ರೀಲ್ಸ್‌ನಲ್ಲಿ ವೈರಲ್ ಆಗುತ್ತಿದೆ ‘Chin Tapak Dam Dam’ ಡೈಲಾಗ್: ಈಗ ಟ್ರೆಂಡ್ ಯಾಕೆ?
Team Udayavani, Aug 5, 2024, 1:46 PM IST
ಮುಂಬಯಿ: ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಟ್ರೆಂಡ್ ಕ್ರಿಯೇಟ್ ಆಗುತ್ತದೆ. ಒಂದು ಡೈಲಾಗ್ಸ್ ಅಥವಾ ದೃಶ್ಯಗಳು ಮಿಮ್ ಗಳಾಗಿ ಕ್ಷಣ ಮಾತ್ರದಲ್ಲಿ ವೈರಲ್ ಆಗುತ್ತವೆ.
ಇತ್ತೀಚೆಗೆ ಇನ್ಸ್ಟಾಗ್ರಾಮ್ ರೀಲ್ಸ್ ಫೀಡ್ ನಲ್ಲಿʼಚಿನ್ ತಪಕ್ ದಂ ದಂʼ (Chin Tapak Dam Dam) ಎನ್ನುವ ಡೈಲಾಗ್ ಟ್ರೆಂಡ್ ನಲ್ಲಿದೆ. ಯಾವ ರೀಲ್ಸ್ ನೋಡಿದರೂ, ಹತ್ತರಲ್ಲಿ ಕನಿಷ್ಠ 7-8 ರೀಲ್ಸ್ ನಲ್ಲಿ ಈ ಡೈಲಾಗ್ ಬರುತ್ತದೆ. ಅನೇಕರಿಗೆ ಇದುವರೆಗೆ ಇದು ಡೈಲಾಗ್ ಎಲ್ಲಿಯದು, ಸಿನಿಮಾದ? ಅಥವಾ ಹಾಡಿನದಾ? ಎನ್ನುವುದು ಗೊತ್ತಿಲ್ಲ.
ಸಣ್ಣ ವಯಸ್ಸಿನಲ್ಲಿ ನಾವೆಲ್ಲ ನೋಡುತ್ತಿದ್ದ ಜನಪ್ರಿಯ ಕಾರ್ಟೊನ್ ಶೋ ʼಛೋಟಾ ಭೀಮ್ʼ ನಲ್ಲಿ ಬರುವ ಕ್ಯಾರೆಕ್ಟರ್ ವೊಂದರ ಡೈಲಾಗ್ ಇದು. ʼಛೋಟಾ ಭೀಮ್ʼ (Chhota Bheem) ನಲ್ಲಿ ಬರುವ ಖಳನಾಯಕ ʼಥಕಿಯಾʼ ಎನ್ನುವಾತ ಮಾಟಮಂತ್ರ ಹಾಗೂ ಮ್ಯಾಜಿಕ್ ಗಳನ್ನು ಮಾಡುವಾಗ ಆತ ಹೇಳುವ ಡೈಲಾಗ್ ʼಚಿನ್ ತಪಕ್ ದಂ ದಂʼ. ಇದು ಆ ಪಾತ್ರದ ಪ್ರಧಾನ ಡೈಲಾಗ್.
ಈಗ ವೈರಲ್ ಆದದ್ದೇಕೆ?:
ಇತ್ತೀಚೆಗೆ ʼಛೋಟಾ ಭೀಮ್ʼ ಕಾರ್ಯಕ್ರಮ ನೋಡುತ್ತಿದ್ದ ಅಭಿಮಾನಿಯೊಬ್ಬರು ʼಛೋಟಾ ಭೀಮ್ – ಓಲ್ಡ್ ಎನಿಮೀಸ್, ಸೀಸನ್ -4 ನ 47ನೇ ಎಪಿಸೋಡ್ ನೋಡಿದಾಗ, ಥಕಿಯಾ ಪಾತ್ರದ ಈ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಥಕಿಯಾ ಧೋಲಕ್‌ಪುರದಲ್ಲಿ ಮಣ್ಣಿನ ಸೈನಿಕರ ಪಡೆಯನ್ನು ನಿರ್ಮಿಸಿ ಅದರ ಮೂಲಕ ದಾಳಿಯನ್ನು ಮಾಡಿಸುತ್ತಾನೆ. ಈ ಸೈನ್ಯ ನಿರ್ಮಾಣ ಹಾಗೂ ಇತರೆ ಮ್ಯಾಜಿಕ್ ಗಳನ್ನು ಮಾಡುವಾಗ ಥಕಿಯಾ ʼಚಿನ್ ತಪಕ್ ದಂ ದಂʼ ಹೇಳುವುದನ್ನು ಈ ಎಪಿಸೋಡ್ ನಲ್ಲಿ ನೋಡಬಹುದು.
View this post on Instagram
ಈ ಡೈಲಾಗ್ ಈಗ ಸೋಶಿಯಲ್ ಮೀಡಿಯಾದಲ್ಲಿ ಮಿಮ್ಸ್ ಗಳಿಗೆ ಆಹಾರವಾಗಿದೆ. ನೂರಾರು ರೀಲ್ಸ್ ಗಳು ʼಚಿನ್ ತಪಕ್ ದಂ ದಂʼ ಎನ್ನುವ ಡೈಲಾಗ್ ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ʼಛೋಟಾ ಭೀಮ್ʼ ಒಂದು ಕಾರ್ಟೂನ್ ಶೋ ಆಗಿದ್ದು, 2019ರಲ್ಲಿ ನೆಟ್ ಪ್ಲಿಕ್ಸ್ ನಲ್ಲಿ ಬಂದ ಬಳಿಕ ಈ ಕಾರ್ಯಕ್ರಮ 27 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moradabad ರಕ್ತದಾನಿಯಂತೆ ಪೋಸ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬಿಜೆಪಿ ಮೇಯರ್!
China: ಪಾಂಡಾ ಎಂದು ನಾಯಿಗೆ ಬಣ್ಣ ಬಳಿದು ಪ್ರವಾಸಿಗರಿಗೆ ಮೋಸ: ಬೌ.. ಬೌ.. ಎಂದಾಗಲೇ ಗೊತ್ತು
China: ಗರ್ಭಿಣಿ ಮೇಲೆ ನೆಗೆದು ಹಾರಿದ ಶ್ವಾನ-ಗರ್ಭಪಾತ: ಮಾಲೀಕನಿಗೆ 10 ಲಕ್ಷ ರೂ. ದಂಡ
Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್ ಟಿಆರ್ ಸಿನಿಮಾ ವೀಕ್ಷಿಸಿದ ರೋಗಿ.!
Video: ಕೇವಲ ಒಂದೇ ಚಕ್ರದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಪೈಲೆಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.