
Squid Game ಪ್ರೇರಿತ ಗೇಮ್ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ
ಬಡ ಕಾರ್ಮಿಕನಿಗೆ ಒಲಿದು ಬಂದ ಅದೃಷ್ಟ
Team Udayavani, Jun 1, 2023, 3:54 PM IST

ಸಿಂಗಾಪುರ/ಚೆನ್ನೈ: ಭಾರತೀಯ ಮೂಲದ ಕಾರ್ಮಿಕನೊಬ್ಬ ಸಿಂಗಾಪುರದಲ್ಲಿ ಆಟವೊಂದನ್ನು ಆಡಿ ಬರೋಬ್ಬರಿ 11 ಲಕ್ಷ ರೂ.ವನ್ನು ಗೆದ್ದು ರಾತ್ರೋ ರಾತ್ರಿ ಲಕ್ಷಾಧಿಪತಿ ಆಗಿದ್ದಾರೆ.!
ಕಳೆದ ಕೆಲ ವರ್ಷಗಳಿಂದ ಸಿಂಗಾಪುರದಲ್ಲಿ ಕೆಲಸದ ನಿಮಿತ್ತ ಪೋಲಿಸಮ್ ಇಂಜಿನಿಯರಿಂಗ್ ಕಂಪೆನಿಯಲ್ಲಿ ಘನ ವಾಹನವಾಗಿರುವ ಕ್ರೇನ್ ಪರಿಶೀಲಿಸುವುದು ನಿರ್ವಹಿಸುತ್ತಿರುವ ಕೆಲಸವನ್ನು ಮಾಡುತ್ತಿರುವ ತಮಿಳುನಾಡು ಮೂಲದ ಸೆಲ್ವಂ ಅರುಮುಗಂ (42) ಲಕ್ಷಾಧಿಪತಿ ಆಗಿದ್ದಾರೆ.
ಕಳೆದ ವರ್ಷದಂತೆ ಕಂಪೆನಿ ಈ ವರ್ಷವೂ ʼಡಿನ್ನರ್ ಮತ್ತು ಡ್ಯಾನ್ಸ್ ʼ ಎಂಬ ಇವೆಂಟ್ ಆಯೋಜನೆ ಮಾಡಿದ್ದಾರೆ. ಈ ಬಾರಿ ದಕ್ಷಿಣ ಕೊರಿಯಾದ ಹಿಟ್ ವೆಬ್ ಸಿರೀಸ್ ಗಳಲ್ಲಿ ಒಂದಾಗಿರುವ ʼ ಸ್ಕ್ವಿಡ್ ಗೇಮ್ʼ ಪ್ರೇರಿತವಾಗಿ ಆಟವನ್ನು ಆಯೋಜನೆ ಮಾಡಿದ್ದಾರೆ.
ʼಸ್ಕ್ವಿಡ್ ಗೇಮ್ʼ ನಲ್ಲಿರುವಂತೆ ಆಟಗಾರರು ಕೆಂಪು ಟ್ರ್ಯಾಕ್‌ಸೂಟ್ ಜಾಕೆಟ್‌ಗಳನ್ನು ಧರಿಸಿ ಆಟದ ನಾನಾ ಹಂತಗಳನ್ನು ದಾಟಬೇಕು. ಈ ಆಟದಲ್ಲಿ ಭಯಾನಕ ಹಂತಗಳಿರುತ್ತವೆ.
ಆಟದ ಹಂತ ಸಾಗುತ್ತಿದ್ದಂತೆ ಸ್ಪರ್ಧೆಯ ಬಹುಮಾನದ ಮೊತ್ತ ಕಾಣಿಸುತ್ತದೆ. ಹಣ ತುಂಬಿದ ದೊಡ್ಡ ಬಲೂನ್ ಆಟಗಾರರಿಗೆ ಕಾಣಿಸುತ್ತದೆ. ಎಲ್ಲಾ ಹಂತವನ್ನು ದಾಟಿದ ಬಳಿಕ ಈ ಸ್ಪರ್ಧೆಯಲ್ಲಿ ಸೆಲ್ವಂ ಅರುಮುಗಂ ಸಾಧಿಸುತ್ತಾರೆ. ಎಲಿಮಿನೇಷನ್ ಆಗದೆ ಕೊನೆಯವರೆಗೂ ಬಂದು ಆಟದಲ್ಲಿ ಸೆಲ್ವಂ ಗೆಲುವು ಸಾಧಿಸಿದ್ದಾರೆ.
ಕಂಪೆನಿ ಆಯೋಜಿಸಿದ ಈ ಆಟದ ಬಹುಮಾನ ಬರೋಬ್ಬರಿ 11 ಲಕ್ಷ ರೂ. ರಾತ್ರಿ ಬೆಳಗ್ಗೆ ಆಗುವಷ್ಟರಲ್ಲಿ ತಮಿಳುನಾಡಿನಲ್ಲಿ ಒಂದು ಬಾಡಿಗೆಯ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ ಸೆಲ್ವಂ ಅರುಮುಗಂ ಲಕ್ಷಾಧಿಪತಿ ಆಗಿದ್ದಾರೆ. ಬಹುಮಾನವನ್ನು ಪಡೆಯಲು ಹೋದಾಗ ಬಹುಮಾನದ ಹಣವನ್ನು ಕೊಟ್ಟ ವ್ಯಕ್ತಿಯ ಕಾಲಿಗೆ ಅಡ್ಡ ಬಿದ್ದು ಸೆಲ್ವಂ ಅರುಮುಗಂ ಭಾವುಕರಾಗಿದ್ದಾರೆ.
ನನಗೆ ನಿಜವಾಗಿಯೂ ಆಟದ ನಿಯಮಗಳು ಗೊತ್ತಾಗಿಲ್ಲ. ಎಲ್ಲರೂ ಆಡುವಾಗ ಅವರನ್ನು ನಾನು ಹಿಂಬಾಲಿಸಿದೆ ಎಂದು ಸೆಲ್ವಂ ಅರುಮುಗಂ ಹೇಳುತ್ತಾರೆ.
ಗೆಲುವಿನ ಬಗ್ಗೆ ಮಾತನಾಡಿದ ಅವರು, “ನನ್ನ ಗೆಲುವಿನ ಬಗ್ಗೆ ಹೇಳಲು ನಾನು ಮನೆಯವರಿಗೆ ಕರೆ ಮಾಡಿದೆ. ನನ್ನ ಹೆಂಡತಿ ಬಳಿ ಇದನ್ನು ಹೇಳುವಾಗ ಅವಳು ತಮಾಷೆ ಅಂದುಕೊಂಡಳು ಆ ಬಳಿಕ ನನ್ನ ಸ್ನೇಹಿತ ಹೇಳಿದಾಗ ಆಕೆ ದುಃಖವನ್ನು ಸಹಿಸದೇ ಅತ್ತು ಬಿಟ್ಟಳು. ಇದು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ” ಎಂದರು.
“ಮನೆ ನಿರ್ಮಿಸಲು ಬಹುಮಾನದ ಹಣವನ್ನು ಬಳಸುತ್ತೇನೆ. ನಮ್ಮದು 15 ಸದಸ್ಯರನ್ನು ಒಳಗೊಂಡ ಕುಟುಂಬ. ಪ್ರಸ್ತುತ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದೇವೆ. ತಂದೆ-ತಾಯಿ ಮತ್ತು ಇಬ್ಬರು ಸಹೋದರರು ತೀರಿಕೊಂಡಿದ್ದರಿಂದ ಸಹೋದರರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ನೀಡಲು ಬಯಸಿದ್ದೇನೆ” ಎಂದರು.
ಸೆಲ್ವಂ ಅವರು 2007ರಲ್ಲಿ ತಮಿಳುನಾಡಿನಿಂದ ಕೆಲಸ ಮಾಡಲು ಸಿಂಗಾಪುರಕ್ಕೆ ಬಂದಿದ್ದರು. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Reels Craze: ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡಲು ಹೋಗಿ 14 ವರ್ಷದ ಬಾಲಕನ ದುರಂತ ಅಂತ್ಯ

Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…

Viral: ಶಾಲೆಯಲ್ಲೇ ಶಿಕ್ಷಕಿಯರ ರೀಲ್ಸ್, ವಿದ್ಯಾರ್ಥಿಗಳು ಶೇರ್ ಮಾಡಬೇಕಂತೆ, ಇಲ್ಲದಿದ್ದರೆ…

Cop In Trouble: ರೀಲ್ಸ್ ಮಾಡಲು ಡ್ಯೂಟಿ ವಾಹನ ನೀಡಿ ತೊಂದರೆಗೆ ಸಿಲುಕಿದ ಪೊಲೀಸ್ ಅಧಿಕಾರಿ

Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ