Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

Team Udayavani, Jun 21, 2024, 3:24 PM IST

Restaurant Sealed: ಸಾಂಬಾರ್ ನಲ್ಲಿ ಸತ್ತ ಇಲಿ, ಗ್ರಾಹಕ ಶಾಕ್..! ರೆಸ್ಟೋರೆಂಟ್ ಗೆ ಸೀಲ್

ಅಹ್ಮದಾಬಾದ್: ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ಬಡಿಸಿದ ಸಾಂಬಾರ್ ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದ್ದು ಇದೀಗ ಮುನ್ಸಿಪಾಲಿಟಿ ಅಧಿಕಾರಿಗಳು ರೆಸ್ಟೋರೆಂಟ್ ಗೆ ಬೀಗ ಜಡಿದಿದ್ದಾರೆ.

ಘಟನೆ ಜೂನ್ 20 ರಂದು ಅಹ್ಮದಾಬಾದ್‌ನಲ್ಲಿ ನಡೆದಿದ್ದು ಅವಿನಾಶ್ ಎಂಬ ವ್ಯಕ್ತಿ ತನ್ನ ಪತ್ನಿಯ ಜೊತೆ ದೇವಿ ದೋಸೆ ಪ್ಯಾಲೇಸ್‌ ಗೆ ದೋಸೆ ತಿನ್ನಲು ತೆರಳಿದ್ದಾರೆ ಈ ವೇಳೆ ರೆಸ್ಟೋರೆಂಟ್ ಸಿಬಂದಿ ದೋಸೆ ಬರುವ ಮೊದಲೇ ಚಟ್ನಿ ಹಾಗೂ ಸಾಂಬಾರ್ ನೀಡಿದ್ದಾರೆ, ಅವಿನಾಶ್ ಸಾಂಬಾರ್ ತಿನ್ನುತ್ತಿದ್ದಾಗ ಅದರಲ್ಲಿ “ಸತ್ತ ಇಲಿ” ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಕೂಡಲೇ ಅವಿನಾಶ್ ರೆಸ್ಟೋರೆಂಟ್ ಸಿಬ್ಬಂದಿಯನ್ನು ಕರೆಸಿ ಸಾಂಬಾರ್ ನಲ್ಲಿ ಸತ್ತ ಇಲಿ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ ಜೊತೆಗೆ ಅಹ್ಮದಾಬಾದ್ ನಲ್ಲಿರುವ ಪುರಸಭೆಯ ಅಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ. ದೂರು ಆಧರಿಸಿ ರೆಸ್ಟೊರೆಂಟ್ ಅನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಅಡುಗೆಕೋಣೆ ತೆರೆದ ಪ್ರದೇಶದಲ್ಲಿರುವುದರಿಂದ ಅಡುಗೆಕೋಣೆಗಳಿಗೆ ಜೀವಿಗಳು ಅಥವಾ ಕೀಟಗಳು ಸೇರಿಕೊಳ್ಳುವ ಸಾಧ್ಯತೆ ಇದೆ ಹೋಟೆಲ್ ಮಾಲೀಕರು ನೈರ್ಮಲ್ಯಕ್ಕೆ ಹೆಚ್ಚಿನ ಗಮನಕೊಡದಿರುವ ನಿಟ್ಟಿನಲ್ಲಿ ರೆಸ್ಟೋರೆಂಟ್ ಅನ್ನು ಸೀಲ್ ಮಾಡಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿದ ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಆಹಾರ ಸುರಕ್ಷತಾ ಅಧಿಕಾರಿ ಭವಿನ್ ಜೋಶಿ ರೆಸ್ಟೋರೆಂಟ್ ನಲ್ಲಿ ಸತ್ತ ಇಲಿ ಪತ್ತೆಯಾಗಿರುವುದು ನಿಜ ಹಾಗಾಗಿ ರೆಸ್ಟೋರೆಂಟ್ ಅನ್ನು ಸೀಲ್ ಮಾಡಿದ್ದೇವೆ ಮುಂದಿನ ಸೂಚನೆ ಬರುವವರೆಗೂ ಹೋಟೆಲ್ ಮುಚ್ಚಿರುತ್ತದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಚಾಕೊಲೇಟ್ ಸಿರಪ್ ನಲ್ಲಿ ಸತ್ತ ಇಲಿ ಪತ್ತೆಯಾಗಿರುವುದು, ಚಿಪ್ಸ್ ಪ್ಯಾಕೆಟ್ ನಲ್ಲಿ ಸತ್ತ ಕಪ್ಪೆ, ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆಯಾಗಿರುವುದು ಇನ್ನೂ ಹಲವು ಹಾಗಾಗಿ ಗ್ರಾಹಕರು ಹೊರಗಿನ ತಿಂಡಿ ತಿನ್ನುವಾಗ ಅಗತ್ಯವಾಗಿ ಎಚ್ಚರ ವಹಿಸಬೇಕು.

ಇದನ್ನೂ ಓದಿ: Singapore ಬಿಟ್ಟು ಬೆಂಗಳೂರಲ್ಲಿ ನೆಲೆಸಿದ ಉದ್ಯಮಿ; ವೈರಲ್ ಆಯ್ತು ಆತ ನೀಡಿದ ಕಾರಣ

ಟಾಪ್ ನ್ಯೂಸ್

1-madi-a

Hill Collapse ಭೀತಿ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

BYR-joga-Visit

Jog Falls: ಜೋಗ ಜಲಪಾತಕ್ಕೆ ವಿಶ್ವದರ್ಜೆಯ ಸ್ಪರ್ಶ: ಸಂಸದ ಬಿ.ವೈ.ರಾಘವೇಂದ್ರ

Byndoor  ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

Byndoor ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

ICC suffered a loss of Rs 167 crore from T20 World Cup 2024

T20 World Cup 2024 ಆಯೋಜನೆಯಿಂದ 167 ಕೋಟಿ ರೂ ನಷ್ಟ ಅನುಭವಿಸಿದ ಐಸಿಸಿ; ಆಗಿದ್ದೇನು?

Untitled-123

Kannappa: ಇದೇ ವರ್ಷ ತೆರೆಗೆ ಬರಲಿದೆ ವಿಷ್ಣು ಮಂಚು ಪ್ಯಾನ್‌ ಇಂಡಿಯಾ ʼಕಣ್ಣಪ್ಪʼ

1-sadsa-d

Independence Day; ಈ ಬಾರಿ ಕೆಂಪು ಕೋಟೆಯಲ್ಲಿ ಭದ್ರತೆ ವೈಶಿಷ್ಟ್ಯವೇನು?

Heavy Rain; Holiday announcement till PUC in Udupi district on July 19

Heavy Rain; ಜುಲೈ 19ರಂದು ಉಡುಪಿ ಜಿಲ್ಲೆಯಲ್ಲಿ ಪಿಯುಸಿವರೆಗೆ ರಜೆ ಘೋಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsa-d

Independence Day; ಈ ಬಾರಿ ಕೆಂಪು ಕೋಟೆಯಲ್ಲಿ ಭದ್ರತೆ ವೈಶಿಷ್ಟ್ಯವೇನು?

1-pal

Bengal; ಮೆರವಣಿಗೆಯಲ್ಲಿ ಪ್ಯಾಲೇಸ್ತೀನ್ ಧ್ವಜ:ವಿಡಿಯೋ ಹಂಚಿಕೊಂಡ ಬಿಜೆಪಿಯ ಸುವೆಂದು ಅಧಿಕಾರಿ

akhilesh

Monsoon Offer; ನೂರು ಶಾಸಕರನ್ನು ತನ್ನಿ ಸರಕಾರ ರಚಿಸಿ: ಅಖಿಲೇಶ್ ಆಫರ್

Army Prevents Infiltration Attempt In Kupwara

Line of Control; ಒಳನುಸುಳುವಿಕೆ ತಡೆದ ಸೇನೆ; ಇಬ್ಬರು ಉಗ್ರರ ಹತ್ಯೆ

Uttar Pradesh: ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ ಪ್ರೆಸ್‌ ರೈಲು; ನಾಲ್ವರು ಮೃತ್ಯು

Uttar Pradesh: ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ ಪ್ರೆಸ್‌ ರೈಲು; ನಾಲ್ವರು ಮೃತ್ಯು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-madi-a

Hill Collapse ಭೀತಿ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

Manipal ಬಹುಮುಖಿ ವೈದ್ಯ ವಿದ್ವಾಂಸ ಡಾ| ಎಂ.ಎಸ್‌.ವಲಿಯತ್ತಾನ್‌ ಇನ್ನಿಲ್ಲ

Updated ಬಹುಮುಖಿ ವೈದ್ಯ ವಿದ್ವಾಂಸ ಡಾ| ಎಂ.ಎಸ್‌.ವಲಿಯತ್ತಾನ್‌ ಇನ್ನಿಲ್ಲ

BYR-joga-Visit

Jog Falls: ಜೋಗ ಜಲಪಾತಕ್ಕೆ ವಿಶ್ವದರ್ಜೆಯ ಸ್ಪರ್ಶ: ಸಂಸದ ಬಿ.ವೈ.ರಾಘವೇಂದ್ರ

Byndoor  ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

Byndoor ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

ICC suffered a loss of Rs 167 crore from T20 World Cup 2024

T20 World Cup 2024 ಆಯೋಜನೆಯಿಂದ 167 ಕೋಟಿ ರೂ ನಷ್ಟ ಅನುಭವಿಸಿದ ಐಸಿಸಿ; ಆಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.