ಸಿಂಗರ್,ನಿರ್ದೇಶಕನನ್ನು ಪ್ರೀತಿಸಿ ಕೊನೆಗೆ ಬ್ಯಾಂಕರ್ ಕೈಹಿಡಿದ ಬಾಲಿವುಡ್ ಚೆಲುವೆ ಶೇಷಾದ್ರಿ!

ಅಂದಿನ ಯುವ ನಟ ಜಾಕಿಶ್ರಾಫ್ ಜತೆ ಹೀರೋ ಸಿನಿಮಾದಲ್ಲಿ ನಟಿಸುವಂತೆ ಅವಕಾಶ ಮಾಡಿಕೊಟ್ಟಿದ್ದರು.

ನಾಗೇಂದ್ರ ತ್ರಾಸಿ, May 9, 2020, 8:21 PM IST

ಸಿಂಗರ್,ನಿರ್ದೇಶಕನನ್ನು ಪ್ರೀತಿಸಿ ಕೊನೆಗೆ ಬ್ಯಾಂಕರ್ ಕೈಹಿಡಿದ ಬಾಲಿವುಡ್ ಚೆಲುವೆ ಶೇಷಾದ್ರಿ

ಮೀನಾಕ್ಷಿ ಶೇಷಾದ್ರಿ ಬಾಲಿವುಡ್ ನ ಚೆಲುವೆ ನಟಿ, ರೂಪದರ್ಶಿ. 1981ರಲ್ಲಿ ಜಪಾನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಕಿರೀಟ ತೊಟ್ಟಿದ್ದ ಮೀನಾಕ್ಷಿ ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾದಲ್ಲಿ ನಟಿಸಿ ಮೂಲಕ ಜನಪ್ರಿಯತೆ ಪಡೆದಿದ್ದರು. 1983ರಲ್ಲಿ ಬಾಲಿವುಡ್ ನ ಪೈಂಟರ್ ಬಾಬು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. 1983ರಲ್ಲಿ ಸುಭಾಶ್ ಘಾಯ್ ನಿರ್ದೇಶನದ ಹೀರೋ ಸಿನಿಮಾದಲ್ಲಿ ಮೀನಾಕ್ಷಿ ನಟಿಸಿದ್ದು ಅತ್ಯಂತ ಜನಪ್ರಿಯತೆ ತಂದುಕೊಟ್ಟಿತ್ತು.

ಮೀನಾಕ್ಷಿ ಶೇಷಾದ್ರಿ ತಮಿಳು ಕುಟುಂಬದವರಾಗಿದ್ದು ಜಾರ್ಖಂಡ್ ನ (ಅಂದಿನ ಬಿಹಾರದ) ಧನ್ ಬಾದ್ ಸಮೀಪ ಇರುವ ಸಿಂದ್ರಿಯಲ್ಲಿ ಜನಿಸಿದ್ದರು. ಮೀನಾಕ್ಷಿ ಭರತನಾಟ್ಯಂ, ಕೂಚುಪುಡಿ, ಕಥಕ್ ಹಾಗೂ ಒಡಿಸ್ಸಿ ನೃತ್ಯ ಪ್ರವೀಣೆಯಾಗಿದ್ದರು. ಪೈಂಟರ್ ಬಾಬು ಸಿನಿಮಾ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಸೋತುಹೋಗಿತ್ತು. ಇದು ತೆಲುಗು ಮತ್ತು ಹಿಂದಿ ಎರಡು ಭಾಷೆಯಲ್ಲಿ ತೆರೆಕಂಡಿತ್ತು. ಈ ವೇಳೆ ಮೀನಾಕ್ಷಿ ಶೇಷಾದ್ರಿ ನಟನೆಯನ್ನು ಬಿಡುವ ಹಂತಕ್ಕೆ ಬಂದಿದ್ದರು. ಆದರೆ ಸುಭಾಶ್ ಘಾಯ್ ಪ್ರೋತ್ಸಾಹಿಸಿ ಮತ್ತೊಬ್ಬ ಅಂದಿನ ಯುವ ನಟ ಜಾಕಿಶ್ರಾಫ್ ಜತೆ ಹೀರೋ ಸಿನಿಮಾದಲ್ಲಿ ನಟಿಸುವಂತೆ ಅವಕಾಶ ಮಾಡಿಕೊಟ್ಟಿದ್ದರು. ಈ ಸಿನಿಮಾ ಶೇಷಾದ್ರಿಯನ್ನು ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ನಟಿಯನ್ನಾಗಿ ಮಾಡಿಬಿಟ್ಟಿತ್ತು. ಇದಾದ ಬಳಿಕ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಜತೆ ನಟಿಸುವ
ಆಫರ್ ಶೇಷಾದ್ರಿಗೆ ಸಿಕ್ಕಿತ್ತು. ಹೀಗೆ ಅವಾರಾ ಬಾಪ್ ಸಿನಿಮಾದಲ್ಲಿ ಮೀನಾಕ್ಷಿ ದ್ವಿಪಾತ್ರದಲ್ಲಿ ನಟಿಸಿದ್ದರು.

ಕುಮಾರ್ ಸಾನು ಜತೆಗೆ ಲವ್, ಕೊನೆಗೆ ಬ್ಯಾಂಕರ್ ಕೈಹಿಡಿದ ಶೇಷಾದ್ರಿ!
80ರ ದಶಕದಲ್ಲಿ ಮೀನಾಕ್ಷಿ ಶೇಷಾದ್ರಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. ಹೀರೋ ಸಿನಿಮಾದ ಮೂಲಕ ಜನಪ್ರಿಯತೆ ಪಡೆದಿದ್ದ ಮೀನಾಕ್ಷಿ ವೃತ್ತಿ ಬದುಕಿನಲ್ಲಿ ದಾಮಿನಿ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. 1990ರ ದಶಕದಲ್ಲಿ ಮೀನಾಕ್ಷಿ ಶೇಷಾದ್ರಿ ಎಂಬ ಚೆಲುವೆಯ ಬದುಕಿನಲ್ಲಿ ಸಿಂಗರ್ ಕುಮಾರ್ ಸಾನು, ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಕಾಲಿಟ್ಟಿದ್ದರು.

ಮಹೇಶ್ ಭಟ್ ನಿರ್ದೇಶನದ “ಜುರ್ಮ್” ಸಿನಿಮಾದ ಪ್ರೀಮಿಯರ್ ಶೋ ವೇಳೆ ಮೀನಾಕ್ಷಿ ಶೇಷಾದ್ರಿ ಮತ್ತು ಕುಮಾರ್ ಸಾನು ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ಸಿನಿಮಾದ ಜಬ್ ಕೋಯಿ ಬಾತ್ ಬಿಗಡ್ ಜಾಯೇ ಹಾಡನ್ನು ಹಾಡಿದ್ದು ಕುಮಾರ್ ಸಾನು. ಮೀನಾಕ್ಷಿಯ ರೂಪಕ್ಕೆ ಕುಮಾರ್ ಸಾನು ಶರಣಾಗಿಬಿಟ್ಟಿದ್ದರು! ಹೀಗೆ ಸ್ನೇಹಿತರಾಗಿದ್ದ ಸಾನು, ಶೇಷಾದ್ರಿ ನಿಕಟರಾಗಿಬಿಟ್ಟಿದ್ದರು. ಸುಮಾರು ಮೂರು ವರ್ಷಗಳ ಕಾಲ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಟ್ಟಿದ್ದರು!

ಬಾಲಿವುಡ್ ನ ಹೆಸರಾಂತ ಸಿಂಗರ್ ಆಗಿದ್ದ ಕುಮಾರ್ ಸಾನು ಅದಾಗಲೇ ರೀಟಾ ಭಟ್ಟಾಚಾರ್ಯಳನ್ನು ವಿವಾಹವಾಗಿದ್ದರು. ಕುಮಾರ್ ಸಾನು ಪ್ರಸಿದ್ಧ ನಟಿಯಾಗಿದ್ದ ಮೀನಾಕ್ಷಿ ಶೇಷಾದ್ರಿ ಜತೆ ಅಫೇರ್ ಇಟ್ಟುಕೊಂಡ ಬಗ್ಗೆ ಕುಮಾರ್ ಕಾರ್ಯದರ್ಶಿ ನೀಡಿದ್ದ ಸಂದರ್ಶನದಿಂದ ಬಯಲಾಗಿತ್ತು. ಕುಮಾರ್ ಸಾನು ಅವರಿಗೆ ಹಲವು ಪ್ರೇಯಸಿರು, ಆದರೆ ಈಗ ಖ್ಯಾತ ನಟಿ ಮೀನಾಕ್ಷಿ ಶೇಷಾದ್ರಿ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಸಂದರ್ಶನ ಓದಿದ ನಂತರ ಕುಮಾರ್ ಸಾನು ಪತ್ನಿ ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೂಡಲೇ ಯೂಟರ್ನ್ ಹೊಡೆದ ಕುಮಾರ್ ಸಾನು ಈ ಸಂದರ್ಶನದಲ್ಲಿ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಮೀನಾಕ್ಷಿ ಜತೆ ಯಾವುದೇ ಅಫೇರ್ ಇಲ್ಲ ಅಂತ ಹೇಳಿಕೆ ಕೊಟ್ಟುಬಿಟ್ಟಿದ್ದರು. ಮೀನಾಕ್ಷಿ ವಿರುದ್ಧ ಸಾನು ಪತ್ನಿ ರೀಟಾ ಕೀಳುಮಟ್ಟದಲ್ಲಿ ಬೈದುಬಿಟ್ಟಿದ್ದರು. ರೀಟಾ ಅವರ ಆರೋಪದ ಪ್ರಕಾರ, ಕುಮಾರ್ ಸಾನು ತನ್ನ ಎಲ್ಲಾ ಹಣವನ್ನು ಮೀನಾಕ್ಷಿಗೆ ವ್ಯಯಿಸಿದ್ದು, ಲೈಂಗಿಕವಾಗಿ ಕಾಲಕಳೆದಿದ್ದರು ಎಂದು ಹೇಳಿದ್ದರು. ಕೊನೆಗೆ 1994ರಲ್ಲಿ ರೀಟಾ ಮತ್ತು ಕುಮಾರ್ ಸಾನು ವಿವಾಹ ವಿಚ್ಚೇದನ ಪಡೆದುಕೊಳ್ಳುವಂತಾಯ್ತು!

ಅಹಿತಕರವಾದ ಡೈವೋರ್ಸ್ ನಿಂದ ಮೀನಾಕ್ಷಿ ಮತ್ತು ಕುಮಾರ್ ಸಂಬಂಧದ ನಡುವೆ ಸಮಸ್ಯೆ ತಂದುಬಿಟ್ಟಿತ್ತು. ರೀಟಾಳಿಂದ ಡೈವೋರ್ಸ್ ಪಡೆದ ನಂತರ ಕುಮಾರ್ ಸಾನು ಮೀನಾಕ್ಷಿ ನಡುವಿನ ಸಂಬಂಧವೂ ಹಳಸಿ ಹೋಗುವಂತಾಯ್ತು! ಏತನ್ಮಧ್ಯೆ 1990ರಲ್ಲಿ ಸನ್ನಿ ಡಿಯೋಲ್ ನಟನೆಯ ಘಾಯಲ್ ಸಿನಿಮಾದಲ್ಲಿ ನಟಿಸುವ ವೇಳೆ ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಜತೆ ಮೀನಾಕ್ಷಿ ಶೇಷಾದ್ರಿ ನಡುವೆ ಪ್ರೇಮ ಪುರಾಣ ಶುರುವಾಗಿತ್ತು. ಅದಕ್ಕೆ ಕಾರಣ ಘಾಯಲ್ ಸಿನಿಮಾ ಯಶಸ್ವಿಯಾದ ನಂತರ ಸಂತೋಷಿ ನೇರವಾಗಿ ಮೀನಾಕ್ಷಿ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರಂತೆ! ಮೀನಾಕ್ಷಿ ಈ ಪ್ರಸ್ತಾಪವನ್ನು ಪ್ರೀತಿಯಿಂದಲೇ ನಿರಾಕರಿಸಿದಾಗ ರಾಜ್ ಕುಮಾರ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಂತೆ. ನಂತರ ಸಂದರ್ಶನದಲ್ಲಿ ಕೇಳಿದ್ದ ಪ್ರಶ್ನೆಗೆ, ಹೌದು ನಾನು ಮೀನಾಕ್ಷಿಯನ್ನು ಪ್ರೀತಿಸಿದ್ದೆ, ಆದರೆ ಆಕೆ ಅದನ್ನು ನಿರಾಕರಿಸಿದ್ದಳು. ಇಲ್ಲದಿದ್ದರೆ ನಾನು ಮದುವೆಯಾಗಬೇಕೆಂದಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದರು.

ಮೀನಾಕ್ಷಿ ಮತ್ತು ರಾಜ್ ಕುಮಾರ್ ಸಂತೋಷಿ ನಡುವೆ ದೀರ್ಘ ದೂರವಾಣಿ ಮಾತುಕತೆ, ದೂರ ಪ್ರಯಾಣ, ಸಹಲೆ, ಚರ್ಚೆ ನಡೆದಿದ್ದವು. ಕೊನೆಗೆ ರಾಜ್ ಕುಮಾರ್ ಪ್ರಪೋಸಲ್ ಅನ್ನು ಮೀನಾಕ್ಷಿ ಒಪ್ಪಿದ್ದಳು. ಅಲ್ಲದೇ ತನ್ನ ಆಘ್ ಔರ್ ಸುಹಾಗ್ ಸಿನಿಮಾಕ್ಕೆ ಆರ್ಥಿಕ ನೆರವು ನೀಡುವಂತೆ ಮೀನಾಕ್ಷಿ ರಾಜ್ ಕುಮಾರ್ ಬಳಿ ಕೇಳಿದಾಗ ಒಪ್ಪಿಕೊಂಡಿದ್ದರು. ಆದರೆ ಸಿನಿಮಾದ ಜಾಹೀರಾತು ಹೊರಬಿದ್ದಾಗ ರಾಜ್ ಕುಮಾರ್ ನೇರವಾಗಿ ಮೀನಾಕ್ಷಿ ತಾಯಿ ಜತೆ ಆಕ್ರೋಶಿತರಾಗಿ ಮಾತನಾಡಿದ್ದರು. ನಾನು ನಿಮ್ಮ ಮಗಳ ಬಳಿ ಮದುವೆಯಾಗು ಎಂದು ಕೇಳಿದ್ದೇನೆ ಹೊರತು ಬೇರೆ ಏನು ಆಫರ್ ಕೊಟ್ಟಿಲ್ಲ ಎಂದು ಕೂಗಾಡಿದ್ದರು. ಹೀಗೆ ಇಬ್ಬರ ನಡುವಿನ ಸಂಬಂಧವೂ ಬಿರುಕು ಬಿಟ್ಟು ಹೋಗಿತ್ತು.

ಅಂತೂ ಕೊನೆಗೆ ನಟನೆಗೆ ಗುಡ್ ಬೈ ಹೇಳಿದ ಮೀನಾಕ್ಷಿ ಶೇಷಾದ್ರಿ 1995ರಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಹರೀಶ್ ಮೈಸೂರು ಅವರನ್ನು ವಿವಾಹವಾಗಿದ್ದರು. ಮೀನಾಕ್ಷಿ ಹರೀಶ್ ದಂಪತಿಗೆ ಇಬ್ಬರು ಗಂಡು ಹಾಗೂ ಒಬ್ಬಳು ಮಗಳು. ಶೇಷಾದ್ರಿ ಪ್ರಸ್ತುತ ಅಮೆರಿಕಾದ ಟೆಕ್ಸಾಸ್ ನಲ್ಲಿ ವಾಸವಾಗಿದ್ದಾರೆ.

ಟಾಪ್ ನ್ಯೂಸ್

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ರೋಮಾಂಚನಗೊಳಿಸುವ ಡಿಸ್ನಿ ಲೋಕ…. ; ಇಲ್ಲಿ ಎಲ್ಲವೂ ಕಣ್ಣೆದುರಿಗೆ

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.