ವಿಶ್ವದ ಅತ್ಯಂತ ಶ್ರೀಮಂತನ ಮನೋ ಮಂಥನ: ಇದು ಎಲಾನ್ ಮಸ್ಕ್ ಕತೆ
ದಿನೇಶ ಎಂ, Nov 13, 2022, 5:40 PM IST
ಎಲಾನ್ ಮಸ್ಕ್ ಇದು ವ್ಯವಹಾರ ಲೋಕದ ಇತ್ತೀಚಿನ ಟ್ರೆಂಡಿಂಗ್ ಹೆಸರು. ಈ ಹೆಸರಿನ ಹಿಂದೆ ಸ್ಪೂರ್ತಿದಾಯಕ ಶ್ರಮವಿದೆ, ಹುಚ್ಚು ಅನ್ನಿಸಿದರೂ ಇನ್ನಾರೂ ಮಾಡದ ದೃಢ ನಿರ್ಧಾರಗಳಿವೆ. ಒಂಟಿತನವಿದೆ, ಸಾಧಿಸಿದಷ್ಟೂ ಮತ್ತಷ್ಟು ಏನೋ ಸಾಧಿಸುವ ಛಲವಿದೆ, ಕೈ ತುಂಬ ದುಡ್ಡೂ ಇದೆ.
ಹೊಸದೇನನ್ನೂ ಮಾಡೋದಕ್ಕೆ ಆಗದಿದ್ದರೆ ಮಾಡಬೇಡಿ. ನಿಮಗಿಷ್ಟವಾದದ್ದನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತಲೇ ಇರಿ. ಆಗ ವಾರಕ್ಕೆ 40 ಗಂಟೆ ದುಡಿಯುವವರು ಒಂದು ವರ್ಷದಲ್ಲಿ ಮಾಡೋದನ್ನು ನೀವು ನಾಲ್ಕೇ ತಿಂಗಳಲ್ಲಿ ಮಾಡಿ ಮುಗಿಸುತ್ತೀರಿ. ನಿಮ್ಮ ಆಯಸ್ಸು ಇದ್ದಕ್ಕಿದ್ದ ಹಾಗೆ ಇಮ್ಮಡಿ ಆಗಿರುತ್ತೆ. ಒಂದು ದಿನಕ್ಕೆ 48 ಗಂಟೆ ಸಿಕ್ಕಿರುತ್ತದೆ. ಯಾವತ್ತೂ ಜಾಸ್ತಿ ಮಂದಿ ಇದ್ದ ತಕ್ಷಣ ಜಾಸ್ತಿ ಕೆಲಸ ಆಗುತ್ತೆ ಅಂದ್ಕೋಬಾರದು ಎನ್ನುವುದು ಎಲಾನ್ ಮಸ್ಕ್ ಸಿದ್ಧಾಂತ.
ಈ ಜೀವನದ ಅರ್ಥವೇನು ಅಂತ ಹುಡುಕಲಿಕ್ಕೆ ಸಿಕ್ಕ ಸಿಕ್ಕ ಪುಸ್ತಕಗಳನ್ನು ಓದುತ್ತಿದ್ದ ಹದಿನೈದರ ಹುಡುಗ ಮಸ್ಕ್ ಯೋಚಿಸುತ್ತಿದ್ದ ರೀತಿಯೇ ಬೇರೆಯಾಗಿತ್ತು. ಇಂಗ್ಲಿಷ್, ಗಣಿತ, ವಿಜ್ಞಾನವನ್ನು ಪುಸ್ತಕದಿಂದ ಮಸ್ತಕಕ್ಕೆ ಡೌನ್ ಲೋಡ್ ಮಾಡಿಕೊಳ್ಳುತ್ತಾ, ಯಾವುದೋ ಫ್ಯಾಕ್ಟರಿಯ ಅಸೆಂಬ್ಲಿ ಲೈನಿನಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಹೋಗುವ ಸರಕಿನ ಹಾಗೆ ವಿದ್ಯಾರ್ಥಿಗಳೂ ಒಂದರಿಂದ ಮತ್ತೊಂದು ತರಗತಿಗೆ ಹೋಗುವುದು ನನಗೆ ತಮಾಷೆಯಾಗಿ ಕಾಣುತ್ತಿತ್ತು. ಅದರಿಂದ ಯಾವ ಉಪಯೋಗವೂ ಇಲ್ಲ ಅನ್ನುವುದು ಗೊತ್ತಾಯಿತು ಎನ್ನುವುದು ಎಲಾನ್ ಮಸ್ಕ್ ಅಭಿಪ್ರಾಯ.
ಟೆಸ್ಲಾ (Tesla) ಮತ್ತು ಸ್ಪೇಸ್‌ಎಕ್ಸ್ (SpaceX) ಸಿಇಒ ಎಲಾನ್ ಮಸ್ಕ್ (Elon Musk) ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರಿತಿಸಿಕೊಂಡಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಎರಡನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ಪ್ರಕಾರ, 200.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ, ಮಸ್ಕ್ ಇಂದು ಟೆಕ್ ಜಾಗದಲ್ಲಿ ಅತ್ಯಂತ ಮಾನ್ಯತೆ ಪಡೆದ ಮತ್ತು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, 90ರ ದಶಕದಿಂದ ನ್ಯಾಯಯುತವಾದ ಹೋರಾಟ ಮತ್ತು ಸಾಧಿಸುವ ಛಲದಿಂದಾಗಿ ಇಂದು ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಸಾಮಾನ್ಯ ವ್ಯಕ್ತಿಗೂ ಅಸಾಮಾನ್ಯನಂತೆ ಬದುಕುವ ಆಯ್ಕೆಯಿದೆ ಅನ್ನುವ ಒಂದು ಹೇಳಿಕೆಯಿಂದ ಎಲ್ಲರ ಗಮನ ಸೆಳೆದವರು ಎಲಾನ್ ಮಸ್ಕ್. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಹುಟ್ಟಿದ ಎಲಾನ್ ಮಸ್ಕ್ ಚಿಕ್ಕವನಿರುವಾಗಲೇ ಅವರ ಅಪ್ಪ ಅಮ್ಮ ವಿಚ್ಛೇದನ ಪಡೆದು ದೂರವಾಗುತ್ತಾರೆ. ನಮ್ಮಪ್ಪ ಒಬ್ಬ ಭಯಾನಕ ಮನುಷ್ಯ ಅಂತ ಹೇಳುತ್ತಲೇ , ಏಕಾಂಗಿಯಾಗಿಯೇ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾರೆ ಮಸ್ಕ್. ಸಿಕ್ಕಸಿಕ್ಕ ಪುಸ್ತಕಗಳನ್ನು ಓದುತ್ತಾರೆ. ತನ್ನದೇ ಶೈಲಿಯಲ್ಲಿ ಸಂಶೋಧನೆಗಳನ್ನು ಮಾಡುತ್ತಾ ಹೋಗುತ್ತಾರೆ. ಬೇರೆಯವರು ಹೇಳಿದ್ದನ್ನು ಒಪ್ಪುವುದಿಲ್ಲ, ನಡೆದ ದಾರಿಯಲ್ಲಿ ನಡೆಯುವುದಿಲ್ಲ. ಈಗ ಐವತ್ತರ ಹೊಸ್ತಿಲಲ್ಲಿರುವ ಮಸ್ಕ್ ಕಟ್ಟಿದ ಸಂಸ್ಥೆಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಅವನು ಎದುರಿಸಿರುವ ಮೆಚ್ಚುಗೆ ಮತ್ತು ಟೀಕೆಗಳನ್ನು ಕಂಡಾಗಲೂ ಭಯವಾಗುತ್ತದೆ. ಎಲ್ಲವನ್ನೂ ಮಾಡುತ್ತೇನೆ, ಆದರೆ ನನ್ನ ಶೈಲಿಯಲ್ಲಿಯೇ ಮಾಡುತ್ತೇನೆ. ನನ್ನ ದಾರಿಯೇ ಬೇರೆ ಎಂದವರು ಮಸ್ಕ್.
ಎಲಾನ್ ಮಸ್ಕ್ ಪ್ರಾರಂಭಸಿದ ಮೊದಲ ಯೋಜನೆ Zip2, ಇದೊಂದು ಸಾಫ್ಟ್‌ವೇರ್ ಕಂಪನಿ. ಅಂತರ್ಜಾಲ ಆಧಾರಿತ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿತು. ಇದು ಆನ್‌ಲೈನ್ ಸಿಟಿ ಗೈಡ್‌ಗಳನ್ನು ವಿನ್ಯಾಸಗೊಳಿಸುವ ಮೂಲಕ ವೃತ್ತಪತ್ರಿಕೆ ಪ್ರಕಾಶನ ಉದ್ಯಮಕ್ಕೆ ಪ್ರಯೋಜನವನ್ನು ನೀಡಿತು. 1995 ರಲ್ಲಿ ಸ್ಥಾಪನೆಯಾದ ಈ ಕಂಪನಿಯನ್ನು 1999 ರಲ್ಲಿ ಕಾಂಪ್ಯಾಕ್ ಕಂಪ್ಯೂಟರ್ ಖರೀದಿಸಿತು.
2014ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಎಲಾನ್ ಮಸ್ಕ್ ಗೆ ಅಂದು ಅವರಿಗೆ ಅಪಾರ್ಟ್ಮೆಂಟ್ ಖರೀದಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತಂತೆ. ಈ ಕಾರಣಕ್ಕಾಗಿ ತನ್ನ ಕಚೇರಿಯ ಮಂಚದ ಮೇಲೆ ಮಲಗುತ್ತಿದ್ದೆ ಎಂದು ಹೇಳಿದ್ದರು.
ಮಸ್ಕ್ 1999 ರಲ್ಲಿ X.com ಗೆ ಸಹ -ಸಂಸ್ಥಾಪಕರಾಗಿ ಹೋಗುತ್ತಾರೆ. ಇದು ಮೊದಲ ಫೆಡರಲ್ ವಿಮೆ ಮಾಡಿದ ಆನ್‌ಲೈನ್ ಬ್ಯಾಂಕುಗಳಲ್ಲಿ ಒಂದಾಗಿದೆ. ಆದಾಗ್ಯೂ, ನಿರ್ದೇಶಕರ ಮಂಡಳಿಯು ಅದೇ ವರ್ಷದ ಅಂತ್ಯದ ವೇಳೆಗೆ “inexperienced” ಇಂಟ್ಯೂಟ್ ಸಿಇಒ ಬಿಲ್ ಹ್ಯಾರಿಸ್‌ನೊಂದಿಗೆ ಬದಲಾಯಿಸುತ್ತದೆ. ಮುಂದಿನ ವರ್ಷ X.com ಸಿಲಿಕಾನ್ ವ್ಯಾಲಿ ಸಾಫ್ಟ್‌ವೇರ್ ಕಂಪನಿ ಕಾನ್ಫಿನಿಟಿ ಇಂಕ್‌ನೊಂದಿಗೆ ವಿಲೀನಗೊಂಡಾಗ ಮಸ್ಕ್ ಅಂತಿಮವಾಗಿ ಸಿಇಒ ಆಗಿ ಮರಳಿದರು, ಇದು ಪೇಪಾಲ್ ರೂಪದಲ್ಲಿ ತನ್ನದೇ ಆದ ಹಣ ವರ್ಗಾವಣೆ ಸೇವೆಯನ್ನು ಹೊಂದಿತ್ತು.
ಆದರೆ ಕೆಲವು ತೊಡಕುಗಳಿಂದಾಗಿ ಎಲಾನ್ ಮಸ್ಕ್ ಅವರನ್ನು ಕಂಪನಿಯ ಸಿಇಓ ವೃತ್ತಿಯಿಂದ ಕೆಳಗಿಳಿಸಿತು ಮತ್ತು ಕಾನ್ಫಿನಿಟಿ ಸಹ-ಸಂಸ್ಥಾಪಕ ಪೀಟರ್ ಥಿಯೆಲ್ ಅವರ ಅಧಿಕಾರ ನೀಡಿತು. ಥಿಯೆಲ್ ಅಡಿಯಲ್ಲಿ, ಪೇಪಾಲ್ ಕಂಪನಿಯ ಮುಖ್ಯ ಕೇಂದ್ರವಾಯಿತು ಮತ್ತು 2002 ರಲ್ಲಿ ಇಬೇ ನಿಂದ 1.5 ಬಿಲಿಯನ್ ಡಾಲರ್ ಗೆ ಸ್ವಾಧೀನಪಡಿಸಿಕೊಂಡಾಗ, ಮಸ್ಕ್ 100 ಮಿಲಿಯನ್ ಡಾಲರ್ ಗಿಂತ ಹೆಚ್ಚು ಹಣವನ್ನು ಪಡೆದರು, 11.7 ಪ್ರತಿಶತದಷ್ಟು ದೊಡ್ಡ ಷೇರುದಾರರಾಗಿದ್ದರು.
2008 ರೋಡ್‌ಸ್ಟರ್ ಮೊದಲ ಉತ್ಪಾದನೆಯ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಆಗಿ ಹೊರಹೊಮ್ಮಿತು.ಈ ಕಾರು ಫೆರಾರಿಗಿಂತ ವೇಗವಾಗಿ ಮತ್ತು ಪ್ರಿಯಸ್ ಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಎಲಾನ್ ಸಂದರ್ಶನದ ವೇಳೆ ಹೇಳಿಕೊಂಡಿದ್ದರು.
2020ರ ಹೊತ್ತಿಗೆ ಟೆಸ್ಲಾ ಕಂಪನಿ ಟೊಯೊಟಾವನ್ನು ಹಿಂದಿಕ್ಕಿ ವಿಶ್ವದ ಅತ್ಯಮೂಲ್ಯ ಕಾರು ತಯಾರಕ ಕಂಪನಿಯಾಗಿ ಹೊರಹೊಮ್ಮಿತು. 2008 ರಲ್ಲಿ ಮಸ್ಕ್‌ನ ಸ್ಪೇಸ್‌ಎಕ್ಸ್ ಕಂಪನಿಯ ಸ್ಥಾಪಿಸಿ ಮೂರು ವಿಫಲ ಉಡಾವಣಾ ಪ್ರಯತ್ನಗಳ ನಂತರ ತನ್ನ ಫಾಲ್ಕನ್ 1 ಅನ್ನು ಭೂಮಿಯ ಸುತ್ತ ಕಕ್ಷೆಗೆ ಯಶಸ್ವಿಯಾಗಿ ಉಡಾಯಿಸಿತು.
ಇತ್ತೀಚೆಗಿನ ಗಮನಾರ್ಹ ಬದಲಾವಣೆ ಎಂದರೆ ಸುಮಾರು 44 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದದ ನಂತರ ಮಸ್ಕ್ ಟ್ವಿಟ್ಟರ್‌ನ ಮಾಲೀಕರಾಗಿದ್ದಾರೆ. ಇದರ ನಂತರ, ಅವರು ಕಂಪನಿಯ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ನಾಲ್ವರು ಅಧಿಕಾರಿಗಳಿಗೆ ಪ್ರಮುಖ ಹುದ್ದೆಯಿಂದ ವಜಾಗೊಳಿಸಿದ್ದಾರೆ. ಇದಲ್ಲದೇ ನೀತಿ ಮತ್ತು ಕಾನೂನು ಮುಖ್ಯಸ್ಥ ವಿಜಯಾ ಗಡ್ಡೆ ಅವರನ್ನು ವಜಾಗೊಳಿಸಿದ್ದಾರೆ. ಇದು ಎಲಾನ್ ಮಸ್ಕ್ ಅವರ ವಿಚಿತ್ರ ನಿರ್ಧಾರಗಳು ಮತ್ತು ಹಠ ಸಾಧನೆಗೆ ಮತ್ತೊಂದು ಉದಾಹರಣೆ.
ತನ್ನ ಹುಚ್ಚು ಐಡಿಯಾಗಳನ್ನು, ಸ್ಪೇಸ್‌ಎಕ್ಸ್‌ನಲ್ಲಿ ಕೈಗೊಂಡ ವಿಚಿತ್ರ ಹುಡುಕಾಟಗಳನ್ನು ಸಾರ್ವಜನಿಕವಾಗಿ ಚರ್ಚಿಸಬಲ್ಲ ಧೈರ್ಯವೇ ಮಸ್ಕ್ ಹೊಸದಾಗಿ ಉದ್ಯಮ ಸೃಷ್ಟಿಸುವ ಮತ್ತು ಉದ್ಯಮ ಸ್ಥಾಪಿಸಲು ಕನಸು ಹೊತ್ತಿರುವ ಹಲವರಿಗೆ ಇವು ಧೈರ್ಯ ನೀಡಿದವು ಮತ್ತು ಅವರ ಏಳುಬೀಳುಗಳು ಆ ಸಂದರ್ಭಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಸೂರ್ತಿಯಾದವು. ತಮ್ಮ ಹುಚ್ಚು ನಿರ್ಧಾರಗಳು ಮತ್ತು ಅವುಗಳ ಸೋಲು – ಗೆಲುವಿನ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುವ ಇವರ ಗುಣದಿಂದ ಅತ್ಯಂತ ಪ್ರಾಮಾಣಿಕ ಅಂತಲೂ ಕರೆಸಿಕೊಳ್ಳುವಂತೆ ಮಾಡಿತು.
ಆತ ಯಾರ ಮಾತನ್ನೂ ಕೇಳದೇ ತನ್ನದೇ ದಾರಿಯಲ್ಲಿ ಸಾಗಿ ಗೆದ್ದವನು ಎಂಬುದು ಹಲವರ ಅಭಿಪ್ರಾಯ. 12 ವರ್ಷದ ಹುಡುಗನಾಗಿದ್ದಾಗಲೇ ಅವನು ತಾನೇ ಡಿಸೈನ್ ಮಾಡಿದ ಕಂಪ್ಯೂಟರ್ ಗೇಮ್ ಮಾರಾಟ ಮಾಡಿದ್ದ. ಅಂಥವನು ಟೆಸ್ಲಾ ಮೋಟಾರ್ಸ್, ಪೇಪಾಲ್ ಮತ್ತು ಸ್ಸೇಸೆಕ್ಸ್ ಕಟ್ಟಿದನೆಂದರೆ ಅಚ್ಚರಿ ಪಡಬೇಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್
ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ
ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್ ಸ್ಪೋರ್ಟ್ಸ್ ನ “ಟ್ರೋಫಿ ಟೂರ್’
50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ