Viral: 22 ವರ್ಷಗಳ ಹಿಂದೆ ಮನೆಬಿಟ್ಟು ತೆರಳಿದ ಮಗ ಸನ್ಯಾಸಿಯಾಗಿ ತಾಯಿ ಬಳಿ ಮರಳಿ ಬಂದಾಗ..

Team Udayavani, Feb 7, 2024, 7:21 PM IST

Viral: 22 ವರ್ಷಗಳ ಹಿಂದೆ ಮನೆಬಿಟ್ಟು ತೆರಳಿದ ಮಗ ಸನ್ಯಾಸಿಯಾಗಿ ತಾಯಿ ಬಳಿ ಮರಳಿ ಬಂದಾಗ..

ಲಕ್ನೋ: 22 ವರ್ಷಗಳ ಹಿಂದೆ ಮನೆಬಿಟ್ಟು ತೆರಳಿದ ಮಗ ಸನ್ಯಾಸಿಯಾಗಿ ಮರಳಿ ತಂದೆ  – ತಾಯಿಯನ್ನು ಭೇಟಿಯಾಗಿರುವ ಭಾವನಾತ್ಮಕ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಏನಿದು ಘಟನೆ?: ದೆಹಲಿಯ ಪಿಂಕು 2002 ರಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮನೆ ಪಕ್ಕದ ಸ್ನೇಹಿತರೊಂದಿಗೆ ಗೋಲಿಯಾಟವನ್ನು ಆಡುವ ಸಂದರ್ಭದಲ್ಲಿ ತಂದೆ ರತ್‌ ಪಾಲ್‌ ಜೋರು ಮಾಡಿದ್ದಾರೆ. ಇದಾದ ಬಳಿಕ ತಾಯಿ ಭಾನುಮತಿ ಕೂಡ ಮಗನಿಗೆ ಗದರಿಸಿದ್ದಾರೆ. ಸಣ್ಣ ಕಾರಣಕ್ಕಾಗಿಯೇ ಮನನೊಂದು ಮನೆಬಿಟ್ಟು ತೆರಳಿದ್ದಾನೆ.

ಇದ್ದಕ್ಕಿದ್ದಂತೆ ಕಾಣೆಯಾದ ಮಗನನ್ನು ಪೋಷಕರು ಎಲ್ಲೆಡೆ ಹುಡುಕಿದ್ದಾರೆ. ಆದರೆ ಪಿಂಕು ಎಲ್ಲೂ ಕೂಡ ಪತ್ತೆಯಾಗಿರಲಿಲ್ಲ. ಮಗನ ಯೋಚನೆಯಲ್ಲೇ ತಂದೆ – ತಾಯಿ ಅನೇಕ ವರ್ಷಗಳನ್ನು ಕಳೆದಿದ್ದಾರೆ.

ಕಳೆದ ವಾರ ಉತ್ತರ ಪ್ರದೇಶದ ಅಮೇಥಿಯ ಖರೌಲಿ ಗ್ರಾಮಕ್ಕೆ ಯುವಕನೊಬ್ಬ ಸನ್ಯಾಸಿಯ ಅವತಾರದಲ್ಲಿ ಬಂದಿದ್ದು, ಇದನ್ನು ನೋಡಿದ ಅಲ್ಲಿನ ಗ್ರಾಮಸ್ಥರು, ಈಗಲೂ ತನ್ನ ಮೂಲ ಊರನ್ನು ಬಿಟ್ಟು ದೆಹಲಿಯಲ್ಲಿ ನೆಲೆಸಿರುವ ರತ್‌ ಪಾಲ್‌ ಸಿಂಗ್‌ – ಭಾನುಮತಿ ಅವರಿಗೆ ಮಾಹಿತಿ ನೀಡಿದ್ದಾರೆ. 22 ವರ್ಷದ ಹಿಂದೆ ಕಾಣೆಯಾದ ಪಿಂಕುನಂತೆಯೇ ಸನ್ಯಾಸಿಯಾಗಿ ಬಂದಿರುವ ಯುವಕನ ಚಹರೆ ಹೋಲುತ್ತಿದ್ದು, ಇದನ್ನರಿತು ಆತನ ಪೋಷಕರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಪೋಷಕರು ಯುವಕನ ದೇಹದಲ್ಲಿ ಬಾಲ್ಯದಿಂದಲೂ ಇದ್ದ ಗಾಯದ ಗುರುತೊಂದನ್ನು ನೋಡಿ, ಇದು ತಮ್ಮ ಪಿಂಕುವೆಂದು ಭಾವುಕರಾಗಿದ್ದಾರೆ. ಒಂದು ಕಡೆ ಕಳೆದು ಹೋದ ಮಗ ಮತ್ತೆ ಸಿಕ್ಕಿದ ಎನ್ನುವ ಖುಷಿ ಪೋಷಕರಲ್ಲಿದ್ದರೆ,ಇನ್ನೊಂದೆಡೆ ಆತ ಸನ್ಯಾಸಿಯಾಗಿ ಮರಳಿದ್ದಾನೆ ಎನ್ನುವ ದುಃಖ ಪೋಷಕರನ್ನು ಕಾಡಿದೆ.

ಸನ್ಯಾಸಿಯಾದ ಮಗನನ್ನು ನೋಡಿ ಭಾವುಕರಾದ ಪೋಷಕರು: 11ನೇ ವಯಸ್ಸಿನಲ್ಲಿ ಮನೆಬಿಟ್ಟು ಹೋಗಿದ್ದ ಪಿಂಕು,  ತಂದೆ – ತಾಯಿಯನ್ನು ಹುಡುಕಿಕೊಂಡು ಮೂಲ ಹಳ್ಳಿಗೆ(ಅಮೇಥಿಯ ಖರೌಲಿ) ತನ್ನ ಮೂವರು ಸಹವರ್ತಿಗಳೊಂದಿಗೆ ಬಂದಿದ್ದಾನೆ. ಆತನ ಯೋಜನೆ,ಯೋಚನೆ ಆಲೋಚನೆ, ಹಾವಭಾವಗಳು ಸಂಪೂರ್ಣವಾಗಿ ಸನ್ಯಾಸಿಯಂತೆಯೇ ಆಗಿದೆ.

ಪೋಷಕರ ಮುಂದೆ  ರಾಜ ಭರ್ತಾರಿಯ ಕಥೆಯನ್ನು ಸಾರಂಗಿಯಲ್ಲಿ  ಪಿಂಕು ನುಡಿಸಿದ್ದಾನೆ. ರಾಜ ಭರ್ತಾರಿ ಸನ್ಯಾಸಿಯಾಗಲು ಸಮೃದ್ಧ ರಾಜ್ಯವನ್ನು ಹೇಗೆ ತೊರೆದನು ಎಂಬುದು ಹಾಡಿನ ಸಾಹಿತ್ಯವಾಗಿದೆ.

ಪಿಂಕು ಸನ್ಯಾಸಿಯಾಗಿ ತನ್ನ ತಾಯಿಯ ಬಳಿಯಿಂದ ಭಿಕ್ಷೆಯನ್ನು ತೆಗೆದುಕೊಂಡು ಹಳ್ಳಿಯಿಂದ ತೆರಳಿದ್ದಾರೆ.

ತನ್ನ ಮಗ ಸೇರಿರುವ ಧಾರ್ಮಿಕ ಪಂಥ ಆತನನ್ನು ಬಿಡುಗಡೆ ಮಾಡಲು  11 ಲಕ್ಷ ರೂ. ಕೇಳುತ್ತಿದೆ ಎಂದು ಪಿಂಕು ತಂದೆ ಆರೋಪಿಸಿದ್ದಾರೆ. ತನ್ನ ಬಳಿ ಅಷ್ಟು ಹಣವಿಲ್ಲ ಎಂದು ಪಿಂಕು ಅವರ ತಂದೆ ಹೇಳಿ ಭಾವುಕರಾಗಿದ್ದಾರೆ.

ತಾನು ಕುಟುಂಬದೊಂದಿಗೆ ಮತ್ತೆ ಒಂದಾಗಲು ನಾನು ಬಂದಿಲ್ಲ. ಸನ್ಯಾಸಿಯ ಜೀವನದ ಸಂಪ್ರದಾಯಕ ಪ್ರಕಾರ ಸನ್ಯಾಸಿಗಳು ತಮ್ಮ ತಾಯಿಯಿಂದ ಭಿಕ್ಷೆ ಸ್ವೀಕರಿಸುವ ಆಚರಣೆಯನ್ನು ಪೂರ್ಣಗೊಳಿಸಬೇಕು. ಈ ಸಾಂಕೇತಿಕ ಕ್ರಿಯೆಯು ಸನ್ಯಾಸಿಗಳ ಜೀವನಕ್ಕೆ ಅವರ ಅಧಿಕೃತ ಪರಿವರ್ತನೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

1-sadsadas

Manipur ಘರ್ಷಣೆಗೆ ಕಾರಣ; ವಿವಾದಾತ್ಮಕ ಆದೇಶ ಮಾರ್ಪಡಿಸಿದ ಹೈಕೋರ್ಟ್

Exam 2

CBSE ; 9 ರಿಂದ 12 ನೇ ತರಗತಿಗಳಿಗೆ ತೆರೆದ ಪುಸ್ತಕ ಪರೀಕ್ಷೆಗಳ ಸಾಧ್ಯತೆ

4

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ

1-sadasdsad

Congress ಸೇರ್ಪಡೆಯಾದ ಮಾಜಿ ಸಂಸದ ಮುದ್ದಹನುಮೇಗೌಡ

taliban

Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

lion

Big cats; ಸೀತಾ, ಅಕ್ಬರ್ ಜೋಡಿ ಸಿಂಹಗಳ ಹೆಸರು ಬದಲಾಯಿಸಲು ಹೈಕೋರ್ಟ್ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsadas

Manipur ಘರ್ಷಣೆಗೆ ಕಾರಣ; ವಿವಾದಾತ್ಮಕ ಆದೇಶ ಮಾರ್ಪಡಿಸಿದ ಹೈಕೋರ್ಟ್

Exam 2

CBSE ; 9 ರಿಂದ 12 ನೇ ತರಗತಿಗಳಿಗೆ ತೆರೆದ ಪುಸ್ತಕ ಪರೀಕ್ಷೆಗಳ ಸಾಧ್ಯತೆ

4

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ

lion

Big cats; ಸೀತಾ, ಅಕ್ಬರ್ ಜೋಡಿ ಸಿಂಹಗಳ ಹೆಸರು ಬದಲಾಯಿಸಲು ಹೈಕೋರ್ಟ್ ಸೂಚನೆ

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

1-sadsadas

Manipur ಘರ್ಷಣೆಗೆ ಕಾರಣ; ವಿವಾದಾತ್ಮಕ ಆದೇಶ ಮಾರ್ಪಡಿಸಿದ ಹೈಕೋರ್ಟ್

Exam 2

CBSE ; 9 ರಿಂದ 12 ನೇ ತರಗತಿಗಳಿಗೆ ತೆರೆದ ಪುಸ್ತಕ ಪರೀಕ್ಷೆಗಳ ಸಾಧ್ಯತೆ

4

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ

1-sadasdsad

Congress ಸೇರ್ಪಡೆಯಾದ ಮಾಜಿ ಸಂಸದ ಮುದ್ದಹನುಮೇಗೌಡ

taliban

Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.