“ನೈಕಾ’ ಮೂಲಕ ನಾಯಕಿಯಾದ ಫ‌ಲ್ಗುಣಿ ನಾಯರ್‌


Team Udayavani, Nov 13, 2021, 7:00 AM IST

Untitled-1

ಅವರು ಸಾಮಾನ್ಯ ಕುಟುಂಬದ ಹೆಣ್ಣು ಮಗಳು. ಕೋಟಕ್‌ ಬ್ಯಾಂಕ್‌ನಲ್ಲಿ ಒಳ್ಳೆ ವೃತ್ತಿಯಲ್ಲಿದ್ದ ಅವರಿಗೆ, ವೃತ್ತಿಯಲ್ಲಾಗಲೀ ಅಥವಾ ವೈಯಕ್ತಿಕ ಜೀವನದಲ್ಲಾಗಲೀ ಯಾವುದೇ ಸಮಸ್ಯೆ ಇದ್ದಿರಲಿಲ್ಲ. ಆದರೆ ಅವರ ಮನಸ್ಸಿನಲ್ಲೊಂದು ಬಲವಾದ ಆಸೆ ಕಾಡುತ್ತಲೇ ಇತ್ತು. “50 ವರ್ಷ ದಾಟುವುದರೊಳಗೆ ನಾನೊಬ್ಬ ಉದ್ಯಮಿ ಆಗಲೇಬೇಕು’ ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು. ಅದೇ ಆಸೆ, ಕನಸಿನ ಬೆನ್ನು ಹತ್ತಲು ಅವರಿಗೆ ಧೈರ್ಯ ಸಿಕ್ಕಿದ್ದು ಇನ್ನೇನು 50 ವರ್ಷಕ್ಕೆ ಎರಡು ತಿಂಗಳಿದೆ ಎನ್ನುವಾಗ. ಹಾಗೆ ದೊಡ್ಡ ಕನಸಿನೊಂದಿಗೆ “ನೈಕಾ’ ಹೆಸರಿನ ಸಣ್ಣ ಕಂಪೆನಿಯನ್ನು ಆರಂಭಿಸಿದ 59 ವರ್ಷದ ಫ‌ಲ್ಗುಣಿ ನಾಯರ್‌ ಇದೀಗ ಜಗತ್ತಿನಲ್ಲೆಡೆ ಸುದ್ದಿಯಾಗುತ್ತಿರುವ ಭಾರತೀಯ ಮಹಿಳೆ!

ಪ್ರಸಿದ್ಧ ಫ್ಯಾಷನ್‌ ಸಂಸ್ಥೆಯಾಗಿರುವ ನೈಕಾ ನ.10ರಂದು ಷೇರುಮಾರುಕಟ್ಟೆಗೆ ಕಾಲಿಟ್ಟಿದೆ. ಅತೀ ವಿಶೇಷವೆಂಬಂತೆ ಕಾಲಿಟ್ಟ ಕ್ಷಣವೇ ಅದೃಷ್ಟವೆಂಬಂತೆ ನೈಕಾದ ಷೇರುಗಳ ಮೌಲ್ಯ ಗಣನೀಯ ಏರಿಕೆ ಕಂಡಿದೆ. ಸಂಸ್ಥೆಯ ಪ್ರತೀ ಷೇರಿಗೆ 1,125 ರೂಪಾಯಿಯಂತೆ ಬಿಪಿಒ ಬಿಡುಗಡೆ ಮಾಡಲಾಗಿತ್ತು. ಆದರೆ 2,248 ರೂಪಾಯಿಯಂತೆ ಮೊದಲ ದಿನದ ಷೇರು ಸೂಚ್ಯಂಕ ಅಂತ್ಯವಾಗಿದೆ. ಒಂದೇ ದಿನದಲ್ಲಿ ಷೇರುಗಳ ಮೌಲ್ಯ ಬರೋಬ್ಬರಿ ಶೇ. 89 ಹೆಚ್ಚಾಗಿದೆ. ಈ ಮೂಲಕ ನೈಕಾ ಸಂಸ್ಥೆಯ ಮೌಲ್ಯ ಒಂದೇ ದಿನದಲ್ಲಿ 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಹಾಗೆಯೇ ಸಂಸ್ಥೆಯ ಶೇ. 54 ಷೇರನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಫ‌ಲ್ಗುಣಿ ಅವರ ಮೌಲ್ಯವೂ 48,000 ಲಕ್ಷ ಕೋಟಿ ರೂಪಾಯಿ ದಾಟಿದೆ. ಕಳೆದ ಒಂಬತ್ತು ವರ್ಷಗಳಿಂದ ಸಂಸ್ಥೆಗಾಗಿ ದುಡಿದಿದ್ದ ಫ‌ಲ್ಗುಣಿ ಅವರು ಒಂದೇ ದಿನದಲ್ಲಿ ದೇಶದ ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿಯ ಎರಡನೇ ಸ್ಥಾನಕ್ಕೆ ಏರಿಬಿಟ್ಟಿದ್ದಾರೆ.

ಫ‌ಲ್ಗುಣಿ ನಾಯರ್‌ ಮೂಲತಃ ಗುಜರಾತ್‌ನ ಅಹ್ಮ ದಾಬಾದ್‌ನವರು. ಅವರ ತಂದೆ ಷೇರುಪೇಟೆಗೆ ಸಂಬಂಧ ಪಟ್ಟಂತೆ ಸಣ್ಣದೊಂದು ಕಂಪೆನಿ ನಡೆಸುತ್ತಿದ್ದರು. ತಾಯಿಯೂ ಕೂಡ ಆ ಕಂಪೆನಿಯ ಬೆನ್ನೆಲುಬಾಗಿ ನಿಂತಿದ್ದರಿಂದ ಫ‌ಲ್ಗುಣಿ ಅವರಿಗೆ ಬಾಲ್ಯದಿಂದಲೇ ಉದ್ಯಮದ ಕಡೆ ಒಲವಿತ್ತೆನ್ನಬ ಹುದು. ಮುಂದೆ ಕುಟುಂಬ ಪೂರ್ತಿ ಮುಂಬಯಿಗೆ ಸ್ಥಳಾಂತರ ಗೊಂಡು ಅಲ್ಲಿಯೇ ಜೀವನ ನಡೆಸಲಾರಂಭಿಸಿ ದರು. ಇಂಡಿ ಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದು, ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಎಂಡಿಯಾಗಿ ಫ‌ಲ್ಗುಣಿ ಕೆಲಸವನ್ನೂ ಮಾಡುತ್ತಿದ್ದರು. ಅವರ ಪತಿ ಕೂಡ ಒಂದು ಖಾಸಗಿ ಕಂಪೆನಿಯಲ್ಲಿ ಉತ್ತಮ ಸ್ಥಾನದಲ್ಲಿದ್ದರು. ಅವಳಿ ಮಕ್ಕಳಿರುವ ಫ‌ಲ್ಗುಣಿ, 2012ರಲ್ಲಿ ಮಕ್ಕಳಿಬ್ಬರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ತೆರಳಿದ್ದ ಸಮಯದಲ್ಲಿ ತಮ್ಮ ಜೀವನದ ಅತೀ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡರು. ಬ್ಯಾಂಕ್‌ನ ಎಂಡಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನೈಕಾ ಸಂಸ್ಥೆಯನ್ನು ಸ್ಥಾಪಿಸಿದರು.  ಮೊದಲಿಗೆ ಅದನ್ನೊಂದು ಮೊಬೈಲ್‌ ಆ್ಯಪ್‌ ಮತ್ತು ವೆಬ್‌ಸೈಟ್‌ ರೂಪದಲ್ಲಷ್ಟೇ ಪರಿಚಯಿಸಲಾಯಿತು.

ಭಾರತದ ಪ್ರಸಿದ್ಧ ಫ್ಯಾಷನ್‌ ಬ್ರ್ಯಾಂಡ್‌ಗಳ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಅದರಲ್ಲಿ ಮಾರಾಟ ಮಾಡಲಾ ರಂಭಿಸಲಾಯಿತು. ನೈಕಾ ಕಂಪೆನಿ ಆರಂಭವಾದಾಗ ಅದರಲ್ಲಿ ದಿನವೊಂದಕ್ಕೆ ಕೇವಲ 60 ಉತ್ಪನ್ನಗಳು ಮಾತ್ರವೇ ಮಾರಾಟ ವಾಗುತ್ತಿತ್ತಂತೆ. ಆದರೆ ಎಂದಿಗೂ ಫ‌ಲ್ಗುಣಿ ಅವರು ತಮ್ಮ ಕಂಪೆನಿಯಲ್ಲಿ ಮಾರಾಟ ಮಾಡಲಾಗುತ್ತಿರುವ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಲಿಲ್ಲ. “ಕಡಿಮೆ ಬೆಲೆಗೆ ತಪ್ಪು ಶೇಡ್‌ನ‌ ಲಿಪ್‌ಸ್ಟಿrಕ್‌ ಮಾರಾಟ ಮಾಡುವ ಬದಲು, ಸರಿಯಾದ ಬೆಲೆಗೆ ಉತ್ತಮ ಶೇಡ್‌ನ‌ ಲಿಪ್‌ಸ್ಟಿrಕ್‌ ಅನ್ನೇ ಮಾರಾಟ ಮಾಡುತ್ತೇನೆ’ ಎಂದು ಹೇಳಿ ಕೊಂಡು ಮುನ್ನಡೆದರು. ಇಂದು ಅದೇ ನೈಕಾ ಸಂಸ್ಥೆ 2 ಸಾವಿ ರಕ್ಕೂ ಅಧಿಕ ಬ್ರ್ಯಾಂಡ್‌ಗಳ 2 ಲಕ್ಷಕ್ಕೂ ಅಧಿಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಆನ್‌ಲೈನ್‌ ಜತೆ ಆಫ್ಲೈನ್‌ ಅಂಗಡಿ, ಮಹಿಳೆಯರ ಫ್ಯಾಷನ್‌ ಜತೆ ಪುರುಷರ ಫ್ಯಾಷನ್‌ ಲೋಕಕ್ಕೂ ಕಾಲಿಟ್ಟಿದೆ. ಬಾಲಿವುಡ್‌ನ‌ ಹೆಸರಾಂತ ನಟಿ ಯ ರಾದ ಕತ್ರಿನಾ ಕೈಫ್, ಆಲಿಯಾ ಭಟ್‌ ಸೇರಿ ಅನೇಕ ದೊಡ್ಡ ದೊಡ್ಡ ಕಂಪೆನಿಗಳೂ ಕೂಡ ನೈಕಾದಲ್ಲಿ ಹೂಡಿಕೆ ಮಾಡಿವೆ.

2012ರಲ್ಲಿ ಕೇವಲ ಆನ್‌ಲೈನ್‌ ಅಂಗಡಿಯನ್ನು ತೆರೆದಿದ್ದ ಸಂಸ್ಥೆ 2015ರಲ್ಲಿ ಆಫ್ಲೈನ್‌ ಮಾರುಕಟ್ಟೆಗೂ ಬಂದಿತು. 2018ರಲ್ಲಿ ಪುರುಷರ ಫ್ಯಾಷನ್‌ಗೊàಸ್ಕರ ನೈಕಾ ಮ್ಯಾನ್‌ ಅನ್ನೂ ಆರಂಭಿಸಲಾಯಿತು. ಅನಂತರ ಬೆಂಗಳೂರು, ಕೋಲ್ಕ ತಾ, ಮುಂಬಯಿ, ದಿಲ್ಲಿ ಸೇರಿ ಹಲವು ಪ್ರಮುಖ ನಗರಗಳಲ್ಲಿ ನೈಕಾ ಸಂಸ್ಥೆಯು ಒಟ್ಟು 76 ಅಂಗಡಿಗಳನ್ನು ತೆರೆಯಿತು. ನೈಕಾ ಹೌಸ್‌ ಆಫ್ ಬ್ರ್ಯಾಂಡ್ಸ್‌ ಹೆಸರಿನಡಿಯಲ್ಲಿ ಸೌಂದ ರ್ಯ ವರ್ಧಕಗಳು ಮತ್ತು ನೈಕಾ ಫ್ಯಾಷನ್‌ ಹೆಸರಿನಡಿಯಲ್ಲಿ ಫ್ಯಾಷನ್‌ ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

ನೈಕಾ ಎನ್ನುವ ಹೆಸರಿನ ಮೂಲ ಸಂಸ್ಕೃತ. ಸಂಸ್ಕೃತದಲ್ಲಿ ನಾಯಿಕಾ ಎಂದರೆ ನಾಯಕಿ ಎನ್ನುವ ಅರ್ಥವಿದೆ. ಅದೇ ಅರ್ಥದಲ್ಲಿ ಫ‌ಲ್ಗುಣಿ ಅವರು ತಮ್ಮ ಸಂಸ್ಥೆಗೆ ಹೆಸರಿಟ್ಟಿದ್ದಾರೆ. ಹೆಣ್ಣು ಮಕ್ಕಳಿಗೆ ವಯಸ್ಸು, ಮಕ್ಕಳು, ಕುಟುಂಬ ಎನ್ನುವುದು ಯಾವುದೇ ಕಾರಣಕ್ಕೂ ಒಂದು ತಡೆಯಲ್ಲ ಎಂದು ಅವರು ಬಲವಾಗಿ ನಂಬುತ್ತಾರೆ, ಹಾಗೆಯೇ ನಡೆದು ತೋರಿಸಿದ್ದಾರೆ ಕೂಡ. “ನಮ್ಮ ಹೆಣ್ಣು ಮಕ್ಕಳು ತಮಗೆ ತಾವೇ ಆವಶ್ಯಕತೆ ಯಿಲ್ಲದ ಚಿಂತೆಗೆ ದೂಡಿ ಕೊಳ್ಳುತ್ತಾರೆ. ಇಂದು ಎಷ್ಟೋ ಹೆಣ್ಣು ಮಕ್ಕಳು ತಮ್ಮ ಮಕ್ಕಳ ಬದುಕನ್ನು ಸಂಭಾಳಿಸುವುದರ ಜತೆ ಯೇ ಶ್ರೇಷ್ಠ ಉದ್ಯಮಿಗಳೂ ಆಗಿದ್ದಾರೆ. ಯಾವುದೇ ಕಾರಣ ಕ್ಕೂ ಅದೊಂದು ತಡೆಯಲ್ಲ. ನನಗೆ ಮಾಡಬೇಕು ಎನಿಸಿದಾಗ ನಾನು ಮಾಡಿದೆ. ನನಗೆ ಕನಸು ಕಾಣಬೇಕೆನಿಸಿ ದಾಗ ನಾನು ಕಂಡೇ. ಉದ್ಯಮದಲ್ಲಿ ಯಾವುದೇ ಅನುಭವವೇ ಇಲ್ಲದ ನಾನು ಒಂಬತ್ತು ವರ್ಷಗಳ ಹಿಂದೆ ನನ್ನ ಕನಸನ್ನು ನನಸು ಮಾಡಿಕೊಳ್ಳಲು ಹೊರಟೆ. ಹಾಗೆಯೇ ಈಗಿನ ಪ್ರತೀ ಹೆಣ್ಣು ಮಕ್ಕಳು ಅವರ ಬದುಕಿನ ನಾಯಕಿ ಅವರೇ ಆಗಬೇಕು’ ಎಂದು ಹೇಳುತ್ತಾರೆ ಅವರು.

ಸೋಶಿಯಲ್‌ ಮೀಡಿಯಾ ನನಗೆ ಬೇಡ: 

ಸೋಶಿಯಲ್‌ ಮೀಡಿಯಾ ಇತ್ತೀಚಿನ ದಿನಗಳಲ್ಲಿ ಅತೀ ಸಾಮಾನ್ಯ ವಿಚಾರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಯವರಿಂದ ಹಿಡಿದು ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್‌ ಮಸ್ಕ್ವರೆಗೆ ಬಹುತೇಕ ಗಣ್ಯರು ಸೋಶಿಯಲ್‌ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಫ‌ಲ್ಗುಣಿ ಅವರು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಇಲ್ಲ. ಅವರದ್ದೊಂದು ಟ್ವಿಟರ್‌ ಖಾತೆಯಿದೆಯಾದರೂ ನೈಕಾ ಸಂಸ್ಥೆ ಆರಂಭಿಸಿದ ಅನಂತರ ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಅವರು ಕೇವಲ ಒಂದು ಟ್ವೀಟ್‌ ಮಾಡಿದ್ದಾರಷ್ಟೇ. ಹಾಗೆಂದ ಮಾತ್ರಕ್ಕೆ ಅವರಿಗೆ ಸೋಶಿಯಲ್‌ ಮೀಡಿಯಾಗಳ ಬಗ್ಗೆ ಬೇಸರವೂ ಇಲ್ಲವಂತೆ. “ಸೋಶಿಯಲ್‌ ಮೀಡಿಯಾ ಎನ್ನುವುದು ಒಳ್ಳೆಯ ವಿಚಾರವೇ. ಆದರೆ ಅದಕ್ಕೆ ಸಾಕಷ್ಟು ಸಮಯ ಬೇಕು. ನನಗೆ ಸಿಗುವ ಎಲ್ಲ ಸಮಯವನ್ನು ನಾನು ಸ್ಪ್ರೆಡ್‌ ಶೀಟ್‌ ಎದುರೇ ಕಳೆಯುತ್ತೇನೆ. ಹಾಗಿರುವಾಗ ನನಗೆ ಸೋಶಿಯಲ್‌ ಮೀಡಿಯಾಗೆಂದು ಯಾವುದೇ ಸಮಯ ಸಿಗುವುದೇ ಇಲ್ಲ. ನನಗೆ ಅತೀ ಇಷ್ಟವಾಗುವುದು ಸೋಶಿಯಲ್‌ ಮೀಡಿಯಾ ಹಿಂಬಾಲಕರ ಸಂಖ್ಯೆಯಲ್ಲ ಬದಲಾಗಿ ಸ್ಪ್ರೆಡ್‌ಶೀಟ್‌ನಲ್ಲಿರುವ ಸಂಖ್ಯೆ’ ಸೋಶೀಯಲ್‌ ಮೀಡಿಯಾ ಬಳಸದಿರುವುದಕ್ಕೆ ಫ‌ಲ್ಗುಣಿ ಅವರ ಕಾರಣವಿದು.

ಸ್ವಯಂ ಪ್ರಯತ್ನದಿಂದ ಶ್ರೀಮಂತರಾದವರು:

ಸದ್ಯ ಫ‌ಲ್ಗುಣಿ ನಾಯರ್‌ ಅವರು ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆ ಪಟ್ಟಿ ಯ ಮೊದಲನೇ ಸ್ಥಾನದಲ್ಲಿ ಜಿಂದಾಲ್‌ ಗ್ರೂಪ್ಸ್‌ ಸಂಸ್ಥೆಯ ಸಂಸ್ಥಾಪಕ ಓಂ ಪ್ರಕಾಶ್‌ ಜಿಂದಾಲ್‌ ಅವರ ಪತ್ನಿ ಸಾವಿತ್ರಿ ಜಿಂದಾಲ್‌ ಇದ್ದಾರೆ. ಆದರೆ ಸ್ವಯಂ ದುಡಿಮೆ ಯಿಂದ ಶ್ರೀಮಂತರ ಪಟ್ಟಿ ಸೇರಿದವರಲ್ಲಿ ಅಗ್ರ ಸ್ಥಾನಕ್ಕೆ ಫ‌ಲ್ಗುಣಿ ಸೇರಿದ್ದಾರೆ.

ಫ‌ಲ್ಗುಣಿ ನಾಯರ್‌ ಅವರು ನಮ್ಮ ದೇಶದ ಹೆಣ್ಣು ಮಕ್ಕಳಿಗೆ ನಿಜ ಸ್ಫೂರ್ತಿ. “ಮದುವೆಯಾಗಿ, ಮಕ್ಕಳಾ ಯಿತು.. ಇನ್ನೇನು ಮಾಡಲು ಸಾಧ್ಯ. ನನ್ನ ಜೀವನವೇ ಇಷ್ಟು’ ಎಂದು ಕೊರಗುವ ಅದೆಷ್ಟೋ ಮಹಿಳೆಯರಿಗೆ ಫ‌ಲ್ಗುಣಿಯವರ ಕಥೆ ನಿಜಕ್ಕೂ ಬಡಿದೆಚ್ಚರಿಸುವಂತಹ ಕಥೆಯೇ. ಮಕ್ಕಳಾಗಿ ಮಕ್ಕಳ ಜೀವನ ಇನ್ನೇನು ಸೆಟಲ್‌ ಆಗುತ್ತಿದೆ ಎನ್ನುವ ಸಮಯದಲ್ಲೂ ನಿಮ್ಮ ಕನಸಿಗೆ ರೆಕ್ಕೆ ಕಟ್ಟಲು ಸಾಧ್ಯ ಎನ್ನುವುದಕ್ಕೆ ಫ‌ಲ್ಗುಣಿಯವರೇ ನಿಜ ನಿದರ್ಶನ.

-ಮಂದಾರ ಸಾಗರ

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.