
Non-vegetarian Recipes; ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್…
ಪೌಷ್ಟಿಕಾಂಶ ಹೊಂದಿರುವ ಏಕೈಕ ನಾನ್ ವೆಜ್ ಆಹಾರವೆಂದರೆ ಅದುವೇ "ಮೊಟ್ಟೆ".
ಶ್ರೀರಾಮ್ ನಾಯಕ್, May 26, 2023, 5:25 PM IST

ನಾನ್ ವೆಜ್‌ಪ್ರಿಯರು ಮೊಟ್ಟೆಯಿಂದ ಮಾಡುವ ರೆಸಿಪಿ ತುಂಬಾನೇ ಇಷ್ಟಪಡುತ್ತಾರೆ. ಮೊಟ್ಟೆಯಲ್ಲಿ ಪ್ರೊಟೀನ್, ವಿಟಮಿನ್ ಗಳು ಮತ್ತು ಕೆಲವು ರೋಗನಿರೋಧಕಗಳನ್ನು ಹೊಂದಿದೆ. ದಿನಕ್ಕೆ ಒಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ವೈದ್ಯರು.
ವಿಟಮಿನ್ ಸಿ ಯನ್ನು ಹೊರತುಪಡಿಸಿ ಉಳಿದೆಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿರುವ ಏಕೈಕ ನಾನ್ ವೆಜ್ ಆಹಾರವೆಂದರೆ ಅದುವೇ “ಮೊಟ್ಟೆ”.
ಯುನೈಟೆಡ್ ಸ್ಟೇಟ್ಸ್ ಪ್ರತಿ ವರ್ಷ ಜೂನ್ 3ರಂದು ರಾಷ್ಟ್ರೀಯ ಮೊಟ್ಟೆ ದಿನವನ್ನು ಆಚರಿಸುತ್ತಾರೆ. ಈ ದಿನವು ಮೊಟ್ಟೆಗಳ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
ಮೊಟ್ಟೆಯಿಂದ ನಾನಾ ರುಚಿ-ರುಚಿಯಾದ ರೆಸಿಪಿಯನ್ನು ಮಾಡಬಹುದಾಗಿದೆ. ಉದಾಃ ಎಗ್ ಆಮ್ಲೆಟ್,ಎಗ್ ಬೊಂಡಾ,ಎಗ್ ಮಸಾಲ,ಎಗ್ ಕರಿ,ಎಗ್ ಬುರ್ಜಿ,ಎಗ್ ಘೀ ರೋಸ್ಟ್…. ಹೀಗೆ ನಾನಾ ತರಹದ ಅಡುಗೆ ತಯಾರಿಸಬಹುದಾಗಿದೆ.
ಹಾಗಾದರೆ ನಾವಿಂದು ಬೇಯಿಸಿದ ಮೊಟ್ಟೆಯಿಂದ “ಎಗ್ ಘೀ ರೋಸ್ಟ್” ಮಾಡುವುದು ಹೇಗೆ ಎಂದು ತಿಳಿಯೋಣ…. ನೀವೂ ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ಸವಿಯಿರಿ…
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆ -8, ತುಪ್ಪ-2ಚಮಚ, ಈರುಳ್ಳಿ-2,ಒಣಮೆಣಸು-8ರಿಂದ10, ಟೊಮೆಟೋ-2,ಕೊತ್ತಂಬರಿ (ಧನಿಯಾ)-2ಚಮಚ, ಕಾಳುಮೆಣಸು-1ಚಮಚ,ಶುಂಠಿ-ಬೆಳ್ಳುಳ್ಳಿ ಪೇಸ್ಟ್-2ಚಮಚ, ಜೀರಿಗೆ-1 ಚಮಚ, ಅರಿಶಿನ ಪುಡಿ-ಅರ್ಧ ಚಮಚ, ಕರಿಬೇವು- ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ,ಉಪ್ಪು-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ
ಒಂದು ಬಾಣಲೆಗೆ ಒಣಮೆಣಸು,ಕೊತ್ತಂಬರಿ, ಜೀರಿಗೆ ಮತ್ತು ಕಾಳುಮೆಣಸು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಮಿಕ್ಸಿಜಾರಿಗೆ ಹುರಿದಿಟ್ಟ ಮಸಾಲೆಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿರಿ. ತದನಂತರ ಒಂದು ಪ್ಯಾನ್ ಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕರಿಬೇವು, ಟೊಮೆಟೋ, ಅರಿಶಿನ ಪುಡಿ ಹಾಕಿ ಹುರಿಯಿರಿ ಈರುಳ್ಳಿ ಕಂದುಬಣ್ಣ ಬರುವವರೆಗೆ ಹುರಿಯಿರಿ.ಆಮೇಲೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ರುಬ್ಬಿಟ್ಟ ಮಸಾಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಹದಕ್ಕೆ ತಕ್ಕಷ್ಟು ನೀರನ್ನು ಸೇರಿಸಿರಿ.ಈ ಮಿಶ್ರಣ ಕುದಿಯಲು ಆರಂಭಿಸಿದ ಮೇಲೆ ಬೇಯಿಸಿದ ಮೊಟ್ಟೆಯನ್ನು ಅರ್ಧ ಭಾಗ ಮಾಡಿ ಹಾಕಿರಿ. ಸುಮಾರು 10 ನಿಮಿಷಗಳ ಕಾಲ ಕುದಿಸಿ ನಂತರ ಕೊತ್ತಂಬರಿ ಸೊಪ್ಪು ಹಾಕಿದರೆ ಸ್ವಾದಿಷ್ಟಕರವಾದ ಎಗ್ ಘೀ ರೋಸ್ಟ್ ಸವಿಯಲು ಸಿದ್ಧ. ಇದು ಚಪಾತಿ,ರೋಟಿ ಹಾಗೂ ಅನ್ನದ ಜೊತೆ ತಿನ್ನಲು ಬಹಳ ರುಚಿಕರವಾಗುತ್ತದೆ.
-ಶ್ರೀರಾಮ್ ಜಿ . ನಾಯಕ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Beauty Tips: ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು….

Health Tips: ಬೇಸಿಗೆಯಲ್ಲಿ ತ್ವಚೆಯನ್ನು ರಕ್ಷಿಸಿಕೊಳ್ಳಲು ಈ ಲೋಷನ್ ಬಳಸಿ..

Fort;ಯಾವ ರಾಜನಿಂದಲೂ ವಶಪಡಿಸಿಕೊಳ್ಳಲು ಸಾಧ್ಯವಾಗದ ಜಂಜೀರಾ ಕೋಟೆ ಬಗ್ಗೆ ಗೊತ್ತಾ?

‘ಮತ್ತದೇ ಬೇಸರ, ಮತ್ತೆ ಸಂಜೆ…’ ಒದ್ದೆ ಮೈದಾನದಲ್ಲಿ ಜಾರಿ ಬಿತ್ತು RCB ಟ್ರೋಫಿ ಕನಸು

Mango Recipe; ಕಾಟು ಮಾವಿನ ಹಣ್ಣಿನ ಉಪ್ಕರಿ ಮಾಡಿ ಟೇಸ್ಟ್ ಹೇಗಿದೆ ಹೇಳಿ…