾ? ಎಂಬ ಪ್ರಶ್ನೆಯೂ ಸುಪ್ರೀಂಕೋರ್ಟ್‌ ತೀರ್ಪಿನಿಂದ ಉದ್ಭವವಾಗಿದೆ. ಕಾಯ್ದೆ ರದ್ದು ಮಾಡುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

- ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ತೀರ್ಪು ಸ್ವಾಗತಾರ್ಹ. ಉಪಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಗುವುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಪಕ್ಷದ ಪರಾಜಿತ ಅಭ್ಯರ್ಥಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು.

- ನಳಿನ್‌ ಕುಮಾರ್‌ ಕಟೀಲ್‌, ರಾಜ್ಯ ಬಿಜೆಪಿ ಅಧ್ಯಕ್ಷ

ದೇಶದ ಚುನಾವಣೆ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತಂದ ಟಿ. ಎನ್‌.ಶೇಷನ್‌ ಇನ್ನು ನೆನಪು ಮಾತ್ರ. ಅವರಂಧ ಖಡಕ್‌ ಮುಖ್ಯ ಚುನಾವಣಾ ಆಯುಕ್ತರು ಇನ್ನೂ ಬರಬೇಕು

- ಧನಂಜಯ

ಮಹಾರಾಷ್ಟ್ರದಲ್ಲಿ ಏನಾಗುತ್ತಿದೆ ಎಂದೇ ಗೊತ್ತಾಗುತ್ತಿಲ್ಲ. ಆದಿತ್ಯ ಠಾಕ್ರೆ ಬಗ್ಗೆ ನನಗೆ ಕನಿಕರವಿದೆ. ಅವರು ರಾವುತ್‌, ಶರದ್‌ ಪವಾರ್‌, ಸೋನಿಯಾ ಗಾಂಧಿಯವರ ದೂರ ನೋಟ ಗೊತ್ತೇ ಆಗುತ್ತಿಲ್ಲ. ಏಕೆಂದರೆ ಅವರು ಇನ್ನೂ ಪಳಗಬೇಕಾಗಿದೆ.

- ಆರ್‌.ವೈದ್ಯ

ಈರುಳ್ಳಿ ಬೆಲೆ ಕೆಜಿಗೆ 100ರೂ. ದಾಟಿದೆ. ಆದರೆ, ರೈತರಿಗೆ ಸಿಗುತ್ತಿರುವುದು ಕೆ.ಜಿಗೆ. 8 ರೂ. ಮಾತ್ರ. ಹಾಗಾದರೆ ಉಳಿದ 92ರೂ. ಎಲ್ಲಿಗೆ ಹೋಗುತ್ತಿದೆ? ಸರ್ಕಾರವು ಈರುಳ್ಳಿ ಆಮದು ಮಾಡಿಕೊಳ್ಳುವ ಬದಲು ಈ ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳುತಿಲ್ಲವೇಕೆ?

- ಶಮಾ

ಪ್ರತಿ ದಿನ ನನ್ನ ತರಬೇತುದಾರ ಹೊಸ ರೀತಿಯ ಶೈಲಿಗಳಲ್ಲಿ ವಕೌìಟ್‌ ಮಾಡಲು ಹೇಳುತ್ತಾರೆ. ಅವರು ಯಾಕೆ ಈ ರೀತಿ ಮಾಡುತ್ತಾರೋ ಗೊತ್ತಾಗುತ್ತಿಲ್ಲ

- ರೋಹಿಣಿ ಸಿಂಗ್‌

ಕರ್ತಾರ್ಪುರ ಕಾರಿಡಾರ್‌ ಉದ್ಘಾಟನಾ ವರದಿಗೆ ತೆರಳಿದ್ದ ಭಾರತದ ಪತ್ರಕರ್ತರ ಜತೆಗೆ ಪಾಕ್‌ ಸಚಿವ ಖುರೇಷಿ ಭೋಜನ ಕೂಟದ ವೇಳೆ ಬಂದರು. ಇಷ್ಟು ಮಾತ್ರವಲ್ಲ, ಕಾಶ್ಮೀರದ ಬಗ್ಗೆ ಏಕಪಕ್ಷೀಯವಾಗಿ ಮಾತನಾಡಿ ನಗೆಪಾಟಲಿಗೀಡಾದರು.

- ತ್ರಿವೇದಿಜಿ

ಮಹಾರಾಷ್ಟ್ರದಲ್ಲಿ ಸರ್ಕಾರ ಯಾರೇ ರಚಿಸಲಿ ಅದು ಪ್ರಧಾನ ವಿಚಾರವಲ್ಲ. ಪಶ್ಚಿಮ ಘಟ್ಟದ ಶೇ.11ರಷ್ಟು ಪ್ರದೇಶವನ್ನು ಸೂಕ್ಷ್ಮ ವ್ಯಾಪ್ತಿಯಿಂದ ಹೊರಗಿಟ್ಟು ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡಲಾಗುತ್ತದೆ. ಇದುವೇ ಚಿಂತೆಗೆ ಕಾರಣ.

- ಸ್ವಾಗತ ಯಾದವರ್‌

ಅಯೋಧ್ಯೆ ತೀರ್ಪನ್ನು ಸಮಾನತೆಯಿಂದ ಸ್ವಾಗತಿಸೋಣ. ಹಿಂದೂ- ಮುಸ್ಲಿಂ ಸಹಿತ ಸರ್ವರೂ ಭಾರತಮಾತೆಯ ಮಡಿಲಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳೋಣ. ಭಾರತ್‌ ಮಾತಾಕಿ ಜೈ

- ಕೋಟ ಶ್ರೀನಿವಾಸ ಪೂಜಾರಿ, ಸಚಿವ

ಈ ತೀರ್ಪು ನೋಡಿ ಆಶ್ಚರ್ಯವಾಗಿದೆ. ಇದು ತರ್ಕಕ್ಕೆ ಸಿಗುತ್ತಿಲ್ಲ. ಮಸೀದಿ ಪರ ಸಾಕಷ್ಟುಘಿ ದಾಖಲೆ ನೀಡಿದ್ದರೂ ಅವಾವುದನ್ನೂ ಕೋರ್ಟ್‌ ಏಕೆ ಪರಿಗಣಿಸಲಿಲ್ಲ ಎಂದು ತಿಳಿಯುತ್ತಿಲ್ಲ.

- ಅಬ್ದುಲ್‌ ಖಾಸಿಂ ನೋಮಾನಿ, ದಾರೂಲ್‌ ದೇವ್‌ಬಂದ್‌ ಉಪಾಧ್ಯಕ್ಷ

ತೀರ್ಪು ಯಾರ ಪರವಾಗಿಯಾದರೂ ಬರಲಿ, ಇದರಿಂದ ತಮ್ಮ ನಡುವೆ ವೈವನಸ್ಯ ಹುಟ್ಟದಂತೆ ನೋಡಿ ಕೊಳ್ಳುವ ಜವಾಬ್ದಾರಿ ಹಿಂದೂ-ಮುಸ್ಲಿ ಮರ ಮೇಲಿದೆ.

- ಟಾಕಿಟುಕ್‌

ಮನಸ್ಸೆನ್ನುವುದು ಸಾಗರವಿದ್ದಂತೆ ಮುತ್ತು ಸಿಗಬೇಕೆಂದರೆ ಆಳಕ್ಕಿಳಿಯಲೇಬೇಕು.

- ರಾಬಿನ್‌ ಶರ್ಮಾ

ಜೀವನದಲ್ಲಿ ನೀವು ಪಡೆಯುವ ಅತ್ಯುತ್ತಮ ಸನ್ನಿವೇಶವೆಂದರೆ ಮೂಲೆಗುಂಪಾಗುವುದು. ಯಾವಾಗ ನೀವು ಮೂಲೆಗುಂಪಾಗುತ್ತೀರೋ, ಆಗ ನೀವು ನಿಮ್ಮ ನೈಜ ಸಾಮರ್ಥ್ಯವನ್ನು ಅಗೆಯಲು ಶುರು ಮಾಡುತ್ತೀರಿ.

- ಶಿರಿಶ್‌ ಕುಂದರ್‌

ಬೆಂಗಳೂರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಬರಿ ರಾಜಕಾರಣಿಗಳು ಮಾತ್ರ ಸ್ಪರ್ಧೆಗೆ ಇಳಿಯುತ್ತಿಲ್ಲ. ಕೆಲ ಇಲೈಟ್‌ ನಾಗರಿಕರು, ಕಾರ್ಪೊರೇಟ್‌ ಕಂಪೆನಿಗಳ ಮುಖ್ಯಸ್ಥರು ವಿವಿಧ ಸಂಘ ಸಂಸ್ಥೆಗಳ ಹೆಸರಿನಲ್ಲಿ ತಮ್ಮದೆ ಇಚ್ಛೆಯ ಹಾಗೆ ಈ ನಗರ ಇರಬೇಕು, ಬೆಳೆಯಬೇಕು ಎಂಬ ಧೋರಣೆ ತೋರುತ್ತಿದ್ದಾರೆ. ಸಾಮಾನ್ಯ ಮನುಷ್ಯನ ಪಾಡು ಮಾತ್ರ ಹೇಳತೀರದಾಗಿದೆ.

- ರೋಹಿತ್‌ ಸಿಂಹ

ಯಶಸ್ಸಿಗೆ ಶಿಸ್ತೇ ಭದ್ರ ಅಡಿಪಾಯ. ಶಿಸ್ತಿಲ್ಲದೇ ಸಿಕ್ಕ ಯಶಸ್ಸಿಗೆ ಆಯಸ್ಸು ಅತ್ಯಲ್ಪ.

- ಇನ್‌ ಸ್ಪಿರೇಶನಿಸ್ಟ್‌

ಶಿವಸೇನೆ ಎಷ್ಟು ದಿನ ಈ ಡ್ರಾಮಾ ಮುಂದುವರಿಸುತ್ತದೆ? 2 ವರ್ಷದ ಮಗು, ಮನೆ ಬಿಟ್ಟು ಹೋಗುವುದಾಗಿ ಹೆತ್ತವರನ್ನು ಬೆದರಿಸಿ, ಮನೆ ಬಾಗಿಲಿನ ಹೊರಗೇ ಕುಳಿತು, ಅಮ್ಮನೇ ಬಂದು, ಚುಂಬಿಸಿ ಒಳಗೆ ಕರೆದುಕೊಂಡು ಹೋಗಲಿ ಎಂದು ಕಾಯುತ್ತದಲ್ಲಾ, ಹಾಗಿದೆ ಶಿವಸೇನೆಯ ಪರಿಸ್ಥಿತಿ.

- ಸ್ಮಿತಾ ಬರೂಹ್‌

ಬ್ಯುಸಿ ಇರುವುದಕ್ಕೂ, ಫ‌ಲಪ್ರದವಾಗಿ ಇರುವುದಕ್ಕೂ ಬಹಳ ಅಂತರವಿದೆ ಎನ್ನುವುದನ್ನು ಮರೆಯದಿರಿ.

- ರಾಬಿನ್‌ ಶರ್ಮಾ

ಶಿವಸೇನೆ ವ್ಯರ್ಥ ಆಟವಾಡುತ್ತಿದೆ. ಏನೇ ಮಾಡಿದರೂ ಬಿಜೆಪಿ ತನಗೆ ಮುಖ್ಯಮಂತ್ರಿ ಪದವಿ ಕೊಡುವುದಿಲ್ಲ ಎನ್ನುವುದು ಅದಕ್ಕೆ ಗೊತ್ತಿದೆ.

- ಮನೋಜ್‌ ಬಿಸ್ವಾಸ್‌

ಪೊಲೀಸರು ಸುರಕ್ಷತೆಯನ್ನು ಕೋರುತ್ತಿರುವ, ವಕೀಲರು ನ್ಯಾಯ ಕೇಳುತ್ತಿರುವ ಹಾಗೂ ಜನತೆ ಆಮ್ಲಜನಕಕ್ಕೆ ಮೊರೆಯಿಡುತ್ತಿರುವ ಏಕೈಕ ರಾಜ್ಯವೆಂದರೆ, ಅದು ದೆಹಲಿ.

- ಅವಧೇಶ್‌ ತ್ಯಾಗಿ

-

ಮೊದಲು ಆಡಿಯೋದಲ್ಲಿನ ಹೇಳಿಕೆ ತಮ್ಮದೇ ಎಂದು ಒಪ್ಪಿಕೊಂಡಿದ್ದ ಬಿಎಸ್‌ವೈ ಅವರು, ಅಮಿತ್‌ ಶಾ ತರಾಟೆಗೆ ತಗೊಂಡ ಮೇಲೆ ವರಸೆ ಬದಲಿಸಿದ್ದಾರೆ. ಇದರಿಂದಾಗಿಯೇ ಅಮಿತ್‌ ಶಾ ನಿರ್ದೇಶನದಂತೆಯೇ ಸರ್ಕಾರವನ್ನು ಬೀಳಿಸಲಾಗಿದೆ ಎಂಬ ಯಡಿಯೂರಪ್ಪನವರ ಹೇಳಿಕೆ ಸತ್ಯ ಎಂದು ಸಾಬೀತಾಗಿದೆ.

- ಸಿದ್ದರಾಮಯ್ಯ

ಯಶಸ್ವಿ ಜೀವನದ ರಹಸ್ಯವು 7 ಬಾರಿ ಕೆಳಕ್ಕೆ ಬಿದ್ದರೂ 8ನೇ ಬಾರಿ ಎದ್ದೇಳುವುದರಲ್ಲಿ ಅಡಗಿದೆ!

- ಜೋರ್ಡನ್‌ ಬೆಲೊರ್ಟ್‌

ಪಾಂಡಿತ್ಯವನ್ನು ಕಲಿತವರು ಮಾತ್ರ ಹೋರಾಟ ಮಾಡಬೇಕಾ? ಸೈನಿಕರೆಲ್ಲ ದೇಶದ ಇತಿಹಾಸ ಕಲಿತು ಸೈನ್ಯಕ್ಕೆ ಸೇರುತ್ತಾರಾ? ಅವರವರ ಅಭಿಮಾನವೇ ಅರ್ಹತೆ. ಅದು ನಾಡಾಗಿದ್ದರೂ ಸರಿ, ಧರ್ಮವಾಗಿದ್ದರೂ ಸರಿ. ನಮ್ಮದೆನಿಸುವುದನ್ನೆಲ್ಲ ಪ್ರೀತಿಸುವ, ಕಾಯ್ದುಕೊಳ್ಳುವ ಮನಸ್ಸು ಇದ್ದವರೆಲ್ಲರೂ ರಕ್ಷಕರೆ

- ನಿಮ್ಮೊಳಗೊಬ್ಬ ನಾರಾಯಣ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.