China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು
Team Udayavani, Sep 20, 2024, 3:29 PM IST
ಬೀಜಿಂಗ್: ಚೀನಾದ ಶಾನ್‌ವೇ ಮೃಗಾಲಯಕ್ಕೆ ಕಳೆದ ಹಲವು ವರ್ಷಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ, ಇದೀಗ ಈ ಮೃಗಾಲಯಕ್ಕೆ ಎರಡು ಹೊಸ ಅತಿಥಿಗಳು ಬಂದಿದ್ದಾರೆ ಎಂದು ಮೃಗಾಲಯದ ಅಧಿಕಾರಿಗಳು ಪ್ರಚಾರ ಕೂಡ ಮಾಡಿದ್ದಾರೆ. ಹಾಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿ ಹೊಸ ಅತಿಥಿಯನ್ನು ವೀಕ್ಷಣೆ ಮಾಡಿದ್ದಾರೆ ಆದರೆ ಇದನ್ನು ವೀಕ್ಷಣೆ ಮಾಡಿದ ಪ್ರವಾಸಿಗರಿಗೆ ಇದರ ಹಾವಭಾವ ನೋಡಿ ಅದೇನೋ ಅನುಮಾನ ಕಾಡತೊಡಗಿದೆ.
ಹೌದು ಚೀನಾದ ಶಾನ್‌ವೇ ಮೃಗಾಲಯಕ್ಕೆ ಎರಡು ಪಾಂಡಾಗಳನ್ನು ತರಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಭಾರಿ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವಂತೆ ಮಾಡಿದ್ದಾರೆ ಅದರಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಬಂದಿದ್ದಾರೆ ತಮ್ಮ ಮೊಬೈಲ್ ನಲ್ಲಿ ಪಾಂಡಾದ ಫೋಟೋ ಕ್ಲಿಕ್ಕಿಸಿದ್ದಾರೆ, ಆದರೆ ಅಲ್ಲೊಬ್ಬ ಪ್ರವಾಸಿಗನಿಗೆ ಅಲ್ಲಿರುವ ಪಾಂಡಾದ ಹಾವಭಾವದಲ್ಲಿ ಏನೋ ವ್ಯತ್ಯಾಸ ಕಾಣತೊಡಗಿದೆ. ಇದರಿಂದ ಅನುಮಾನಗೊಂಡ ಆತ ಮೃಗಾಲಯದ ಅಧಿಕಾರಿಗಳ ಬಳಿ ತೆರಳಿ ಪಾಂಡಾದ ಬಗ್ಗೆ ವಿಚಾರಿಸಿದ್ದಾನೆ. ಇದಕ್ಕೆ ಮೃಗಾಲಯದ ಅಧಿಕಾರಿಗಳು ಸಮರ್ಪಕವಾದ ಉತ್ತರವನ್ನು ಕೊಟ್ಟು ಕಳುಹಿಸಿದ್ದಾರೆ.
ಇದಾದ ಬಳಿಕ ಇದೇ ರೀತಿಯ ಅನುಮಾನ ಇನ್ನೋರ್ವ ಪ್ರವಾಸಿಗನಿಗೆ ಕಾಡತೊಡಗಿದೆ ಅಲ್ಲದೆ ಪಾಂಡಾದ ವರ್ತನೆ ನೋಡಿದರೆ ನಾಯಿಗಳು ಮಾಡುವ ವರ್ತನೆಯಂತೆ (ನಾಲಗೆ ಹೊರಗೆ ಹಾಕಿ ಉಸಿರಾಡುವುದು) ಕಂಡಿದೆ, ಇದರಿಂದ ಅನುಮಾನಗೊಂಡ ಪ್ರವಾಸಿಗ ಇತರರಲ್ಲೂ ವಿಷಯ ಪ್ರಸ್ತಾಪಿಸಿದ್ದಾನೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಪಾಂಡಾಗಳು ನಾಯಿಯಂತೆ ಬೌ.. ಬೌ.. ಎಂದು ಸದ್ದು ಮಾಡಿದೆ. ಇದಾದ ಬಳಿಕ ಇದು ಪಾಂಡಾ ಅಲ್ಲ ಬದಲಿಗೆ ನಾಯಿಗೆ ಬಣ್ಣ ಬಳಿದು ಪಾಂಡಾ ಎಂದು ಮೃಗಾಲಯದ ಅಧಿಕಾರಿಗಳು ಮೋಸ ಮಾಡಿರುವ ಸತ್ಯಾಂಶ ಹೊರಬಿದ್ದಿದೆ.
Glitch in the Matrix: China zoo forced to admit the truth after one of their “pandas” started panting and barking. The Shanwei zoo admits they painted dogs white and black to make them look like pandas. pic.twitter.com/5SWDlpOSqB
— SynCronus (@syncronus) September 19, 2024
ಅಸಲಿಗೆ ಇದು ಉತ್ತರ ಚೀನಾದಿಂದ ಬಂದ ಸ್ಪಿಟ್ಜ್ ತಳಿಯ ನಾಯಿಗಳು ಎನ್ನಲಾಗಿದ್ದು ಇದನ್ನು ತಂದ ಮೃಗಾಲಯದ ಅಧಿಕಾರಿಗಳು ಇದಕ್ಕೆ ಪಾಂಡಾ ರೀತಿ ಬಣ್ಣ ಬಳಿದು ಮೃಗಾಲಯದಲ್ಲಿ ಇರಿಸಿ ಪ್ರವಾಸಿಗರಿಗೆ ಪಾಂಡಾ ಎಂದು ನಂಬಿಸಿ ಮೋಸ ಮಾಡಿದ್ದಾರೆ.
ಮೃಗಾಲಯದ ಅಧಿಕಾರಿಗಳ ಮೋಸ ಬಯಲಿಗೆ ಬರುತ್ತಿದ್ದಂತೆ ಪ್ರವಾಸಿಗರು ತಮ್ಮ ಹಣ ವಾಪಾಸ್ ನೀಡುವಂತೆ ಒತ್ತಾಯಿಸಿದ್ದಾರೆ.
ಸದ್ಯ ಚೀನಾ ಮೃಗಾಲಯದ ಮೋಸದಾಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
Hashem Safieddine: ಹಿಜ್ಬುಲ್ಲಾ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿತಾ ಇಸ್ರೇಲ್?
Hindu ಸಂತರು ಗೋ ಮಾಂಸ ತಿನ್ನುತ್ತಾರೆ: ಪಾಕಿಸ್ಥಾನದಲ್ಲಿ ಝಾಕಿರ್ ನಾಯ್ಕ
Strikes again; ಲೆಬನಾನ್,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್:40ಕ್ಕೂ ಹೆಚ್ಚು ಸಾ*ವು
Israel ವೈಮಾನಿಕ ದಾಳಿಗೆ ಗಾಜಾದ ಹಮಾಸ್ ಮುಖ್ಯಸ್ಥ ಮುಶ್ತಾನಾ ಸೇರಿ ಮೂವರು ಸಾವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Asian Youth Archery: ಮಹಿಳಾ ತಂಡಕ್ಕೆ ಬೆಳ್ಳಿ ಪದಕ
Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ
ISSF Junior World Championship: ಕಿರಿಯರ ಶೂಟಿಂಗ್; ಭಾರತಕ್ಕೆ ಸಮಗ್ರ ಪ್ರಶಸ್ತಿ
ಗ್ವಾಲಿಯರ್ ಮಸೀದಿಗೆ ಭೇಟಿ ನೀಡದೆ ಹೋಟೆಲ್‌ನಲ್ಲೇ ಬಾಂಗ್ಲಾ ಕ್ರಿಕೆಟರ್ಸ್ ಪ್ರಾರ್ಥನೆ
Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.