ಹೆಸರುಕಾಳು ದೋಸೆ ರೆಸಿಪಿ…ಹೆಸರುಕಾಳು ಮೊಳಕೆಯಿಂದ ಆರೋಗ್ಯಕ್ಕೆ ಎಷ್ಟು ಉಪಯೋಗ?


ಶ್ರೀರಾಮ್ ನಾಯಕ್, Jun 12, 2020, 7:50 PM IST

ಆರೋಗ್ಯಕ್ಕೆ ಹಿತವನ್ನು ನೋಡುವ ಹೆಸರುಕಾಳಿನ ರೆಸಿಪಿಗಳು

ಆಧುನಿಕ ಜೀವನ ಶೈಲಿಯ ಮಧ್ಯೆ ನಮ್ಮ ಆರೋಗ್ಯಕರ ಆಹಾರಗಳನ್ನು ಜನ ಮರೆತಿದ್ದಾರೆ. ಅದರಲ್ಲೂ ಇತ್ತೀಚಿನ ಕಾಲಘಟ್ಟದಲ್ಲಿ ಆರೋಗ್ಯಕರ ಆಹಾರಕ್ಕಿಂತ ಫಾಸ್ಟ್‌ಫ‌ುಡ್‌ ಗಳ ಹಾವಳಿಯೇ ಹೆಚ್ಚಾಗಿದೆ. ಇದರಿಂದ ಆರೋಗ್ಯ ವೃದ್ಧಿಸುವ ಸೊಪ್ಪು, ತರಕಾರಿ, ಕಾಳುಗಳು ಹಿಂದಕ್ಕೆ ಸರಿದಿದೆ. ಮೊಳಕೆ ಬಂದ ಕಾಳುಗಳ ಸೇವನೆಯಿಂದ ಆರೋಗ್ಯದ ದೃಷ್ಟಿಯಿಂದ ಎಷ್ಟು ಲಾಭವಿದೆ ಎಂದು ಹಲವರಿಗೆ ತಿಳಿದಿಲ್ಲ. ಕಾಳಲ್ಲಿ ಪ್ರೋಟಿನ್‌, ವಿಟಮಿನ್‌ ಕಬ್ಬಿಣ ಅಂಶ ಹಾಗೂ ಕ್ಯಾಲ್ಸಿಯಂ ಹೀಗೆ ದೇಹಕ್ಕೆ ಬೇಕಾದ ಪೌಷ್ಟಿಕತೆ ಇರುತ್ತದೆ. ಆದ್ದರಿಂದ ಮೊಳಕೆ ಬಂದ ಕಾಳು ದೇಹಕ್ಕೆ ಒಳ್ಳೆಯದು. ಹೀಗೆ ಅನೇಕ ಆರೋಗ್ಯಕಾರಿ ಅಂಶಗಳಿರುವ ಹೆಸರುಕಾಳು ಮೊಳಕೆ ಕೂಡಾ  ಒಂದು.

ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಹಿತಕಾರವಾಗಿರುವ ಹೆಸರುಕಾಳು,ದೇಹದ ತಾಪವನ್ನು ಕಡಿಮೆ ಮಾಡುವ ಪೌಷ್ಟಿಕಾಂಶವನ್ನು ವರ್ಧಿಸುವ ಆಹಾರ. ಹೆಸರುಕಾಳಿನ ಸೇವನೆಯನ್ನು ಮತ್ತಷ್ಟು ರುಚಿಗೊಳಿಸುವ ಹೆಸರು ಕಾಳಿನ ಚಾಟ್‌ ಹಾಗೂ ಹೆಸರು ಕಾಳಿನ ದೋಸೆಯ ಪಾಕವಿಧಾನಗಳು ಇಲ್ಲಿವೆ.

ಹೆಸರುಕಾಳಿನ ಚಾಟ್‌
ಬೇಕಾಗುವ ಸಾಮಗ್ರಿಗಳು
ಉಪ್ಪು ಹಾಕಿ ಬೇಯಿಸಿದ ಹೆಸರುಕಾಳು 2ಕಪ್‌, ಟೊಮೇಟೋ 1/2 ಕಪ್‌, ಈರುಳ್ಳಿ 1/2 ಕಪ್‌, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಖಾರಾ ಸೇವ್‌ 2 ಚಮಚ.

ಹುಳಿ-ಸಿಹಿ ಚಟ್ನಿಗೆ ಬೇಕಾಗುವ ಸಾಮಗ್ರಿಗಳು
ಪುದೀನ ಸೊಪ್ಪು 1ಕಪ್‌ , ಹುಣಿಸೇ ಹುಳಿ ಸ್ವಲ್ಪ , ಬೆಲ್ಲದ ಪುಡಿ 2 ಚಮಚ , ಹಸಿ ಮೆಣಸಿನ ಕಾಯಿ 3 , ಗರಂ ಮಸಾಲೆ ಪುಡಿ 1 ಚಮಚ, ಜೀರಿಗೆ ಪುಡಿ 1ಚಮಚ ಉಪ್ಪು ರುಚಿಗೆ ತಕ್ಕಷ್ಟು .

ತಯಾರಿರುವ ವಿಧಾನ
ಪುದೀನಾ ಸೊಪ್ಪು ,ಹುಣಿಸೇ ಹುಳಿ ,ಬೆಲ್ಲ ,ಹಸಿಮೆಣಸಿನಕಾಯಿ ಸೇರಿಸಿ ರುಬ್ಬಿರಿ. ಅದಕ್ಕೆ ಗರಂ ಮಸಾಲ ಪುಡಿ, ಜೀರಿಗೆ ಪುಡಿ ಹಾಗೂ ಉಪ್ಪು ಹಾಕಿ ಸ್ವಲ್ಪ ಹೊತ್ತು ಕುದಿಸಿ, ಹುಳಿ-ಸಿಹಿ ಚಟ್ನಿ ತಯಾರಿಸಿಕೊಳ್ಳಿ.

ಒಂದು ತಟ್ಟೆಗೆ ಬೇಯಿಸಿದ ಹೆಸರುಕಾಳು ಹರಡಿ. ಅದರ ಮೇಲೆ ಚಟ್ನಿಯ ಒಂದು ಪದರ ಹರಡಿ ಮತ್ತೆ ಹೆಸರುಕಾಳು ಹರಡಿ.ಆಮೇಲೆ ಹೆಚ್ಚಿದ ಈರುಳ್ಳಿ ,ಟೊಮೇಟೋ,ಖಾರಾ ಸೇವ್‌ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸವಿಯಿರಿ.

ಹೆಸರು ಕಾಳಿನ ದೋಸೆ
ಬೇಕಾಗುವ ಸಾಮಗ್ರಿಗಳು
ಮೊಳಕೆ ಬರಿಸಿದ ಹೆಸರುಕಾಳು 1/2ಪ್‌ ,ಹಸಿಮೆಣಸಿನ ಕಾಯಿ 4 ,ಶುಂಠಿ ಸ್ವಲ್ಪ , ಬೆಳ್ತಿಗೆ ಅಕ್ಕಿ 1ಕಪ್‌ ,ಅವಲಕ್ಕಿ 1/4 ಕಪ್‌ ,ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಒಂದು ದಿನ ಮುಂಚೆ ಹೆಸರುಕಾಳು ನೆನೆಸಿ ಮೊಳಕೆ ಮಾಡಿಟ್ಟುಕೊಳ್ಳಿ .ನಂತರ ಅಕ್ಕಿ ಮತ್ತು ಅವಲಕ್ಕಿ ಸುಮಾರು 2 ರಿಂದ 3 ಗಂಟೆಗಳ ಕಾಲ ನೆನೆಸಿಡಿ. ಆಮೇಲೆ ಮೊಳಕೆ ಬಂದ ಹೆಸರಕಾಳು, ಹಸಿಮೆಣಸಿನಕಾಯಿ , ಶುಂಠಿ ,ಅಕ್ಕಿ ,ಅವಲಕ್ಕಿ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿರಿ. 10 ರಿಂದ 15 ನಿಮಿಷದ ನಂತರ ತೆಳ್ಳಗೆ ದೋಸೆ ಮಾಡಿ ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿಯಿರಿ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.