ಕೌನ್ ಬನೇಗಾ ಕರೋಡ್ ಪತಿಯಲ್ಲಿ 5 ಕೋಟಿ ಗೆದ್ದ ಸುಶೀಲ್ ಕುಮಾರ್ ದಿವಾಳಿಯಾಗಿದ್ದು ಹೇಗೆ..?

ಸುಶೀಲ್ ಕುಮಾರ್ ಎದುರಿಸದ ದುರಂತ ಬದುಕಿನ ಸವಾಲುಗಳೇನು..? ಸುಶೀಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ಧೇನು..?   

Team Udayavani, Aug 25, 2021, 1:04 PM IST

From winning Rs 5 crore to bankruptcy: The TRAGIC life story of KBC 5 winner Sushil Kumar

ಭಾರತದ ಅತ್ಯಂತ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ, ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ತನ್ನ 13 ನೇ ಆವೃತ್ತಿಯನ್ನು ಸೋಮವಾರ (ಆಗಸ್ಟ್ 23) ಆರಂಭಿಸುತ್ತಿದಂತೆ, ಕೌನ್ ಬನೇಗಾ ಕರೋಡ್ ಪತಿ (ಕೆಬಿಸಿ) 5 ನೇ ಆವೃತ್ತಿಯಲ್ಲಿ ಗೆದ್ದು 5 ಕೋಟಿ ಗಳಿಸಿದ  ಸುಶೀಲ್ ಕುಮಾರ್ ಅವರ ವೈಯಕ್ತಿಕ ಹೋರಾಟಗಳು, ಅವರಿಗಾದ ಮೋಸ ಭಾವನಾತ್ಮಕವಾಗಿ ಅವರು  ಎದುರಿಸಿದ ದುರಂತ ಜೀವನದ ಕಥೆ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿಯಾಗುತ್ತಿದೆ.

ಬಿಹಾರ ಮೂಲದ ಸುಶೀಲ್ ಕುಮಾರ್, ಕೌನ್ ಬನೇಗಾ ಕರೋಡ್ ಪತಿಯ ಐದನೇ ಆವೃತ್ತಿಯಲ್ಲಿ ಗೆದ್ದ ನಂತರ ಅವರ ಬದುಕು ಯೂಟರ್ನ್ ಪಡೆಯಿತಾದರೂ, ಕೆಬಿಸಿ 5 ನೇ ಆವೃತ್ತಿ  ಗೆದ್ದ ಕುಮಾರ್ ಜೀವನ ಕಂಡ ದುರಂತ ಕಥೆ ಚಿಂತಾಜನಕವಾಗಿದೆ ಎಂದರೇ ನೀವು ಅದನ್ನು ಒಪ್ಪಲೇಬೇಕು.

ಸುಶೀಲ್ ತನ್ನ ಬದುಕಿನಲ್ಲಿ ಕಂಡಂತಹ ಅಗ್ನಿಪರೀಕ್ಷೆ ಮತ್ತು ಕೆಬಿಸಿ 5 ಗೆದ್ದ ನಂತರ ಎದುರಿಸಿದ ಹೋರಾಟದ ಬದುಕನ್ನು ತಮ್ಮ ಫೇಸ್‌ ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ. ಫೇಸ್‌ ಬುಕ್ ಪೋಸ್ಟ್‌ ನಲ್ಲಿ ಸುಶೀಲ್, ‘ಕೌನ್ ಬನೇಗಾ ಕರೋಡ್ ಪತಿ ಗೆದ್ದ ನಂತರ ನನ್ನ ಜೀವನದ ಕೆಟ್ಟ ಘಟ್ಟ’ ಎಂದು ಹೆಡ್ ಲೈನ್ ಅಥವಾ ತಲೆ ಬರಹ ಕೊಟ್ಟು ವಿಷಾದ ವ್ಯಕ್ತ ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ :  ಸ್ವೆಟರ್ ಅವ್ಯವಹಾರ ಆರೋಪ| DSS ಅಧ್ಯಕ್ಷ ರಘು ವಿರುದ್ಧ ನಟ ಜಗ್ಗೇಶ್ ಮಾನನಷ್ಟ ಮೊಕದ್ದಮೆ

2015-2016 ನನ್ನ ಜೀವನದ ಅತ್ಯಂತ ಸವಾಲಿನ ಸಮಯ. ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ. ಸ್ಥಳೀಯ ಸೆಲೆಬ್ರಿಟಿಯಾಗಿರುವ ಕಾರಣ, ನಾನು ತಿಂಗಳಿಗೆ 10 ಅಥವಾ ಕೆಲವೊಮ್ಮೆ 15 ದಿನಗಳಾದರೂ ಬಿಹಾರದಲ್ಲಿ ಅಥವಾ ಬೇರೆಲ್ಲೋ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದೆ. ನಾನು ಅಧ್ಯಯನದಿಂದ ದೂರ ಸರಿಯುತ್ತಿದ್ದೆ. ನಾನು ಸ್ಥಳೀಯವಾಗಿ ಪರಿಚಿತ ವ್ಯಕ್ತಿಯಾಗಿದ್ದರಿಂದ, ಆ ದಿನಗಳಲ್ಲಿ ನಾನು ಮಾಧ್ಯಮವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಕೆಲವೊಮ್ಮೆ ಪತ್ರಕರ್ತರು ನನ್ನ ಬಗ್ಗೆ ಸಂದರ್ಶನ  ಮಾಡುತ್ತಿದ್ದರು. ಮತ್ತು ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ನಾನು ಅವರೊಂದಿಗೆ ಹೇಗೆ ಮಾತನಾಡಬೇಕು ಎಂಬುದರ ಬಗ್ಗೆ ಯಾವುದೇ ಅನುಭವವಿಲ್ಲದೆ, ನಾನು ಉದ್ಯೋಗವಿಲ್ಲದವನು ಎಂದು ಹೇಳಿಕೊಳ್ಳದೇ, ಉಳಿದೆಲ್ಲವನ್ನೂ ಅವರಿಗೆ ಹೇಳುತ್ತೇನೆ.

ಕೆಬಿಸಿಯ ನಂತರ, ನಾನು ಒಂದು ರೀತಿಯ ಪರೋಪಕಾರದ ದೃಷ್ಟಿಯಿಂದ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡುವುದಕ್ಕೆ ನಾನು ಪ್ರಯತ್ನಿಸುತ್ತಿದ್ದೆ. ಅವರು ಯಾರಿಗೂ ಗೊತ್ತಾಗದ ಹಾಗೇ ಪ್ರಚಾರಕ್ಕೆ ಬಾರದಂತೆ ಸಹಾಯ ಮಾಡುತ್ತಿದ್ದೆ. ನಾನು ಒಂದು ತಿಂಗಳಲ್ಲಿ ಸುಮಾರು 5 ಸಾವಿರ ಕಾರ್ಯಕ್ರಮಗಳಿಗೆ ಹಾಜರಾಗುತ್ತೇನೆ. ಈ ಕಾರಣದಿಂದಾಗಿ, ಬಹಳಷ್ಟು ಬಾರಿ, ಜನರು ನನ್ನನ್ನು ಮೋಸ ಮಾಡಿದರು, ಅದು ಡೊನೇಶನ್ ನೀಡಿದ ನಂತರವೇ ನನಗೆ ತಿಳಿಯಿತು.

ಈ ಎಲ್ಲದರಿಂದಾಗಿ, ನನ್ನ ಹೆಂಡತಿಯೊಂದಿಗಿನ ನನ್ನ ಸಂಬಂಧ ನಿಧಾನವಾಗಿ ಹದಗೆಡುತ್ತಿದೆ. ಯಾರೊಂದಿಗೆ ಹೇಗೆ ಇರಬೇಕು, ಹೇಗೆ ವ್ಯವಹರಿಸಬೇಕು ಎಂದು ನನಗೆ ಗೊತ್ತಿಲ್ಲ ಮತ್ತು ಭವಿಷ್ಯದ ಬಗ್ಗೆ ನನಗೆ ಕಾಳಜಿ ಇಲ್ಲ ಎಂದು ನನ್ನ ಹೆಂಡತಿ ಆಗಾಗ್ಗೆ ಹೇಳುತ್ತಿದ್ದಳು. ಇದೇ ಕಾರಣಕ್ಕಾಗಿ ನಾವು ಆಗಾಗ್ಗೆ ಜಗಳವಾಡುತ್ತೇವೆ.

ಏತನ್ಮಧ್ಯೆ, ಕೆಲವು ಒಳ್ಳೆಯ ಸಂಗತಿಗಳು ಸಹ ನಡೆಯುತ್ತಿವೆ. ಸ್ನೇಹಿತನ ಸಹಾಯದಿಂದ, ನಾನು ಕೆಲವು ಬಾಡಿಗೆ ಕಾರುಗಳನ್ನು ಓಡಿಸುವ ಸಣ್ಣ ಉದ್ಯಮವನ್ನು ಆರಂಭಿಸಿದ್ದೆ, ಮತ್ತು ಅದೇ ಕಾರಣಕ್ಕಾಗಿ ನಾನು ಆಗಾಗ ರಾಜಧಾನಿಗೆ ಭೇಟಿ ನೀಡುತ್ತಿದ್ದೆ.

ನನ್ನ ಉದ್ಯಮದಿಂದಾಗಿ, ನಾನು ಜಾಮಿಯಾ ಮಿಲಿಯಾದಲ್ಲಿ ಐಐಎಂಸಿಯಲ್ಲಿ ಓದುತ್ತಿರುವವರು, ಅವರ ಹಿರಿಯರು ಮತ್ತು ಜೆಎನ್‌ ಯು ನಲ್ಲಿ ಸಂಶೋಧನೆ ಮಾಡುತ್ತಿದ್ದ ಕೆಲವರ ಸಂಪರ್ಕ ಆಯಿತು. ಮಾತ್ರವಲ್ಲದೇ, ಕೆಲವು ರಂಗಭೂಮಿ ಕಲಾವಿದರ ಪರಿಚಯವೂ ಆಯಿತು.

ಆದಾಗ್ಯೂ, ಈ ವಿದ್ಯಾರ್ಥಿಗಳು ಮತ್ತು ಕಲಾವಿದರು ಯಾವುದಾದರೊಂದು ವಿಷಯದ ಬಗ್ಗೆ ಮಾತನಾಡುವಾಗ, ನನಗೆ ಇತರ ವಿಷಯಗಳು ಅಥವಾ ವಿಷಯಗಳ ಬಗ್ಗೆ ಹೆಚ್ಚು ತಿಳಿದಿಲ್ಲ ಎನ್ನುವುದು ನನಗೆ ಅರಿವಿಗೆ ಬಂತು. ಕ್ರಮೇಣ, ಇತರ ಅನೇಕ ವಿಷಯಗಳ ಬಗ್ಗೆ ನನ್ನ ತಲೆಯೊಳಗೆ ತುಂಬಿಕೊಳ್ಳುತ್ತಾ ಹೋಯಿತು. ಈ ಸಂಪರ್ಕದಿಂದಾಗಿ  ನಾನು ಮದ್ಯ ಮತ್ತು ಧೂಮಪಾನದ ಚಟವನ್ನು ಹೊಂದಿದ್ದೆ. ನಾನು ಒಂದು ವಾರ ದೆಹಲಿಯಲ್ಲಿ ತಂಗಿದ್ದಲ್ಲಿ,  ಅಲ್ಲಿನ ಸ್ನೇಹಿತರೊಂದಿಗೆ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದೆ. ಅವರ ಮಾತುಕತೆಗಳು ನನ್ನನ್ನು ಸೆಳೆಯುತ್ತಿತ್ತು. ಆಗ ಅದು ತಪ್ಪೆಂದು ತಿಳಿದಿರಲಿಲ್ಲ.

ವಾಸ್ತವವಾಗಿ, ಅವರ ಒಡನಾಟದಲ್ಲಿರುವಾಗ, ಅವರೊಂದಿಗೆ ಮಾತುಕತೆ ನಡೆಸುತ್ತಿರುವಾಗ, ಮಾಧ್ಯಮಗಳ ಬಗ್ಗೆ ಮೊದಲಿದ್ದ ವಿಶ್ವಾಸ ಕಡಿಮೆಯಾಗುತ್ತಾ ಬಂತು. ಅಲ್ಲಿ ನಾವು ಚಲನಚಿತ್ರಗಳನ್ನು ನೋಡುವ ಮೂಲಕ ದಿನಗಳನ್ನು ಕಳೆಯುತ್ತೇವೆ.

ಅವರೊಂದಿಗೆ ಸೇರಿದ ನಂತರ ನಾನು ದಿವಾಳಿಯಾಗಿದ್ದೇನೆ …? ನೀವು ನನ್ನ ಕಥೆಯನ್ನು ನೋಡಿದ ತಕ್ಷಣ ನಿಮಗೆ ಇದು ಸ್ವಲ್ಪ ‘ಫಿಲ್ಮಿ’ ಎಂದು ಅನ್ನಿಸಬಹುದು, ಆದರೇ ಇದು ವಾಸ್ತವ.

ಒಂದು ದಿನ ರಾತ್ರಿ ನಾನು ‘ಪ್ಯಾಸ’ ಚಲನಚಿತ್ರವನ್ನು ನೋಡುತ್ತಿರುವಾಗ, ನನ್ನ ಹೆಂಡತಿ ಬಂದು, ಈ ಸಿನೆಮಾವನ್ನು ನೋಡಿ ನೋಡಿ ಹುಚ್ಚು ಹಿಡಿಸಿಕೊಳ್ತೀರಿ ಎಂದು ಜೋರಾಗಿ ಕೂಗಲಾರಂಭಿಸಿದಳು.  ಮತ್ತೆ ದುಃಖ ನನ್ನನ್ನು ಆವರಿಸಿತು. ದುಃಖ ನಿವಾರಣೆಗಾಗಿ ಹೊರಗೆ ಸುತ್ತಾಡುವುದಕ್ಕೆಂದು ಬಂದೆ.

ಹೊರಗೆ ಬಂದಾಗ,  ಇಂಗ್ಲಿಷ್ ಪತ್ರಿಕೆಯ ಪತ್ರಕರ್ತರು ನನ್ನನ್ನು ಭೇಟಿಯಾದರು. ನನಗೆ ಆ ಬಗ್ಗೆ ಆಸಕ್ತಿಯಿರಲಿಲ್ಲ, ನನಗೆ ಕಿರಿಕಿರಿಯಾಗುತ್ತಿದೆ.  ನಾನು ನನ್ನ ಹಣವೆಲ್ಲಾ ಕಳೆದುಕೊಂಡಿದ್ದೇನೆ. ಸದ್ಯ, ನಾನು ಎರಡು ಹಸುಗಳನ್ನು ಹೊಂದಿದ್ದೇನೆ. ಹಾಲನ್ನು ಮಾರಿ ಮತ್ತು ಅದರಿಂದ ಬಂದ ಹಣದಿಂದ ಬದುಕು ಸಾಗಿಸುತ್ತಿದ್ದೇನೆ  ಎಂದೆ.

ಸ್ವಲ್ಪ ಸಮಯದ ನಂತರ, ನನ್ನೊಂದಿಗಿದ್ದವರೆಲ್ಲಾ ನನ್ನನ್ನು ದೂರ ತಳ್ಳಿದರು. ನನ್ನನ್ನು ಯಾವುದೇ ಈವೆಂಟ್‌ ಗಳಿಗೆ ಆಹ್ವಾನಿಸಿಲ್ಲ. ಏನು ಮಾಡಬೇಕು ಎಂದು ತಿಳಿದಿರಲಿಲ್ಲ.

ನಾನು ದೊಡ್ಡ ಸಿನಿ ಅಭಿಮಾನಿಯಾಗಿದ್ದೆ, ನಾನು ರಿತ್ವಿಕ್ ಘಟಕ್ ಮತ್ತು ಸತ್ಯಜಿತ್ ರೇ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರ ಪ್ರಶಸ್ತಿ ವಿಜೇತ, ಆಸ್ಕರ್ ಪ್ರಶಸ್ತಿ ವಿಜೇತರ ಚಿತ್ರಗಳನ್ನು ನೋಡಿದ್ದೆ. ನಾನು ಚಲನಚಿತ್ರ ನಿರ್ದೇಶಕನಾಗುವ ಕನಸು ಕಾಣಲು ಆರಂಭಿಸಿದೆ.

ಈ ನಡುವೆ, ನನ್ನ ಹೆಂಡತಿ ಹಾಗೂ ನನ್ನ ನಡುವೆ ವೈಯಕ್ತಿಕ ಸಮಯ ನೀಡುತ್ತಿಲ್ಲ, ಖಾಸಗಿ ವಿಚಾರಗಳಿಗೆ ಸಮಯ ನೀಡುತ್ತಿಲ್ಲ ಎಂಬ ವಿಷಯದಲ್ಲಿ ದೊಡ್ಡ ಜಗಳ ಆಯಿತು. ನಂತರ ಅವಳು ತನ್ನ ತಂದೆಯಲ್ಲಿ ವಿಚ್ಛೇದನ ನೀಡುವುದಾಗಿ ಹೇಳಿದ್ದಳು. ಆ ಸಂದರ್ಭದಲ್ಲಿ ನನಗೆ ದುಃಖವಾಯಿತು. ಈ ಸಂಬಂಧವನ್ನು ಬಿಟ್ಟು ಕೊಡಲು ನನಗೆ ಮನಸ್ಸಿರಲಿಲ್ಲ. ಏನಾದರೂ ಮಾಡಿ ಸಂಬಂಧವನ್ನು ಉಳಿಸಿಕೊಳ್ಳಬೇಕೆಂದು ಯೋಚಿಸಿದೆ.   ಚಲನಚಿತ್ರ ನಿರ್ದೇಶಕರಾನಾಗುವುದು ಮತ್ತು ನಾನು ಏನಾದರೂ ಸಾಧಿಸಿ ತೋರಿಸುವುದರಿಂದ ಹೊಸ ಬದುಕನ್ನು ಆರಂಭಿಸುವುದರಿಂದ ಈ ಸಂಬಂಧ ಉಳಿಸಿಕೊಳ್ಳಬಹುದು ಎಂದುಕೊಂಡೆ.

ನಾನು ಒಬ್ಬ ನಿರ್ಮಾಪಕ ಸ್ನೇಹಿತನೊಂದಿಗೆ ಮಾತನಾಡಿದೆ, ಅವರು ನನಗೆ ಕೆಲವು ತಾಂತ್ರಿಕ ಪ್ರಶ್ನೆಗಳನ್ನು ಕೇಳಿದರು, ಅದು ನನಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ನಂತರ, ನಾನು ಕೆಲವು ದಿನಗಳ ಕಾಲ ಕಿರುತೆರೆಯಲ್ಲಿ ಕೆಲಸ ಮಾಡಬೇಕು ಮತ್ತು ಅವರು ಸೂಕ್ತ ಸಮಯದಲ್ಲಿ ನನಗೆ ಚಲನಚಿತ್ರ ನಿರ್ಮಾಪಕರೊಂದಿಗೆ ಕೆಲಸ ನೀಡುವುದಾಗಿ ಹೇಳಿದರು.

ಸ್ವಲ್ಪ ಸಮಯದ ನಂತರ, ನಾನು ಒಂದು ದೊಡ್ಡ ಪ್ರೊಡಕ್ಷನ್ ಹೌಸ್‌ ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. – ಕಥೆ, ಚಿತ್ರಕಥೆ, ಸಂಭಾಷಣೆ ಪ್ರತಿ, ವೇಷಭೂಷಣಹೀಗೆ ಹಲವು ವಿಷಯಗಳ ಬಗ್ಗೆ ತಿಳಿದುಕೊಂಡೆ.

ಇದನ್ನೂ ಓದಿ : ಕೋವಿಡ್ ನಿಂದ ಸಂಕಷ್ಟದಲ್ಲಿರುವವರ ಸಹಾಯಕ್ಕಾಗಿ ‘ಪಿಕಲ್ಡ್ ವಿತ್ ಲವ್’ : 87ರ ಅಜ್ಜಿಯ ಉದ್ಯಮ

ನಾನು ಚಲನಚಿತ್ರ ನಿರ್ದೇಶಕನಾಗುವ ಕನಸಿನಿಂದ ಮುಂಬೈಗೆ ಬಂದಿದ್ದೆ, ಆದರೆ ನಂತರ ನಾನು ಒಂದು ದಿನ ಬಿಟ್ಟು ನನ್ನ ಒಬ್ಬ ಸ್ನೇಹಿತ ಹಾಗೂ ಸಾಹಿತಿಯ ಜೊತೆ ಇರಲು ಆರಂಭಿಸಿದೆ. ನಾನು ಕೋಣೆಯಲ್ಲಿ ಮಲಗಿಕೊಂಡು ಒಂದರ ನಂತರ ಒಂದರಂತೆ ಚಲನಚಿತ್ರಗಳನ್ನು ನೋಡುತ್ತಿದ್ದೆ ಅಥವಾ ನಾನು ತಂದ ಪುಸ್ತಕಗಳನ್ನು ಓದುತ್ತಿದ್ದೆ.  ಸಿಗರೇಟ್ ಸೇದುತ್ತಿದ್ದೆ.

ನಾನು ಒಬ್ಬಂಟಿಯಾಗಿ ಉಳಿದುಕೊಂಡಿದ್ದರಿಂದ, ಇಲ್ಲಿ, ನನ್ನನ್ನು ನಾನು ವಸ್ತುನಿಷ್ಠವಾಗಿ ನೋಡುವ ಅವಕಾಶ ಸಿಕ್ಕಿತು. ಮತ್ತು ನಾನು ಬಹಳಷ್ಟು ವಿಷಯಗಳನ್ನು ಅರಿತುಕೊಂಡೆ.

ಆದಾಗ್ಯೂ, ಈ ಮಧ್ಯೆ, ನಾನು ಮೂರು ಸ್ಕ್ರಿಪ್ಟ್‌ ಗಳನ್ನು ಬರೆದಿದ್ದೇನೆ, ಅದು ಒಂದು ಪ್ರೊಡಕ್ಷನ್ ಹೌಸ್ ಗೆ ಇಷ್ಟವಾಯಿತು ಮತ್ತು ಅದಕ್ಕಾಗಿ ನನಗೆ 20 ಸಾವಿರ ರೂ. ನೀಡಿದರು. ಸ್ವಲ್ಪ ಸಮಯದ ನಂತರ, ನಾನು ಮುಂಬೈನಿಂದ ಮನೆಗೆ ಮರಳಿದೆ ಮತ್ತು ಶಿಕ್ಷಕನಾಗಲು ಸಿದ್ಧತೆ ನಡೆಸಿದೆ.

ಈಗ, ನಾನು ಹಲವಾರು ಪರಿಸರ ಜಾಗೃತಿ ಯೋಜನೆಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ ಮತ್ತು ಅದು ವಿಶೇಷವಾದ ಶಾಂತಿಯ ಭಾವವನ್ನು ನೀಡುತ್ತದೆ. ಕಳೆದ ವರ್ಷ ಧೂಮಪಾನವನ್ನು ಬಿಟ್ಟಿದ್ದೇನೆ.

“ಈಗ, ಜೀವನದಲ್ಲಿ ಯಾವಾಗಲೂ ಉತ್ಸಾಹದಿಂದ ಇರುತ್ತೇನೆ. ಪರಿಸರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ನಾನು ಕೆಲಸ ಮಾಡಲು ಹಲವಾರು ಅವಕಾಶಗಳು ಒದಗಲಿ ಎಂದು ಪ್ರಾರ್ಥಿಸುತ್ತೇನೆ,  ನಾನು ಆ  ಕೆಲಸವನ್ನು ಆನಂದಿಸುತ್ತೇನೆ”  ಎಂದು ಅವರು ಬರೆದುಕೊಂಡಿದ್ದಾರೆ.

ನಾನು ಅರಿತುಕೊಂಡದ್ದೇನೆಂದರೇ :

– ನಾನು ಒಬ್ಬ ನಿರ್ದೇಶಕನಾಗಲು ಮುಂಬೈಗೆ ಬಂದವನಲ್ಲ.

– ನಿಮಗೆ ಇಷ್ಟವಾದ ಕೆಲಸವನ್ನು ಮಾಡುವುದರಲ್ಲಿ ನಿಜವಾದ ಸಂತೋಷ ಇರುತ್ತದೆ

– ಅಹಂಕಾರದಂತಹ ಕೆಲವು ಭಾವನೆಗಳನ್ನು ಶಾಂತಗೊಳಿಸಲು ಸಾಧ್ಯವಿಲ್ಲ

– ಕೇವಲ ‘ದೊಡ್ಡ ಸೆಲೆಬ್ರಿಟಿ’ ಆಗುವುದಕ್ಕಿಂತ ಒಳ್ಳೆಯ ವ್ಯಕ್ತಿಯಾಗುವುದು ಸಾವಿರ ಪಟ್ಟು ಉತ್ತಮ

– ಸಂತೋಷವು ಸಣ್ಣ ಸಣ್ಣ ವಿಷಯಗಳಲ್ಲಿಯೂ ಅಡಗಿದೆ.

– ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಲು ಪ್ರಯತ್ನಿಸಬೇಕು ಅದು ಅವನ/ಅವಳ ಸ್ವಂತ ಮನೆ/ಹಳ್ಳಿಯಿಂದ ಆರಂಭವಾಗಬೇಕು. ಹೀಗೆ ಹತ್ತು ಹಲವು ವಿಚಾರಗಳುನ್ನು ನನಗೆ ನನ್ನ ಬದುಕು ತಿಳಿಕೊಟ್ಟಿತು ಎಂದು ಬರೆದುಕೊಂಡಿದ್ದಾರೆ ಸುಶೀಲ್.

ಇದನ್ನೂ ಓದಿ : ಉಪ ರಾಷ್ಟ್ರಪತಿಯನ್ನು ಭೇಟಿ ಮಾಡಿದ ವಿಧಾನ ಸಭಾಧ್ಯಕ್ಷ  ಕಾಗೇರಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.