ಪಶ್ಚಿಮಘಟ್ಟದ ರಮಣೀಯ ತಾಣ ಕ್ಯಾತನಮಕ್ಕಿ

Team Udayavani, Aug 29, 2021, 2:41 PM IST

ಪಶ್ಚಿಮಘಟ್ಟದ ರಮಣೀಯ ತಾಣ ಕ್ಯಾತನಮಕ್ಕಿ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕ್ಯಾತನಮಕ್ಕಿ. ಮೂಡಿಗೆರೆಯಿಂದ ಕ್ಯಾತನಮಕ್ಕಿ 72 ಕಿ.ಮೀ ದೂರದಲ್ಲಿದ್ದು ಮೊದಲು ಮೂಡಿಗೆರೆ ತಾಲೂಕಿನಲ್ಲಿದ್ದ ಈ ಸ್ಥಳ ಈಗ ನೂತನವಾಗಿ ಘೋಷಣೆಯಾದ ಕಳಸ ತಾಲೂಕಿಗೆ ಬರುತ್ತದೆ.

ಹೊರನಾಡು ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಮೀಪವಿರುವ ಈ ತಾಣಕ್ಕೆ ಶ್ರಂಗೇರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಾಗಬೇಕು. ಕಳಸದಿಂದ ಈ ಸುಂದರ ತಾಣ ತಲುಪಲು 20 ಕಿ.ಮೀ ಕ್ರಮಿಸಬೇಕು. ಬಲಿಗೆ ಜೈನ ಬಸದಿಯ ಸಮಿಪದಲ್ಲಿ ಈ ಕ್ಯಾತನಮಕ್ಕಿ ಸುಂದರ ಪ್ರಕ್ರತಿ ತಾಣ ಸಿಗುತ್ತದೆ.

ಇದನ್ನೂ ಓದಿ:ಅನ್ನ-ಅರಿವು ನೀಡುವುದೇ ನಿಜ ಧರ್ಮ

ಮೊದಲಿಗೆ ಅರಣ್ಯ ಇಲಾಖೆಯ ತಪಾಸಣಾ ಕೇಂದ್ರ ಸಿಗುತ್ತದೆ. ಅಲ್ಲಿ ಪ್ರತಿಯೊಬ್ಬರಿಗೂ 50 ರೂ ಟಿಕೇಟ್ ನಿಗದಿ ಮಾಡಲಾಗಿದೆ. ವಾಹನದ ನಂ ಮತ್ತು ಪ್ರವಾಸಿಗರ ಬಗ್ಗೆ ದಾಖಲೆ ಪುಸ್ತಕದಲ್ಲಿ ನಮೂದಿಸಿ ನಂತರ ನಮ್ಮನ್ನು ಮುಂದೆ ಬಿಡಲಾಗುತ್ತದೆ. ನಂತರ ಆರಂಭವಾಗುವುದೇ ಬಹಳ ಕಡಿದಾದ ರಸ್ತೆಯ ಯಾತ್ರೆ. ಮಳೆ ಬಂದರಂತೂ ಸಾಗಲು ಅಸಾಧ್ಯವಾದ ರಸ್ತೆ, ಕಲ್ಲು ಕೆಸರಿನಿಂದ ಮತ್ತು ಇಳಿಜಾರಿನಿಂದ ಕೂಡಿದ್ದು, ಮುಂದೆ ವಾಹನ ಬಂದರೆ ಜಾಗ ಕೊಡಲು ಅಸಾಧ್ಯವಾದ ರಸ್ತೆಯಲ್ಲಿ ಬಹಳಷ್ಟು ಜಾಗ್ರತೆಯಿಂದ ಸಾಗಬೇಕು. ಇಲ್ಲಿ ಸಾಗಲು ಫೋರ್ ವೀಲ್ ವಾಹನಗಳಷ್ಟೆ ಸಾಧ್ಯ. ಚಾಲನೆಯಲ್ಲಿ ಎಷ್ಟೇ ಹುಷಾರುಗಿದ್ದರೂ ಸಾಲದು, ಚಾಲಕ ಸ್ವಲ್ಪ ಮೈಮರೆತರೂ ದೊಡ್ಡ ಪ್ರಪಾತಕ್ಕೆ ಬೀಳುವ ಸಾಧ್ಯತೆಯೇ ಹೆಚ್ಚು.

ಗುಡ್ಡದ ತುದಿಯಲ್ಲಿ ಸಿಗುವುದು ಮಲೆನಾಡಿನ ಸ್ವರ್ಗ ಕ್ಯಾತನಮಕ್ಕಿ ಸಿಗುತ್ತದೆ ಮೊದಲು ಪ್ರವಾಸಿಗರು ವಾಹನವನ್ನು ವೀವ್ ಪಾಯಿಂಟ್ ಬಳಿ ತೆಗೆದುಕೊಂಡು ಹೋಗಿ ಅಲ್ಲಿನ ರಸ್ತೆ ಹಾಳು ಮಾಡುತ್ತಿದ್ದುರಿಂದ ಅರಣ್ಯ ಇಲಾಖೆ ಸಂಪೂರ್ಣ ಬೇಲಿ ಹಾಕಿದ್ದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ನಡೆದು ಸಾಗಬೇಕು, ಮುಖ್ಯರಸ್ತೆಯಿಂದ ಬಾಡಿಗೆಗೆ ಪಿಕಪ್, ಜೀಪ್ ಗಳಿದ್ದು ಇವರಿಗೆ ಇಲ್ಲಿಗೆ ಪ್ರವಾಸಿಗರನ್ನು ಕರೆತಂದು ಅವರನ್ನು ಪುನಃ ಬಿಡುವುದು ಕೆಲಸ.  ಬೆಂಗಳೂರು ಬಾಗದ ಪ್ರವಾಸಿಗರಂತು ಬೈಕಿನಲ್ಲಿ ಬಂದು ಎದ್ದು ಬಿದ್ದು ನಿಸರ್ಗದ ಸೌಂದರ್ಯ ಸವಿಯಲು ಬರುತ್ತಿದ್ದಾರೆ. ಕಳಸದ ಸುತ್ತಮುತ್ತಲಿನ ಹೋಂ ಸ್ಟೇಗೆ ಬಂದ ಅತಿಥಿಗಳು ಇಲ್ಲಿಗೆ ಸಂದರ್ಶಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ರಾಜ್ಯಾದ್ಯಂತ ಪ್ರಖ್ಯಾತಿ ಪಡೆದಿದ್ದು ಹೆಚ್ಚಿನ ಯಾತ್ರಿಕರು ಭೇಟಿ ನೀಡುತ್ತಿದ್ದಾರೆ.

ಇದು ಕುದುರೆಮುಖ ಅರಣ್ಯಕ್ಕೆ ಅಂಟಿಕೊಂಡಿದ್ದು ಪಕ್ಕದ ಶ್ರಂಗೇರಿ, ಕೊಪ್ಪ ತಾಲೂಕಿಗೆ ಸಮೀಪದಲ್ಲಿದೆ, ಇದು ಪ್ರವಾಸಿಗರ ಸ್ವರ್ಗ ಇದನ್ನು ಹಾಗೆ ಕಾಪಾಡಿಕೊಳ್ಳುವುದು ಸಹ ನಮ್ಮ ಕರ್ತವ್ಯ. ಇಲ್ಲಿಗೆ ಬಂದಾಗ ಮೋಜು ಮಸ್ತಿಯಲ್ಲಿ ತೊಡಗದೆ ಬಾಟಲಿ ಪ್ಲಾಸ್ಟಿಕ್ ಬಿಸಡದೆ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿರುವುದು ಪ್ರವಾಸಿಗರ ಕರ್ತವ್ಯವಾಗಬೇಕಿದೆ.

-ಸಂತೋಷ್

ಟಾಪ್ ನ್ಯೂಸ್

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

ಭಾರತದಲ್ಲಿ ವ್ಯಾಸಂಗ ಮಾಡಿದ್ದ ತಾಲಿಬಾನ್‌ ವಕ್ತಾರ!

2drugs

ಅರ್ಧ ಕೆ.ಜಿ. ಗಾಂಜಾ ವಶ ಆರೋಪಿ ಬಂಧನ

1sudhakar

ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಬೇಡ: ಸಚಿವ ಡಾ.ಕೆ.ಸುಧಾಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಮ್ಮೆಯ ಮಲೆನಾಡು… ಬದುಕೆಂಬುದು ನೆನಪಿನ ದೋಣಿ ಇದ್ದ ಹಾಗೆ…

ಹೆಮ್ಮೆಯ ಮಲೆನಾಡು… ಬದುಕೆಂಬುದು ನೆನಪಿನ ದೋಣಿ ಇದ್ದ ಹಾಗೆ…

ಮಕ್ಕಳಿಗೆ ಬುದ್ಧಿ ಹೇಳುವಾಗಲೂ ಎಚ್ಚರಿಕೆ ಇರಲಿ

ಮಕ್ಕಳಿಗೆ ಬುದ್ಧಿ ಹೇಳುವಾಗಲೂ ಎಚ್ಚರಿಕೆ ಇರಲಿ

ನಮ್ಮ ಸಂವಿಧಾನ ಎಂಥ ಸವಾಲುಗಳನ್ನೂ ಎದುರಿಸಬಲ್ಲದು

ನಮ್ಮ ಸಂವಿಧಾನ ಎಂಥ ಸವಾಲುಗಳನ್ನೂ ಎದುರಿಸಬಲ್ಲದು

ಕೆಂಪು ಅಣಬೆಯ ನೆನಪು…ಪ್ರಕೃತಿ ಸೌಂದರ್ಯದ ಬೊಳ್ಳೆ ಜಲಪಾತದ ಪಯಣ

ಕೆಂಪು ಅಣಬೆಯ ನೆನಪು…ಪ್ರಕೃತಿ ಸೌಂದರ್ಯದ ಬೊಳ್ಳೆ ಜಲಪಾತದ ಪಯಣ

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

covid

ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌?

6crop

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.