ನಿಮ್ಮ ಸ್ಮಾರ್ಟ್ ಪೋನ್ ಹ್ಯಾಕ್ ಆಗಿದೆ ಎಂದು ಹೇಗೆ ಪತ್ತೆಹಚ್ಚುವುದು ? ಇಲ್ಲಿವೆ ಮಾಹಿತಿ


ಮಿಥುನ್ ಪಿಜಿ, Aug 11, 2020, 5:52 PM IST

hack

ಇಂದು ಸ್ಮಾರ್ಟ್ ಫೋನ್ ಗಳು ಮಾನವನ ಅವಿಭಾಜ್ಯ ಅಂಗಗಳಾಗಿ ಮಾರ್ಪಟ್ಟಿವೆ. ಬಹುತೇಕರು ತಮ್ಮ ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ಸ್ಮಾರ್ಟ್ ಫೋನ್ ನಲ್ಲಿ ಸಂಗ್ರಹಿಸಿರುತ್ತಾರೆ. ಇದು ಸಹಜ ಕೂಡ. SMS ಗಳು, ಇಮೇಲ್, ಬ್ಯಾಂಕಿಂಗ್ ವಹಿವಾಟುಗಳು, ಫೋಟೋ-ವಿಡಿಯೋ, ಸಾಮಾಜಿಕ ಜಾಲತಾಣಗಳ ಪಾಸ್ ವರ್ಡ್ ಗಳು ಸೇರಿದಂತೆ ಹಲವು ವಿಚಾರಗಳು ಮೊಬೈಲ್ ನ ಒಂದು ಮೂಲೆಯಲ್ಲಿ ಬೆಚ್ಚಗೆ ಕುಳಿತಿರುತ್ತವೆ. ಆದರೇ ಇವೆ ಹ್ಯಾಕರ್ ಗಳಿಗೆ ವರದಾನವಾಗಿದೆ ಎಂಬ ವಿಚಾರಗಳು ನಿಮಗೆ ತಿಳಿದಿದಿಯೇ? ಮೊಬೈಲ್ ಹ್ಯಾಕ್ ಆಗಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ? ಇಂದಿನ ಲೇಖನದಲ್ಲಿ ಆ ಕುರಿತ ಸಂಪೂರ್ಣ ಮಾಹಿತಿ.

ತಂತ್ರಜ್ಞಾನ ಹೆಚ್ಚಿದಂತೆ ಅದರ ದುರ್ಬಳಕೆ ಮಾಡಿಕೊಳ್ಳುವವರು ಇಂದು ಸಾಲುಗಟ್ಟಿ ನಿಂತಿದ್ದಾರೆ. ಆ ಮೂಲಕ ಕೋಟ್ಯಾಂತರ ರೂ.ಗಳಿಗೆ ಬೇಡಿಕೆ ಇಟ್ಟು ಲಾಭ ಮಾಡಿಕೊಳ್ಳುತ್ತಾರೆ.  ಜಗತ್ತಿನಾದ್ಯಂತ ಹ್ಯಾಕರ್ ಗಳು ರಾತ್ರಿ ಬೆಳಗ್ಗೆಯೆನ್ನದೆ ಸಕ್ರಿಯರಾಗಿದ್ದಾರೆ. ಯಾವ ಡಿವೈಸ್ ಗಳಲ್ಲಿ ಲೋಪದೋಷಗಳಿವೆ ಎಂಬುದನ್ನು ಪತ್ತೆಹಚ್ಚಿ ಅಲ್ಲಿ ನುಸುಳಿ ಕುಳಿತಿರುತ್ತಾರೆ. ನಿಮ್ಮ ಮೊಬೈಲ್  ಹ್ಯಾಕ್ ಆಗಿದೆ ಎಂಬುದು ನಿಮಗೆ ತಿಳಿಯದ ಮಟ್ಟಿಗೆ ಕೈಚಳಕ ತೋರಿರುತ್ತಾರೆ.

ಇನ್ನು ನಮ್ಮ ಮೊಬೈಲ್ ನಲ್ಲಿ ಯಾವುದೇ ವಿಶೇಷತೆ ಇಲ್ಲ. ನಮ್ಮ ಮೊಬೈಲ್ ಗೆ ಹ್ಯಾಕರ್ ಗಳು ನುಸುಳುವ ಸಾಧ್ಯತೆ ಇಲ್ಲ ಎಂದು ನೀವು ಭಾವಿಸಿದ್ದರೇ ನಿಮ್ಮ  ಊಹೆ ತಪ್ಪು. ಯಾಕೆಂದರೇ ನಿಮ್ಮ ಮೊಬೈಲ್ ನಲ್ಲಿ ಬ್ಯಾಂಕಿಂಗ್ ಆ್ಯಪ್ ಗಳಿರಬಹುದು. ಅಥವಾ ಜಿ ಮೇಲ್ ಸೇರಿದಂತೆ ಎಲ್ಲಾ ಆಪ್ಲಿಕೇಶನ್ ಗಳು ಲಾಗಿನ್ ಆಗಿರಬಹುದು.

ಗಮನಿಸಿ: ನಿಮ್ಮ ಮೊಬೈಲ್ ಗ್ಯಾಲರಿಯನ್ನು ಅಟೋಮ್ಯಾಟಿಕ್ ಜಿಮೇಲ್ ಗೆ  ಬ್ಯಾಕ್ ಅಪ್ ಇಟ್ಟಿದ್ದರೆ ಅದರ ಪಾಸ್ ವರ್ಡ್ ಯಾರ ಕೈಗೆ ಸಿಗದಂತೆ ಎಚ್ಚರವಹಿಸಿ. ಏಕೆಂದರೇ ಜಿಮೇಲ್ ಪಾಸ್ ವರ್ಡ್ ಬಳಸಿಕೊಂಡು ನಿಮ್ಮ ಕಾಂಟ್ಯಾಕ್ಟ್ , ಫೋಟೋಗಳು, ಸರ್ಚ್ ಹಿಸ್ಟರಿ ಸೇರಿದಂತೆ ಪ್ರಮುಖ ಮಾಹಿತಿ ಕದಿಯಬಹುದು. ಇದು ಸುಲಭ ಕೂಡ. ಇನ್ನು ವಾಟ್ಸಾಪ್ ಕ್ಲೋನಿಂಗ್ ಮಾಡುವ ಕೆಲವೊಂದು ಅಪ್ಲಿಕೇಶನ್ ಗಳು ಕೂಡ ಇದ್ದು ಎಚ್ಚರ ವಹಿಸುವುದು ಸೂಕ್ತ

ಇಂದು ಹೆಚ್ಚಾಗಿ ಹ್ಯಾಕಿಂಗ್  ಗೆ ಒಳಗಾಗುತ್ತಿರುವುದು ಆ್ಯಂಡ್ರಾಯ್ಡ್ ಫೋನ್ ಗಳು. ಇಲ್ಲಿ ಹ್ಯಾಕರ್ ಗಳು ಹ್ಯಾಕ್ ಮಾಡಲೆಂದೇ ಕೆಲವೊಂದು ದೋಷಪೂರಿತ ಅಪ್ಲಿಕೇಶನ್ ಗಳನ್ನು ಸೃಷ್ಟಿಸಿರುತ್ತಾರೆ.  ಮಾತ್ರವಲ್ಲದೆ ಆ ಲಿಂಕ್ ಗಳನ್ನು ಇಮೇಲ್ ಆಥವಾ ಇತರೆ ಮಾರ್ಗಗಳಲ್ಲಿ ನಿಮಗೆ ಕಾಣಿಸಿಕೊಳ್ಳುವಂತೆ ಮಾಡಲಾಗುತ್ತದೆ. ಇವುಗಳನ್ನು ಒಮ್ಮೆ ಕ್ಲಿಕ್ ಮಾಡಿದರೇ ನಿಮ್ಮ ಮೊಬೈಲ್ ನ ಸಂಪೂರ್ಣ ಮಾಹಿತಿ ಹ್ಯಾಕರ್ ಗಳ ಪಾಲಾಗಿರುತ್ತದೆ. ಥರ್ಡ್ ಪಾರ್ಟಿ APK ಫೈಲ್‌ಗಳ ಬಳಕೆ ಕೂಡ ಅಪಾಯಕಾರಿ. ಇದನ್ನು ತೆರೆಯುತ್ತಿದ್ದಂತೆ ಅನಗತ್ಯ ಜಾಹೀರಾತುಗಳು ಒಂದಾದ ಮೇಲೊಂದರಂತೆ ತೆರೆದುಕೊಳ್ಳುತ್ತಲೇ ಹೋಗುತ್ತದೆ. ನಿಮಗೆ ಗೊತ್ತಿಲ್ಲದಂತೆ ಕೂಡ  ಮೊಬೈಲ್‌ನಲ್ಲಿ ಕೆಲವೊಂದು  ಆ್ಯಪ್ ಗಳು ಇನ್ ಸ್ಟಾಲ್ ಆಗಿರುತ್ತದೆ.

ಹಾಗಾದರೇ ಮೊಬೈಲ್ ಹ್ಯಾಕ್ ಆಗಿದೆ ಎಂದು ಹೇಗೆ ಪತ್ತೆಹಚ್ಚುವುದು ?

  • ಕೆಲವೊಂದು ಆ್ಯಪ್ ಗಳು ಕಾರ್ಯನಿರ್ವಹಸದೆ ಇರುವುದು ಅಥವಾ ಏಕಾಏಕಿ ಸ್ಟಾಪ್ ಆಗುವುದು: ಕೆಲವೊಂದು ಅಪ್ಲಿಕೇಶನ್ ಗಳು ಬಳಕೆಯಲ್ಲಿರುವಾಗಲೇ ಪದೇ ಪದೇ ಸ್ಟಾಪ್ ಆಗುತ್ತಿದ್ದರೇ ಮಾಲ್ವೇರ್ ಗಳು ಅಟ್ಯಾಕ್ ಆಗಿರುವ ಸಾಧ್ಯತೆಯಿದೆ. ಮಾಲ್ವೇರ್ ಗಳು ಅಪ್ಲಿಕೇಶನ್ ಗಳು ಕಾರ್ಯನಿರ್ವಹಿಸದಂತೆ ತಡೆಯುತ್ತದೆ.
  • ಪಾಪ್ ಅಪ್ಸ್ ಕಾಣಿಸಿಕೊಳ್ಳುವುದು: ಅನಗತ್ಯ ಜಾಹೀರಾತುಗಳು ಏಕಾಏಕಿ ಕಾಣಿಸಿಕೊಳ್ಳುವುದು, ಹೊಸ ವೆಬ್ ಸೈಟ್ ತೆರೆದಾಗ ಇತರ ಲಿಂಕ್ ಗಳು ಕ್ಲಿಕ್ ಮಾಡುವಂತೆ ಪದೇ ಪದೇ ಡಿಸ್ ಪ್ಲೇ ಆಗುವುದು. ನಾವು ಓಪನ್ ಮಾಡದ ವೆಬ್ ಸೈಟ್ ಗಳು ತೆರೆದುಕೊಳ್ಳುವುದು ಇವೆಲ್ಲಾ  ನಿಮ್ಮ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ವೈರಸ್ ಅಟಕಾಯಿಸಿಕೊಂಡಿರುವ ಸೂಚನೆಗಳು. ನೀಲಿ ಚಿತ್ರಗಳ ವೆಬ್ ಸೈಟ್ ಗಳು ಕೂಡ ಬಹಳ ಅಪಾಯಕಾರಿಯಾಗಿರುತ್ತದೆ. ಇಲ್ಲಿಯೇ ಹ್ಯಾಕರ್ ಗಳು ಅತೀ ಹೆಚ್ಚು  ಸಕ್ರೀಯರಾಗಿರುತ್ತಾರೆ.
  • ಮೊಬೈಲ್ ಸ್ಲೋ ಆಗುವುದು:  ಮಾಲ್ವೇರ್ ವೈರಸ್ ಗಳು ನುಸುಳಿದ್ದರೆ ಮೊಬೈಲ್ ಸ್ಲೋ ಆಗುವ ಸಾಧ್ಯತೆ ಹೆಚ್ಚು.  ಯಾಕೆಂದರೇ ಇದು ಬ್ಯಾಕ್ ಗ್ರೌಂಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಕೆಲ ಆ್ಯಪ್‌ಗಳು ನೀವು ಡೌನ್ ಲೋಡ್ ಮಾಡದಿದ್ದರೂ ನಿಮ್ಮ ಗಮನಕ್ಕೆ ಬಾರದೆ ಇನ್ ಸ್ಟಾಲ್ ಆಗಿರುವ ಸಂಭವವಿರುತ್ತದೆ.  ಅಂದರೇ ಇಲ್ಲಿ ಮಾಲ್ವೇರ್ ವೈರಸ್ ಗಳು ಪರ್ಮಿಷನ್ ಇಲ್ಲದೆ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿರುತ್ತದೆ.

  • ಮೊಬೈಲ್ ಬಿಸಿಯಾಗುವುದು: ಬ್ಯಾಕ್ ಗ್ರೌಂಡ್ ನಲ್ಲಿ ಮಾಲ್ವೇರ್ ಗಳು ಕಾರ್ಯನಿರ್ವಹಿಸುತ್ತಿದ್ದರೆ ಮೊಬೈಲ್ ಹಿಂದಿಗಿಂತಲೂ ಹೆಚ್ಚು ಬಿಸಿಯಾಗುತ್ತದೆ. ಪರಿಣಾಮವೆಂಬಂತೆ ಇದ್ದಕ್ಕಿದ್ದಂತೆ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುತ್ತದೆ. 100 ಪರ್ಸೆಂಟ್ ಚಾರ್ಜ್ ಇದ್ದರೂ 2-3 ಗಂಟೆಯೊಳಗೆ ಚಾರ್ಜ್ ತಗ್ಗಿದರೆ ಸಾರ್ಟ್‌ಫೋನ್‌ಗೆ ಮಾಲ್ವೇರ್ ವೈರಸ್ ಅಟ್ಯಾಕ್ ಆಗಿದೆ ಎಂದರ್ಥ.
  • ವಿಚಿತ್ರ ಸಂದೇಶಗಳು ಸ್ವೀಕಾರ ಮತ್ತು ಸೆಂಡ್ ಆಗುವುದು: ನೀವು ಯಾವುದೇ SMS ಸೆಂಡ್ ಮಾಡಿರದಿದ್ದರೂ ಕೆಲವೊಮ್ಮೆ ಅಜ್ಞಾತ ನಂಬರ್ ಗಳಿಗೆ ಮೆಸೇಜ್ ಹೋಗಿರುತ್ತದೆ. ಇನ್ನೊಂದು ಅಂಶವೆಂದರೇ ಅನಗತ್ಯ ಮೆಸೇಜ್ ಗಳು ಕಾಣಿಸಿಕೊಳ್ಳುವುದು. ನೀವು ಅಕೌಂಟಿನಿಂದ ಹಣ ತೆಗೆಯದಿದ್ದರೂ ನಿಮ್ಮ ಬ್ಯಾಂಕಿನಿಂದ ಇಂತಿಷ್ಟು ಹಣ ವಿತ್ ಡ್ರಾ ಆಗಿದೆ ಎಂಬ ಮಾದರಿಯಲ್ಲಿ ಸಂದೇಶ ಬರುವುದು. ನೀವು ಗಾಬರಿಯಲ್ಲಿ ಅಲ್ಲಿನ ಲಿಂಕ್ ಕ್ಲಿಕ್ ಮಾಡಿದರೇ ಸಂಪೂರ್ಣ ಖಾತೆ ಶೂನ್ಯವಾಗುವ ಸಂಭವವಿರುತ್ತದೆ.
  • ಆ್ಯಪ್ ಗಳು ಅಪ್ ಡೇಟ್ ಆಗಿರುವುದು: ಒಂದು ನಿರ್ದಿಷ್ಠ ಆ್ಯಪ್ ಏನೇ ಪ್ರಯತ್ನಪಟ್ಟರೂ ಅಪ್ಡೇಟ್ ಆಗದೇ ಇರುವುದು ಸಹ ಮಾಲ್ವೇರ್ ಅಟ್ಯಾಕ್ ಆಗಿರುವ ಲಕ್ಷಣಗಳು. ಇದನ್ನು ಆ್ಯಪ್ ಕ್ರ್ಯಾಶ್ ಎಂದು ಕೂಡ ಕರೆಯುತ್ತಾರೆ. ಕೆಲವೊಮ್ಮೆ ನೀವು ಇನ್‌ಸ್ಟಾಲ್ ಮಾಡಿದ ಆ್ಯಪ್ ಐಕಾನ್ ಹೋಂ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಸಂದರ್ಭದಲ್ಲಿ ಆ ಆ್ಯಪ್ ದೋಷಪೂರಿತವಾಗಿದೆ ಎಂದು ನೀವು ಅರಿಯಬಹುದು.
  • ಅನಗತ್ಯ ವೆಬ್ ಸೈಟ್ ಗಳು ಕಾಣಿಸಿಕೊಳ್ಳುವುದು. ಇಮೇಲ್ ಬ್ಲಾಕ್ ಆಗುವುದು: ಇವು ಕೂಡ ಹ್ಯಾಕ್ ಆಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ. ಡೇಟಾ ಉಪಯೋಗ ನಿಗದಿತ ಪ್ರಮಾಣಕ್ಕಿಂತ ಜಾಸ್ತಿಯಾಗುತ್ತಿದೆ ಎಂದನ್ನಿಸಿದರೆ ನಿಮ್ಮ ಫೋನ್‌ಗೆ ಯಾವುದೋ ವೈರಸ್ ದಾಳಿ ಮಾಡಿದೆ ಎಂದೇ ಅರ್ಥ.

-ಮಿಥುನ್ ಮೊಗೇರ

ಟಾಪ್ ನ್ಯೂಸ್

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಮೂಳೂರು: ಬೈಕ್ ಗೆ ಲಾರಿ ಢಿಕ್ಕಿ; ಸವಾರ ಗಂಭೀರ

ಮೂಳೂರು: ಬೈಕ್ ಗೆ ಲಾರಿ ಢಿಕ್ಕಿ; ಸವಾರ ಗಂಭೀರ

containment ZOne

ರಾಜ್ಯದಲ್ಲಿ ಇಂದು 50 ಸಾವಿರ ಕೋವಿಡ್ ಕೇಸ್ : 165 ಹೊಸ ಒಮಿಕ್ರಾನ್; 19 ಸಾವು

1-sssad

ಅಪಹರಣಕ್ಕೊಳಗಾದ ಅರುಣಾಚಲದ ಹುಡುಗನನ್ನು ಹಸ್ತಾಂತರಿಸುತ್ತೇವೆ ಎಂದ ಚೀನಾ ಸೇನೆ

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

“ಎರಡು ಎತ್ತು ಬೇಕಾರ ತಗೋರಿ” ಈ ಲಸಿಕೆ ಮಾತ್ರ ಬೇಡ: ಲಸಿಕೆಗೆ ಹಿಂಜರಿದ ವಯೋವೃದ್ಧರು

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಕಡಿಮೆ ಖರ್ಚಿನಲ್ಲಿ ತಗ್ಗು ಪ್ರದೇಶಗಳಲ್ಲಿರುವ ಮನೆಯನ್ನು ಕೆಡವದೇ ಎತ್ತರಕ್ಕೇರಿಸಲು ಹೊಸ ಉಪಾಯ

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!

ಮುಡಿಪು: ಮೆಡಿಕಲ್ ಎದುರಲ್ಲಿ ನಿಲ್ಲಿಸಿದ ಒಂದೇ ದ್ವಿಚಕ್ರ ವಾಹನಕ್ಕೆ ಸಾವಿರಾರು ದಂಡ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಟೇಲಿಗನ ಪ್ರಾಕ್ಟಿಕಲ್‌ ವೇದಾಂತ

ಹೊಟೇಲಿಗನ ಪ್ರಾಕ್ಟಿಕಲ್‌ ವೇದಾಂತ

ದಾಸೋಹ ದಿನ; ಪ್ರಪಂಚಕ್ಕೆ ದಾಸೋಹ ತತ್ವ ಸಾರಿದ ಸಿದ್ಧಗಂಗಾ ಶ್ರೀ

ದಾಸೋಹ ದಿನ; ಪ್ರಪಂಚಕ್ಕೆ ದಾಸೋಹ ತತ್ವ ಸಾರಿದ ಸಿದ್ಧಗಂಗಾ ಶ್ರೀ

ಜ್ವರವಾಗಿ ಬದಲಾಗುತ್ತಿದೆಯೇ ಕೋವಿಡ್‌?

ಜ್ವರವಾಗಿ ಬದಲಾಗುತ್ತಿದೆಯೇ ಕೋವಿಡ್‌?

ರುದ್ರಪ್ರಯಾಗದಲ್ಲಿ IFS ಅಧಿಕಾರಿಯ ಯಶೋಗಾಥೆ; 2 ವರ್ಷದಲ್ಲಿ 800 ಕೊಳ ನಿರ್ಮಾಣ!

ರುದ್ರಪ್ರಯಾಗದಲ್ಲಿ IFS ಅಧಿಕಾರಿಯ ಯಶೋಗಾಥೆ; 2 ವರ್ಷದಲ್ಲಿ 800 ಕೊಳ ನಿರ್ಮಾಣ!

15 ನಿಮಿಷದ ವಿಳಂಬಕ್ಕೆ ಕರ್ನಾಟಕದ ಸ್ಥಬ್ದಚಿತ್ರವನ್ನು ರಕ್ಷಣಾ ಇಲಾಖೆ ತಿರಸ್ಕರಿಸಿತ್ತು!

15 ನಿಮಿಷದ ವಿಳಂಬಕ್ಕೆ ಕರ್ನಾಟಕದ ಸ್ಥಬ್ದಚಿತ್ರವನ್ನು ರಕ್ಷಣಾ ಇಲಾಖೆ ತಿರಸ್ಕರಿಸಿತ್ತು!

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

shivamogga news

ನಂದಿತಾ ಪ್ರಕರಣ ಸಿಬಿಐ ತನಿಖೆ ಈಗ್ಯಾಕೆ

ballari news

ಶಾಲಾ-ಕಾಲೇಜು ಓಪನ್‌: ಡಿಸಿ ಮಾಲಪಾಟಿ

davanagere news

ಮರು ಮತದಾರರ ಪಟ್ಟಿಗೆ ಸೇರಿಸಲು ನಾಗರಿಕರ ಒತ್ತಾಯ

davanagere news

ಡಾಟಾ ಎಂಟ್ರಿ ಆಪರೇಟರ್ಗೆ ಬಡ್ತಿನೀಡಿ: ಪಾಟೀಲ

chitradurga news

ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಅಷ್ಟಕಷ್ಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.