ಕೋವಿಡ್ v/s ಕೋವಿಡ್: ಸರ್ಕಾರಿ ಶಾಲೆಗೆ ಆದ್ಯತೆ ಹೆಚ್ಚಳ


Team Udayavani, Sep 18, 2022, 5:50 PM IST

web exclusive dinesh govt school

ಸರ್ಕಾರಿ ಶಾಲೆಯಲ್ಲಿ ಕಲಿತ ನಮಗೆಲ್ಲ ಸಿಗೋ ಕೆಲಸದ ಬಗ್ಗೆ, ಬದುಕಿನ ಬಗ್ಗೆ ಹಲವು ಹೆದರಿಕೆ, ಅತೀಯಾದ ಕಲ್ಪನೆಗಳು ಇರುವುದು ಸಹಜವಾಗಿತ್ತು. ಖಾಸಗಿ ಶಾಲಾ ಮಕ್ಕಳಂತೆ ಇಂಗ್ಲಿಷ್‌ ಬರುವುದಿಲ್ಲ, ಅವರ ತರಹ ಬಣ್ಣ – ಬಣ್ಣದ ಬಟ್ಟೆಗಳಿಲ್ಲ, ಬರಲು ಕಾರು – ಬೈಕ್‌ಗಳು ಕನಸು ಮಾತ್ರ ಆಗಿತ್ತು. ಆದರೆ, ಸಿನಿಮಾಗಳಲ್ಲಿ ಹೀರೋ ಒಬ್ಬ ನಾನು ಪಕ್ಕ ಲೋಕಲ್‌ ಸರ್ಕಾರಿ ಶಾಲೆ ಅನ್ನುವಾಗ ನಾವು ಹೀರೋಗಳಾಗುತ್ತಿದ್ದೆವು,

ಬಾಲ್ಯವನ್ನು ನಿಯಮಗಳ ಕಟ್ಟು-ಕಟ್ಟಳೆಗಳ ಪರಿದಿಯೊಳಗೆ ತರದೆ ಆ ಬಾಲ್ಯವನ್ನು ಅದು ಬಂದಂತೆ ಆಸ್ವಾದಿಸಲು ಸಾಧ್ಯವಾಗುತ್ತಿದ್ದದ್ದು ಅದೇ ಸರ್ಕಾರಿ ಶಾಲೆಗಳಲ್ಲಿ ಅಂದರೆ ತಪ್ಪಿಲ್ಲ. ಸೋ ಕಾಲ್ಡ್‌ ಹೈಜೀನ್‌ ಗಳ ಎದುರು ಮನ ಬಂದಂತೆ ಮಣ್ಣಲ್ಲಿ ಹೊರಳಿ ಆಡಿ ನೀಲಿ-ಬಿಳಿ ಅಂಗಿ ಕೆಂಪಾಗುತ್ತಿದ್ದದ್ದು – ಅಮ್ಮ ಅದನ್ನು ನೋಡಿ ದಿನಾ ಬೈದು ಒಗೆಯುತ್ತಿದ್ದದ್ದು…, ಅಷ್ಟು ಸಣ್ಣವರಿದ್ದಾಗಲೇ ಲವ್‌ ಅನ್ನೋ ಶಬ್ದದ ಸ್ಪೆಲ್ಲಿಂಗ್‌ ತಿಳಿಯದಿದ್ರೂ ತಮಾಷೆ ಮಾಡ್ತಾ – ಮುಗ್ದ ಕನಸುಗಳಲ್ಲಿ ತೇಲುತ್ತಿದ್ದ ಕಾಲ ಅದು. ಕೇವಲ ನೆನಪಲ್ಲ ದೂರ ನಿಂತು ನೋಡಿದಾಗ ಅದೇ ಆಧುನಿಕ ಬಾಲ ಗೋಕುಲ ಏನಂತೀರಿ ?

ಆದರೆ, ದೇಶದಲ್ಲಿ ಸರ್ಕಾರಿ ಶಾಲೆಗಿಂತ ಹೆಚ್ಚು ಖಾಸಗಿ ಶಾಲೆಗಳು ಹೆಚ್ಚಿವೆ. ಕೋವೀಡ್‌ – 19 ಕಾರಣ ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ 10,000ಕ್ಕೂ ಹೆಚ್ಚು ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ. ಆದರೆ ವಿಪರ್ಯಾಸವೆಂದರೆ ಆ ನಂತರ ಖಾಸಗಿ ಶಾಲೆಗಳನ್ನು  ತೆರೆಯಲು ಬಂದಿರುವ ಅರ್ಜಿಗಳು ಅದಕ್ಕಿಂತ 4 ಪಟ್ಟು ಹೆಚ್ಚಾಗಿದೆ.

ಇತರ ರಾಜ್ಯಗಳಿಗಿಂತ ಉತ್ತರ ಪ್ರದೇಶದಲ್ಲಿ ಹೊಸ ಖಾಸಗಿ ಶಾಲೆಗಳನ್ನು ತೆರೆಯಲು ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಹೊಂದಿದ್ದು, ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿದೆ. ಇದರ ಜೊತೆಗೆ 2018-19ಕ್ಕೆ ಹೋಲಿಸಿದರೆ 2020-21ರಲ್ಲಿ ದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಕೇಂದ್ರ ಶಿಕ್ಷಣ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ, ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ 2021ರಲ್ಲಿ 5,406 ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ. ಹಾಗೂ 2020ರಲ್ಲಿ 5,052 ಶಾಲೆಗಳನ್ನು ಮುಚ್ಚಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಈಗ ಹೊಸ ಖಾಸಗಿ ಶಾಲೆಗಳನ್ನು ತೆರೆಯಲು ಅರ್ಜಿಗಳು 4.38 ಪಟ್ಟು ಹೆಚ್ಚಾಗಿದೆ. ಆದರೆ, ಸರ್ಕಾರಿ ಶಾಲೆಗಳೂ ಚೇತರಿಕೆಯನ್ನು ಕಾಣುತ್ತಿವೆ. ಅದಕ್ಕೆ ಉದಾಹರಣೆ ಎಂಬಂತೆ, ಕೇಂದ್ರ ಶಿಕ್ಷಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2021ರಲ್ಲಿ ದೇಶಾದ್ಯಂತ 1.85 ಕೋಟಿ ಹೊಸ ಪ್ರವೇಶಗಳು 1ನೇ ತರಗತಿಯಲ್ಲಿ ನಡೆದಿವೆ.

ದೇಶದಲ್ಲಿ 9ರಿಂದ 10ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಡ್ರಾಪ್‌ಔಟ್ 2021ರಲ್ಲಿ 14.6 ಶೇಕಡಕ್ಕೆ ಇಳಿದಿದೆ, ಇದು 2020ರಲ್ಲಿ 16.1% ಆಗಿತ್ತು ಎಂದು ಕೇಂದ್ರ ಶಿಕ್ಷಣ ಇಲಾಖೆ ತಿಳಿಸಿದೆ. ಈ ಅಂಕಿ-ಅಂಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ಸೈಟ್‌ ಮತ್ತು ಪತ್ರಿಕಾ ವರದಿಗಳಿಂದ ಪಡೆಯಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಶಾಲೆಗಳಿಗೆ ದಾಖಲಾಗದ ಮಕ್ಕಳನ್ನು ಗುರುತಿಸಲು ಅಧಿಕಾರಿಗಳು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದವರಿಗೆ ಆರ್ಥಿಕ ಬಿಕ್ಕಟ್ಟು, ಅನಾರೋಗ್ಯ ಮತ್ತು ಕುಟುಂಬ ಸಮಸ್ಯೆಗಳು ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗುಳಿಯಲು ಕಾರಣ  ಎಂದು ತಿಳಿಯಿತು.

ದೇಶದಲ್ಲಿ ಸರ್ಕಾರಿ ಶಾಲೆಗಳ ಸುಸ್ಥಿತಿಗೆ ಸರ್ಕಾರ ಪ್ರಯತ್ನ ಮಾಡುತ್ತದೆಯಾದರೂ ತಳಮಟ್ಟದ ಆಧಿಕಾರಿಗಳು ಮತ್ತು ಆಡಳಿತ ವ್ಯವಸ್ಥೆ ಭ್ರಷ್ಟಾಚಾರ ಮುಕ್ತವಾಗಿ  ಕ್ರಮ ಕೈಕೊಂಡು ಕಾರ್ಯೋನ್ಮುಕರಾದಾಗ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ಕೊಡುವುದು ಬಿಡಿ ಅವುಗಳಷ್ಟು ಉನ್ನತ ಸ್ಥಿತಿಗೆ ತಲುಪಲೂ ಕಷ್ಟವಾದೀತು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ರೋಮಾಂಚನಗೊಳಿಸುವ ಡಿಸ್ನಿ ಲೋಕ…. ; ಇಲ್ಲಿ ಎಲ್ಲವೂ ಕಣ್ಣೆದುರಿಗೆ

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.