Video: ಮನೆಗೆ ನುಗ್ಗಲು ಯತ್ನಿಸಿದ ಮೂವರು ಕಳ್ಳರನ್ನು ಬಾಗಿಲಲ್ಲೇ ತಡೆದು ನಿಲ್ಲಿಸಿದ ಮಹಿಳೆ!
Team Udayavani, Oct 2, 2024, 12:12 PM IST
ಚಂಡೀಗಢ: ಕಳ್ಳತನ (Theft) ಮಾಡಲು ಮನೆಯೊಳಗೆ ನುಗ್ಗಲು ಯತ್ನಿಸಿದ ಮೂವರನ್ನು ಮಹಿಳೆಯೊಬ್ಬರು ತನ್ನ ದಿಟ್ಟತನ ಹಾಗೂ ಚಾಣಾಕ್ಷತನ ತಡೆ ಹಿಡಿದಿರುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂಜಾಬ್‌ನ ಅಮೃತಸರದ (Amritsar) ವರ್ಕಾ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಹಾಡಹಗಲೇ ಮೂವರು ಮುಸುಕುಧಾರಿ ಕಳ್ಳರು ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಟೆರೇಸ್ ಮೇಲೆ ಬಟ್ಟೆ ಒಣಗಿಸುತ್ತಿದ್ದರು.
ಮಹಿಳೆ ಟೆರೇಸ್ ಮೇಲೆ ಬಟ್ಟೆ ಒಣಗಿಸುತ್ತಿದ್ದಾಗ ತನ್ನ ಮನೆಯ ಹೊರಗೆ ಮೂವರು ಮುಸುಕುಧಾರಿ ಬರುವುದನ್ನು ಮಹಿಳೆ ಗಮನಿಸಿದ್ದಾರೆ. ಮೂವರಲ್ಲಿ ಒಬ್ಬಾತ ಗೇಟ್ ತೆರೆದು ಸೀದಾ ಬಂದಿದ್ದಾನೆ. ಇದನ್ನು ನೋಡಿದ ಕೂಡಲೇ ಮಹಿಳೆ ಟೆರೇಸ್ ನಿಂದ ಕೆಳಗೆ ಬಂದು ಮೊದಲು ಬಾಗಿಲು ಬಂದ್ ಮಾಡಿದ್ದಾರೆ.
अमृतसर में एक महिला ने चोरों को बहादुरी से सबक सिखाया। चोरों की कोशिशों के बावजूद, महिला की दिलेरी उनके लिए भारी पड़ी…#amritsar #thief pic.twitter.com/l75wYxBM6O
— Ajeet Yadav (@ajeetkumarAT) October 1, 2024
ಆದರೆ ಮೂವರು ಮುಸುಕುಧಾರಿಗಳು ಬಾಗಿಲು ಬಡಿಯಲು ಶುರು ಮಾಡಿದ್ದಾರೆ. ಇನ್ನೇನು ಬಾಗಿಲು ಒಡೆದು ಒಳಗೆ ನುಗ್ಗಬೇಕೆನ್ನುವಷ್ಟರಲ್ಲೇ ಮಹಿಳೆ ತನ್ನ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಶಕ್ತಿಯನ್ನು ಬಳಸಿ ಬಾಗಿಲನ್ನು ದೂಡಿಕೊಂಡು ನಿಂತಿದ್ದಾರೆ. ಕೆಲ ಸಮಯದ ಬಳಿಕ ಪಕ್ಕದಲ್ಲಿದ್ದ ಸೋಫಾವನ್ನು ಬಾಗಿಲು ಒರಗಿಸಿಟ್ಟಿದ್ದಾರೆ. ಮಹಿಳೆ ಕಿರುಚಾಡುತ್ತಾ ತನ್ನ ಮನೆಯವರಿಗೆ ಅಲರಾಂ ಮೂಲಕ ಅಪಾಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳ್ಳರು ಕೆಲ ಸಮಯದ ಬಳಿಕ ಬಾಗಿಲು ಬಡಿದು ಅಲ್ಲಿಂದ ಪರಾರಿ ಆಗಿದ್ದಾರೆ. ಮಹಿಳೆಯ ಈ ದಿಟ್ಟತನದ ವಿಡಿಯೋ ಮನೆಯೊಳಗಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯ ದಿಟ್ಟತನವನ್ನು ಅನೇಕರು ಶ್ಲಾಘಿಸಿದ್ದಾರೆ.
ಸದ್ಯ ದರೋಡೆ ಯತ್ನದ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai; ಆಸ್ಪತ್ರೆಯಲ್ಲಿ ವೈದ್ಯರಿಗೆ ಮನಬಂದಂತೆ ಇರಿದ ರೋಗಿಯ ಪುತ್ರ!!
15 ದಿನ ಮೊದಲು ನೋಟಿಸ್…ಕಟ್ಟಡ ಧ್ವಂಸಕ್ಕೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್
Maharashtra; ಉದ್ಧವ್ ಮಾತ್ರವಲ್ಲ ಫಡ್ನವಿಸ್ ಬ್ಯಾಗ್ ಕೂಡ ಚೆಕ್: ಬಿಜೆಪಿಯಿಂದ ವಿಡಿಯೋ
Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ
ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.