Tamil Nadu; ದೇವಸ್ಥಾನದ ಹೋರ್ಡಿಂಗ್ ನಲ್ಲಿ ಕಾಣಿಸಿಕೊಂಡ ಮಿಯಾ ಖಲೀಫಾ ಫೋಟೋ !!
Team Udayavani, Aug 8, 2024, 5:54 PM IST
ಚೆನ್ನೈ: ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಧಾರ್ಮಿಕ ಉತ್ಸವಕ್ಕಾಗಿ ಅಳವಡಿಸಲಾಗಿದ್ದ ಹೋರ್ಡಿಂಗ್‌ನಲ್ಲಿ ಮಾಜಿ ನೀಲಿಚಿತ್ರ ತಾರೆ ಮಿಯಾ ಖಲೀಫಾ ಅವರ ಚಿತ್ರ ಕಾಣಿಸಿಕೊಂಡಿರುವುದು ಮುಜುಗರಕ್ಕೆ ಕಾರಣವಾಗಿದೆ.
ತಮಿಳುನಾಡಿನಾದ್ಯಂತ ಇರುವ ದೇವಾಲಯಗಳಲ್ಲಿ ‘ಅಮ್ಮನ್’ ದೇವಿಯನ್ನು ಪೂಜಿಸುವ ‘ಆದಿ’ ಹಬ್ಬಕ್ಕಾಗಿ ಈ ಹೋರ್ಡಿಂಗ್ ಅನ್ನು ಅಳವಡಿಸಲಾಗಿತ್ತು. ಆಚರಣೆಗಳು ಪ್ರತಿ ಹಳ್ಳಿಯಲ್ಲಿ ವಿಶಿಷ್ಟವಾಗಿರುತ್ತವೆ, ಹಲವಾರು ದಿನಗಳವರೆಗೆ ನಡೆಯುವ ಉತ್ಸವದಲ್ಲಿ ಭಕ್ತರು ಭಾಗವಹಿಸುತ್ತಾರೆ.
ಈ ಬೃಹತ್ ಹಬ್ಬದ ಭಾಗವಾಗಿ, ಕುರುವಿಮಲೈನಲ್ಲಿರುವ ನಾಗತಮ್ಮನ್ ಮತ್ತು ಸೆಲ್ಲಿಯಮ್ಮನ್ ದೇವಾಲಯಗಳಲ್ಲಿ ಹಬ್ಬದ ದೀಪಗಳ ಜತೆಗೆ ಹೋರ್ಡಿಂಗ್‌ಗಳನ್ನು ಹಾಕಲಾಗಿದ್ದು, ಅದರಲ್ಲಿ ಮಿಯಾ ಖಲೀಫಾ ಅವರ ಚಿತ್ರವು ದೇವತೆಗಳ ಚಿತ್ರಗಳೊಂದಿಗೆ ಕಾಣಿಸಿಕೊಂಡಿದ್ದು ಹೋರ್ಡಿಂಗ್ ನ ಫೋಟೋ ವೈರಲ್ ಆಗಿದೆ. ಮಿಯಾ ಖಲೀಫಾ ಚಿತ್ರವನ್ನು ತಲೆಯ ಮೇಲೆ ಹಾಲಿನ ಬಿಂದಿಗೆ( ಪಾಲ್ ಕುಡಮ್) ಒಯ್ಯುತ್ತಿರುವಂತೆ ಕಾಣುವಂತೆ ಮಾರ್ಪಡಿಸಲಾಗಿತ್ತು. ಚಿತ್ರ ವೈರಲ್ ಆದ ನಂತರ ಟೀಕೆಯೂ ವ್ಯಕ್ತವಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಅದನ್ನು ತೆಗೆದುಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!
China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು
China: ಗರ್ಭಿಣಿ ಮೇಲೆ ನೆಗೆದು ಹಾರಿದ ಶ್ವಾನ-ಗರ್ಭಪಾತ: ಮಾಲೀಕನಿಗೆ 10 ಲಕ್ಷ ರೂ. ದಂಡ
Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್ ಟಿಆರ್ ಸಿನಿಮಾ ವೀಕ್ಷಿಸಿದ ರೋಗಿ.!
Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.